ಎಫ್ ಡಿ ಮೇಲೆ ಶೇ.7.50ರಷ್ಟು ಬಡ್ಡಿ ನೀಡುತ್ತೆ ಈ ಖಾಸಗಿ ಬ್ಯಾಂಕ್!

*555 ದಿನಗಳ ಅವಧಿಯ ಎಫ್ ಡಿಗಳ ಮೇಲೆ ಗರಿಷ್ಠ ಶೇ.7ರಷ್ಟು ಬಡ್ಡಿ
*ಉಳಿತಾಯ ಖಾತೆಗಳ ಮೇಲೆ ಗರಿಷ್ಠ 6.50ರಷ್ಟು ಬಡ್ಡಿ
*ಹಿರಿಯ ನಾಗರಿಕರಿಗೆ ಗರಿಷ್ಠ ಶೇ.7.50ರಷ್ಟು ಬಡ್ಡಿ
 

101 year old private bank alters FD rates now offers above 7percent on 750 days of tenor

ನವದೆಹಲಿ (ನ.6): ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಲಿಮಿಟೆಡ್ ಅಥವಾ ಸಿಎಸ್ ಬಿ ಬ್ಯಾಂಕ್ 1920ರಲ್ಲಿ ಆರಂಭವಾಯಿತು. ಈ ಬ್ಯಾಂಕ್ 101 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದು, 18 ರಾಜ್ಯಗಳಲ್ಲಿ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 609 ಬ್ರ್ಯಾಂಚ್ ಗಳನ್ನು ಹಾಗೂ 468 ಎಟಿಎಂಗಳನ್ನು ಹೊಂದಿದೆ. ಬ್ಯಾಂಕ್ ಉಳಿತಾಯ ಖಾತೆಗಳು ಹಾಗೂ ಎರಡು ಕೋಟಿ ರೂ. ಒಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡಲಾಗಿದೆ.  ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ನಲ್ಲಿ  ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪರಿಷ್ಕೃತ ಬಡ್ಡಿದರ 2022ರ ನವೆಂಬರ್ 2ರಿಂದಲೇ ಜಾರಿಗೆ ಬರಲಿದೆ. ಬಡ್ಡಿದರ ಮಾರ್ಪಾಡಿನ ಬಳಿಕ ಬ್ಯಾಂಕ್  555 ದಿನಗಳ ಅವಧಿಯ ಎಫ್ ಡಿಗಳ ಮೇಲೆ ಗರಿಷ್ಠ ಶೇ.7ರಷ್ಟು ಬಡ್ಡಿ ನೀಡಿದ್ರೆ, ಉಳಿತಾಯ ಖಾತೆಗಳ ಮೇಲೆ ಗರಿಷ್ಠ 6.50ರಷ್ಟು ಬಡ್ಡಿ ನೀಡಲಿದೆ. ಹಾಗಾದ್ರೆ ಬ್ಯಾಂಕಿನ ವಿವಿಧ ಅವಧಿಯ ಉಳಿತಾಯ ಖಾತೆಗಳಿಗೆ ಎಷ್ಟು ಬಡ್ಡಿ ನೀಡಲಾಗುತ್ತಿದೆ? ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಎಷ್ಟು ಬಡ್ಡಿ ಸಿಗಲಿದೆ? ಇಲ್ಲಿದೆ ಮಾಹಿತಿ.

ಸ್ಥಿರ ಠೇವಣಿ ಬಡ್ಡಿದರ
ಮುಂದಿನ 7 ದಿನಗಳಿಂದ 90 ದಿನಗಳಲ್ಲಿ ಅವಧಿ ಮುಗಿಯುವ ಎಫ್ ಡಿಗಳಿಗೆ (FD) ಸಿಎಸ್ ಬಿ (CSB) ಬ್ಯಾಂಕ್ ಶೇ.3ರಷ್ಟು ಬಡ್ಡಿ ನೀಡುತ್ತದೆ. ಮುಂದಿನ 91 ದಿನಗಳಿಂದ 179 ದಿನಗಳ ಅವಧಿಯಲ್ಲಿ ಮೆಚ್ಯುರ್ ಆಗುವ ಠೇವಣಿಗಳ ಮೇಲೆ ಶೇ.3.50 ಬಡ್ಡಿ ನೀಡಲಾಗುತ್ತಿದೆ. 180 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳು ಈಗ ಶೇ.4.25 ದರದಲ್ಲಿ ಬಡ್ಡಿ ಗಳಿಸುತ್ತವೆ. ಆದರೆ, ಒಂದು 
ಒಂದು ವರ್ಷ ಮೆಚ್ಯುರಿಟಿ ಅವಧಿ ಹೊಂದಿರುವ ಠೇವಣಿಗಳ ಮೇಲೆ ಶೇ.5ರಷ್ಟು ಬಡ್ಡಿ ನೀಡಲಾಗುತ್ತದೆ. ಇನ್ನು ಒಂದು ವರ್ಷಕ್ಕಿಂತ ಹೆಚ್ಚಿನ ಆದರೆ 400 ದಿನಗಳಿಗಿಂತ ಕಡಿಮೆ ಅವಧಿಯ ಎಫ್ ಡಿಗಳ ಮೇಲೆ ಶೇ.5.50 ಬಡ್ಡಿ ನೀಡುತ್ತದೆ. ಇನ್ನು 400 ದಿನಗಳಲ್ಲಿ ಪಕ್ವವಾಗುವ ಎಫ್ ಡಿಗಳ ಮೇಲೆ ಶೇ.6ರಷ್ಟು ಬಡ್ಡಿ ನೀಡುತ್ತದೆ. 

ಸಾಲದ ಅವಧಿ ವಿಸ್ತರಣೆ ಇಲ್ಲ: ಒಟಿಎಸ್ ಸಾಲಗಾರನ ವಾದ ತಳ್ಳಿ ಹಾಕಿದ ಸುಪ್ರೀಂ!

400 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ 555 ದಿನಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಬ್ಯಾಂಕ್ ಶೇ.5.50 ಬಡ್ಡಿದರ ನೀಡುತ್ತದೆ. ಆದರೆ, ಸಿಎಸ್ ಬಿ ಬ್ಯಾಂಕ್ 555 ದಿನಗಳಲ್ಲಿ ಪಕ್ವವಾಗುವ ಎಫ್ ಡಿಗಳಿಗೆ ಶೇ. 7 ಬಡ್ಡಿದರ ಪಾವತಿಸುತ್ತದೆ.  555 ದಿನಗಳಿಗಿಂತ ಹೆಚ್ಚು ಅವಧಿಯ ಆದರೆ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಈಗ ಶೇ.5.50 ದರದಲ್ಲಿ ಬಡ್ಡಿ ಪಾವತಿಸುತ್ತದೆ. ಇನ್ನು  ಎರಡು ವರ್ಷಗಳಿಗಿಂತ ಹೆಚ್ಚು ಆದರೆ 750 ದಿನಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇ. 5.75 ದರದಲ್ಲಿ ಬಡ್ಡಿ ನೀಡುತ್ತದೆ. ಸಿಎಸ್ ಬಿ ಬ್ಯಾಂಕ್ 750 ದಿನಗಳಲ್ಲಿ ಪಕ್ವವಾಗುವ ಎಫ್ ಡಿಗಳ ಮೇಲೆ ಗರಿಷ್ಠ ಶೇ.7.50 ಬಡ್ಡಿ ಪಾವತಿಸುತ್ತದೆ. 750 ದಿನಗಳಿಂದ 5 ವರ್ಷಗಳವರೆಗೆ ಪಕ್ವವಾಗುವ ಎಫ್ ಡಿಗೆ ಶೇ. 5.75 ಬಡ್ಡಿ ನೀಡುತ್ತದೆ.  5 ವರ್ಷದಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲೆ ಶೇ.6 ಬಡ್ಡಿ ನೀಡುತ್ತದೆ.

ಹಿರಿಯ ನಾಗರಿಕರ ಎಫ್ ಡಿ ಮೇಲಿನ ದರಗಳು
ಹಿರಿಯ ನಾಗರಿಕರಿಗಾಗಿ ಸಿಎಸ್ ಬಿ ಬ್ಯಾಂಕ್ ಆಚಾರ್ಯ ಠೇವಣಿ ಎಂಬ 180 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಯ ಠೇವಣಿಗಳನ್ನು ಹೊಂದಿದೆ. ಈ ಅವಧಿಯ ಠೇವಣಿಗಳ ಮೇಲೆ ಬ್ಯಾಂಕ್ ಶೇ.4.75ರಿಂದ ಶೇ.6.50 ಬಡ್ಡಿ ನೀಡುತ್ತಿದೆ. 750 ದಿನಗಳ ಮೆಚ್ಯುರಿಟಿ ಅವಧಿ ಹೊಂದಿರುವ ಠೇವಣಿ ಮೇಲೆ ಹಿರಿಯ ನಾಗರಿಕರಿಗೆ ಗರಿಷ್ಠ ಶೇ.7.50 ಬಡ್ಡಿ ನೀಡಲಾಗುತ್ತದೆ. 

ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗ ಕೆ.ವಿ.ಕಾಮತ್ ನೇಮಕ

ಉಳಿತಾಯ ಖಾತೆ ಮೇಲಿನ ಬಡ್ಡಿದರ
ದೇಶೀಯ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು 2022ರ ನವೆಂಬರ್ 2ರಿಂದ ಜಾರಿಗೆ ಬರಲಿವೆ. 1 ಲಕ್ಷ ರೂ. ತನಕದ  ಮೊತ್ತದ ಮೇಲೆ ಶೇ. 2.10 ಹಾಗೂ 50 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಉಳಿತಾಯ ಖಾತೆ ಠೇವಣಿಗಳಲ್ಲಿ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಶೇ. 6.50 ಬಡ್ಡಿ ನೀಡಲಾಗುತ್ತದೆ. 

Latest Videos
Follow Us:
Download App:
  • android
  • ios