ಬೆಂಗಳೂರು ಏರ್‌ಪೋರ್ಟ್‌ನಿಂದ ಕಾರಾರಯಚರಿಸುವ 2ನೇ ಅತಿ ದೊಡ್ಡ ಏರ್‌ಲೈನ್ಸ್: ಆಕಾಸ ಏರ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯ್ ದುಬೆ
ಬೆಂಗಳೂರು(ಮಾ.03): ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ಆಕಾಸ ಏರ್ ಕಳೆದ ಆರು ತಿಂಗಳ ಯಶಸ್ವಿ ಕಾರ್ಯಾಚರಣೆಯನ್ನು ಪೂರ್ಣಗೊಳ್ಳಿಸಿದ್ದು, ಮುಂದಿನ ಕೆಲವೇ ದಿನದಲ್ಲಿ ಬೆಂಗಳೂರಿನಿಂದ ವಿಮಾನಯಾನ ನಡೆಸುವ 2ನೇ ಅತಿ ದೊಡ್ಡ ಸಂಸ್ಥೆ ಆಗಲಿದೆ ಎಂದು ಆಕಾಸ ಏರ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯ್ ದುಬೆ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಆಗಸ್ಟ್‌ನಲ್ಲಿ ಆಕಾಸ ಏರ್ ವಿಮಾನಯಾನ ಆರಂಭಿಸಿದ್ದು, 200 ದಿನದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಸದ್ಯ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಗುವಾಟಿ, ವಿಶಾಖಪಟ್ಟಣ, ಪುಣೆ ಸೇರಿದಂತೆ ದೇಶದ 14 ನಗರಗಳಿಗೆ ಒಟ್ಟು 23 ಮಾರ್ಗದಲ್ಲಿ ಪ್ರತಿದಿನ 13 ಸಾವಿರ ಮಂದಿ ಆಕಾಶ್ ಏರ್ ಮೂಲಕ ಪ್ರಯಾಣ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಿಮಾನಯಾನ ಸೇವೆ ಆರಂಭಿಸಿದ ‘ಆಕಾಶ ಏರ್’: ಶೀಘ್ರದಲ್ಲೇ ಬೆಂಗಳೂರು - ಕೊಚ್ಚಿ ನಡುವೆ ಫ್ಲೈಟ್
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಪ್ರತಿ ದಿನ 35 ಅಧಿಕ ವಿಮಾನಗಳು ಹಾರಾಟ ನಡೆಸುತ್ತವೆ. ಒಟ್ಟಾರೆ ಪ್ರಯಾಣಿಕ ಪೈಕಿ ಶೇ.30ರಿಂದ 40 ರಷ್ಟು ಪ್ರಮಾಣಿಕರು ಬೆಂಗಳೂರಿನ ಪ್ರಯಾಣಿಕರಾಗಿದ್ದಾರೆ. ಮುಂದಿನ ಐದು ತಿಂಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ 2ನೇ ಅತಿ ದೊಡ್ಡ ಏರ್‌ಲೈನ್ಸ್ ಆಗಲಿದೆ. ಇತ್ತೀಚಿಗೆ 17 ವಿಮಾನಗಳು ಸೇರ್ಪಡೆ ಆಗಿವೆ. ಮಾಚ್‌ರ್‍ನಲ್ಲಿ ಹೆಚ್ಚುವರಿಯಾಗಿ 18 ವಿಮಾನಗಳು ಸೇರ್ಪಡೆ ಆಗಲಿವೆ. ಮುಂದಿನ ನಾಲ್ಕು ವರ್ಷದಲ್ಲಿ 54 ವಿಮಾನಗಳ ಸೇರಿಸುವ ಮೂಲಕ ಒಟ್ಟು ವಿಮಾನ ಸಂಖ್ಯೆಯನ್ನು 72ಕ್ಕೆ ಏರಿಕೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
