1000 ರೂ. ನೋಟು ಮತ್ತೆ ಚಲಾವಣೆಗೆ ಬರುತ್ತಾ?; ಇದೇ ಕಾರಣಕ್ಕೆ 2 ಸಾವಿರ ರೂ. ನೋಟು ಹಿಂತೆಗೆದುಕೊಂಡ್ರಾ?
2,000 ರೂಪಾಯಿ ಮುಖಬೆಲೆಯ ನೋಟನ್ನು ನಿನ್ನೆ (ಮೇ 20) ಆರ್ ಬಿಐ ಹಿಂತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಮುಂದಿನ ದಿನಗಳಲ್ಲಿ ಆರ್ ಬಿಐ ಒಂದು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದೆ. ಹೀಗಾಗಿ ಎರಡು ಸಾವಿರ ರೂ. ನೋಟುಗಳನ್ನು ಹಿಂಪಡೆದಿದೆ ಎಂದು ಹೇಳಲಾಗುತ್ತಿದೆ, ಹಾಗಾದ್ರೆ ಇದು ನಿಜಾನಾ?
Business: 2,000 ರೂಪಾಯಿ ಮುಖಬೆಲೆಯ ನೋಟನ್ನು ಹಿಂತೆಗೆದುಕೊಳ್ಳುವ ಮಹತ್ವದ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಟಿಸಿದ ಬೆನ್ನಲ್ಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟುಕೊಂಡಿವೆ. ಇದರ ಜೊತೆಗೆ 2 ಸಾವಿರ ರೂಪಾಯಿ ನೋಟನ್ನು ಹಿಂತೆಗೆದುಕೊಳ್ಳುತ್ತಿರುವುದಕ್ಕೆ ಕಾರಣವೇನು ಎಂಬ ಕುತೂಹಲ ಕೂಡ ಇದ್ದೇಇದೆ. ಈ ನಡುವೆ 2 ಸಾವಿರ ರೂ. ನೋಟನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಹೊಸ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಸೂಚನೆಯಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾದ್ರೆ ಎಷ್ಟು ಮುಖಬೆಲೆಯ ಹೊಸ ನೋಟನ್ನು ಸರ್ಕಾರ ಪರಿಚಯಿಸಬಹುದು ಎಂಬ ಕುತೂಹಲ ಮನೆ ಮಾಡಿದೆ. ಒಂದು ಸಾವಿರ ರೂಪಾಯಿ ನೋಟನ್ನು ಆರ್ ಬಿಐ ಮತ್ತೆ ಪರಿಚಯಿಸುವ ಸಾಧ್ಯತೆಯಿದೆ ಎಂದು ಹಿರಿಯ ಪತ್ರಕರ್ತ ಝೀ ಬ್ಯುಸಿನೆಸ್ ಸಂಪಾದಕ ಅನಿಲ್ ಸಿಂಘ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಮುಂದಿನ ದಿನಗಳಲ್ಲಿ ಒಂದು ಸಾವಿರ ರೂ. ನೋಟು ಚಲಾವಣೆಗೆ ತರೋದು ಆರ್ ಬಿಐಗೆ ದೊಡ್ಡ ಸಂಗತಿಯೇನಲ್ಲ. ರೂಪಾಯಿ ಮೌಲ್ಯ ಡಾಲರ್ ಎದುರು ವರ್ಷದಿಂದ ವರ್ಷಕ್ಕೆ ತಗ್ಗುತ್ತಿದೆ. ಅಲ್ಲದೆ, ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ವೆಚ್ಚ ಕೂಡ ಹೆಚ್ಚುತ್ತಿದೆ. ಹೀಗಿರುವಾಗ ಒಂದು ಸಾವಿರ ರೂಪಾಯಿ ಮೌಲ್ಯ ಐದು ವರ್ಷಗಳ ಹಿಂದಿನ ಸಮಯಕ್ಕೆ ಹೋಲಿಸಿದರೆ ಇಂದು ಕಡಿಮೆಯಿದೆ.
ದೊಡ್ಡ ಮೌಲ್ಯದ ನೋಟುಗಳ ಅಗತ್ಯ ಇಂದು ಇದೆ. ಆದರೆ, ಸರ್ಕಾರ ನಗದಿಗಿಂತ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಹೀಗಿರುವಾಗ ಒಂದು ಸಾವಿರ ರೂಪಾಯಿಗಿಂತ ದೊಡ್ಡ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಸಾಧ್ಯತೆ ಕಡಿಮೆಯಿದೆ ಎಂದು ಕೂಡ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಆದರೆ, ಇಂಟರ್ನೆಟ್ ಸಂಪರ್ಕ ದೇಶದ ಎಲ್ಲ ಪ್ರದೇಶಗಳಲ್ಲೂ ಸಮರ್ಪಕವಾಗಿಲ್ಲ. ಈ ನೆಟ್ ವರ್ಕ್ ಸಮಸ್ಯೆ ಆರ್ಥಿಕತೆಯ ಡಿಜಿಟಲೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ. ಆನ್ ಲೈನ್ ಬ್ಯಾಂಕಿಂಗ್ ಅಥವಾ ಯುಪಿಐ ಪಾವತಿ ಗ್ರಾಮೀಣ ಭಾಗದ ಜನರಿಗೆ ಇಂದಿಗೂ ಸವಾಲಿನ ಕೆಲಸವೇ ಆಗಿದೆ.ಅಲ್ಲದೆ, ಆನ್ ಲೈನ್ ವಹಿವಾಟು ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಬೆನ್ನಲ್ಲೇ ಸೈಬರ್ ವಂಚನೆ ಪ್ರಕರಣಗಳು ಕೂಡ ಹೆಚ್ಚಿವೆ. ಹೀಗಿರುವಾಗ ಜನಸಾಮಾನ್ಯರು ಅರಿವಿನ ಕೊರತೆಯಿಂದ ಸೈಬರ್ ವಂಚೆನೆಗೊಳಗಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಗದು ವಹಿವಾಟು ಕೂಡ ಕೆಲವು ಸ್ಥಳಗಳಲ್ಲಿ ಅಗತ್ಯ. ಹೀಗಾಗಿ ಜನರಿಗೆ ವಿವಿಧ ಮುಖಬೆಲೆಯ ನೋಟುಗಳ ಅಗತ್ಯ ಕೂಡ ಇದೆ.
2,000 ರೂ ನೋಟು ಹಿಂತೆಗೆದ ಬೆನ್ನಲ್ಲೇ ಸರ್ಕಾರಿ ಕಚೇರಿಯಲ್ಲಿ 2.31 ಕೋಟಿ ನಗದು ಹಣ ಪತ್ತೆ!
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಿತ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದೂ ಹೇಳಲಾಗಿತ್ತು. 2018-19ರ ಸಾಲಿನಲ್ಲೇ ಆರ್‌ಸಿಬಿ 2,000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ 2000 ರೂ. ಮುಖಬೆಲೆಯ ನೋಟುಗಳು ದೇಶದ ಬಹುತೇಕ ಎಟಿಎಂಗಳಿಂದ (ATM) ಕಣ್ಮರೆಯಾಗಿದ್ದವು ಕೂಡ.ಈ ಬಗ್ಗೆ ಸಂಸತ್ ನಲ್ಲಿ ಕೂಡ ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿವೆ.
2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!
1000 ರೂ. ಮುಖಬೆಲೆಯ ನೋಟು ಸ್ಥಗಿತಗೊಳಿಸಿ 2000 ರೂ. ಮುಖಬೆಲೆಯ ನೋಟು ಬಿಡುಗಡೆ ಮಾಡಿದ್ದರ ಹಿಂದೆ ಯಾವುದೇ ತರ್ಕ ಇಲ್ಲ. 2000 ರೂ. ನೋಟುಗಳನ್ನು ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. ಹೀಗಾಗಿ 2000 ರೂ. ನೋಟುಗಳನ್ನು ಹಂತಹಂತವಾಗಿ ವಾಪಸ್ ಪಡೆಯಬೇಕು ಎಂದು ಸ್ವತಃ1000 ರೂ. ಮುಖಬೆಲೆಯ ನೋಟು ಸ್ಥಗಿತಗೊಳಿಸಿ 2000 ರೂ. ಮುಖಬೆಲೆಯ ನೋಟು ಬಿಡುಗಡೆ ಮಾಡಿದ್ದರ ಹಿಂದೆ ಯಾವುದೇ ತರ್ಕ ಇಲ್ಲ. 2000 ರೂ. ನೋಟುಗಳನ್ನು ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. ಹೀಗಾಗಿ 2000 ರೂ. ನೋಟುಗಳನ್ನು ಹಂತಹಂತವಾಗಿ ವಾಪಸ್ ಪಡೆಯಬೇಕು. ನೋಟು ವಿನಿಮಯ ಮಾಡಿಕೊಳ್ಳಲು ಜನರಿಗೆ 2 ವರ್ಷ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರೇ ಕಳೆದ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಆಗ್ರಹಿಸಿದ್ದರು.