Asianet Suvarna News Asianet Suvarna News

ವರ್ಷ 75 ಈಗಲೂ ಬೆಳಗ್ಗೆ 6.20ಕ್ಕೆಲ್ಲಾ ಕಚೇರಿಯಲ್ಲಿರುವ ಇನ್ಫಿ ನಾರಾಯಣ ಮೂರ್ತಿ

ಸಾಮಾನ್ಯವಾಗಿ ಉದ್ಯಮಿಗಳು, ಬಿಲಿಯನೇರ್‌ಗಳು ಆರಾಮ ಜೀವನ ಮಾಡುತ್ತಾರೆ, ಕಾಲಿಗೊಬ್ಬ ಕೈಗೊಬ್ಬ ಜನರಿರುವ ಕಾರಣ ಅವರಿಗೆ ಕುಳಿತಲ್ಲಿಗೆ ಎಲ್ಲವೂ ಬಂದು ತಲುಪುತ್ತದೆ. ಅವರಿಗೆ ಯಾವ ಕಷ್ಟವೂ ಇಲ್ಲ. ಒಮ್ಮೆ ಉನ್ನತ ಸ್ಥಾನಕ್ಕೇರಿದ ಬಳಿಕ ಕಷ್ಟಪಡಬೇಕಿಲ್ಲ ಎಂದು ಕೋಟಿ ಬಹುಕೋಟಿ ಬೆಲೆಬಾಳುವ ಶ್ರೀಮಂತ ಉದ್ಯಮಿಗಳ ಬಗ್ಗೆ ಜನ ಸಾಮಾನ್ಯರ ಚಿಂತನೆ ಇರುತ್ತದೆ.

75 year old billionaire Narayan murthy now also daily reach Infosys Campus at 6.20 am akb
Author
First Published Dec 29, 2022, 10:16 PM IST

ನವದೆಹಲಿ: ಸಾಮಾನ್ಯವಾಗಿ ಉದ್ಯಮಿಗಳು, ಬಿಲಿಯನೇರ್‌ಗಳು ಆರಾಮ ಜೀವನ ಮಾಡುತ್ತಾರೆ, ಕಾಲಿಗೊಬ್ಬ ಕೈಗೊಬ್ಬ ಜನರಿರುವ ಕಾರಣ ಅವರಿಗೆ ಕುಳಿತಲ್ಲಿಗೆ ಎಲ್ಲವೂ ಬಂದು ತಲುಪುತ್ತದೆ. ಅವರಿಗೆ ಯಾವ ಕಷ್ಟವೂ ಇಲ್ಲ. ಒಮ್ಮೆ ಉನ್ನತ ಸ್ಥಾನಕ್ಕೇರಿದ ಬಳಿಕ ಕಷ್ಟಪಡಬೇಕಿಲ್ಲ ಎಂದು ಕೋಟಿ ಬಹುಕೋಟಿ ಬೆಲೆಬಾಳುವ ಶ್ರೀಮಂತ ಉದ್ಯಮಿಗಳ ಬಗ್ಗೆ ಜನ ಸಾಮಾನ್ಯರ ಚಿಂತನೆ ಇರುತ್ತದೆ. ಆದರೆ ಇದು ನಿಜವಲ್ಲ. ಕಷ್ಟಪಟ್ಟು ಕಟ್ಟಿದ ಸಾಮಾಜ್ಯವನ್ನು ಉಳಿಸಿಕೊಳ್ಳಲು ಅವರು ನಿರಂತರ ವಿರಮಿಸದೇ ದುಡಿಯುತ್ತಾರೆ. ಇದಕ್ಕೆ ಇನ್ಫೋಸಿಸ್ ನಾರಾಯಣಮೂರ್ತಿಯವರು ಕೂಡ ಉದಾಹರಣೆ. ಎಲ್ಲ ಉದ್ಯಮಿಗಳು ಇವರಂತಿರಲಾರರು. ಆದರೆ ಎಲ್ಲ ಉದ್ಯಮಿಗಳಿಗಿಂತ ಭಿನ್ನ ಈ ನಾರಾಯಣಮೂರ್ತಿಯವರು. 

ಸಮಯ ಯಾರಿಗೂ ಕಾಯುವುದಿಲ್ಲ. ಯಾರು ಏನೇ ಮಾಡಿದರೂ ಅದು ತನ್ನಷ್ಟಕ್ಕೆ ಮುನ್ನಡೆಯುತ್ತಲೇ ಇರುತ್ತದೆ. ಸಮಯವನ್ನು ನಿಲ್ಲಿಸಲಾಗದು. ಆದರೆ ಕಳೆದು ಹೋದ ಸಮಯ ಮತ್ತೆ ಬಾರದು. ಉದ್ಯಮಿ ಇನ್ಫೋಸಿಸ್ (Infosys) ನಾರಾಯಣ ಮೂರ್ತಿಯವರು (Narayana Murthy) ಕೂಡ ಸಮಯಕ್ಕೆ ಬಹಳ ಮಹತ್ವ ನೀಡುವ ವ್ಯಕ್ತಿ. ಬೆಳಗ್ಗೆ 6.20ಕ್ಕೆಲ್ಲಾ ಇವರು ಕಚೇರಿಯಲ್ಲಿ ಇರುತ್ತಾರಂತೆ. ಮನಿಕಂಟ್ರೋಲ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೊಂಡಿದ್ದಾರೆ. ದಿನವೂ ಬೆಳಗ್ಗೆ ಸರಿಯಾಗಿ 6.20ಕ್ಕೆಲ್ಲಾ ಅವರು ತಮ್ಮ 75ರ ಈ ಇಳಿವಯಸ್ಸಿನಲ್ಲೂ ಕಚೇರಿಗೆ ಬಂದು ತಲುಪುತ್ತಾರಂತೆ. 2011ರಲ್ಲಿ ತಾವು ನಿವೃತ್ತಿ ಹೊಂದಿದಾಗಿನಿಂದಲೂ ಅವರು ಇದನ್ನು ಪಾಲಿಸುತ್ತಾ ಬರುತ್ತಿದ್ದಾರಂತೆ. 

ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ

ಸಂದರ್ಶಕರು ನಾರಾಯಣಮೂರ್ತಿಯವರಿಗೆ 7 ಗಂಟೆಗೆ ಕಚೇರಿ ತಲುಪುತ್ತಾರೆ ಎಂದು ಹೇಳುತ್ತಾರೆ. ಆದರೆ ಸಂದರ್ಶಕರಿಗೆ 6.20ಕ್ಕೆ ತಾನು ಕಚೇರಿಯಲ್ಲಿ ಇರುವುದಾಗಿ ಮೂರ್ತಿ ಹೇಳುತ್ತಾರೆ. ಈ ಹಿಂದೆ, ತಮ್ಮ ಇನ್ಫೋಸಿಸ್ ದಿನಗಳಲ್ಲಿ ಉದ್ಯಮಿಯಾಗಿ ಕಲಿತ ಪಾಠಗಳ ಬಗ್ಗೆ ಮಾತನಾಡುತ್ತಾ 76 ವರ್ಷದ ಮೂರ್ತಿಯವರು, ತನ್ನ ಈ ಸಮಯಪ್ರಜ್ಞೆಯು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪುವ ಬಗ್ಗೆ ಯುವಕರಿಗೆ ಅಳಿಸಲಾಗದ ಸಂದೇಶವನ್ನು ಕಳುಹಿಸಿದೆ ಎಂದು ಹೇಳಿದರು. ಅವರ ವೇಳಾಪಟ್ಟಿಯು ಅವರ ಕುಟುಂಬದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡುತ್ತಾ, ನನ್ನ ಪ್ರಕಾರ ಉದ್ಯಮಶೀಲತೆಯು (entrepreneur) ಧೈರ್ಯಶಾಲಿ ನಡೆಯಾಗಿದೆ. ಇದು ಧೈರ್ಯಕ್ಕೆ, ತ್ಯಾಗಕ್ಕೆ(sacrifice), ಮುಂದೂಡಲ್ಪಟ್ಟ ಸಂತೃಪ್ತಿಗೆ ಸಂಬಂಧಿಸಿದಾಗಿದೆ. ಅಸ್ತಿತ್ವದಲ್ಲಿಲ್ಲದ್ದನ್ನು ನೀವು ನಿರ್ಮಿಸಬೇಕಾದರೆ ಅದಕ್ಕೆ ಸಾಕಷ್ಟು ಶ್ರಮ ಬೇಕು, ಸಾಕಷ್ಟು ಬದ್ಧತೆ ಬೇಕು, ಅದಕ್ಕೆ ಸಾಕಷ್ಟು ತ್ಯಾಗಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.

ಎರಡನೇ ತಲೆಮಾರಿಗೆ ಅವಕಾಶ ನೀಡದಿರುವ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಬೇಸರ

ನಾನು ಮೊದಲೇ ಸೂಚಿಸಿದಂತೆ ನಿಮ್ಮ ದೊಡ್ಡ ವೈಭವದ ಹಾದಿಯಲ್ಲಿ ಸಣ್ಣ ವಿಜಯಗಳನ್ನು ನೋಡಿದಾಗ, ಆ ಸಣ್ಣ ವಿಜಯಗಳು ನಿಮಗೆ ಶಕ್ತಿ, ಉತ್ಸಾಹ, ಆತ್ಮವಿಶ್ವಾಸ, ಸಂತೋಷ ಇತ್ಯಾದಿಗಳನ್ನು ನೀಡುತ್ತವೆ. ಆದರೆ ಕೆಲವು ಅರ್ಥಗಳಲ್ಲಿ ನಿಜವಾಗಿ ಕಳೆದುಕೊಂಡವರು ನಮ್ಮ ಮಕ್ಕಳು, ಅಕ್ಷತಾ ಹಾಗೂ ರೋಹನ್ ಇಬ್ಬರು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಮಕ್ಕಳು ಸಣ್ಣವರಿದ್ದಾಗ ಕೆಲವೊಮ್ಮೆ ಅಪರೂಪಕ್ಕೆ ಕಚೇರಿಯಿಂದ ಮನೆಗೆ ಬೇಗನೆ ಹಿಂದಿರುಗಿದ ದಿನಗಳಲ್ಲಿ ಮಕ್ಕಳನ್ನು ಅವರ ನೆಚ್ಚಿನ ಸ್ಥಳಕ್ಕೆ ಕರೆದೊಯ್ಯುತ್ತಿದ್ದೆವು. ಅಲ್ಲದೇ ನಾನು ಮನೆಗೆ ಬೇಗ ಬಂದ ವೇಳೆ ಮಕ್ಕಳು ಅವರು ಹೋಮ್‌ವರ್ಕ್‌ ಅನ್ನು ಪೂರ್ಣಗೊಳಿಸಿದಾಗ ಮ್ಯಾಕ್ ಫಾಸ್ಟ್‌ಗೆ ಕರೆದೊಯ್ಯುತ್ತಿದ್ದೆವು ಅಲ್ಲಿ ಅವರು ಅವರಿಷ್ಟದ ಫಿಜ್ಜಾ(Pizza), ಫ್ರೆಂಚ್‌ಫ್ರೈ (French fries) ಮೊದಲಾದವುಗಳನ್ನು ಸೇವಿಸುತ್ತಿದ್ದರು ಎಂದು ಮೂರ್ತಿ ಮನಬಿಚ್ಚಿ ಮಾತನಾಡಿದ್ದಾರೆ. 

ಬೆಂಗಳೂರಿನಲ್ಲಿ (Bengaluru) ಪ್ರಧಾನ ಕಚೇರಿಯನ್ನು ಹೊಂದಿರುವ ಇನ್ಫೋಸಿಸ್ ಸಂಸ್ಥೆಯನ್ನು 1981 ಕೇವಲ 5 ಸಾವಿರ ರೂಪಾಯಿ ಬಂಡವಾಳದಲ್ಲಿ ಸ್ಥಾಪಿಸಲಾಗಿತ್ತು. ಈಗ ಈ ಸಂಸ್ಥೆ 100 ಬಿಲಿಯನ್ ತಲುಪಿದ ನಾಲ್ಕನೇ ಭಾರತೀಯ ಕಂಪನಿಯಾಗಿದೆ.
 

Follow Us:
Download App:
  • android
  • ios