ಈ 5 ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಬಲ್ಲವು!

ಈ ತಿಂಗಳು ಹಬ್ಬ,ರಜೆಯೆಂದು ಮೋಜು-ಮಸ್ತಿ ಮಾಡೋ ಜೊತೆ ಬದಲಾದ ಆರ್ಥಿಕ ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರಿ.

5 Changes in October that affects common man

ಅಕ್ಟೋಬರ್ (October) ಅಂದ್ರೆ ಹಬ್ಬಗಳು, ರಜೆಗಳೆಂದು ಖುಷಿಯಲ್ಲಿ ಮೈ ಮರೆಯಬೇಡಿ. ಈ ತಿಂಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಕೆಲವು ಬ್ಯಾಂಕ್, ಚೆಕ್, ಅಮಾನ್ಯದಿಂದ ಹಿಡಿದು ಅಟೋ ಡೆಬಿಟ್ (Auto Debit) ನಿಯಮಗಳ ತನಕ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ ಒಂದಿಷ್ಟು ಹೊಸ ಬದಲಾವಣೆಗಳಿಗೆ ಅಕ್ಟೋಬರ್ ಸಾಕ್ಷಿಯಾಗಿದೆ. ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಬಲ್ಲ ಈ ಬದಲಾದ ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರೋದು ಅಗತ್ಯ.

ಕಾರ್ಡ್ ಟೋಕನೈಸೇಷನ್: ಮುಂದಿನ ವರ್ಷದಿಂದ ಆನ್ಲೈನ್ ಪಾವತಿ ಸುರಕ್ಷಿತ

ಅಟೋ ಡೆಬಿಟ್ ನಿಯಮದಲ್ಲಿ ಬದಲಾವಣೆ
ಹೊಸ ಅಟೋ ಡೆಬಿಟ್ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. ಆರ್ಬಿಐ ಆದೇಶದ ಅನ್ವಯ ಇನ್ನು ಮುಂದೆ ರೀಚಾರ್ಜ್ (recharge), ಯುಟಿಲಿಟಿ ಬಿಲ್ (Utility Bill) ಇತ್ಯಾದಿ ಮಾಸಿಕ ಪಾವತಿಗಳಿಗೆ ಗ್ರಾಹಕರ ಖಾತೆಯಿಂದ ಹಣ ಸ್ವಯಂ ಕಡಿತವಾಗೋದಿಲ್ಲ. ಬದಲಿಗೆ ಗ್ರಾಹಕರ ಅನುಮೋದನೆ (Approval) ಪಡೆದ ಬಳಿಕವಷ್ಟೇ ಪಾವತಿ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಎಲ್ಲ ಬ್ಯಾಂಕ್ಗಳು ಗ್ರಾಹಕರಿಂದ ಹೆಚ್ಚುವರಿ ಅಂಶ ದೃಢೀಕರಣ (ಎಎಫ್ಎ) ಪಡೆದುಕೊಳ್ಳುವಂತೆ ಆರ್ಬಿಐ (RBI) ಆದೇಶಿಸಿದೆ. ವಿದ್ಯುತ್ (Electricity), ನೀರು ಬಿಲ್ (Water Bill), ಅಮೆಜಾನ್ (Amazon), Netflix ಒಒಟಿಗಳ ಮಾಸಿಕ ಬಿಲ್ ಪಾವತಿ ಮಾಡೋ ಮುನ್ನ ಬ್ಯಾಂಕ್ ಗ್ರಾಹಕರಿಗೆ 24 ಗಂಟೆ ಮುಂಚಿತವಾಗಿ ಎಸ್ಎಂಎಸ್ (SMS) ಅಥವಾ ಇ-ಮೇಲ್ (e-mail) ಮುಖಾಂತರ ಮಾಹಿತಿ ನೀಡಿ ಅವರ ದೃಢೀಕರಣ (Confirmation) ಹಾಗೂ ಅನುಮೋದನೆ ಪಡೆಯೋದು ಕಡ್ಡಾಯ.

ಪಿಂಚಣಿ ನಿಯಮದಲ್ಲಿ ಬದಲಾವಣೆ
ಅಕ್ಟೋಬರ್ 1ರಿಂದ ಪಿಂಚಣಿಗೆ (Pension) ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಇದರ ಅನ್ವಯ ಸಮಯಕ್ಕೆ ಸರಿಯಾಗಿ ಪಿಂಚಣಿ ಪಡೆಯಲು 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ತಮಗೆ ಸಂಬಂಧಿಸಿದ ಅಂಚೆ ಕಚೇರಿಯ ಜೀವನ ಪ್ರಮಾಣ ಕೇಂದ್ರಕ್ಕೆ ಪ್ರತಿ ವರ್ಷ ತಪ್ಪದೇ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಈ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ 30 ಕೊನೆಯ ದಿನಾಂಕ. 
 

5 Changes in October that affects common man

3 ಬ್ಯಾಂಕ್ ಚೆಕ್ ಬುಕ್ ಅಮಾನ್ಯ
ಅಲಹಾಬಾದ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) -ಈ ಮೂರು ಬ್ಯಾಂಕಿನ ಹಳೆಯ ಚೆಕ್ಬುಕ್ ಹಾಗೂ ಎಂಐಸಿಆರ್ ಕೋಡ್‌ಗಳು ಅಕ್ಟೋಬರ್ 1ರಿಂದ ಅಮಾನ್ಯವಾಗುತ್ತವೆ. ಬ್ಯಾಂಕ್‌ಗಳ ವಿಲೀನದ ಹಿನ್ನೆಲೆಯಲ್ಲಿ ಈ ಬದಲಾವಣೆಗಳಾಗಿವೆ. ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಜೊತೆ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ ವಿಲೀನವಾಗಿವೆ. 

e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?

ಮ್ಯೂಚುವಲ್ ಫಂಡ್ (Mutual Fund) ಹೂಡಿಕೆಗೆ ಹೊಸ ನಿಯಮ
ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಎಎಂಸಿ) ಉದ್ಯೋಗಿಗಳಿಗೆ ಸಂಬಂಧಿಸಿ ಸೆಬಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಅದೇನೆಂದ್ರೆ ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸೋ 35 ವರ್ಷ ವಯಸ್ಸಿನೊಳಗಿನ ಎಲ್ಲ ಉದ್ಯೋಗಿಗಳು ತಮ್ಮ ವೇತನದ ಶೇ.10ರಷ್ಟನ್ನು ಮ್ಯೂಚುವಲ್ ಫಂಡ್ಗಳಲ್ಲಿ 2021ರ ಅಕ್ಟೋಬರ್ 1ರಿಂದ 2022ರ ಸೆಪ್ಟೆಂಬರ್ 30ರೊಳಗೆ ಹೂಡಿಕೆ ಮಾಡಬೇಕು. ಇದೇ ರೀತಿ 2023ರ ಅಕ್ಟೋಬರ್ 1ರ ಬಳಿಕ ಅವರ ಈ ಹೂಡಿಕೆಯು ಹಂತ ಹಂತವಾಗಿ ಏರಿಕೆ ಕಂಡು ಶೇ. 20ಕ್ಕೆ ತಲುಪಿರಬೇಕು.

ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಅದ್ರಿಂದ ಯಾರಿಗೆ ಲಾಭ?

ಆಹಾರ ಉತ್ಪನ್ನಗಳ ಮೇಲೆ ಲೈಸೆನ್ಸ್ ನಂಬ್ರ ಕಡ್ಡಾಯ
ಎಲ್ಲ ಬಿಲ್ ಹಾಗೂ ಇನ್ವಾಯ್ಸ್ (Invoice) ಮೇಲೆ 14 ಸಂಖ್ಯೆಗಳ ನೋಂದಣಿ (Registration) ಹಾಗೂ ಲೈಸೆನ್ಸ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವಂತೆ ಆಹಾರ ಉದ್ಯಮ ಘಟಕ (FBOಗಳಿಗೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ಸೂಚಿಸಿದೆ. ಎಲ್ಲ ಆಹಾರ ಉತ್ಪನ್ನಗಳ ಪ್ಯಾಕೆಟ್ ಮೇಲೆ FSSAI ಸಂಖ್ಯೆ ಇರುತ್ತದೆ. ಆದ್ರೆ ಇದರೊಂದಿಗೆ ನೋಂದಣಿ ಹಾಗೂ ಲೈಸೆನ್ಸ್ ಸಂಖ್ಯೆ ನಮೂದಿಸೋದು ಕಡ್ಡಾಯ ಮಾಡೋದ್ರಿಂದ ಇನ್ನೂ FSSAIಯಲ್ಲಿ ನೋಂದಣಿ ಮಾಡಿಸದ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಲೈಸೆನ್ಸ್ ಪಡೆಯುತ್ತವೆ. ಇದ್ರಿಂದ ಗ್ರಾಹಕರಿಗೆ ಆ ಸಂಸ್ಥೆಯ ಯಾವುದೇ ಉತ್ಪನ್ನದ ಗುಣಮಟ್ಟದ ಬಗ್ಗೆ ಅತೃಪ್ತಿಯಿದ್ದರೆ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಲು ಸುಲಭವಾಗುತ್ತದೆ. ಅಲ್ಲದೆ, ನಿರ್ದಿಷ್ಟ ಆಹಾರ ಉತ್ಪನ್ನ ಉದ್ಯಮದ ಬಗ್ಗೆ FSSAI ಪೋರ್ಟಲ್ನಿಂದ ಮಾಹಿತಿ ಪಡೆಯಲು ಗ್ರಾಹಕರಿಗೆ ಸುಲಭವಾಗುತ್ತದೆ. 

Latest Videos
Follow Us:
Download App:
  • android
  • ios