Asianet Suvarna News Asianet Suvarna News

ಆರು ಹೊಸ ಇವಿಗಳನ್ನು ಪರಿಚಯಿಸಲಿದೆ ಓಲಾ ಎಲೆಕ್ಟ್ರಿಕ್

ದೇಶದ ಪ್ರಮುಖ ಇವಿ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ (Ola electric) ಪ್ರಸ್ತುತ ಭಾರತದಲ್ಲಿ ಆರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತರಲು ಯೋಜಿಸುತ್ತಿದೆ. 

Ola electric to introduce six new electric vechicles
Author
First Published Dec 30, 2022, 3:44 PM IST

ದೇಶದ ಪ್ರಮುಖ ಇವಿ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ (Ola electric) ಪ್ರಸ್ತುತ ಭಾರತದಲ್ಲಿ ಆರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತರಲು ಯೋಜಿಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ  ಓಲಾ ಎಲೆಕ್ಟ್ರಿಕ್‌ನ ಸಂಸ್ಥಾಪಕ ಹಾಗೂ ಸಿಇಓ (CEO) ಭವಿಶ್ ಅಗರ್ವಾಲ್, ಕಂಪನಿಯು ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ ಎಂದಿದ್ದಾರೆ.

2023ರ ವಾಹನಗಳ ಪಟ್ಟಿಯಲ್ಲಿ S1 ಏರ್‌ನಂತಹ ಸಮೂಹ-ಮಾರುಕಟ್ಟೆ ಸ್ಕೂಟರ್ ಗಳು ಇರಲಿವೆ. 2024 ನೇ ಸಾಲಿನಲ್ಲಿ ಕಂಪನಿಯು ಪ್ರೀಮಿಯಂ ಮೋಟಾರ್‌ಸೈಕಲ್ (ಕ್ರೂಸರ್‌ಗಳು, ಸ್ಪೋರ್ಟ್ಸ್, ಅಡ್ವೆಂಚರ್ ಮತ್ತು ರೋಡ್ ಬೈಕುಗಳು) ಗಳನ್ನು ಪರಿಚಯಿಸುತ್ತದೆ. 2025 ರಲ್ಲಿ ಓಲಾ, ಎಲೆಕ್ಟ್ರಿಕ್ ಪ್ರೀಮಿಯಂ ಕಾರು ಮತ್ತು ನಂತರ ಪ್ರೀಮಿಯಂ SUV ಅನ್ನು ಕೂಡ ಬಿಡುಗಡೆ ಮಾಡುವುದಾಗಿ ಪ್ರಕಟಿಸಿತ್ತು. ಆದರೆ, ಈಗ  ವಾಹನದ ಉತ್ಪಾದನೆಯನ್ನು 2024 ರಲ್ಲಿಯೇ ಪ್ರಾರಂಭಿಸಿ 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿರುವ ಕಂಪನಿ ಅದೇ ವರ್ಷ ವಿತರಣೆಯನ್ನು ಕೂಡ ಆರಂಭಿಸಲಿದೆ. ಅಂತಿಮವಾಗಿ 2026 ಕ್ಕೆ, ಕಂಪನಿಯು ಹೊಸ ಸಮೂಹ-ಮಾರುಕಟ್ಟೆ ಕಾರನ್ನು ತರಲಿದೆ.

ಓಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ, 2024ರಲ್ಲಿ ಬರಲಿದೆ ಓಲಾ ಕಾರು!

ಇದುವರೆಗೆ ಓಲಾ ಇವಿ ತಯಾರಕ ಕಂಪನಿ ಎಸ್ 1 (S1) ಮತ್ತು  ಎಸ್ 1 ಪ್ರೊ (S1 Pro) ಅನ್ನು ಹೊಂದಿದ್ದು, ಈಗ S1 ಏರ್‌ನ ಉತ್ಪಾದನೆ ಮತ್ತು ವಿತರಣೆಯನ್ನು ಪ್ರಾರಂಭಿಸಲು ಈಗ ಸಜ್ಜಾಗಿದೆ. ಇದನ್ನು ವರ್ಷದ ಆರಂಭದಲ್ಲಿ ಪ್ರಾರಂಭಿಸಲಾಗಿತ್ತು. ಏಪ್ರಿಲ್ 2023 ರಲ್ಲಿ S1 ಏರ್ ವಿತರಣೆ ಆರಂಭಗೊಳ್ಳಲಿವೆ.

ಓಲಾ ಕಂಪನಿ ಹೊಸ ವರ್ಷದ ಅಂಗವಾಗಿ ಗ್ರಾಹಕರಿಗೆ ಚಟುವಟಿಕೆಗಳನ್ನು ನೀಡಿದ್ದು, MoveOS 3 ಪಾರ್ಟಿ ಮೋಡ್‌ನೊಂದಿಗೆ ತಮ್ಮ ಓಲಾ ಎಸ್ 1 (Ola S1) ನೊಂದಿಗೆ ವೀಡಿಯೊವನ್ನು ಕಳುಹಿಸುವ ಗ್ರಾಹಕರಿಗೆ Ola ಟಿ-ಶರ್ಟ್‌ನಂತಹ ಹೊಸ ವರ್ಷದ ಉಡುಗೊರೆಗಳನ್ನು ಘೋಷಿಸಿದೆ. ಹೆಚ್ಚುವರಿಯಾಗಿ, Ola ನ ಅಂತಿಮ ವೀಡಿಯೊ ಸಂಗ್ರಹಣೆಯಲ್ಲಿ ಉತ್ತಮ ವೀಡಿಯೊಗಳನ್ನು ಕೂಡ ಪ್ರದರ್ಶಿಸಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಭವೀಶ್ ಅಗರ್ವಾಲ್ ಓಲಾ ವಿಡಿಯೋ ಸಂಗ್ರಹವನ್ನು ಪ್ರಕಟಿಸಿದ್ದಾರೆ. 'ಇದು ಹೊಸ ವರ್ಷದ ಸಮಯ. MoveOS 3 ಪಾರ್ಟಿ ಮೋಡ್‌ನೊಂದಿಗೆ ಮೋಜು ಮಾಡುವ ನಮ್ಮ ಗ್ರಾಹಕರ ವೀಡಿಯೊ ಸಂಗ್ರಹವನ್ನು ಮಾಡಲು ನಾವು ಬಯಸುತ್ತೇವೆ! ಆದ್ದರಿಂದ ಪಾರ್ಟಿ ಮೋಡ್‌ನಲ್ಲಿ ನಿಮ್ಮ S1 ಜೊತೆಗೆ ನಿಮ್ಮ ವೀಡಿಯೊಗಳನ್ನು ಕಾಮೆಂಟ್‌ಗಳಲ್ಲಿ ಪೋಸ್ಟ್ ಮಾಡಿ. ನಾವು ಎಲ್ಲರಿಗೂ ಓಲಾ ಟಿ-ಶಾರ್ಟ್ ಅನ್ನು ಕಳುಹಿಸುತ್ತೇವೆ ಮತ್ತು ಅಂತಿಮ ಸಂಗ್ರಹದಲ್ಲಿ ಅತ್ಯುತ್ತಮ ವೀಡಿಯೊಗಳನ್ನು ಪ್ರದರ್ಶಿಸುತ್ತೇವೆ!' ಎಂದಿದ್ದಾರೆ.

ಸಿದ್ಧವಾಗುತ್ತಿದೆ ಓಲಾ ಎಲೆಕ್ಟ್ರಿಕ್ ಕಾರು: ವಿಡಿಯೋ ಟೀಸರ್ ಬಿಡುಗಡೆ

ಪ್ರಸ್ತುತ, ಓಲಾ ಎಲೆಕ್ಟ್ರಿಕ್ (Ola Electric) ಉತ್ಪನ್ನ ಶ್ರೇಣಿಯು ಇ-ಸ್ಕೂಟರ್‌ಗಳನ್ನು ಒಳಗೊಂಡಿದೆ. ಓಲಾ ಎಸ್ 1, ಎಸ್ 1 ಪ್ರೋ (Ola S1, Ola S1 Pro)  ಮತ್ತು ಕೈಗೆಟುಕುವ ಬೆಲೆಯ ಓಲಾ ಎಸ್1 ಏರ್ (Ola S1 Air) ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದರ MoveOS 3 ಪೇರೇಟಿಂಗ್ ಸಿಸ್ಟಮ್ ಓಲಾ ಸ್ಕೂಟರ್‌ಗಳಿಗೆ ಪ್ರಾಕ್ಸಿಮಿಟಿ ಅನ್‌ಲಾಕ್, ಫಾಸ್ಟ್ ಚಾರ್ಜಿಂಗ್, ಪಾರ್ಟಿ ಮೋಡ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಆರಂಭದಲ್ಲಿ ಭಾರಿ ನಿರೀಕ್ಷೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಓಲಾ ನಂತರ ತನ್ನ ವಾಹನದಲ್ಲಿನ ತಾಂತ್ರಿಕ ದೋಷಗಳ ಕಾರಣದಿಂದ ಹಲವು ಟೀಕೆಗಳಿಗೆ ಗುರಿಯಾಗಿತ್ತು. ಆದರೆ, ಈಗ ಮತ್ತೊಮ್ಮೆ ಓಲಾ ಹಲವು ಹೊಸ ಮಾದರಿಯ ವಾಹನಗಳೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಹೊಸ ಬೇಡಿಕೆಗಳನ್ನು ಸೃಷ್ಟಿಸಿದೆ.

Follow Us:
Download App:
  • android
  • ios