Asianet Suvarna News Asianet Suvarna News

Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!

  • ಭಾರತದ ಆಟೋ ಕ್ಷೇತ್ರ ನಿರೀಕ್ಷಿಸಿದ ಕೊಡುಗೆ ಇಲ್ಲ, ಮತ್ತೆ ನಿರಾಸೆ
  • ಬ್ಯಾಟರಿ ಸ್ವಾಪ್ ಹೊಸ ನೀತಿ ಜಾರಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ವೆಚ್ಚ ಕಡಿಮೆ
  • ತೆರಿಗೆ ಕಡಿತ, ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ
Union Budget 2022 battery swapping policy to other automobile Industry announcements Highlights ckm
Author
Bengaluru, First Published Feb 1, 2022, 2:05 PM IST

ನವದೆಹಲಿ(ಫೆ.01): ಕೇಂದ್ರದ ಬಜೆಟ್(Union Budget 2022) ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್(Automobile Sector) ಕ್ಷೇತ್ರಕ್ಕೆ ನಿರಾಸೆಯಾಗಿದೆ. ಕೊರೋನಾ, ಲಾಕ್‌ಡೌನ್, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಕಾರಣಗಳಿಂದ ಸೊರಗಿ ಹೋಗಿದ್ದ ಭಾರತದ ಆಟೋ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೆಲ ಕೊಡುಗೆ ನಿರೀಕ್ಷಿಸಿತ್ತು. ಆದರೆ ಎಲೆಕ್ಟ್ರಿಕ್ ವಾಹನ(Electric Vehicle) ಸಂಬಂಧ ಕೆಲ ಘೋಷಣೆ ಹೊರತು ಪಡಿಸಿ ಇನ್ನುಳಿದ ವಿಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಈ  ಮೂಲಕ ಆಟೋ ಕ್ಷೇತ್ರದ ನಿರೀಕ್ಷೆ ತಕ್ಕ ಬಜೆಟ್ ಇರಲಿಲ್ಲ ಅನ್ನೋದು ಸತ್ಯ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮಂಡಿಸಿದ ಕೇಂದ್ರ ಬಜೆಟ್ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದರಲ್ಲಿ ಭಾರತದ ಆರ್ಥಿಕತೆಯಲ್ಲಿ(Indian Economy) ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಆಟೋಮೊಬೈಲ್ ಕ್ಷೇತ್ರವನ್ನೂ ಕೇಂದ್ರ ಪರಿಗಣಿಸಿದೆ. ಆದರೆ ಬ್ಯಾಟರಿ ಸ್ವಾಪ್ ಹೊಸ ನೀತಿ, ವಾಣಿಜ್ಯ ಎಲೆಕ್ಟ್ರಕ್ ವಾಹನ, ಎಲೆಕ್ಟ್ರಿಕ್ ವಾಹನ ನಿರ್ವಹಣಾ ವೆಚ್ಚ ಸೇರಿದಂತೆ ಇವಿ ವಿಭಾಗಕ್ಕೆ ಒತ್ತು ನೀಡಿದೆ. ಆದರೆ ಆಟೋಮೊಬೈಲ್ ಕ್ಷೇತ್ರ ನಿರೀಕ್ಷಿಸಿದ್ದ ಆಮದು ಸುಂಕ ಕಡಿತ, ತೆರಿಗೆ ಕಡಿತ ಸೇರಿದಂತೆ ಇತರ ಮಹತ್ವದ ಹಾಗೂ ಸಹಕಾರ ಬಯಸಿದಿ ವಿಭಾಗಕ್ಕೆ ಬಜೆಟ್ ಯಾವುದೇ ಕೊಡುಗೆ ನೀಡಿಲ್ಲ.

Budget 2022: ಹುಸಿಯಾದ ನಿರೀಕ್ಷೆ, ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಇಲ್ಲ

ಬ್ಯಾಟರಿ ಸ್ವಾಪ್ ಹೊಸ ನೀತಿ:
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ವಾಪ್‌ಗೆ ಹೊಸ ನೀತಿ(Battery Swap policy) ಜಾರಿ ಮಾಡಲಾಗಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಖರೀದಿಸಿದ ಗ್ರಾಹಕನ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಸುಲಭವಾಗಿ ಬ್ಯಾಟರಿ ಸ್ವಾಪ್ ಕೇಂದ್ರಗಳು ಸಿಗಲಿದೆ. ಇದರಿಂದ ಗ್ರಾಹಕರಿಗೆ ಸದ್ಯ ಇರುವ ಚಾರ್ಜಿಂಗ್ ಸಮಸ್ಯೆ, ಚಾರ್ಜಿಂಗ್ ಸ್ಟೇಶನ್ ಸಮಸ್ಯೆಗೂ ಮುಕ್ತಿ ಸಿಗಲಿದೆ. ಬ್ಯಾಟರಿ ಸ್ವ್ಯಾಪ್ ಹೊಸ ನೀತಿಯಿಂದ ಬ್ಯಾಟರಿ ಉತ್ಪಾನೆ ಸ್ಟಾರ್ಟ್‌ಅಪ್ ಕಂಪನಿಗಳಿಗೂ ಹೆಚ್ಚು ನೆರವಾಗಲಿದೆ. 

ಕೇಂದ್ರ ಬಜೆಟ್‌ನಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿತ ಸೇರಿದಂತೆ ಹೊಸ ಕೂಡುಗೆಗಳು ಘೋಷಣೆಯಾಗಿಲ್ಲ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳು ಬೆಲೆ ಕಡಿಮೆಯಾಗುವುದಿಲ್ಲ. ಇನ್ನು ವಾಣಿಜ್ಯ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಸಾರಿಗೆ ವಾಹನವಾಗಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಬಜೆಟ್ ಒತ್ತು ನೀಡಿದೆ. 

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ವಸತಿ!

ತೆರಿಗೆ, ಆಮದ ಸುಂಕದಲ್ಲಿ ಬದಲಾವಣೆ ಇಲ್ಲ:
ಭಾರತೀಯ ಆಟೋ ಕ್ಷೇತ್ರದ ಮೇಲಿನ ತೆರಿಗೆಗೆ ಎಲ್ಲಾ ಆಟೋ ಕಂಪನಿಗಳು, ಆಟೋ ದಿಗ್ಗಜರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಕೇಂದ್ರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಆಟೋ ಕ್ಷೇತ್ರದ ಮೇಲಿನ ತೆರಿಗೆ, ಆಮದು ಸುಂಕ(import excise duty) ಕಡಿತಗೊಳಿಸುವ ನಿರೀಕ್ಷೆ ಇತ್ತು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದಲ್ಲದೇ, ವಾಹನಗಳ ಬೆಲೆ ಕಡಿಮೆಯಾಗಲಿದೆ. ಇದು ಮಾರಾಟದ ಮೇಲೆ ಪೂರಕ ಪರಿಣಾಮ ಬೀರಲಿದೆ. ಆರ್ಥಿಕತೆಯೂ ಚೇತರಿಸಿಕೊಳ್ಳಲಿದೆ ಅನ್ನೋ ಲೆಕ್ಕಾಚಾರವಾಗಿತ್ತು. ಆದರೆ ತೆರಿಗೆ ನೀತಿಯಲ್ಲಿ ಕೇಂದ್ರ ಯಾವುದೇ ಬದಲಾವಣೆ ಮಾಡಿಲ್ಲ. 

ವಾಹನ ಉತ್ಪಾದನಾ ವೆಚ್ಚ, ಮಾರಾಟದಲ್ಲಿ ಕುಸಿತ, ಚಿಪ್ ಕೊರತೆ ಸೇರಿದಂತೆ ಹಲವು ಕಾರಣದಿಂದ ಆಟೋಮೊಬೈಲ್ ಕ್ಷೇತ್ರ ಕೇಂದ್ರದ ನೆರವು ಬಯಸಿತ್ತು. ಆದರೆ ಆಟೋ ಕ್ಷೇತ್ರ ಈ ವಿಭಾಗದಲ್ಲಿ ಯಾವುದು ಕೊಡುಗೆ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುವ ನಿರೀಕ್ಷೆ ಗ್ರಾಹಕರಲ್ಲಿತ್ತು. ಆದರೆ ಅದ್ಯಾವ ವರ್ಣರಂಜಿತ ಘೋಷಣೆಯನ್ನು ಕೇಂದ್ರ ಮಾಡಿಲ್ಲ. ಬದಲಾಗಿ ಹೊಸ ಸ್ಟಾರ್ಟ್‌ಅಪ್ ಆರಂಭ, ಬ್ಯಾಟರಿ ಉತ್ಪಾದನೆ, ಬ್ಯಾಟರಿ ಸ್ವ್ಯಾಪ್ ಕೇಂದ್ರ ಸೇರಿದಂತೆ ಹಲವು ಉಪ ಕ್ರಮಗಳತ್ತ ಬಜೆಟ್ ಹೆಚ್ಚಿನ ಗಮನಹರಿಸಿದೆ.

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಖಾಸಗಿ ವಲಯಕ್ಕೆ ವಿಸ್ತರಿಸುವ ಕೇಂದ್ರದ ನಿರ್ಧಾರ  ಹೊಸ ಆದಾಯ ಹಾಗೂ ಬೆಳವಣಿಗೆಗೆ ಕಾರಣವಾಗಲಿದೆ. ಈಗಾಗಲೇ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ರಕ್ಷಣಾ ಕ್ಷೇತ್ರಕ್ಕೆ ಉತ್ಪನ್ನ ವಿತರಿಸಿದ್ದಾರೆ. ಖಾಸಗಿ ವಲಯಕ್ಕೆ  R&Dವಿಸ್ತರಣೆ ಆಟೋ ಘಟಕ ಹಾಗೂ ತಯಾರಕರಿಗೆ ಹೊಸ ಚೈತನ್ಯ ನೀಡಿದೆ.
 

Follow Us:
Download App:
  • android
  • ios