Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!

*ಕೇಂದ್ರ ಸರ್ಕಾರದಿಂದ ಡಿಜಿಟಲ್‌ ಕರೆನ್ಸಿ
*ಡಿಜಿಟಲ್‌ ಸ್ವತ್ತುಗಳ ವರ್ಗಾವಣೆ ಮೇಲೆ ತೆರಿಗೆ
*ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟುಗಳಿಗೆ 1% TDS

Digital Rupee Using Blockchain To Be Issued By RBI Income from transfer of digital assets to be taxed mnj

ನವದೆಹಲಿ(ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ.‌ ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದೆ.  ಪ್ರಸ್ತುತ ಡಿಜಿಟಲ್‌ ಕರೆನ್ಸಿ ಹಾಗೈ ಡಿಜಿಟಲ್‌ ಸ್ವತ್ತುಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಬೆನ್ನಲ್ಲೇ 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್‌ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೇ ಯಾವುದೇ  ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ

ಆರ್‌ಬಿಐ ಡಿಜಿಟಲ್‌ ಕರೆನ್ಸಿ ಮೂಲಕ ಬಿಟ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದೇ ಆದ ಡಿಜಿಟಲ್‌ ಕರೆನ್ಸಿ ಜಾರಿಗೊಳಿಸಲು ಸಾಧ್ಯವಾಗಲಿದೆ. "ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ನೀಡಲಾಗುತ್ತದೆ. ಇದನ್ನು 2022-23 ರಿಂದ ಆರ್‌ಬಿಐ ಬಿಡುಗಡೆ ಮಾಡುತ್ತದೆ. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ" ಎಂದು ನಿರ್ಮಾಲಾ ಸೀತಾರಾಮನ್‌ ಹೇಳಿದ್ದಾರೆ.  

Budget 2022 LIVE ಇಲ್ಲಿ ವಿಕ್ಷೀಸಿ!

ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಹೋಲಿಸಿದರೆ ಕೇಂದ್ರೀಯ ಬ್ಯಾಂಕ್‌ಗಳು ಬಿಡುಗಡೆ ಮಾಡುವ ಡಿಜಿಟಲ್‌ ಕರೆನ್ಸಿ, ಅಸಹಜ ಏರಿಳಿಕೆಯಿಂದ ರಕ್ಷಣೆ ನೀಡುತ್ತದೆ. ಡಿಜಿಟಲ್‌ ಕರೆನ್ಸಿ ಬಳಕೆಯು, ನೋಟುಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ, ನಿರ್ವವಣಾ ವೆಚ್ಚ, ಮುದ್ರಣಾ ವೆಚ್ಚ ಉಳಿಸುತ್ತದೆ ಜೊತೆಗೆ ಸೆಟಲ್‌ಮೆಂಟ್‌ ಅಪಾಯವನ್ನೂ ಕಡಿಮೆ ಮಾಡುತ್ತದೆ. ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ರದ್ದುಗೊಳಿಸುವ ಮತ್ತು ದೇಶೀಯ ಕ್ರಿಪ್ಟೋ ಕರೆನ್ಸಿ ಬಿಡುಗಡೆಗೆ ಅನುವು ಮಾಡಿಕೊಡುವ ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್‌ ಕರೆನ್ಸಿ ನಿಯಂತ್ರಣ-2021 ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು. ಆದರೆ ಅಧಿವೇಶನದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ.  

ಇದನ್ನೂ ಓದಿ: Union Budget ಹಲವು ಪ್ರಥಮಗಳು: ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!

ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೇಲೆ ತೆರಿಗೆ: ಯಾವುದೇ ವರ್ಚುವಲ್‌ ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.   ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ನಷ್ಟವನ್ನು ಯಾವುದೇ ಇತರ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ.ಅಂತಹ ಸ್ವತ್ತುಗಳ ಉಡುಗೊರೆಯನ್ನು ಸ್ವೀಕರಿಸುವವರ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟುಗಳಿಗೆ 1% ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ (TDS) ವಿಧಿಸಲಾಗುತ್ತದೆ. ಎನ್‌ಎಫ್‌ಟಿ ಡಿಜಿಟಲ್ ವಸ್ತುಗಳ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ 'ಸ್ವತ್ತು'ಗಳಿಗೆ ಮಾಲೀಕತ್ವದ ರಚನೆ, ಸಂಗ್ರಹಣೆ ಮತ್ತು ವರ್ಗಾವಣೆಗೆ ಇದು ವೇದಿಕೆಯನ್ನು ಒದಗಿಸುತ್ತದೆ.

ಇತ್ತೀಚೆಗೆ ಡಿಜಿಟಲ್‌ ಸಿಗ್ನೇಚರ್‌ ಹಾಗೂ ಎನ್‌ಎಫ್‌ಟಿಗಳ (NFT) ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ವಿಶಿಷ್ಟ ಮತ್ತು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಕೆಲವು ವಸ್ತುಗಳನ್ನು ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗಿವೆ ಇತೀಚೆಗೆ ಇದೇ ರೀತಿ  ಇತಿಹಾಸದಲ್ಲಿನ ಮೊದಲ ಪಠ್ಯ ಸಂದೇಶವನ್ನು ಬ್ರಿಟಿಷ್ ಆಪರೇಟರ್ ವೊಡಾಫೋನ್ (Vodfhone)ಎನ್‌ಎಫ್‌ಟಿ ಹರಾಜಿನಲ್ಲಿ €107,000 (ಸುಮಾರು 91 ಲಕ್ಷ) ಗೆ ಮಾರಾಟ ಮಾಡಿತ್ತು. ಇದೇ ಡಿಜಿಟಲ್‌ ಸ್ವತ್ತು ಮೂಲಕ  22 ವರ್ಷದ ಇಂಡೋನೇಷಿಯಾದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸೆಲ್ಫಿಗಳನ್ನು ಮಾರಾಟ ಮಾಡಿ  ₹7 ಕೋಟಿಗೂ ಹೆಚ್ಚು ಹಣ  (ಒಂದು ಮಿಲಿಯನ್ ಡಾಲರ್‌) ಗಳಿಸಿ ಸುದ್ದಿಯಾಗಿದ್ದ.

Latest Videos
Follow Us:
Download App:
  • android
  • ios