OPPO F33 Pro 5G ಸ್ಮಾರ್ಟ್‌ಫೋನ್, ಬೋರ್ ದಿನಚರಿಯನ್ನು ಚೈತನ್ಯಶೀಲವಾಗಿಸಲು ಬಿಡುಗಡೆಯಾಗಿದೆ. ಇದು 50MP ಅಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾ, 50MP ಹಿಂಬದಿಯ ಕ್ಯಾಮೆರಾ, ನೀರಿನೊಳಗೆ ಶೂಟ್ ಮಾಡಲು IP69K ರೇಟಿಂಗ್ ಮತ್ತು ಸೃಜನಾತ್ಮಕ ಫೋಟೋ ಎಡಿಟಿಂಗ್‌ಗಾಗಿ ಪಾಪ್‌ಔಟ್ ವೈಶಿಷ್ಟ್ಯ ಹೊಂದಿದೆ.
ನೀವು ಕೆಲಸಗಾರರಾಗಿದ್ದು, ಪ್ರತಿದಿನ ನಿಮ್ಮ ದಿನಚರಿ ಸ್ಲೋ ಅಥವಾ ಬೋರ್ ಅಥವಾ ಚೈತನ್ಯರಹಿತ ಅಂತೆನಿಸಿದ್ರೆ ನಿಮ್ಮ ಫೋನ್ ನಿಮಗೆ ಅತ್ಯುತ್ತಮ ಸಂಗಾತಿಯಾಗುತ್ತದೆ. ಒಂದೊಳ್ಳೆ ಸ್ಮಾರ್ಟ್‌ಫೋನ್ ನಿಮ್ಮ ದಿನನಿತ್ಯದ ಎಲ್ಲಾ ಪ್ರಮುಖ ಕ್ಷಣಗಳನ್ನು ಸೆರೆ ಹಿಡಿಯುತ್ತದೆ. ವೇಗವಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರು ಬಾಳಿಕೆ ಮತ್ತು ವಿಶ್ವಾಸಾರ್ಹ ಕ್ಯಾಮೆರಾ ಈ ಎರಡು ಅಂಶಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಗಮನಿಸುತ್ತಾರೆ. ಇಂದಿನ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು OPPO F33 Pro 5G ಮತ್ತು OPPO F33 ಒಳಗೊಂಡಿರುವ ಸರಣಿಯನ್ನು ಬಿಡುಗಡೆ ಮಾಡಿದೆ.
ಸೆಲ್ಫಿಗಾಗಿ Wider Camera
ಸ್ನೇಹಿತರನ್ನು ಭೇಟಿಯಾದಾಗ, ಹೊರಗಡೆ ಊಟಕ್ಕೆ ಹೋದ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಲಾಂಗ್ ಸೆಲ್ಫಿಗಾಗಿ OPPO ವಿಶೇಷ ಕ್ಯಾಮೆರಾ ಸೆಟಪ್ ನೀಡಿದೆ. F33 Pro ನ 50MP ಅಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. 100° ಫೀಲ್ಡ್ ವ್ಯೂವ್ ಜೊತೆ ಹೆಚ್ಚಿನ ಜನರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ಇದು auto-switch ಫೀಚರ್ ಸಹ ಹೊಂದಿದೆ. ಇಷ್ಟು ಮಾತ್ರವಲ್ಲ ಕ್ಯಾಮೆರಾ Aomatically 1x to 0.6xಗೆ ಬದಲಾಗುತ್ತದೆ. ಈ ಸ್ಪೆಷಲ್ ಫೀಚರ್‌ನಿಂದಾಗಿ ಪ್ರತಿಯೊಬ್ಬರು ಫ್ರೇಮ್‌ನಲ್ಲಿ ಫಿಟ್ ಆಗ್ತಾರೆ.
ಪ್ರತಿ ಸೆಲ್ಫಿಗಾಗಿ ಕೈ ಎತ್ತರಿಸೋದು, ಕ್ಯಾಮೆರಾ ಆಂಗಲ್ ಚೇಂಜ್ ಮಾಡೋರು ತಪ್ಪಲಿದೆ. ವೇಗ ಮತ್ತು ಪರ್ಫೆಕ್ಟ್ ಆಗಿ ಸುಲಭ ರೀತಿ ಸುಂದರ ಗ್ರೂಪ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶವನ್ನು ಒಪ್ಪೋ ನೀಡುತ್ತಿದೆ. ಕಡಿಮೆ ಬೆಳಕಿನಲ್ಲಿಯೂ ಸುಂದರವಾದ ಸೆಲ್ಫಿ ತೆಗೆದುಕೊಳ್ಳುವ ಫೀಚರ್ಸ್ ಹೊಂದಿದ್ದು, ನಿಮಗೆ ಬೇಕಾದ ಟೋನ್, ನ್ಯಾಚುರಲ್ ರೀತಿ ಫೋಟೋ ತೆಗೆದುಕೊಳ್ಳಬಹುದಾಗಿದೆ. ವಿಶೇಷವಾಗಿ ನೈಟ್ ಔಟ್, ಇನ್‌ಸೈಡ್ ಪ್ರೋಗ್ರಾಂಗಲ್ಲಿ ಈ ಫೀಚರ್ಸ್ ಸಹಾಯವಾಗುತ್ತದೆ.
ಹಿಂಭಾಗದಲ್ಲಿ ಹೊಸ ಕ್ಯಾಮೆರಾ ಮಾಡ್ಯೂಲ್ ಒಳಗೊಂಡಿದ್ದು, ವಿಶೇಷ ವಿನ್ಯಾಸವನ್ನು ಒಳಗೊಂಡಿದೆ. ಇದನ್ನು ಸ್ಟಾರಿ ಸೀ ಲೆನ್ಸ್ ಮಾಡ್ಯೂಲ್ ಎಂದು ಕರೆಯಲಾಗಿದ್ದು, ರಾತ್ರಿ ಆಕಾಶದಲ್ಲಿನ ತಾರೆಗಳನ್ನು ಸೆರೆ ಹಿಡಿಯಬಹುದಾಗಿದೆ. ಹಾಗೆಯೇ ಸುಂದರವಾದ shimmer ಎಫೆಕ್ಟ್ ಒಳಗೊಂಡಿದೆ. ದೊಡ್ಡ ಮತ್ತು ವೃತ್ತಾಕಾರದ rectangular island ಮಾಡ್ಯೂಲ್ ಇದಾಗಿದೆ. ರಿಂಗ್ ಫ್ಲ್ಯಾಶ್ ಫೀಚರ್ಸ್ ಹೊಂದಿದೆ. ಇನ್ನು ಕ್ಯಾಮೆರಾ ಆಟೋಫೋಕಸ್ ಹೊಂದಿರುವ 50MP Ultra-Clear camera, AI bokeh ಸಪೋರ್ಟ್ ಮಾಡುವ 2MP depth camera ಹೊಂದಿದೆ.
ನ್ಯಾಚುರಲ್ ಬ್ಯಾಕ್‌ಗ್ರೌಂಡ್ ಬ್ಲರ್ ವೈಶಿಷ್ಟ್ಯ
ನ್ಯಾಚುರಲ್ ಬ್ಯಾಕ್‌ಗ್ರೌಂಡ್ ಬ್ಲರ್ ವೈಶಿಷ್ಟ್ಯ ಒಳಗೊಂಡಿದೆ. ಈ ಎಲ್ಲಾ ವೈಶಿಷ್ಯಗಳು ಔಟ್‌ಡೋರ್ ಶೂಟ್‌ಗಳಿಗೆ ಸಹಾಯಕವಾಗಲಿದೆ. ಇದರಲ್ಲಿ ಡ್ಯುಯಲ್-ವ್ಯೂ ವೀಡಿಯೊ ಕೂಡ ಇದೆ. ಎರಡು ಸ್ಕ್ರೀನ್ ಫೀಚರ್ಸ್ ಹೊಂದಿದೆ. ಅಂದ್ರೆ ಒಂದು ವಿಂಡೋದಲ್ಲಿ ವಿಡಿಯೋ ಕ್ಯಾಪ್ಚರ್ ಮತ್ತೊಂದರಲ್ಲಿ ರೆಸ್ಪಾನ್ಸ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.
ಇದರ ಮತ್ತೊಂದು ಪ್ರಾಯೋಗಿಕ ವೈಶಿಷ್ಟ್ಯವೆಂದರೆ IP69K ರೇಟಿಂಗ್ ಒಳಗೊಂಡಿದ್ದು, ನೀರಿನೊಳಗೆ ವಿಡಿಯೋ ಶೂಟ್ ಮಾಡಬಹುದು. 1.5 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳ ಕಾಲ ಶೂಟ್ ಮಾಡಬಹುದು. ಪೂಲ್ ಶಾಟ್ ಅಥವಾ ಕೆರೆಯಂತಹ ಪ್ರದೇಶದಲ್ಲಿ ಸುಲಭವಾಗಿ ಶೂಟ್ ಮಾಡಬಹುದು.
ಇನ್ನು ಎಡಿಟಿಂಗ್ ವಿಭಾಗದಲ್ಲಿ ಫೋನ್ ಮೊದಲ ಬಾರಿಗೆ ಪಾಪ್‌ಔಟ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಪ್ರಮುಖ OPPO ಮಾದರಿಗಳಲ್ಲಿ ನೋಡಲಾಗಿದ್ದ ಪಾಪ್‌ಔಟ್, ಫ್ರೇಮ್‌ನಿಂದ ಹೊರಬರುವಂತೆ ಫೋಟೋಗಳನ್ನು ಜೋಡಿಸುವ ಮೂಲಕ ಸೃಜನಶೀಲ ಕೊಲಾಜ್‌ಗಳನ್ನು ರಚಿಸಲು ಸಹಾಯ ಮಾಡುತ್ತದೆ. ಗ್ಯಾಲರಿಯಿಂದ 2–9 ಫೋಟೋಗಳನ್ನು ಆಯ್ಕೆ ಮಾಡುವ ಮೂಲಕ, ಬಳಕೆದಾರರು ಅವುಗಳನ್ನು ಟೆಂಪ್ಲೇಟ್‌ಗಳಲ್ಲಿ ಜೋಡಿಸಬಹುದು. ಕಟೌಟ್-ಶೈಲಿಯ ದೃಶ್ಯಗಳನ್ನು ರಚಿಸಲು ನಿರ್ದಿಷ್ಟ ಚಿತ್ರಗಳನ್ನು ಹೈಲೈಟ್ ಮಾಡಬಹುದು.

