'ಇಲ್ಲಿ ಸೊಳ್ಳೆನಾದ್ರೂ ಕಾಣುತ್ತಾ ನೋಡಿ ..' ಎಂದ ಬರಡು ಭೂಮಿಯಲ್ಲಿ 1.5 ಲಕ್ಷ ಕೋಟಿ ಹೂಡಿಕೆ ಮಾಡಿದ ಅದಾನಿ!
ಗೌತಮ್ ಅದಾನಿ ತಮ್ಮ ಯೋಜನೆಗೆ ಸಂಬಂಧಿಸಿದಂತೆ 2022 ರಲ್ಲಿ ಗುಜರಾತ್‌ನ ಖಾವ್ರಾಕ್ಕೆ ಮೊದಲ ಬಾರಿಗೆ ಬಂದಾಗ, ಈ ಸ್ಥಳವನ್ನು ನೋಡಿ ಅಚ್ಚರಿ ಪಟ್ಟಿದ್ದರು. ಕನಿಷ್ಠ ಒಂದು ಸೊಳ್ಳೆನಾದ್ರೂ ಇಲ್ಲಿ ಕಾಣುತ್ತಾ ನೋಡಿ ಎಂದು ತಮಾಷೆಯಾಗಿ ಹೇಳಿದ್ದರು. ಈಗ ಅದೇ ಬರಡುಭೂಮಿಯಲ್ಲಿ 1.5 ಲಕ್ಷ ಹೂಡಿಕೆ ಮಾಡಿದ್ದಾರೆ.
ನವದೆಹಲಿ (ಏ.12): ಪ್ರಪಂಚದಾದ್ಯಂತ ಭಾರತದ ಪ್ರಭಾವ ಹೆಚ್ಚುತ್ತಿದೆ ಮತ್ತು ಭಾರತೀಯ ಉದ್ಯಮಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಉದ್ಯಮವನ್ನು ವಿಸ್ತರಣೆ ಮಾಡುತ್ತಿದ್ದಾರೆ. ಇಂಧನ ಕ್ಷೇತ್ರದಲ್ಲಿ ಶತಕೋಟ್ಯಧಿಪತಿ ಗೌತಮ್ ಅದಾನಿ ಹೆಚ್ಚಿನ ಹಣ ಹೂಡುತ್ತಿದ್ದಾರೆ. ಇತ್ತೀಚೆಗೆ ಅದಾನಿ ಗ್ರೂಪ್ ಗುಜರಾತ್‌ನ ಖಾವ್ಡಾದ ಬಂಜರು ಭೂಮಿಯಲ್ಲಿ ವಿಶ್ವದ ಅತಿದೊಡ್ಡ ಗ್ರೀನ್ ಎನರ್ಜಿ ಪ್ಲ್ಯಾಂಟ್‌ಅನ್ನು ಸ್ಥಾಪನೆ ಮಾಡಿದೆ. ಫ್ರೆಂಚ್ ರಾಜಧಾನಿ ಪ್ಯಾರಿಸ್‌ಗಿಂತ 5 ಪಟ್ಟು ದೊಡ್ಡದಾದ ಬರಡು ಭೂಮಿಯಲ್ಲಿ ಗೌತಮ್ ಅದಾನಿ ಈ ಪ್ಲ್ಯಾಂಟ್ ನಿರ್ಮಾಣ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಅಂಟಿಕೊಂಡೇ ಇರುವ ಗ್ರೀನ್ ಎನರ್ಜಿ ಪ್ಲ್ಯಾಂಟ್ ಸಂಪೂರ್ಣವಾಗಿ ಸಿದ್ಧವಾಗಿದೆ. ಇದು ಈ ವಲಯದಲ್ಲಿ ಅದಾನಿ ಸಮೂಹದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಗೌತಮ್ ಅದಾನಿ ಅವರ ಕಂಪನಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನೇತೃತ್ವದಲ್ಲಿ ಈ ಪ್ಲ್ಯಾಂಟ್ ನಿರ್ಮಾಣವಾಗಿದೆ. ಗುಜರಾತ್‌ನ ಖಾವ್ಡಾದಲ್ಲಿ ಪಾಕಿಸ್ತಾನದ ಗಡಿಯ ಬಳಿ ನಿರ್ಮಿಸಲಾದ ಈ ಸ್ಥಾವರದಲ್ಲಿ ಸೌರ ಶಕ್ತಿ ಮತ್ತು ಪವನ ಶಕ್ತಿಯಿಂದ ಹಸಿರು ಇಂಧನವನ್ನು ಉತ್ಪಾದಿಸಲಾಗುತ್ತದೆ.
ಇನ್ನು ಈ ಪ್ಲ್ಯಾಂಟ್‌ನ ಬಗ್ಗೆ ಹೇಳೋದಾದರೆ, ಒಟ್ಟು 538 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಇದು ಹರಡಿಕೊಂಡಿದ್ದು, ಪ್ಯಾರಿಸ್‌ಗಿಂತ 5 ಪಟ್ಟು ದೊಡ್ಡದಾಗಿದೆ. ಫ್ರೆಂಚ್ ರಾಜಧಾನಿ ಪ್ಯಾರಿಸ್ 105.4 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಬ್ಯುಸಿನೆಸ್ ಟುಡೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ 2022 ರಲ್ಲಿ ತನ್ನ ಯೋಜನೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಗುಜರಾತ್‌ನ ಖಾವ್ಡಾಗೆ ಭೇಟಿ ನೀಡಿದ್ದರು. ಈ ಸ್ಥಳವನ್ನು ನೋಡಿದ್ದ ಅವರು ತಮಾಷೆಯಾಗಿಯೇ, ಕನಿಷ್ಠ ಒಂದು ಸೊಳ್ಳೆನಾದ್ರೂ ಇಲ್ಲಿ ಕಾಣುತ್ತಾ ನೋಡಿ ಎಂದಿದ್ದರು. ಆದರೆ, ತಮ್ಮ ಯೋಜನೆಗೆ ಈ ಸ್ಥಳ ಸೂಕ್ತ ಎಂದುಕೊಂಡ ಅವರು ಇಡೀ ಬಂಜರು ಭೂಮಿಗೆ ಸೌರ ಪ್ಯಾನೆಲ್‌ಗಳನ್ನು ಅಳವಡಿಸಿ ಸೌರ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದಾರೆ. ಅದರೊಂದಿಗೆ ಮಿಲ್‌ಗಳು, ಕಾರ್ಮಿಕರ ಕಾಲೋನಿಗಳು ಹಾಗೂ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಬದಲಾಯಿಸುವ ಡಿಸಾಲಿನೇಷನ್ ಘಟಕಗಳನ್ನೂ ಸ್ಥಾಪನೆ ಮಾಡಿದ್ದಾರೆ.
ವರದಿಯ ಪ್ರಕಾರ, ಪ್ರಸ್ತುತ ಈ ಸ್ಥಾವರವು 2000 ಮೆಗಾ ವ್ಯಾಟ್ ಅಥವಾ 2 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದಾನಿ ಗ್ರೀನ್ ಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಪ್ರಕಾರ, ಕಂಪನಿಯು 2024-25ನೇ ಹಣಕಾಸು ವರ್ಷದಲ್ಲಿ ಅದನ್ನು 4 ಗಿಗಾ ವ್ಯಾಟ್‌ಗಳಿಗೆ ವಿಸ್ತರಣೆ ಮಾಡಲು ಯೋಜಿಸಿದೆ. ಗೌತಮ್ ಅದಾನಿ ಅವರ ಈ ಪ್ಲ್ಯಾಂಟ್ ಸಂಪೂರ್ಣವಾಗಿ ಸಿದ್ಧವಾದಾಗ ಮತ್ತು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಆರಂಭವಾದಾಗ, ಅದು 30 ಗಿಗಾ ವ್ಯಾಟ್ ಶುದ್ಧ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ 26 ಗಿಗಾ ವ್ಯಾಟ್ ಸೋಲಾರ್ ಮತ್ತು 4 ಗಿಗಾ ವ್ಯಾಟ್ ಪವನ ಶಕ್ತಿಯಿಂದ ಉತ್ಪಾದನೆಯಾಗಲಿದೆ. ಖಾವ್ರಾ ಸ್ಥಾವರವು ಗರಿಷ್ಠ 81 ಬಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ ಎಂದು ಕಂಪನಿ ಹೇಳುತ್ತದೆ, ಇದು ಬೆಲ್ಜಿಯಂ, ಚಿಲಿ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳ ಸಂಪೂರ್ಣ ಬಳಕೆಗಿಂತ ಹೆಚ್ಚಾಗಿದೆ.
'ಕಾವೇರಿಯ ಕಣ್ಣುಗಳ ಮುಂದೆ ನನ್ನೆಲ್ಲಾ ಸಂಪತ್ತು ಶೂನ್ಯ..' ಅದಾನಿ ಭಾವುಕ ಪೋಸ್ಟ್!
ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿ ಅದಾನಿ ಗ್ರೀನ್ ಎನರ್ಜಿ ಖಾವ್ರಾದಲ್ಲಿ ಶುದ್ಧ ವಿದ್ಯುತ್ ಉತ್ಪಾದನೆಗೆ ಸುಮಾರು 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. 2070 ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ವಿಶಾಲ ಯೋಜನೆಯ ಭಾಗವಾಗಿ ಅದಾನಿ ಗ್ರೂಪ್ ಈ ಯೋಜನೆಯನ್ನು ನೋಡುತ್ತಿದೆ. ಇಲ್ಲಿನ ಕಾರ್ಮಿಕರ ಕಾಲೋನಿ, AGEL ಸ್ಥಾವರ ಇರುವ ಸ್ಥಳದಿಂದ 80 ಕಿಲೋಮೀಟರ್ ದೂರದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅದಾನಿ ಗ್ರೂಪ್ ಕಾರ್ಮಿಕರಿಗೆ ಕಾಲೋನಿಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ, ಕಂಪನಿಯು ಮೊಬೈಲ್ ಫೋನ್ ರಿಪೇರಿ ಅಂಗಡಿಯಂತಹ ಸೇವೆಗಳನ್ನು ಒದಗಿಸಲು ತಯಾರಿ ನಡೆಸುತ್ತಿದೆ.
ದೇಶದಲ್ಲೇ ಮೊದಲ ಬಾರಿಗೆ ಹೊಸ ಸಾಧನೆ ಮಾಡಿದ ಅದಾನಿ ಕಂಪೆನಿ!
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಅಗ್ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ ಮತ್ತು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ 104 ಬಿಲಿಯನ್ ಡಾಲರ್ ಆಗಿದೆ. ಈ ಸಂಪತ್ತಿನ ಅಂಕಿ ಅಂಶದೊಂದಿಗೆ, ಅವರು ವಿಶ್ವದ 14 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ವರ್ಷದ ಆರಂಭದಿಂದ 2024ರವರೆಗೆ ಅವರ ಸಂಪತ್ತು 19.2 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ.