Asianet Suvarna News Asianet Suvarna News

ಕನಿಷ್ಠ ಹೂಡಿಕೆ, ಗರಿಷ್ಠ ಗಳಿಕೆಗೆ ಇರುವ 5 ಮಾರ್ಗಗಳು ಇವೇ ನೋಡಿ!

ಈಗಿನ ಕಾಲದಲ್ಲಿ ಎಷ್ಟು ದುಡಿದರೂ ಕಡಿಮೆ ಎಂಬಂತಹ ಸ್ಥಿತಿಯಿದೆ. ಹೀಗಿರುವಾಗ ಕಡಿಮೆ ಹೂಡಿಕೆ ಮಾಡಿ, ಗರಿಷ್ಠ ಲಾಭ ಗಳಿಸಲು ಏನ್ ಮಾಡ್ಬಹುದು? ಇಲ್ಲಿವೆ ಮಾರ್ಗಗಳು. 

5 Ways to make more money with minimal investment
Author
First Published Jan 2, 2023, 6:31 PM IST


Business Desk:ಕನಿಷ್ಠ ಹೂಡಿಕೆಯೊಂದಿಗೆ ಹೆಚ್ಚಿನ ಹಣ ಗಳಿಸಲು ಅನೇಕ ಮಾರ್ಗಗಳಿವೆ. ಅನೇಕರು ಬಿಡುವಿನ ವೇಳೆಯಲ್ಲಿ ತಮ್ಮ ಹವ್ಯಾಸವನ್ನೇ ಗಳಿಕೆಯ ಹಾದಿಯನ್ನಾಗಿ ಮಾಡಿಕೊಂಡಿರುತ್ತಾರೆ. ಇದರಿಂದ ಮನಸ್ಸಿಗೆ ಖುಷಿಯಾಗುವ ಜೊತೆಗೆ ಒಂದಿಷ್ಟು ಆದಾಯವೂ ಬರುತ್ತದೆ. ಇನ್ನು ಕೆಲವರು ಸಿಕ್ಕಾಪಟ್ಟೆ ಹೂಡಿಕೆ ಮಾಡಿ ಉದ್ಯಮ ಪ್ರಾರಂಭಿಸುತ್ತಾರೆ. ಆದರೆ, ಯಶಸ್ಸು ಸಿಗದೆ ಕೈ ಸುಟ್ಟುಕೊಳ್ಳುತ್ತಾರೆ. ಹೀಗಿರುವಾಗ ಕನಿಷ್ಠ ಹೂಡಿಕೆಯೊಂದಿಗೆ ಆದಾಯ ಗಳಿಸುವ ಮಾರ್ಗ ಹುಡುಕಿಕೊಂಡ್ರೆ ಬದುಕು ಸುಂದರವಾಗಿರುತ್ತದೆ. ಕನ್ಸಲ್ಟಿಂಗ್ ಸೇವೆಗಳು, ಆನ್ ಲೈನ್ ಕೋರ್ಸ್ ಗಳು, ವೆಬ್ ಸೈಟ್ ಗಳಿಗೆ ಲೇಖನಗಳನ್ನು ಬರೆಯೋದು ಅಥವಾ ಬ್ಲಾಗ್ ಪೋಸ್ಟ್ ಗಳು ಹಾಗೂ ಪ್ರಕಟಣೆಗಳ ಮೂಲಕ ಕೂಡ ಹಣ ಗಳಿಸಬಹುದು. ವೆಚ್ಚಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಎಷ್ಟು ಆದಾಯವಿದ್ರೂ ಕಡಿಮೇನೆ. ಹೀಗಾಗಿ ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕಿಕೊಳ್ಳೋದು ಉತ್ತಮ. ಇಂದಿನ ಆನ್ ಲೈನ್ ಯುಗದಲ್ಲಿ ಆದಾಯ ಗಳಿಸಲು ಅನೇಕ ಮಾರ್ಗಗಳಿವೆ. ಹಾಗಾದ್ರೆ ಯಾವೆಲ್ಲ ಮಾರ್ಗಗಳ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯ ಗಳಿಸಬಹುದು? ಇಲ್ಲಿದೆ ಮಾಹಿತಿ.

1. ಕೌಶಲ್ಯ ಹಾಗೂ ಅನುಭವದ ಮೂಲಕ
ಫ್ರೀಲ್ಯಾನ್ಸ್ ಅಥವಾ ಕನ್ಸಲ್ಟಿಂಗ್ ಆಧಾರದ ಕೆಲಸಗಳನ್ನು ಮಾಡುವ ಮೂಲಕ ಆದಾಯ ಗಳಿಸಲು ಅವಕಾಶವಿದೆ. ನಿಮಗೆ ಯಾವ ವಿಷಯದಲ್ಲಿ ಕೌಶಲ್ಯ ಅಥವಾ ಜ್ಞಾನವಿದೆಯೋ ಆ ಕ್ಷೇತ್ರದಲ್ಲಿ ಫ್ರೀಲ್ಯಾನ್ಸರ್ ಅಥವಾ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಬಹುದು. ಉದಾಹರಣೆಗೆ ನಿಮ್ಮ ಬರವಣಿ ಚೆನ್ನಾಗಿದ್ದರೆ ಅಥವಾ ಪತ್ರಿಕೊದ್ಯಮ ವಿಷಯದಲ್ಲಿ ಪದವಿ ಪಡೆದಿದ್ದರೆ ಮಾಧ್ಯಮ ಸಂಸ್ಥೆಗಳಲ್ಲಿ ಫ್ರೀಲ್ಯಾನ್ಸರ್ ಆಗಿ ಕಾರ್ಯನಿರ್ವಹಿಸಬಹುದು. ಹಾಗೆಯೇ ನೀವು ಮಾನವ ಸಂಪನ್ಮೂಲ ಅಥವಾ ಎಚ್ ಆರ್ ವಿಷಯದಲ್ಲಿ ಪದವಿ ಪಡೆದಿದ್ದರೆ ನಿಮ್ಮದೇ ಕನ್ಸಲ್ಟೆನ್ಸಿ ಮೂಲಕ ಆದಾಯ ಗಳಿಸಬಹುದು. ಈಗಂತೂ ಯೂಟ್ಯೂಬರ್ ಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಿಮ್ಮದೇ ಯೂ ಟ್ಯೂಬ್ ಚಾನೆಲ್ ಪ್ರಾರಂಭಿಸಿ ಅದರಿಂದ ಕೂಡ ಆದಾಯ ಗಳಿಸಬಹುದು. ಮಕ್ಕಳಿಗೆ ಟ್ಯೂಷನ್, ಚಿತ್ರಕಲೆ ಅಥವಾ ನೃತ್ಯ ತರಬೇತಿಗಳನ್ನು ನೀಡುವ ಮೂಲಕ ಕೂಡ ಆದಾಯ ಗಳಿಸಬಹುದು.

ಟ್ವೀಟರ್‌ನ 1 ಕೋಟಿ ರು. ಕಚೇರಿ ಬಾಡಿಗೆ ಕಟ್ಟದ ಮಸ್ಕ್: ದೂರು ದಾಖಲು

2.ರೂಮ್ ಅಥವಾ ಇಡೀ ಮನೆಯನ್ನು ಬಾಡಿಗೆಗೆ ನೀಡಿ
ನಿಮ್ಮ ಮನೆಯ ಒಂದು ರೂಮ್ ಅಥವಾ ಒಂದು ಅಂತಸ್ತನ್ನು ಬಾಡಿಗೆ ನೀಡುವ ಮೂಲಕ ಕೂಡ ಆದಾಯ ಗಳಿಸಬಹುದು. ಮನೆಯ ಸ್ಥಳಾವಕಾಶ ಸುಮ್ಮನೆ ಪ್ರಯೋಜನಕ್ಕೆ ಬಾರದೇ ಹಾಗೇ ಇರುವ ಬದಲು ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಲಾಭ.

3.ಡೆವಿಡೆಂಡ್ ಪಾವತಿ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿ
ಕಡಿಮೆ ಹೂಡಿಕೆಯಿಂದ ಅಧಿಕ ಹಣ ಗಳಿಸುವ ಇನ್ನೊಂದು ಮಾರ್ಗವೆಂದ್ರೆ ಡೆವಿಡೆಂಡ್ ಪಾವತಿ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡೋದು. ಡೆವಿಡೆಂಡ್ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿದ ಹಣದಲ್ಲಿ ಗಳಿಸಿದ ಲಾಭಾಂಶವನ್ನು ಷೇರುದಾರರಿಗೆ ಡಿವಿಡೆಂಡ್ಸ್  ರೂಪದಲ್ಲಿ ಪಾವತಿಸಲಾಗುತ್ತದೆ. ಹೆಚ್ಚುವರಿ ಆದಾಯ ಗಳಿಸಲು ನೋಡುತ್ತಿರೋರಿಗೆ ಇದು ಉತ್ತಮ ಅವಕಾಶವೂ ಹೌದು. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಅನ್ನೋದು ನೆನಪಿರಲಿ. 

4. ಪೇಯ್ಡ್ ಆನ್ ಲೈನ್ ಸಮೀಕ್ಷೆಗಳಲ್ಲಿ ಪಾಲ್ಗೊಳ್ಳಿ
ನಿಮ್ಮ ಬಳಿ ಹೆಚ್ಚುವರಿ ಸಮಯ ಇದ್ದಾಗ ಇನ್ನೊಬ್ಬರ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟ ಅನ್ನಿಸುವುದಿಲ್ಲ. ಹೀಗಾಗಿ ನೀವು ಪೇಯ್ಡ್ ಆನ್ ಲೈನ್ ಸಮೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಣ ಗಳಿಸಬಹುದು. ಇದು ಸ್ವಲ್ಪ ಹೆಚ್ಚುವರಿ ಆದಾಯ ಗಳಿಸಲು ಇರುವ ಅತ್ಯಂತ ಸರಳ ವಿಧಾನವಾಗಿದೆ. 

ನೋಟು ಬ್ಯಾನ್‌ ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್

5.ನಿಮ್ಮ ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಗಳಿಂದಲೇ ಆದಾಯ ಗಳಿಸಿ
ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಅಧಿಕ ಪಾಲೋವರ್ಸ್ ಗಳಿದ್ದರೆ, ಬ್ರ್ಯಾಂಡ್ ಗಳ ಪ್ರಚಾರದಲ್ಲಿ ಪಾಲ್ಗೊಳ್ಳುವ ಹಾಗೂ ಅವರ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರಚಾರ ಪಡಿಸುವ ಮೂಲಕ ಕೂಡ ಆದಾಯ ಗಳಿಸಬಹುದು. ಇದು ಹಣ ಗಳಿಕೆಗೆ ಇರುವ ಅತ್ಯಂತ ಕಡಿಮೆ ವೆಚ್ಚದ ಮಾರ್ಗ. 

Follow Us:
Download App:
  • android
  • ios