Asianet Suvarna News Asianet Suvarna News

ಮೋದಿ ಸರ್ಕಾರದಿಂದ 1.25 ಲಕ್ಷ ಕೋಟಿ ರೂ. ಕಪ್ಪುಹಣ ವಶಕ್ಕೆ: ಕೇಂದ್ರ ಸಚಿವ

4,300 ಕೋಟಿ ರೂ. ಬೇನಾಮಿ ಆಸ್ತಿ ವಶಪಡಿಸಿಕೊಳ್ಳಲಾಗಿದ್ದು, 1.75 ಲಕ್ಷ ಕಂಪನಿಗಳ ನೋಂದಣಿ  ರದ್ದು ಮಾಡಲಾಗಿದೆ. 1.25 ಲಕ್ಷ ಕೋಟಿ ರೂ ಮೌಲ್ಯದ ಕಪ್ಪು ಹಣ ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. 

1 25 lakhs crore black money confiscated by modi government ashwini vaishnaw ash
Author
First Published Dec 13, 2022, 11:16 AM IST

ನವದೆಹಲಿ: ಮೋದಿ ಸರ್ಕಾರವು (Modi Government) 1.25 ಲಕ್ಷ ಕೋಟಿ ರೂ. ಕಪ್ಪು ಹಣ (Black Money) ವಶಪಡಿಸಿಕೊಂಡಿದೆ ಎಂದು ರೈಲ್ವೆ ಸಚಿವ (Railway Minister) ಅಶ್ವಿನಿ ವೈಷ್ಣವ್‌ (Ashwini Vaishnaw) ಹೇಳಿದ್ದಾರೆ. ಅಲ್ಲದೆ, 4,300 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿಯನ್ನೂ (Benami Properties) ವಶಪಡಿಸಿಕೊಳ್ಳಲಾಗಿದ್ದು, ಸರ್ಕಾರದ ಪಾರದರ್ಶಕತೆ ನೀತಿಯ ಪ್ರತೀಕವಿದು ಎಂದು ಹೇಳಿಕೊಂಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೊದಲು ಗುಜರಾತ್‌ನಲ್ಲಿ (Gujarat) ಮೋದಿ ಮಾದರಿ ಆಡಳಿತ ನಡೆಸುತ್ತಿದ್ದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಗುಜರಾತ್‌ ಮಾದರಿಯನ್ನು (Gujarat Model) ವಿಸ್ತರಿಸಿದ್ದಾರೆ. 4,300 ಕೋಟಿ ರೂ. ಬೇನಾಮಿ ಆಸ್ತಿ ವಶಪಡಿಸಿಕೊಳ್ಳಲಾಗಿದ್ದು, 1.75 ಲಕ್ಷ ಕಂಪನಿಗಳ ನೋಂದಣಿ  ರದ್ದು ಮಾಡಲಾಗಿದೆ. 1.25 ಲಕ್ಷ ಕೋಟಿ ರೂ ಮೌಲ್ಯದ ಕಪ್ಪು ಹಣ ಜಪ್ತಿ ಮಾಡಲಾಗಿದೆ’ ಎಂದರು.

ರಾಜೀವ್‌ ಗಾಂಧಿ ಅವರು ಈ ಹಿಂದೆ ಬಡವರ ಕಲ್ಯಾಣಕ್ಕೆ ಮೀಸಲಿಟ್ಟ ಒಂದು ರೂಪಾಯಿ ಪೈಕಿ ಕೇವಲ 15 ಪೈಸೆ ಮಾತ್ರ ಅವರನ್ನು ತಲುಪುತ್ತಿದೆ ಎಂದು ಹೇಳಿದ್ದರು. ಆದರೆ, ಇಂದು ನೇರ ತೆರಿಗೆ ಪಾವತಿ ಮೂಲಕ ಶೇ. 100 ರಷ್ಟು ಹಣ  ಫಲಾನುಭವಿಗಳ ಪಾಲಾಗುತ್ತಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈವರೆಗೆ ಫಲಾನುಭವಿಗಳ ಖಾತೆಗೆ 26 ಲಕ್ಷ ಕೋಟಿ ರೂ. ವರ್ಗಾಯಿಸಲಾಗಿದೆ. ಈ ಮೂಲಕ 2.25 ಲಕ್ಷ ಕೋಟಿ ರೂ. ಹಣವನ್ನು ಉಳಿಸಲಾಗಿದೆ ಎಂದೂ ಕೇಂದ್ರ ಸಚಿವರು ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದರು. 

ಇದನ್ನು ಓದಿ: Note Ban: 500, 1000 ರೂಪಾಯಿಯ ನೋಟು ಬಳಕೆ ಏರಿದ್ದಕ್ಕೆ ನಿಷೇಧ!

ಗೇಮಿಂಗ್‌ ಕಂಪನಿಗಳಿಂದ 23 ಸಾವಿರ ಕೋಟಿ ರೂ. ತೆರಿಗೆ ವಂಚನೆ
 2019ರ ಏಪ್ರಿಲ್‌ನಿಂದ 2022ರ ನವೆಂಬರ್‌ ನಡುವೆ ಗೇಮಿಂಗ್‌ ಕಂಪನಿಗಳು 23 ಸಾವಿರ ಕೋಟಿ ರೂ. ಜಿಎಸ್‌ಟಿ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಹೇಳಿದರು. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ‘ಆನ್‌ಲೈನ್‌ ಗೇಮಿಂಗ್‌ ಕಂಪನಿಗಳನ್ನು ಬಳಸಿಕೊಂಡು ಸೈಬರ್‌ ಹಾಗೂ ಕ್ರಿಪ್ಟೋ ಆಸ್ತಿಗಳ ಮೂಲಕ ವಂಚನೆ ಮಾಡುತ್ತಿದ್ದವು. ಈ ಮೂಲಕ ಹಣವನ್ನು ಲಪಟಾಯಿಸಿ ಬೇರೆಡೆ ಅಕ್ರಮವಾಗಿ ವರ್ಗಾಯಿಸಲಾಗುತ್ತಿತ್ತು. ಇದನ್ನು ಪತ್ತೆ ಮಾಡಿ 1 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಶಪಡಿಸಿಕೊಂಡಿದೆ’ ಎಂದು ಹೇಳಿದರು.

‘ಇನ್ನು ಗೇಮಿಂಗ್‌ ಕಂಪನಿಗಳ ಜಿಎಸ್‌ಟಿ ವಂಚನೆಗೆ ಸಂಬಂಧಿಸಿದಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ ತನಿಖೆ ಆರಂಭಿಸಿದೆ. ದೇಶ-ವಿದೇಶಗಳಲ್ಲಿ ತನಿಖೆ ನಡೆಯುತ್ತಿದೆ. 2019ರ ಏಪ್ರಿಲ್‌ನಿಂದ ನವೆಂಬರ್‌ 2022ರ ನಡುವೆ 22,936 ಕೋಟಿ ರೂ. ತೆರಿಗೆ ವಂಚನೆಯನ್ನು ಪತ್ತೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಆಗ ಸಂಸದರು, ‘ವಂಚನೆ ಮಾಡಿದ ಗೇಮಿಂಗ್‌ ಕಂಪನಿಗಳಿಗೆ ನೋಟಿಸ್‌ ನೀಡಲಾಗಿದೆಯೇ?’ ಎಂದು ಕೇಳಿದಾಗ, ‘ಈ ಬಗ್ಗೆ ಮಾಹಿತಿ ಲಭ್ಯವಿಲ್ಲ’ ಎಂದರು.

ಇದನ್ನೂ ಓದಿ: ಗುಜರಾತ್‌ ವ್ಯಾಪಾರಿಗಳ ಮೇಲೆ ಐಟಿ ರೇಡ್‌: 1000 ಕೋಟಿಗೂ ಅಧಿಕ ಕಪ್ಪು ಹಣ ಪತ್ತೆ..!

Follow Us:
Download App:
  • android
  • ios