ಮುಂಬೈ(ಏ.08): ಕೊರೋನಾ ವೈರಸ್‌ ಪ್ರಕರಣಗಳು ವಿಶ್ವದ ಹಲವು ದೇಶಗಳಲ್ಲಿ ನಿಯಂತ್ರಣಗೊಳ್ಳುತ್ತಿರುವ ಕಾರಣ ಮಂಗಳವಾರ ಜಾಗತಿಕ ಷೇರುಪೇಟೆಗಳು ಚೇತರಿಕೆ ಕಂಡಿವೆ. ಇದರ ಪರಿಣಾಮ ಭಾರತದ ಷೇರುಪೇಟೆ ಮೇಲೂ ಆಗಿದ್ದು, ಷೇರು ಸೂಚ್ಯಂಕ 10 ವರ್ಷ​ಗಳ ಬಳಿಕ ಸೆನ್ಸೆಕ್ಸ್‌ ಏಕದಿನದ ದಾಖಲೆ ಏರಿಕೆ ಕಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನಕ್ಕೆ 7.71 ಲಕ್ಷ ಕೋಟಿ ರು. ಹೆಚ್ಚಳವಾಗಿದೆ.

ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್‌’ ಏಕದಿನದ ಸರ್ವಾಧಿಕ ಏರಿಕೆಯಾದ 2,476.26 ಅಂಕ (ಶೇ.8.97ರಷ್ಟು) ಏರಿ 30,067.21ಕ್ಕೆ ದಿನದ ವಹಿವಾಟು ಮುಗಿಸಿತು. ದಿನದ ನಡುವೆ 2,567 ಅಂಕಗಳಷ್ಟೂಒಂದು ಹಂತದಲ್ಲಿ ಏರಿತ್ತು. ಈ ಮೂಲಕ, ಕೆಲವು ದಿನದಿಂದ ಮಂಕಾಗಿದ್ದ ಷೇರುಪೇಟೆ ಪುನಃ 30 ಸಾವಿರದ ಗಡಿ ದಾಟಿತು.

ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆಯೇ ಇಲ್ಲ!

ಇದಲ್ಲದೆ, ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 708 ಅಂಕ (ಶೇ.8.76ರಷ್ಟು) ಏರಿ 8,792.20ಕ್ಕೆ ದಿನಾಂತ್ಯ ಕಂಡಿತು. ಒಂದು ದಿನದ ಸಾರ್ವ​ಕಾ​ಲಿಕ ದಾಖಲೆ ಅಷ್ಟೇ ಅಲ್ಲದೆ ಮೇ 2009ರ ನಂತರ ಅಂದರೆ 10 ವರ್ಷ​ಗಳ ಬಳಿಕ ಷೇರು ಪೇಟೆಗಳು ಒಂದು ದಿನದಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಇಷ್ಟೊಂದು ಏರಿಕೆ ಕಂಡಿದ್ದು ಇದೇ ಮೊದಲು. 2009ರ ಮೇ 18ರಂದು ಸೆನ್ಸೆಕ್ಸ್‌ ಶೇ. 17.24ರಷ್ಟುಅಂದರೆ 2099 ಅಂಕ ಏರಿ​ಕೆ​ಯಾ​ಗಿತ್ತು. ಹಾಗೆಯೇ ನಿಫ್ಟಿಶೇ.17.33ರಷ್ಟುಅಂದರೆ 636 ಅಂಕ ಏರಿಕೆ ಕಂಡಿತ್ತು.

ಜಾಗತಿಕ ಪೇಟೆಯ ಪ್ರಭಾವವಲ್ಲದೇ, ಕೇಂದ್ರ ಸರ್ಕಾರ 2ನೇ ಕೊರೋನಾ ಪರಿಹಾರ ಪ್ಯಾಕೇಜ್‌ ಪ್ರಕಟಿಸುವ ಸಾಧ್ಯತೆ ಇರುವ ಕಾರಣವೂ ಪೇಟೆ ಏರಿಕೆ ಆಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

"