ಬೆಂಗಳೂರು(ಮೇ.07): ಕೋವಿಡ್‌ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಹದಗೆಟ್ಟಿದ್ದು, ಆರ್ಥಿಕ ಪುನಶ್ಚೇತನಕ್ಕಾಗಿ ಇತ್ತೀಚೆಗೆ ನಡೆಸಲಾದ ಎಂಎಸ್‌ಎಂಇ ಉದ್ಯಮಿಗಳ ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ಅವರು 16 ಅಂಶಗಳುಳ್ಳ ಸಲಹೆಗಳನ್ನು ಆರ್ಥಿಕ ಪುನಶ್ಚೇತನ ಕಾರ್ಯಕ್ರಮದಲ್ಲಿ ಪರಿಗಣಿಸುವಂತೆ ಕೋರಿದ್ದಾರೆ.

1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಕೊರೋನಾ ಲಾಕ್‌ಡೌನ್‌ ನಂತರ ದೇಶದ ಆರ್ಥಿಕತೆ ಪುನಶ್ಚೇತನಗೊಳಿಸುವುದು ಹೇಗೆ ಎನ್ನುವ ಕುರಿತು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಇತ್ತೀಚೆಗೆ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ್ದರು. ಸಭೆಯಲ್ಲಿ ವಿವಿಧ ಕೈಗಾರಿಕೋದ್ಯಮಿಗಳು ಕೊರೋನಾ ವೈರಸ್‌ ನಿಯಂತ್ರಿಸಲು ಲಾಕ್‌ಡೌನ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಬೆಂಬಲಿಸಿದ್ದರು. ಎಂಎಸ್‌ಎಂಇ ಕೈಗಾರಿಕೆಗಳ ಉಳಿವಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆರ್‌ಬಿಐ ಘೋಷಿಸಿರುವ ರಿಯಾಯಿತಿ ಮತ್ತು ವಿನಾಯಿಗಳ ಕುರಿತ ಪ್ರಕಟಣೆಗಳನ್ನು ರವಾನಿಸಬೇಕು. ಇಎಸ್‌ಐ ಮರುಪಾವತಿ ಅವಧಿ ವಿಸ್ತರಣೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ನೆರವು ನೀಡಲು ಬಡ್ಡಿಯನ್ನು ಅಲ್ಪಾವಧಿಗೆ ಕಡಿಮೆ ಮಾಡುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ಉದ್ಯಮಿಗಳು ನೀಡಿದರು ಎಂದು ರಾಜೀವ್‌ ಚಂದ್ರಶೇಖರ್‌ ಪತ್ರದಲ್ಲಿ ತಿಳಿಸಿದ್ದಾರೆ.

ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳಿಗೆ ಬೇರ್ಪಡಿಸಿ ಅಗತ್ಯ ನೆರವು ನೀಡಬೇಕು. ಅರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಎಂಎಸ್‌ಎಂಇ ಕೈಗಾರಿಕೆಗಳಿಗೆ ವಿಶೇಷ ಯೋಜನೆ ಘೋಷಿಸಬೇಕು. ಜಿಎಸ್‌ಟಿ ಪಾವತಿಗೆ ಮೇ ಅಂತ್ಯದವರೆಗೆ ವಿನಾಯಿತಿ ನೀಡಿದ್ದು, ಅದನ್ನು ಜೂನ್‌ ವರೆಗೂ ವಿಸ್ತರಿಸಬೇಕು. ಆರ್ಥಿಕತೆ ಅಭಿವೃದ್ಧಿ ದೃಷ್ಟಿಯಿಂದ ಮಾನವ ಕೆಲಸ ಅವಧಿಯನ್ನು ವಿಸ್ತರಿಸಬೇಕು ಅಥವಾ ದಿನಗಳನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಸಹಕರಿಸಬೇಕು. ಸೂಕ್ಷ್ಮ, ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಆರ್ಥಿಕ ನೆರವು ಘೋಷಿಸಿದೆ. ಆರ್‌ಬಿಐ ಅನುದಾನ ಬಿಡುಗಡೆ ಮಾಡಿದೆ. ಆದರೆ ಬ್ಯಾಂಕುಗಳು ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಆದಷ್ಟುಬೇಗ ಅದನ್ನು ಬಿಡುಗಡೆ ಮಾಡಿ ಆರ್ಥಿಕ ಉತ್ತೇಜನ ನೀಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಆರಂಭಿಸಲು ಬ್ಯಾಂಕ್‌ಗಳು ಸಹಕರಿಸಬೇಕು ಎಂಬ ಸಲಹೆ ನೀಡಿದ್ದಾರೆ.

ಹರ್ಜಿತ್ ಸಿಂಗ್‌ಗೆ ಸಂಸದ ರಾಜೀವ್ ಚಂದ್ರಶೇಖರ್, ಆಂಧ್ರ ಪೊಲೀಸ್ ಸೆಲ್ಯೂಟ್

ಅನೇಕ ಉದ್ಯಮಿಗಳು ವಿದ್ಯುತ್‌ ನಿಗಮಗಳಿಂದ ವಿದ್ಯುತ್‌ ಶುಲ್ಕ ಮನ್ನಾ ಮಾಡಬೇಕು, ಇಲ್ಲವೇ ಶುಲ್ಕ ಪಾವತಿ ಅವಧಿಯನ್ನು ಮುಂದೂಡಬೇಕು ಹಾಗೂ ಸ್ಥಿರ ಶುಲ್ಕಗಳನ್ನು ಮನ್ನಾ ಮಾಡುವ ಕುರಿತು ರಾಜ್ಯ ಸರ್ಕಾರದ ಬೆಂಬಲವನ್ನು ಕೋರಿದ್ದಾರೆ. ಈ ಎಲ್ಲ ಸಲಹೆಗಳನ್ನು ಆರ್ಥಿಕ ಸಂಕಷ್ಟದ ಈ ಅವಧಿಯಲ್ಲಿ ದೇಶದ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಪತ್ರದಲ್ಲಿ ಸಂಸತ್‌ ಸದಸ್ಯ ರಾಜೀವ್‌ ಮನವಿ ಮಾಡಿದ್ದಾರೆ.

ರಾಜ್ಯದ ಪ್ಯಾಕೇಜ್‌ಗೆ ಆರ್‌ಸಿ ಶ್ಲಾಘನೆ

ಕೊರೋನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ತೊಂದರೆಗೀಡಾದವರಿಗೆ .1,610 ಕೋಟಿ ಕೋವಿಡ್‌ ಪರಿಹಾರದ ಪ್ಯಾಕೇಜ್ ಘೋಷಿಸಿದ ಕರ್ನಾಟಕ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಧನ್ಯವಾದ ಸಲ್ಲಿಸಿದ್ದಾರೆ.

ರೈತರು, ನೇಕಾರರು, ತೋಟಗಾರಿಕೆ ಬೆಳೆಗಾರರು, ಸವಿತಾ ಸಮಾಜದವರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ವಲಸೆ ಕಾರ್ಮಿಕರಿಗೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿರುವ ಪ್ಯಾಕೇಜ… ದೇಶದ ಉಳಿದ ಮುಖ್ಯಮಂತ್ರಿಗಳಿಗೆ ಮಾದರಿಯಾಗಿದೆ ಎಂದು ರಾಜೀವ್‌ ಚಂದ್ರಶೇಖರ್‌ ಅವರು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ ನಿವಾರಿಸಲು RBI ದಿಟ್ಟ ಕ್ರಮ ಸ್ವಾಗತಿಸಿದ ರಾಜ್ಯಸಭಾ MP ರಾಜೀವ್ ಚಂದ್ರಶೇಖರ್!

ಇದೊಂದು ಬಂಪರ್‌ ಪ್ಯಾಕೇಜ್ ಆಗಿದ್ದು, ರಾಜ್ಯದ ಎಲ್ಲ ವರ್ಗದ ಜನರನ್ನು ಸ್ಪರ್ಶಿಸಿದೆ. ರಾಜ್ಯ ಆರ್ಥಿಕ ಸಂಕಷ್ಟಎದುರಿಸುತ್ತಿದ್ದರೂ ಇಂಥ ಪ್ಯಾಕೇಜ… ಘೋಷಿಸಿದ್ದು ಯಡಿಯೂರಪ್ಪ ಅವರ ದಿಟ್ಟನಡೆಗೆ ಸಾಕ್ಷಿ. ಇದು ಶ್ಲಾಘನೀಯ ಎಂದು ರಾಜೀವ್‌ ಚಂದ್ರಶೇಖರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.