Union Budge 2022 ಕೇಂದ್ರ ಬಜೆಟ್‌ನಲ್ಲಿ ರೈಲ್ವೇಗೆ 1.40 ಲಕ್ಷ ಕೋಟಿ ರೂ, ವಂದೇ ಭಾರತ್ ಅಭಿವೃದ್ಧಿ , ನಿಲ್ದಾಣ ಆಧುನೀಕರಣ!

  • ಕೇಂದ್ರ ಬಜೆಟ್‌ನಲ್ಲಿ ರೈಲ್ವೇಗೆ 1,40,367.13 ಕೋಟಿ ರೂಪಾಯಿ
  • ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳ ಅಭಿವೃದ್ಧಿ
  • ಕವಚ್  ತಂತ್ರಜ್ಞಾನದ ಅಡಿ 2,000 ಕಿಮೀ ರೈಲ್ವೆ ಜಾಲ
Union Budge 2022 Highlights Nirmala Sitharaman allocated higher funds to Railways for Develop Network and trains ckm

ನವದೆಹಲಿ(ಫೆ.01): ಕೇಂದ್ರ ಮಂಡಿಸಿದ 2022-23ರ ಬಜೆಟ್‌ನಲ್ಲಿ ರೈಲ್ವೇ ಸಿಂಹಪಾಲು ಪಡೆದಿದೆ. ಕೊರೋನಾ, ಲಾಕ್‌ಡೌನ್, ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ ಆರ್ಥಿಕ ಹಿನ್ನಡೆ ಅನುಭವಿಸಿದ ಭಾರತೀಯ ರೈಲ್ವೇಗೆ(Railways) ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ 1,40,367.13 ಕೋಟಿ ರೂಪಾಯಿ ರೈಲ್ವೇ ಅಭಿವೃದ್ಧಿಗೆ ಮೀಸಲಿಡಲಾಗಿದೆ. 

ಇಂದು(ಫೆ.01) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ(Union Budget 2022) ರೈಲು ಅಭಿವೃದ್ಧಿ, ಹೊಸ ಸಂಪರ್ಕ ಜಾಲ, ವಂದೇ ಭಾರತ್ ರೈಲು ಅಭಿವೃದ್ಧಿ, ರೈಲು ಆಧುನೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಸಣ್ಣ, ಅತಿಸಣ್ಣ ರೈತರು, ಸಣ್ಣ ಮತ್ತು ಮಧ್ಯಮ ಗ್ರಾತ್ರದ ಉದ್ಯಮಗಳಿಗೆ ಹೊಸ ಉತ್ಪನ್ನಗಳು ಮತ್ತು ದಕ್ಷ ಸರಕು ಸಾಗಣೆ  ಸೇವೆಗಳನ್ನು ರೈಲ್ವೆ ಅಭಿವೃದ್ಧಿಪಡಿಸುತ್ತದೆ. ಜತೆಗೆ, ಪಾರ್ಸೆಲ್‌ಗಳ ಚಲನೆಗೆ ತಡೆರಹಿತ ಪರಿಹಾರ ಒದಗಿಸಲು ಅಂಚೆ ಜತೆ ರೈಲ್ವೆ ಸಹಯೋಗ ಹೊಂದಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Budget 2022 LIVE: ಜನಪ್ರಿಯ ಬಜೆಟ್ ಇದಲ್ಲ, ಆದರೆ, ಜನಪರ ಬಜೆಟ್!...

ಸ್ಥಳೀಯ ವ್ಯವಹಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು 'ಒಂದು ನಿಲ್ದಾಣ-ಒಂದು ಉತ್ಪನ್ನ(One Station-One Product) ಪರಿಕಲ್ಪನೆ ಜನಪ್ರಿಯಗೊಳಿಸಲಾಗುವುದು.  ಆತ್ಮನಿರ್ಭರ್ ಭಾರತದ(Atmanirbhar Bharat) ಭಾಗವಾಗಿ, 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ‘ಕವಚ್’ ಅಡಿಗೆ 2,000 ಕಿಮೀ ಜಾಲ ತರಲಾಗುವುದು. ಮುಂದಿನ 3 ವರ್ಷಗಳಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಪ್ರಯಾಣಿಕರಿಗೆ ಉತ್ತಮ ಸಂಚಾರ ಅನುಭವ ನೀಡುವ 400 ಹೊಸ ಪೀಳಿಗೆಯ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.  ಮುಂದಿನ 3 ವರ್ಷಗಳಲ್ಲಿ ಬಹುಮಾದರಿ ಸರಕು ಸಾಗಣೆ ಸೌಲಭ್ಯಗಳಿಗಾಗಿ 100  ಪ್ರಧಾನ ಮಂತ್ರಿ ಗತಿಶಕ್ತಿ ಸರಕು ಸಾಗಣೆ ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

Union Budget 2022 ಅಭಿವೃದ್ಧಿಗೆ ಮತ್ತಷ್ಟು ವೇಗ 20,000 ಕೋಟಿ ರೂ ವೆಚ್ಚದಲ್ಲಿ 25,000 ಕಿ.ಮೀ ಹೆದ್ದಾರಿ ವಿಸ್ತರಣೆ!

ರೈಲ್ವೆಗೆ ಸಂಪರ್ಕ ಸೇರಿದಂತೆ ಸಾಮೂಹಿಕ ನಗರ ಸಾರಿಗೆ:
ಮಹಾನಗರಗಳಲ್ಲಿ ಮಾದರಿಯ ಮೆಟ್ರೋ ರೈಲು ವ್ಯವಸ್ಥೆ ನಿರ್ಮಿಸಲು ನವೀನ ವಿಧಾನಗಳ ಮೂಲಕ ಹಣಕಾಸು ಒದಗಿಸುವುದು ಮತ್ತು ವೇಗದ ಅನುಷ್ಠಾನ ವಿಧಾನವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು. ಸಾಮೂಹಿಕ ನಗರ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವೆ ಬಹುಮಾದರಿ ಸಂಪರ್ಕವನ್ನು ಆದ್ಯತೆಯ ಮೇಲೆ ಸುಗಮಗೊಳಿಸಲಾಗುವುದು. ಮೆಟ್ರೋ ವ್ಯವಸ್ಥೆಗಳ ವಿನ್ಯಾಸವನ್ನು ಭಾರತೀಯ ಪರಿಸ್ಥಿತಿಗಳು ಮತ್ತು ಅಗತ್ಯಗಳಿಗೆ ಪೂರಕವಾಗಿ  ಪ್ರಮಾಣೀಕರಿಸಲಾಗುವುದು ಎಂದಿದ್ದಾರೆ.

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪರಿವರ್ತನೀಯ ಕಾರ್ಯವಿಧಾನವಾಗಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಸರಕು ಸಾಗಣೆ ಮೂಲಸೌಕರ್ಯ ಎಂಬ 7 ಚಾಲನಾ ಯಂತ್ರಗಳು ದೇಶದ ಅರ್ಥ ವ್ಯವಸ್ಥೆಯನ್ನು ರಾಜಪಥದಲ್ಲಿ ಮುನ್ನಡೆಸುತ್ತವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!

ಪ್ರಮುಖ 7 ಚಾಲನಾ ಯಂತ್ರಗಳು ದೇಶದ ಅರ್ಥ ವ್ಯವಸ್ಥೆಯ ಉತ್ಕೃಷ್ಟ ಬೆಳವಣಿಗೆಯನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲಿವೆ ಎಂದರು. ಈ ಪ್ರಮುಖ 7 ಚಾಲನಾ ಯಂತ್ರಗಳಿಗೆ ಇಂಧನ ಪ್ರಸರಣ, ಮಾಹಿತಿ ತಂತ್ರಜ್ಞಾನ ಸಂವಹನ, ಬಲ್ಕ್ ವಾಟರ್ ಮತ್ತು ಒಳಚರಂಡಿ ಹಾಗೂ ಸಾಮಾಜಿಕ ಮೂಲಸೌಕರ್ಯ ವಲಯಗಳು ಪೂರಕ ಬೆಂಬಲ ನೀಡಲಿವೆ ಎಂದರು.

ಅಂತಿಮವಾಗಿ, ಈ ಕಾರ್ಯ ವಿಧಾನವು ಸ್ವಚ್ಛ ಇಂಧನ ಮತ್ತು ಸಬ್ಕಾ ಪ್ರಯಾಸ್‌  - ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಪ್ರಯತ್ನಗಳು - ಎಲ್ಲರಿಗೂ ವಿಶೇಷವಾಗಿ ಯುವಜನರಿಗೆ ದೊಡ್ಡ ಉದ್ಯೋಗ ಮತ್ತು ಉದ್ಯಮಶೀಲತೆಯ ವಿಪುಲ ಅವಕಾಶಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios