Asianet Suvarna News Asianet Suvarna News

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಗಳಿಕೆ 15% ಏರಿಕೆ: .1.49 ಲಕ್ಷ ಕೋಟಿ ಸಂಗ್ರಹ

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಲಕ್ಷ ಕೋಟಿ ರು.ಗೆ ಹೆಚ್ಚಾಗಿದ್ದು, ಇದು ನವೆಂಬರ್‌ ಸಂಗ್ರಹಕ್ಕಿಂತ ಶೇ.2.5ರಷ್ಟು ಹೆಚ್ಚಾಗಿದೆ ಮತ್ತು ಕಳೆದ ವರ್ಷದ ಡಿಸೆಂಬರ್‌ಗಿಂತ ಶೇ.15ರಷ್ಟು ಏರಿಕೆ ಕಂಡಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ಹೇಳಿದೆ.

GST revenue up collection increased 15% in December: Rs 1.49 lakh crore collected akb
Author
First Published Jan 2, 2023, 7:45 AM IST

ನವದೆಹಲಿ: ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಲಕ್ಷ ಕೋಟಿ ರು.ಗೆ ಹೆಚ್ಚಾಗಿದ್ದು, ಇದು ನವೆಂಬರ್‌ ಸಂಗ್ರಹಕ್ಕಿಂತ ಶೇ.2.5ರಷ್ಟು ಹೆಚ್ಚಾಗಿದೆ ಮತ್ತು ಕಳೆದ ವರ್ಷದ ಡಿಸೆಂಬರ್‌ಗಿಂತ ಶೇ.15ರಷ್ಟು ಏರಿಕೆ ಕಂಡಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ಹೇಳಿದೆ. ಸತತ 10ನೇ ತಿಂಗಳು ಜಿಎಸ್‌ಟಿ ಸಂಗ್ರಹ 1.4 ಲಕ್ಷ ಕೋಟಿ ರು.ಗಿಂತ ಅಧಿಕವಾಗಿದೆ.

2021ರ ಡಿಸೆಂಬರ್‌ಗೆ ಹೋಲಿಸಿದರೆ ಆಮದು (Import) ಮಾಡಿಕೊಳ್ಳಲಾದ ಸರಕುಗಳ (goods)ಆದಾಯ ಶೇ.8ರಷ್ಟು ಹಾಗೂ ದೇಶೀಯ ವಹಿವಾಟಿನ (ಸೇವೆಗಳ ಆಮದು ಸೇರಿ) ಆದಾಯ ಶೇ.18ರಷ್ಟು ಏರಿಕೆಯಾಗಿದೆ. ಒಟ್ಟಾರೆ ಡಿಸೆಂಬರ್‌ನಲ್ಲಿ 1,49,507 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‌ಟಿ 26,711 ಕೋಟಿ ರು., ಎಸ್‌ಜಿಎಸ್‌ಟಿ 11,005 ಕೋಟಿ ರು., ಐಜಿಎಸ್‌ಟಿ 78,434 ಕೋಟಿ ರು. (ಆಮದು ಮೇಲಿನ 40,263 ಕೋಟಿ ರು. ಸೇರಿ) ಮತ್ತು ಸೆಸ್‌ 11,005 ಕೋಟಿ ರು. (ಆಮದು ಮೇಲಿನ 850 ಕೋಟಿ ರು. ಸೇರಿ) ಇದೆ ಎಂದು ಸಚಿವಾಲಯ ತಿಳಿಸಿದೆ.

ಎಲ್ಐಸಿ ಈ ಪಾಲಿಸಿಯಲ್ಲಿ ದಿನಕ್ಕೆ 130ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 27 ಲಕ್ಷ ರೂ. ರಿಟರ್ನ್

ಇದರಲ್ಲಿ ಐಜಿಎಸ್‌ಟಿಯನ್ನು 36,669 ಕೋಟಿ ರು. ಸಿಜಿಎಸ್‌ಟಿಗೆ (GST)ಮತ್ತು 31,094 ಕೋಟಿ ರು. ಎಸ್‌ಜಿಎಸ್‌ಟಿಗೆ ಹಂಚಿಕೆ ಮಾಡಲಾಗಿದೆ. ಈ ಹಂಚಿಕೆಯ ಬಳಿಕ ಕೇಂದ್ರ (Centrel Govt) ಮತ್ತು ರಾಜ್ಯ ಸರ್ಕಾರಗಳು (State govt)ಡಿಸೆಂಬರ್‌ನಲ್ಲಿ ಒಟ್ಟು 63,380 ಕೋಟಿ ರು. ಸಿಜಿಎಸ್‌ಟಿ ಮತ್ತು 64,451 ಕೋಟಿ ರು. ಎಸ್‌ಜಿಎಸ್‌ಟಿಯನ್ನು ಪಡೆದುಕೊಂಡಿವೆ.

ನೀವಿನ್ನೂ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವ? ಹಾಗಾದ್ರೆ ಈ ಸರಳ ವಿಧಾನ ಅನುಸರಿಸಿ

Follow Us:
Download App:
  • android
  • ios