ವಿಶ್ವದ ಅತಿದೊಡ್ಡ ಓಲಾ EV ಹಬ್ ತಮಿಳುನಾಡಿಗೆ! ರಾಜ್ಯದ ಕೈತಪ್ಪಿದ್ದೇಕೆ? ಮೋಹನ್‌ದಾಸ್ ಪೈ ಪ್ರಶ್ನೆ
ಓಲಾ ತಮಿಳುನಾಡಿನಲ್ಲಿ ವಿಶ್ವದ ಅತಿದೊಡ್ಡ ಇವಿ ಹಬ್ ಅನ್ನು ಸ್ಥಾಪಿಸುತ್ತದೆ. ಇದರಲ್ಲಿ ಇಂಟಿಗ್ರೇಟೆಡ್ 2W, ಕಾರು ಮತ್ತು ಲಿಥಿಯಂ ಸೆಲ್ ಗಿಗಾಫ್ಯಾಕ್ಟರಿಗಳನ್ನು ಹೊಂದಿರುತ್ತದೆ. ಇಂದು ತಮಿಳುನಾಡು ಜೊತೆ ಎಂಒಯು ಸಹಿ ಮಾಡಲಾಗಿದೆ. ತಮಿಳುನಾಡು ಸರ್ಕಾರದ ಬೆಂಬಲ ಮತ್ತು ಪಾಲುದಾರಿಕೆಗಾಗಿ ಗೌರವಾನ್ವಿತ ಸಿಎಂ ಎಂ ಕೆ ಸ್ಟಾಲಿನ್‌ಗೆ ಧನ್ಯವಾದಗಳು ಎಂದು ಓಲಾ ಸಿಇಒ ಟ್ವೀಟ್ ಮಾಡಿದ್ದಾರೆ.
ಓಲಾ ಎಲೆಕ್ಟ್ರಿಕ್ ಕಂಪನಿ ತಮಿಳುನಾಡಿನಲ್ಲಿ 7,614 ಕೋಟಿ ರೂ. ಮೌಲ್ಯದ ದೊಡ್ಡ ಮಟ್ಟದ ಹೂಡಿಕೆಯನ್ನು ಘೋಷಿಸಿದೆ. ಇದು ಸುಧಾರಿತ ಸೆಲ್ ಮತ್ತು ಇವಿ ಉತ್ಪಾದನಾ ಸೌಲಭ್ಯಗಳು, ಮಾರಾಟಗಾರರು ಮತ್ತು ಪೂರೈಕೆದಾರರ ಉದ್ಯಾನವನಗಳು ಮತ್ತು ಇತರ ಸೌಕರ್ಯಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಇವಿ ಹಬ್ ಅನ್ನು ಸ್ಥಾಪಿಸುತ್ತದೆ ಎಂದು ನಿರ್ಧಾರ ಮಾಡಿದೆ. ಇನ್ನು, ತಮಿಳುನಾಡಿನಲ್ಲಿ ಇದು ಸ್ಥಾಪನೆಯಾಗುತ್ತಿರುವುದು ಚರ್ಚೆಗೆ ಸಹ ಗ್ರಾಸವಾಗಿದೆ. ಕರ್ನಾಟಕದ ಕೈತಪ್ಪಿದ್ದಕ್ಕೆ ಖ್ಯಾತ ಉದ್ಯಮಿ ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದು, ರಾಜ್ಯದ ಕೈತಪ್ಪಿದ್ದೇಕೆ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಸೇರಿ ಅನೇಕರನ್ನು ಪ್ರಶ್ನೆ ಮಾಡಿದ್ದಾರೆ.
ಓಲಾದ ಎಲೆಕ್ಟ್ರಿಕ್ ವಾಹನಗಳ ಹಬ್ ವಿಶ್ವದಲ್ಲೇ ಅತಿ ದೊಡ್ಡದು ಎಂದು ಹೇಳಲಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿದ ಓಲಾ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್‌ವಾಲ್, "ಓಲಾ ತಮಿಳುನಾಡಿನಲ್ಲಿ ವಿಶ್ವದ ಅತಿದೊಡ್ಡ ಇವಿ ಹಬ್ ಅನ್ನು ಸ್ಥಾಪಿಸುತ್ತದೆ. ಇದರಲ್ಲಿ ಇಂಟಿಗ್ರೇಟೆಡ್ 2W, ಕಾರು ಮತ್ತು ಲಿಥಿಯಂ ಸೆಲ್ ಗಿಗಾಫ್ಯಾಕ್ಟರಿಗಳನ್ನು ಹೊಂದಿರುತ್ತದೆ. ಇಂದು ತಮಿಳುನಾಡು ಜೊತೆ ಎಂಒಯು ಸಹಿ ಮಾಡಲಾಗಿದೆ. ತಮಿಳುನಾಡು ಸರ್ಕಾರದ ಬೆಂಬಲ ಮತ್ತು ಪಾಲುದಾರಿಕೆಗಾಗಿ ಗೌರವಾನ್ವಿತ ಸಿಎಂ ಎಂ ಕೆ ಸ್ಟಾಲಿನ್‌ಗೆ ಧನ್ಯವಾದಗಳು..! ಸಂಪೂರ್ಣ ವಿದ್ಯುತ್ ವಾಹನಗಳಿಗೆ ಭಾರತದ ಪರಿವರ್ತನೆಯನ್ನು ವೇಗಗೊಳಿಸುವಿಕೆ’’ ಎಂದು ಶನಿವಾರ ಭವಿಶ್ ಅಗರ್‌ವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಆರು ಹೊಸ ಇವಿಗಳನ್ನು ಪರಿಚಯಿಸಲಿದೆ ಓಲಾ ಎಲೆಕ್ಟ್ರಿಕ್
ಇವಿ ಹಬ್‌ನ ಪ್ರಮುಖಾಂಶಗಳು:
ಓಲಾ ಎಲೆಕ್ಟ್ರಿಕ್ ತಮಿಳುನಾಡು ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಮತ್ತು 20 GW ಸಾಮರ್ಥ್ಯದ ಲಿಥಿಯಂ-ಐಯಾನ್ ಸೆಲ್ ಉತ್ಪಾದನಾ ಸೌಲಭ್ಯಗಳನ್ನು ನಿರ್ಮಿಸಲು ₹ 7,614 ಕೋಟಿ ಹೂಡಿಕೆಗಳನ್ನು ಮಾಡಿದೆ. ಓಲಾ ಪ್ರಕಾರ, ಯೋಜಿತ ಎಲೆಕ್ಟ್ರಿಕ್ ವೆಹಿಕಲ್ ಹಬ್ ಒಂದೇ ಸ್ಥಳದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅತ್ಯಂತ ದೊಡ್ಡ ಸಹಾಯಕ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ಹೊಂದಿದೆ.
ಓಲಾದ ಹಬ್ ಇಡೀ EV ಪರಿಸರ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರುತ್ತದೆ. 2-ಚಕ್ರ ವಾಹನ, 4-ಚಕ್ರಗಳ ವಾಹನ ಮತ್ತು ಸೆಲ್‌ಗಳಲ್ಲಿ ನಮ್ಮನ್ನು ಹೆಚ್ಚು ಬಲವಾದ ಲಂಬವಾಗಿ ಸಂಯೋಜಿತ ಮೊಬಿಲಿಟಿ ಕಂಪನಿಯಾಗಿ ಪರಿವರ್ತಿಸುತ್ತದೆ ಎಂದು ಸಿಇಒ ಭವಿಶ್ ಅಗರ್‌ವಾಲ್ ಹೇಳಿದರು.
ಇದನ್ನೂ ಓದಿ: ರೈಡ್ ಸ್ವೀಕರಿಸಿ ಬಳಿಕ ಕ್ಯಾನ್ಸಲ್ ಮಾಡುವುದೇಕೆ? ಒಲಾ ಡ್ರೈವರ್ ವರ್ತನೆ ಕುರಿತು ಸಿಇಒ ಸ್ಪಷ್ಟನೆ!
ಇನ್ನು, ಓಲಾ ಇವಿ ಹಬ್ ಅನ್ನು ತಮಿಳುನಾಡಿನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ 2,000 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಹಾಗೆ, ಈ ಹೂಡಿಕೆಯಿಂದ ರಾಜ್ಯದಲ್ಲಿ 3,111 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಓಲಾ ಕಂಪನಿಯು ವರ್ಷಕ್ಕೆ 140,000 ಕಾರುಗಳನ್ನು ಉತ್ಪಾದಿಸಲು ಯೋಜಿಸಿದ್ದು, ಓಲಾ ಈಗಾಗಲೇ ತಮಿಳುನಾಡಲ್ಲಿ ಇ-ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. 2023 ರ ವೇಳೆಗೆ, ಇದು ತನ್ನ ಮುಂಬರುವ EV ಹಬ್‌ನಿಂದ ತನ್ನ ಸೆಲ್‌ನ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ.
ಇದನ್ನೂ ಓದಿ: Ola Scooty Scam: ಓಲಾ ಸ್ಕೂಟಿ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರು ಸೇರಿ ದೇಶಾದ್ಯಂತ 20 ಮಂದಿ ಬಂಧನ
ಕಳೆದ ವರ್ಷ, ಓಲಾ ಮೊದಲ ಲಿಥಿಯಂ ಅಯಾನ್ ಸೆಲ್ NMC-2170 ಅನ್ನು ಅನಾವರಣಗೊಳಿಸಿತ್ತು. ಇದನ್ನು 500 ಮಿಲಿಯನ್ ಅಮೆರಿಕ ಡಾಲರ್ ಹೂಡಿಕೆಯೊಂದಿಗೆ ಬೆಂಗಳೂರಿನ ಬ್ಯಾಟರಿ ಇನ್ನೋವೇಶನ್ ಸೆಂಟರ್‌ನಲ್ಲಿ ನಿರ್ಮಿಸಲಾಗಿದೆ. ಬ್ಯಾಟರಿ ಪ್ಯಾಕ್ ವಿನ್ಯಾಸ, ತಯಾರಿಕೆ ಮತ್ತು ಪರೀಕ್ಷೆಯ ಸಂಪೂರ್ಣ ಪ್ಯಾಕೇಜ್‌ಗಳನ್ನು ಒಂದೇ ಸೂರಿನಡಿ ಅಭಿವೃದ್ಧಿಪಡಿಸಲು ಬ್ಯಾಟರಿ ಇನ್ನೋವೇಶನ್ ಸೆಂಟರ್ ಸಜ್ಜುಗೊಂಡಿದೆ.
ಕರ್ನಾಟಕದ ಕೈತಪ್ಪಿದ್ದೇಕೆ ಎಂದು ಉದ್ಯಮಿ ಪ್ರಶ್ನೆ
ಈ ಮಧ್ಯೆ, ತಮಿಳುನಾಡಿನಲ್ಲಿ ವಿಶ್ವದ ಅತಿದೊಡ್ಡ EV ಹಬ್ ಸ್ಥಾಪನೆಗೆ ಓಲಾ ಕಂಪನಿ ನಿರ್ಧಾರ ಮಾಡಿದೆ ಎಂದು ಓಲಾ ಸಿಇಒ ಭವಿಶ್ ಅಗರ್‌ವಾಲ್ ಟ್ವೀಟನ್ನು ಉಲ್ಲೇಖಿಸಿ ಈ ಒಪ್ಪಂದ ಕರ್ನಾಟಕಕ್ಕೆ ಸಿಗದಿದ್ದಕ್ಕೆ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಕಾರಿನ ಒಳಾಂಗಣ ಮಾಹಿತಿಯುಳ್ಳ ಟೀಸರ್ ಬಿಡುಗಡೆ
ಕರ್ನಾಟಕ ರಾಜ್ಯ ದೊಡ್ಡ ಹೂಡಿಕೆಯನ್ನು ಕಳೆದುಕೊಂಡಿದೆ. ಇವಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಕರ್ನಾಟಕ ಕಳೆದುಕೊಂಡಿದ್ದು ಏಕೆ? ದೇಶದಲ್ಲೇ ಮೊದಲು ಕರ್ನಾಟಕ ಇವಿ ನೀತಿಯನ್ನು ಜಾರಿಗೊಳಿಸಿದೆ. ಈ ಹೂಡಿಕೆ ಆಕರ್ಷಣೆ ಬಗ್ಗೆ ಗಮನ ಕೊಡುವ ಕೊರತೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ್, ಬಿಎಲ್. ಸಂತೋಷ್, ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿ ಪ್ರಶ್ನೆಯನ್ನೂ ಮಾಡಿದ್ದಾರೆ