ಇತ್ತೀಚೆಗಷ್ಟೇ ಮುಕ್ತಾಯಗೊಂಡ 2022-23ನೇ ವಿತ್ತೀಯ ವರ್ಷದಲ್ಲಿ ಬರೋಬ್ಬರಿ 1.01 ಲಕ್ಷ ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಗಮನಾರ್ಹ ಎಂದರೆ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ವಂಚನೆ ಮಾಡಲಾದ ಮೊತ್ತ ದ್ವಿಗುಣಗೊಂಡಿದೆ.
ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ 2022-23ನೇ ವಿತ್ತೀಯ ವರ್ಷದಲ್ಲಿ ಬರೋಬ್ಬರಿ 1.01 ಲಕ್ಷ ಕೋಟಿ ರು.ನಷ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಗಮನಾರ್ಹ ಎಂದರೆ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ವಂಚನೆ ಮಾಡಲಾದ ಮೊತ್ತ ದ್ವಿಗುಣಗೊಂಡಿದೆ.
1.01 ಲಕ್ಷ ಕೋಟಿ ರು. ವಂಚನೆ ಪೈಕಿ 21 ಸಾವಿರ ಕೋಟಿ ರು.ನಷ್ಟು ಮೊತ್ತವನ್ನು ವಸೂಲಿ ಮಾಡುವಲ್ಲಿ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಡಾಟಾ ಅನಾಲಿಟಿಕ್ಸ್ ಹಾಗೂ ಮಾನವ ಬೇಹುಗಾರಿಕೆ ಮೂಲಕ ವಂಚನೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ಜಿಎಸ್‌ಟಿ (GST) ನಿಯಮಗಳಿಗೆ ಬದ್ಧರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2021-22ನೇ ಆರ್ಥಿಕ ವರ್ಷದಲ್ಲಿ 54 ಸಾವಿರ ಕೋಟಿ ರು.ನಷ್ಟು ಜಿಎಸ್‌ಟಿ ವಂಚನೆಯಾಗಿ, 21000 ಕೋಟಿ ರು.ಗಳನ್ನು ವಸೂಲು ಮಾಡಲಾಗಿತ್ತು. ಮತ್ತೊಂದೆಡೆ, 2022-23ನೇ ವಿತ್ತೀಯ ವರ್ಷದಲ್ಲಿ 14 ಸಾವಿರ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಅದಕ್ಕೂ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ 12,574 ಹಾಗೂ 12596 ಪ್ರಕರಣಗಳು ಪತ್ತೆಯಾಗಿದ್ದವು. ವಂಚನೆ ಪ್ರಕರಣಗಳು ಹಾಗೂ ವಂಚನೆ ಮೊತ್ತ ಹೆಚ್ಚಾಗಿರುವುದು ಇದರಿಂದ ತಿಳಿದುಬರುತ್ತದೆ.
ತೆರಿಗೆ ವಂಚನೆ ಕೇಸ್: ಎ.ಆರ್. ರೆಹಮಾನ್‌ಗೆ- ಹೈಕೋರ್ಟ್ನಿಂದ ಬಿಗ್ ಶಾಕ್!
