ಜೆಕೆ ಟೈರ್ ಸಹಯೋಗದಲ್ಲಿ  ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ರೇಸ್ 650 ಬೈಕ್‌ನ ರೇಸ್ ಬೈಕ್ ಪ್ರೇಮಿಗಳ ಸಂಬ್ರಮ ಡಬಲ್  ಬೆಂಗಳೂರಿನ ಅನೀಶ್ ದಾಮೋದರ ಶೆಟ್ಟಿ ಚಾಂಪಿಯನ್

ಬೆಂಗಳೂರು(ನ.30): ರಾಯಲ್ ಎನ್‌ಫೀಲ್ಡ್(Royal Enfield) ಮೊದಲಿನಿಂದಲೂ ಜಾಗತಿಕ ಮಟ್ಟದಲ್ಲಿ ರೇಸ್ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯ ಹೊಂದಿದೆ. ಇದೀಗ ಈ ವರ್ಷ ಜೆಕೆ ಟೈರ್ ಸಹಯೋಗದಲ್ಲಿ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ರೇಸ್ ಸ್ಪರ್ಧೆ(Royal Enfield Continental GT Cup) ಆಯೋಜಿಸಿದೆ. ಅನುಭವಸ್ಥ ರೇಸ್‌ಗಳು(Racer) ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ಜಿಟಿ ಆರ್ 650 ಬೈಕ್‌ನ ರೇಸ್ ಬೈಕ್ ಪ್ರೇಮಿಗಳಿಗೆ ಭಾರಿ ಖುಷಿಯನ್ನು ಒದಗಿಸಿದೆ.

ಈಗಾಗಲೇ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಸ್ಪರ್ಧೆಯ ಮೊದಲ ರೌಂಡು ಮುಗಿದಿದ್ದು, ಬೆಂಗಳೂರಿನ ಅನೀಶ್ ದಾಮೋದರ ಶೆಟ್ಟಿ(Anish Damodara Shetty, Bengaluru) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ವರ್ಷ ಫಿಟ್ಟೆಸ್ಟ್ ಮ್ಯಾನ್ ಇನ್ ಏಷ್ಯಾ ಪ್ರಶಸ್ತಿ ಪಡೆದಿರುವ ಸಾಫ್ಟ್‌ವೇರ್ ಇಂಜಿನಿಯರ್ ಅನೀಶ್ ಈ ಸ್ಪರ್ಧೆಯ ಕುರಿತು, ‘ರಾಯಲ್ ಎನ್‌ಫೀಲ್ಡ್ ಮತ್ತೆ ರೆಟ್ರೋ ರೇಸಿಂಗ್‌ಗೆ ಮರಳಿರುವುದು ಖುಷಿಯ ವಿಚಾರ. ರಾಯಲ್ ಎನ್‌ಫೀಲ್ಡ್ ನಮಗೆ ಬೈಕ್ ಕೊಟ್ಟು, ರೇಸ್ ಮಾಡುವ ಅವಕಾಶ ಕೊಟ್ಟಿದ್ದು ಎಲ್ಲಾ ರೇಸರ್‌ಗಳಿಗೂ ಪ್ರೋತ್ಸಾಹದಾಯಕವಾಗಿದೆ. ಇದೊಂದು ಅದ್ಭುತ ಅನುಭವ’ ಎನ್ನುತ್ತಾರೆ.

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

27 ವರ್ಷದ ಅನೀಶ್ ದಾಮೋದರ್ ಶೆಟ್ಟಿ ಹಾಗೂ ಅಲ್ವಿನ್ ಕ್ಸೇವಿಯರ್ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ಮೊದಲ ಸುತ್ತಿನಲ್ಲೇ ಪ್ರಾಬಲ್ಯ ಸಾಧಿಸಿದ ಅನೀಶ್ ದಾಮೋದರ್ ಶೆಟ್ಟಿ, ವಾರಾಂತ್ಯದ ಎರಡೂ ರೇಸ್‌ನಲ್ಲಿ ಅಲ್ವಿನ್ ವಿರುದ್ಧ ಗೆಲುವು ಸಾಧಿಸಿದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅನೀಶ್, ವೃತ್ತಿಪರ ರೇಸರ್ ಆಗಿ ಫಿಟ್ನೆಸ್ ಉತ್ಸಾಹಿಯಾಗಿದ್ದಾರೆ. ಅನೀಶ್ ದಾಮೋದರ್ ಮತ್ತೊಂದು ವಿಶೇಷತೆ ಎಂದರೆ ಕ್ರಾಸ್ ಕಂಟ್ರಿ ರೇಸ್ ಗೆದ್ದ ಸಾಧನೆ ಮಾಡಿದ್ದಾರೆ. ಇಷ್ಟೇ ಅಲ್ಲ ಸರ್ಕ್ಯೂಟ್ ರೇಸ್‌ನಲ್ಲಿ ಹಲವು ಚಾಂಪಿಯನ್‌ಶಿಪ್ ಕಿರೀಟ ಮುಡಿಗೇರಿಸಿದ್ದಾರೆ. 2021ರಲ್ಲಿ ಇಎಫ್ ಕೆಟಗೆರಿಯಲ್ಲಿ ನಡೆದ ಕ್ರಾಸ್‌ಫಿಟ್ ಗೇಮ್ಸ್‌ನಲ್ಲಿ ಏಷ್ಯಾದ ಫಿಟ್ಟೆಸ್ಟ್ ಮ್ಯಾನ್ ಪ್ರಶಸ್ತಿ ಗೆದ್ದಿದ್ದಾರೆ. 

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ರೇಸರ್ ಸೈಯದ್ ಮುಝಮ್ಮಿಲ್ ಆಲಿ(Syed Muzammil Ali) ಕೂಡ ಬೆಂಗಳೂರಿನವರು. ಶ್ರದ್ಧಾವಂತ ರೇಸರ್ ಆಗಿರುವ ಅವರು, ‘ಇಂಥದ್ದೊಂದು ಸ್ಪರ್ಧೆ ಆಯೋಜಿಸಿದ ರಾಯಲ್ ಎನ್‌ಫೀಲ್ಡ್‌ಗೆ ದೊಡ್ಡ ಧನ್ಯವಾದ. ಅ ಅವಕಾಶದಿಂದ ರೇಸರ್‌ಗಳಿಗೆ ಭಾರತದಲ್ಲಿ(India) ಮೋಟಾರ್‌ಸ್ಪೋರ್ಟ್ಸ್(Motor sports) ಕ್ಷೇತ್ರದಲ್ಲಿ ಹೆಚ್ಚು ಗುರುತಿಸುವಂತಾಗುತ್ತದೆ. ಬೈಕ್ ಕೂಡ ಅದ್ಭುತವಾಗಿದೆ’ ಎನ್ನುತ್ತಾರೆ.

ಹಳೇ ರೂಪ, ಹೊಸ ಶಕ್ತಿಯ ದೈತ್ಯ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650!

27ರ ಹರೆಯದ ಸೈಯದ್ ಮುಝಮ್ಮಿಲ್ ಆಲಿ, 2013ರಲ್ಲಿ ಸರ್ಕ್ಯೂಟ್ ರೇಸಿಂಗ್ ಪದವಿ ಪಡೆದಿದ್ದಾರೆ. 2017ರಲ್ಲಿ ಸರ್ಕ್ಯೂಟ್ ರೇಸಿಂಗ್ ಆರಂಭಿಸಿದ ಸೈಯದ್ ಅತ್ಯಲ್ಪ ಸಮಯದಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದಾರೆ. ಪ್ರಥಮ ವರ್ಷದ ಒನ್ ಮೇಕ್ ರೇಸಿಂಗ್‌ನಲ್ಲಿ 6ನೇ ಸ್ಥಾನ ಸಂಪಾದಿಸಿದ ಸೈಯದ್, 2018ರಲ್ಲಿ 2ನೇ ರನ್ನಪ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2019ರಲ್ಲಿ ಸುಜುಕಿ ಜಿಕ್ಸರ್ ಕಪ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡರು. ರೇಸಿಂಗ್ ನಡುವಿನ ಬಿಡುವಿನ ವೇಳೆಯಲ್ಲಿ ಸೈಯದ್ ಫುಟ್ಬಾಲ್ ಹಾಗೂ ಸೈಕ್ಲಿಂಗ್‌ ಮೂಲಕ ಹೆಚ್ಚಿನ ಸಮಯ ಕೆಳಯಲು ಇಷ್ಟಪಡುತ್ತಾರೆ. ಫಿನಾನ್ಶಿಯಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಸೈಯದ್, ಮೋಟಾರ್ ಸೈಕಲ್ ರೇಸಿಂಗ್ ಹೆಚ್ಚು ಇಷ್ಟಪಡುತ್ತಾರೆ. ಇನ್ನು ISBK ರೇಸಿಂಗ್‌ನಲ್ಲಿ ತರಬೇತುದಾರರಾಗಿಯೂ ಗಮನಸೆಳೆದಿದ್ದಾರೆ.

ಬೈಕ್ ರೇಸಿಂಗ್ ಅದರಲ್ಲೂ ಕಾಂಟಿನೆಂಟಲ್ GT-R 650 ಬೈಕ್ ಟ್ರೊ ಮೋಟಾರ್‌ಸೈಕಲ್ ರೇಸಿಂಗ್ ಸರಣಿಯಾಗಿದೆ. ಇದು ಟ್ರ್ಯಾಕ್ ರೇಸಿಂಗ್ ರೇಸರ್‍‌ಗಳಿಗೆ ಹೊಸ ಅನುಭವ ನೀಡುವುದಲ್ಲಿ ಯಾವುದೇ ಅನುಮಾನವಿಲ್ಲ. ಈ ವರ್ಷದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ರೇಸ್‍ನಲ್ಲಿ 18 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ರೇಸ್ ಸ್ಪರ್ಧೆ ಭಾರತದಲ್ಲಿನ ಭವಿಷ್ಯದ ರೇಸರ್‌ಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿದೆ. ಈ ಮೂಲಕ ಭಾರತದಲ್ಲಿ ಮೋಟಾರ್‌ಸ್ಪೋರ್ಟ್ಸ್ ಹೆಚ್ಚು ಜನಪ್ರಿಯವಾಗಲು ಹಾಗೂ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಲು ಕಾರಣವಾಗಿದೆ. ಭಾರತದ ಮೊದಲ ರೆಟ್ರೊ ರೇಸಿಂಗ್ ಸ್ವರೂಪ ರೇಸಿಂಗ್, ರೇಸರ್‌‌ಗಳಿಗೆ ಉತ್ತಮ ಅನುಭವ ನೀಡುತ್ತದೆ.