ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗ ಕೆ.ವಿ.ಕಾಮತ್ ನೇಮಕ

*ಕುಂದಾಪುರ ಮೂಲದವರಾಗಿರುವ ಕೆ.ವಿ.ಕಾಮತ್ 
*ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ವತಂತ್ರ ನಿರ್ದೇಶಕರನ್ನಾಗಿ 5 ವರ್ಷಗಳ ಅವಧಿಗೆ ನೇಮಕ 
*ಹಣಕಾಸು ಸೇವಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಕಾಮತ್ 
 

RIL ropes in veteran banker K V Kamath as NBFC ventures chairman

ಮುಂಬೈ (ನ.5): ಕನ್ನಡಿಗ, ಅನುಭವಿ ಬ್ಯಾಂಕರ್ ಕೆ.ವಿ.ಕಾಮತ್ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ (ಆರ್ ಐಎಲ್) ಸ್ವತಂತ್ರ ನಿರ್ದೇಶಕರನ್ನಾಗಿ 5 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಕಾಮತ್  ಅವರನ್ನು ಪ್ರಸ್ತಾವಿತ ಎನ್ ಬಿಎಫ್ ಸಿ ಜಿಯೋ ಫೈನಾನ್ಷಿಯಲ್ ಸರ್ವೀಸ್ ನ  ನಾನ್ ಎಕ್ಸಿಕ್ಯೂಟಿವ್ ಚೇಮರ್ನ್ ಆಗಿಯೂ ನೇಮಕ ಮಾಡಲಾಗಿದೆ. ಕೆ.ವಿ. ಕಾಮತ್ ಕುಂದಾಪುರ ಮೂಲದವರಾಗಿದ್ದಾರೆ. 74 ವರ್ಷದ ಕಾಮತ್ ಅವರನ್ನು ಐದು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಬಗ್ಗೆ ಕಂಪನಿ  ಷೇರು ವಿನಿಯಮ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಐಐಎಂ ಅಹಮದಾಬಾದ್ ಪದವೀಧರರಾಗಿರುವ ಕುಂದಾಪುರ ವಾಮನ್ ಕಾಮತ್ (ಕೆ.ವಿ. ಕಾಮತ್) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ಸಾಕಷ್ಟು ಜನಪ್ರಿಯತೆ ಕೂಡ ಗಳಿಸಿದ್ದಾರೆ. 1971ರಲ್ಲಿ ಐಸಿಐಸಿಐ ಬ್ಯಾಂಕ್ ಜೊತೆಗೆ ಕಾಮತ್ ಅವರ ವೃತ್ತಿ ಜೀವನ ಪ್ರಾರಂಭಗೊಂಡಿತ್ತು. ಪ್ರಸ್ತುತ ಅವರು 2021ರ ಬಜೆಟ್ ನಲ್ಲಿ ರೂಪಿಸಿದ ಹಣಕಾಸು ಮೂಲಸೌಕರ್ಯ ಹಾಗೂ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಚೇರ್ಮನ್ ಆಗಿದ್ದಾರೆ. ರಿಲಯನ್ಸ್ ಸಮೂಹ ಸೇರಲಿರುವ ಕಾಮತ್, ಸರ್ಕಾರ ನಿಯೋಜಿತ ಜವಾಬ್ದಾರಿಯಿಂದ ಕೆಳಗಿಳಿಯಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಮುಂಬೈಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೆ.ಇ. ಕಾಮತ್ ಅವರನ್ನು ಕಂಪನಿಗೆ ನೇಮಕ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಕಾಮತ್ ಅವರು 1988ರಲ್ಲಿ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ (ADB)ನಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಚೀನಾ, ಬಾಂಗ್ಲಾದೇಶ,ಇಂಡೋನೇಷ್ಯಾ ,ಫಿಲಿಪ್ಪಿನ್ಸ್, ವಿಯೆಟ್ನಾಂ ದೇಶಗಳಲ್ಲಿ ಹಲವಾರು ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Global Investors Meet 2022: ಅಭಿವೃದ್ಧಿಗೆ ‘ಇನ್ವೆಸ್ಟ್‌’ ಭದ್ರ ಬುನಾದಿ: ನಿರಾಣಿ

1996ರಲ್ಲಿ ಐಸಿಐಸಿಐ (ICICI) ಬ್ಯಾಂಕ್ ನಲ್ಲಿ ಆಗ್ನೇಯ ಏಷ್ಯಾದಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.  2009ರಲ್ಲಿ ಅವರು ಐಸಿಐಸಿಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನಿವೃತ್ತರಾದರು. ಕಾಮತ್ ಅವರ ನೇತೃತ್ವದಲ್ಲಿ ಐಸಿಐಸಿಐ ಬ್ಯಾಂಕ್ ಬ್ಯಾಂಕಿಂಗ್, ವಿಮೆ, ಆಸ್ತಿ ನಿರ್ವಹಣೆ ಮತ್ತು ಜಾಗತಿಕ ಅಸ್ತಿತ್ವದಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತು.  2015ರವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದರು. ಕೆ.ವಿ. ಕಾಮತ್ 2011ರ ಮೇ 2ರಂದು ಇನ್ಫೋಸಿಸ್‍ನ (Infosys) ಅಧಿಕಾರರಹಿತ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಕೂಡ. 

ರಿಲಯನ್ಸ್ ಸಂಸ್ಥೆ (Reliance Industries) ಹಾಗೂ ಅಂಬಾನಿ (Ambani) ಕುಟುಂಬದೊಂದಿಗಿನ ಕಾಮತ್ ಅವರ ಒಡನಾಟ  ಹೊಸದೇನಲ್ಲ. 70ರ ದಶಕದಲ್ಲೇ ಕಾಮತ್ ಅಂಬಾನಿ ಕುಟುಂಬಕ್ಕೆ ಪರಿಚಿತರಾಗಿದ್ದರು. ಆಗ ಅವರು ಇಂಡಸ್ಟ್ರೀಯಲ್ ಕ್ರೆಡಿಟ್ ಹಾಗೂ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಲ್ಲಿ (ಈಗ ಐಸಿಐಸಿಐ ಬ್ಯಾಂಕ್ ಆಗಿ ರೂಪಾಂತರಗೊಂಡಿದೆ) ಕಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸಾಲ (Loan) ಬೇಗ ಸಿಗುವಂತೆ ಮಾಡುವಲ್ಲಿ ನೆರವಾಗಿದ್ದರು. 

ಕೆ.ವಿ.ಕಾಮತ್ ಅವರ ಹಣಕಾಸು ಸೇವೆಗಳಲ್ಲಿನ (Financial Services) ಅಪಾರ ಅನುಭವ ಜಿಯೋ ಫೈನಾನ್ಷಿಯಲ್ (Jio Financial) ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಜಿಯೋ ಫೈನಾನ್ಷ್ ವಿಮೆ, ಡಿಜಿಟಲ್ ಬ್ರೋಕಿಂಗ್, ಪಾವತಿಗಳು ಹಾಗೂ ಆಸ್ತಿ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ವಿಸ್ತರಿಸುವ ಗುರಿ ಹೊಂದಿದೆ. 

ಸಲೂನ್ ಉದ್ಯಮಕ್ಕೆ ಶೀಘ್ರದಲ್ಲೇ ರಿಲಯನ್ಸ್ ಪ್ರವೇಶ; ನ್ಯಾಚುರಲ್ಸ್ ಶೇ.49 ಷೇರು ಖರೀದಿಸಲಿದ್ದಾರೆಯೇ ಅಂಬಾನಿ?

ಕೆ.ವಿ. ಕಾಮತ್ ಅವರು 1947ರ ಡಿಸೆಂಬರ್ 2ರಂದು ಕುಂದಾಪುರದಲ್ಲಿ ಜನಿಸಿದರು.  ಮಂಗಳೂರಿನ ಸಂತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ಪಡೆದ ಇವರು, ಸುರತ್ಕಲ್ ನ ಎನ್ ಐಟಿಕೆಯಿಂದ (NITK) ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 
 

Latest Videos
Follow Us:
Download App:
  • android
  • ios