ಸತತ 3ನೇ ತಿಂಗಳು ಕರ್ನಾಟಕದಲ್ಲಿ 10,000 ಕೋಟಿ ಜಿಎಸ್ಟಿ ಸಂಗ್ರಹ

2022 ಅಕ್ಟೋಬರ್‌ 10996 ಕೋಟಿ ರು., 2022 ನವೆಂಬರ್‌ 10258 ಕೋಟಿ ರು., 2022 ಡಿಸೆಂಬರ್‌ 10061 ಕೋಟಿ ರು., ಮಹಾರಾಷ್ಟ್ರ ನಂತರ ಕರ್ನಾಟಕಕ್ಕೆ 2ನೇ ಸ್ಥಾನ, ನಾವು ಪ್ರಗತಿ ಪಥದಲ್ಲಿದ್ದೇವೆ: ಸಿಎಂ ಬೊಮ್ಮಾಯಿ. 

10000 Crore GST Collection in Karnataka for the 3rd Consecutive Month grg

ಬೆಂಗಳೂರು(ಜ.05): ಸತತ ಕಳೆದ ಮೂರು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹವು 10 ಸಾವಿರ ಕೋಟಿ ರು. ದಾಟಿದ್ದು, ಇದು ರಾಜ್ಯಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಸಕಾರಾತ್ಮಕ ಬೆಳವಣಿಗೆಯು ನಾವು ಉತ್ತಮ ಬೆಳವಣಿಗೆಯ ಪಥದಲ್ಲಿದ್ದೇವೆ. ಕೋವಿಡ್‌ನ ನಕಾರಾತ್ಮಕ ಪ್ರಭಾವವು ಜಿಎಸ್‌ಟಿ ಸಂಗ್ರಹಕ್ಕೆ ಯಾವುದೇ ರೀತಿಯಲ್ಲಿಯೂ ಪೆಟ್ಟಾಗಿಲ್ಲ. ರಾಷ್ಟ್ರೀಯ ಆರ್ಥಿಕತೆಯನ್ನು ಉತ್ತೇಜಿಸಲು ಹೆಮ್ಮೆ ಪಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಗಳಿಕೆ 15% ಏರಿಕೆ: .1.49 ಲಕ್ಷ ಕೋಟಿ ಸಂಗ್ರಹ

ಡಿಸೆಂಬರ್‌ನಲ್ಲಿ ದೇಶಾದ್ಯಂತ ಒಟ್ಟು 1.49 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಕರ್ನಾಟಕ 10,061 ಕೋಟಿ ರು. ಸಂಗ್ರಹಿಸಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 23,598 ಕೋಟಿ ರು. ಜಿಎಸ್‌ಟಿ ಸಂಗ್ರಹ ಮಾಡಿದೆ.

Latest Videos
Follow Us:
Download App:
  • android
  • ios