Paridhi and Karan Adani Daughter Kaveri ವಿಶ್ವದ ಟಾಪ್‌ 10 ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅದಾನಿ ಗ್ರೂಪ್‌ನ ಚೇರ್ಮನ್‌ ಗೌತಮ್‌ ಅದಾನಿ ತಮ್ಮ ಮೊಮ್ಮಗಳ ಬಗ್ಗೆ ಭಾವುಕವಾಗಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಮುಂಬೈ (ಏ.2): ಅದಾನಿ ಗ್ರೂಪ್‌ನ ಚೇರ್ಮನ್‌ ಗೌತಮ್‌ ಅದಾನಿ ಸಾಮಾನ್ಯವಾಗಿ ತಮ್ಮ ಕೌಟುಂಬಿಕ ವಿಚಾರಗಳ ಬಗ್ಗೆ ಅಷ್ಟು ಮುಕ್ತವಾಗಿ ಮಾತನಾಡುವುದಿಲ್ಲ. ಆದರೆ, ಮಂಗಳವಾರ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟವೊಂದನ್ನು ಹಂಚಿಕೊಂಡಿರುವ ಗೌತಮ್‌ ಅದಾನಿ ತಮ್ಮ ಮೊಮ್ಮಗಳ ಬಗ್ಗೆ ಮಾತನಾಡಿದ್ದಾರೆ. ವಿಶ್ವದ ಅದೇನೇ ಸಂಪತ್ತುಗಳಿದ್ದರೂ, ನನ್ನ ಮೊಮ್ಮಕ್ಕಳ ಕಣ್ಣಿನ ಹೊಳಪಿನ ಮುಂದೆ ಅವವೆಲ್ಲವೂ ಶೂನ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನು ತಮ್ಮ ಎಕ್ಸ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ಗೌತಮ್‌ ಅದಾನಿ, ಪುತ್ರ ಕರಣ್‌ ಅದಾನಿ ಹಾಗೂ ಅವರ ಪತ್ನಿ ಪರಿಧಿ ಅವರ ಮೂರನೇ ಹೆಣ್ಣುಮಗಳು 14 ತಿಂಗಳ ಕಾವೇರಿಯನ್ನು ಎತ್ತಿಕೊಂಡಿರುವ ಚಿತ್ರದೊಂದಿಗೆ ಈ ಮಾತನ್ನು ಪೋಸ್ಟ್‌ ಮಾಡಿದ್ದಾರೆ. ಲಂಡನ್‌ನ ಸೈನ್ಸ್ ಮ್ಯೂಸಿಯಂನಲ್ಲಿರುವ ಹೊಸ ಅದಾನಿ ಗ್ರೀನ್ ಎನರ್ಜಿ ಗ್ಯಾಲರಿಯಲ್ಲಿ ತೆಗೆದ ಮೊಮ್ಮಗಳ ಚಿತ್ರವನ್ನು ಹಂಚಿಕೊಂಡ ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ, "ಈ ಕಣ್ಣುಗಳ ಹೊಳಪಿಗೆ ಹೋಲಿಸಿದರೆ ಪ್ರಪಂಚದ ಎಲ್ಲಾ ಸಂಪತ್ತು ಶೂನ್ಯ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್‌ ಅದಾನಿ, ನನಗೆ ನನ್ನ ಮೂರು ಜನ ಮೊಮ್ಮಕ್ಕಳೇ ಎಲ್ಲಾ ಒತ್ತಡವನ್ನು ನಿವಾರಿಸುವ ಶಕ್ತಿ ಎಂದು ಹೇಳಿದ್ದರು. ಮೂರು ಜನ ಮೊಮ್ಮಗಳ ಜೊತೆ ಸಮಯ ಕಳೆಯುತ್ತಿದ್ದರೆ, ನನ್ನ ಎಲ್ಲಾ ಒತ್ತಡ ನಿವಾರಣೆ ಆಗುತ್ತದೆ ಎಂದಿದ್ದರು.

"ನಾನು ನನ್ನ ಮೊಮ್ಮಗಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ಅವರು ನನ್ನ ದೊಡ್ಡ ಒತ್ತಡ ಕಡಿಮೆ ಮಾಡುತ್ತಾರೆ.. ನನಗೆ ಕೇವಲ ಎರಡು ಪ್ರಪಂಚಗಳಿವೆ: ಕೆಲಸ ಮತ್ತು ಕುಟುಂಬ. ನನಗೆ ಕುಟುಂಬವು ಶಕ್ತಿಯ ಮೂಲವಾಗಿದೆ" ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಅದಾನಿ ಗ್ರೂಪ್ ವಿಭಿನ್ನವಾಗಿ ಏನನ್ನಾದರೂ ಮಾಡುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. 'ನಮ್ಮ ರೇಟಿಂಗ್‌ ಉತ್ತಮವಾಗಿರಲು, ಕಂಪನಿಯ ಆಡಳಿತವನ್ನ ಬಿಗಿ ಮಾಡಿದ್ದು, ಎಲ್ಲವನ್ನೂ ಬಹಿರಂಗವಾಗಿ ತಿಳಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ದರ್ಜೆಗೆ ತಕ್ಕಂತೆ ಕಂಪನಿ ವ್ಯವಹಾರ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ. ಇನ್ನು ನಮ್ಮ ಕಂಪನಿಯೊಂದು ತತ್ವವಿದೆ. ಅದೇನೆಂದರೆ, ನನ್ನ ಹೆಸರು ಅದಾನಿ, ನಮ್ಮದು ಒಂದು ವಿನಮ್ರ ಇನ್ಫ್ರಾ ಕಂಪನಿ ಎಂದು ಹೇಳಿದ್ದಾರೆ.

ಮೊಟ್ಟಮೊದಲ ಬಾರಿಗೆ ಅದಾನಿ ಗ್ರೂಪ್‌ ಕಂಪನಿಯ ಶೇ. 26ರಷ್ಟು ಪಾಲು ಖರೀದಿ ಮಾಡಿದ ಮುಖೇಶ್‌ ಅಂಬಾನಿ!

ಇಂದು ನಮ್ಮ ಸಾಲಗಳ ಪೋರ್ಟ್‌ಫೋಲಿಯೋ ಕೂಡ ಸಮಾನವಾಗಿದೆ. ದೇಶೀಯ ಬ್ಯಾಂಕ್‌ಗಳಲ್ಲಿ ಶೇ. 29ರಷ್ಟಿದ್ದರೆ, ಅಂತಾರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಶೇ. 30, ಜಾಗತಿಕ ಬಾಂಡ್‌ಗಳಲ್ಲಿ ಶೇ. 34 ಹಾಗೂ ಇತರೇ ಶೇ. 7ರಷ್ಟಿದೆ ಎಂದು ಹೇಳಿದ್ದಾರೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಚಲ್ತಾ ಹೇ ಧೋರಣೆ ಹೋಗಿದೆ. ಕ್ರಿಕೆಟ್‌ ಶೈಲಿಯಲ್ಲಿ ಕಂಪನಿಯ ಕಾರ್ಯನಿರ್ವಹಣೆ ವಿವರಿಸಿದ ಅದಾನಿ, ಮೂಲಸೌಕರ್ಯ ಕ್ಷೇತ್ರದಲ್ಲಿ ಅದಾನಿ ಗ್ರೂಪ್‌ ಯಾವ ರೀತಿ ಪರಿಣಾಮ ಬೀರಿದೆ ಎಂದರೆ, ಟೆಸ್ಟ್‌ ಕ್ರಿಕೆಟ್‌ಗೆ ಟಿ20 ಕ್ರಿಕೆಟ್‌ ಪರಿಣಾಮ ಬೀರಿದ ರೀತಿಯಲ್ಲಿ ಕೆಲಸ ಮಾಡಿದೆ ಎಂದಿದ್ದಾರೆ.

ಅದಾನಿಗೆ ಮತ್ತೆ ಸಂಕಷ್ಟ; ಲಂಚ ಆರೋಪದ ತನಿಖೆಗೆ ಮುಂದಾದ ಅಮೆರಿಕ ಸರ್ಕಾರ; ಕುಸಿದ ಷೇರು, ಬಾಂಡ್ ಮೌಲ್ಯ

Scroll to load tweet…