ಒಂದು ವರ್ಷದ ಬಳಿಕ ಬ್ಯಾಂಕ್ ಲಾಕರ್ ತೆರೆದ ಮಹಿಳೆಗೆ ಶಾಕ್: ಮಗಳ ಮದುವೆಗಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಲು ಬ್ಯಾಂಕ್ ಲಾಕರ್ ಅತ್ಯಂತ ಸುರಕ್ಷಿತ ಜಾಗ ಎಂದು ನಾವು ಭಾವಿಸುತ್ತೇವೆ. ಇದೇ ಕಾರಣಕ್ಕೆ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಇಲ್ಲಿಡುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಲಾಕರ್ ನಲ್ಲಿ ಜೋಪಾನವಾಗಿಟ್ಟಿದ್ದ 18ಲಕ್ಷ ರೂಪಾಯಿಯನ್ನು ಗೆದ್ದಲು ಹುಳುಗಳು ತಿಂದು ಹಾಕಿವೆ. 
 

18 Lakhs In Cash Gone Woman Loses Her Money From Bank Locker Courtesy Termites anu

ಮೊರಾದಾಬಾದ್ (ಸೆ.29):  ಮಗಳ ಮದುವೆಗೆಂದು ಮಹಿಳೆಯೊಬ್ಬರು ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ 18 ಲಕ್ಷ ರೂ. ನಗದನ್ನು ಗೆದ್ದಲು ಹುಳುಗಳು ಸಂಪೂರ್ಣವಾಗಿ ತಿಂದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ. ಕೆವೈಸಿ ಅಪ್ಡೇಟ್ ಹಾಗೂ ಬ್ಯಾಂಕ್ ಲಾಕರ್ ಒಪ್ಪಂದದ ನವೀಕರಣಕ್ಕಾಗಿ ಬ್ಯಾಂಕ್ ಅಧಿಕಾರಿಗಳ ಕೋರಿಕೆ ಮೇರೆಗೆ ಶಾಖೆಗೆ ತೆರಳಿದ್ದ ಮಹಿಳೆ ತನ್ನ ಲಾಕರ್ ಚೆಕ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಂದ ಹಾಗೇ ಈ ಘಟನೆ ಬ್ಯಾಂಕ್ ಆಫ್ ಬರೋಡಾದ ಆಶಿಯಾನ ಶಾಖೆಯಲ್ಲಿ ನಡೆದಿದೆ. ಮೊರಾದಾಬಾದ್ ನಿವಾಸಿ ಅಲ್ಕಾ ಪಠಾಕ್ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಈ ಬ್ಯಾಂಕ್ ಶಾಖೆಯ ಲಾಕರ್ ನಲ್ಲಿ 18ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು. ಆದರೆ, ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಈ ಹಣವನ್ನು ಒಂದು ವರ್ಷದೊಳಗೆ ಗೆದ್ದಲು ಹುಳುಗಳು ಹ ಮಾಡಿರೋದು ಪಠಾಕ್ ಅವರಿಗೆ ಆಘಾತವನ್ನುಂಟು ಮಾಡಿದೆ. ಮಗಳ ಮದುವೆಗೆಂದು ಅವರು ಕಷ್ಟಪಟ್ಟು ಈ ಹಣವನ್ನು ಕೂಡಿಟ್ಟಿದ್ದರು.  ಈ ಘಟನೆ ಬ್ಯಾಂಕ್ ಅಧಿಕಾರಿಗಳನ್ನು ಕೂಡ ಬೆಚ್ಚಿ ಬೀಳಿಸಿದೆ. 

ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ನಗದು ಹಣವನ್ನು ಗೆದ್ದಲು ಹುಳುಗಳು ತಿಂದಿರುವ ಸುದ್ದಿ ಎಲ್ಲ ಕಡೆ ಹರಡುತ್ತಿದ್ದಂತೆ ಮಾಧ್ಯಮದವರು ಘಟನೆ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಈ ಸಂಬಂಧ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಕಚೇರಿಗೆ ವರದಿ ಕಳುಹಿಸಿರೋದಾಗಿ ತಿಳಿಸಿದ್ದಾರೆ. ಘಟನೆಯಿಂದ ಸಾಕಷ್ಟು ಆಘಾತಕ್ಕೊಳಗಾಗಿರುವ ಪಠಾಕ್, ಬ್ಯಾಂಕ್ ಅಧಿಕಾರಿಗಳು ನನಗೆ ಯಾವುದೇ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ಒಂದು ವೇಳೆ ಬ್ಯಾಂಕ್ ನನಗೆ ಪ್ರತಿಕ್ರಿಯೆ ಹಾಗೂ ಬೆಂಬಲವನ್ನು ನೀಡದಿದ್ದರೆ ನಾನು ಮಾಧ್ಯಮಗಳ ನೆರವು ಪಡೆಯುತ್ತೇನೆ' ಎಂದು ಅವರು ತಿಳಿಸಿದ್ದಾರೆ. 

ಆರ್ಡರ್ ಮಾಡದೆ ಮನೆಗೆ ಬಂತು ಸಾವಿರ ಕಾಂಡೋಮ್! ಹಣ ಕಟ್ ಆಗ್ತಿದ್ದಂತೆ ಮಹಿಳೆ ಕಂಗಾಲು

ಅಂದಹಾಗೇ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಪರಿಚಯಿಸಿರುವ ಹೊಸ ಬ್ಯಾಂಕ್ ಲಾಕರ್ ನಿಯಮಗಳ ಅನ್ವಯ ಬ್ಯಾಂಕ್ ಲಾಕರ್ ಗಳಲ್ಲಿ ನಗದು ಹಣವನ್ನು ಸಂಗ್ರಹಿಸುವಂತಿಲ್ಲ. ಅಲ್ಲದೆ, ಬ್ಯಾಂಕ್ ಆಫ್ ಬರೋಡಾದ ಲಾಕರ್ ಒಪ್ಪಂದದಲ್ಲಿ ಕೂಡ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. 'ಆಭರಣಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಿಡಲು ಮಾತ್ರ ಲಾಕರ್ ಬಳಸಲು ಅನುಮತಿ ನೀಡಲಾಗಿದೆಯೇ ಹೊರತು ಯಾವುದೇ ನಗದು ಅಥವಾ ಕರೆನ್ಸಿಯನ್ನು ಸಂಗ್ರಹಿಸಲು ಅಲ್ಲ.' 

ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!

ಬ್ಯಾಂಕ್ ಲಾಕರ್ ಹೊಸ ನಿಯಮದಲ್ಲಿ ಏನಿದೆ?
2023ರ ಜನವರಿ 1ರಿಂದ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಬದಲಾವಣೆಗಳಾಗಿವೆ.  2023 ಜನವರಿ 1ರಿಂದ ಬ್ಯಾಂಕ್ ಗಳು  ಹೊಸ ಲಾಕರ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಹಾಗೂ  ಗ್ರಾಹಕರಿಗೆ ಲಾಕರ್ ಒಪ್ಪಂದಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ದೇಶನ ನೀಡಿದೆ.  ಲಾಕರ್ ಹೊಂದಿರುವ ಎಲ್ಲ ಗ್ರಾಹಕರು ಲಾಕರ್ ಒಪ್ಪಂದದ ನವೀಕರಣ ಪತ್ರಕ್ಕೆ ಸಹಿ ಹಾಕುವ ಜೊತೆಗೆ ಅರ್ಹತ ದಾಖಲೆಗಳನ್ನು ಬ್ಯಾಂಕಿಗೆ ನೀಡಬೇಕು.  ಒಂದು ವೇಳೆ  ಬ್ಯಾಂಕ್‌ ಲಾಕರ್‌ ನಲ್ಲಿರುವ ವಸ್ತು ಕಳೆದು ಹೋದ್ರೆ ಬ್ಯಾಂಕ್ ಲಾಕರ್ ಬಾಡಿಗೆಯ 100 ಪಟ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡಬೇಕು. ಈ ಪರಿಹಾರವು ಬೆಂಕಿ, ಕಟ್ಟಡ ಕುಸಿತ ಅಥವಾ ವಂಚನೆಯ ಸಂದರ್ಭಕ್ಕೂ ಅನ್ವಯಿಸುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಬ್ಯಾಂಕ್ ಆಫ್ ಬರೋಡಾ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 
ಲಾಕರ್ ನಲ್ಲಿಟ್ಟಿರುವ ವಸ್ತುಗಳ ಸುರಕ್ಷತೆಯ ಜವಾಬ್ದಾರಿಯನ್ನು ಈ ಹಿಂದೆ ಬ್ಯಾಂಕ್ ಗಳು ಪೂರ್ಣ ಪ್ರಮಾಣದಲ್ಲಿ ಹೊರಲು ಸಿದ್ಧವಿರಲಿಲ್ಲ. ಈ ಹಿನ್ನೆಲೆಯಲ್ಲಿ 2021ರ ಆಗಸ್ಟ್ ನಲ್ಲಿ ಆರ್ ಬಿಐ ಬ್ಯಾಂಕ್ ಲಾಕರ್ ನಿಯಮಗಳನ್ನು ಪರಿಷ್ಕರಿಸಿತ್ತು.

Latest Videos
Follow Us:
Download App:
  • android
  • ios