Royal Enfield Bike Price ಹೊಸ ವರ್ಷದಲ್ಲಿ ಬೈಕ್ ಪ್ರಿಯರಿಗೆ ಶಾಕ್, ಕ್ಲಾಸಿಕ್ 350, ಮೆಟಿಯೋರ್ ಬೆಲೆ ಹೆಚ್ಚಳ

  • ರಾಯಲ್‌ ಎನ್‌ಫೀಲ್ಡ್‌ನ ಮೂರು ಮಾದರಿಗಳ ದರ ಏರಿಕೆ
  • ಹಿಮಾಲಯನ್‌ ಶ್ರೇಣಿಯ ವಾಹನಗಳ ಮೇಲೆ 4000 ರೂ.ಗಳ ದರ ಹೆಚ್ಚಳ
  • ಉಳಿದ ಮಾದರಿಗಳ ದರ ಏರಿಕೆ ಇಲ್ಲ
Royal Enfield announces price hike in selected models in this new year 2022

ನವದೆಹಲಿ(ಜ.13); ಹೊಸ ವರ್ಷದ ಆರಂಭದಲ್ಲೇ ಎಲ್ಲಾ ವಾಹನ ತಯಾರಕರು ತಮ್ಮ ವಾಹನಗಳ ಬೆಲೆ ಏರಿಕೆ ಘೋಷಿಸಿದ್ದು, ಇದರಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿ  ರಾಯಲ್‌ ಎನ್‌ಫೀಲ್ಡ್‌  (Royal Enfield) ಕೂಡ ಹಿಂದೆ ಬಿದ್ದಿಲ್ಲ. ಇದರ ಅತಿ ಹೆಚ್ಚು ಬೇಡಿಕೆಯ ಹಾಗೂ 2021ರಲ್ಲಿ ಬಿಡುಗಡೆಗೊಂಡ ಮೂರು ಹೊಸ ಮಾದರಿಗಳ ಬೆಲೆಗಳನ್ನು ಏರಿಕೆ(Price Hike) ಮಾಡಿರುವುದಾಗಿ ಕಂಪನಿ ತಿಳಿಸಿದೆ.

ರಾಯಲ್‌ ಎನ್‌ಫೀಲ್ಡ್‌ ಭಾರತದಲ್ಲಿ ತನ್ನ ಮಾದರಿಗಳ ದರ ಏರಿಕೆ ಮಾಡಿದೆ. ಈ ದರ ಏರಿಕೆ 2022 ರ ಜನವರಿಯಿಂದ ಅನ್ವಯವಾಗಲಿದೆ. ಕಂಪನಿಯ ಕ್ಲಾಸಿಕ್‌ 350 (Classic 350), ಮೀಟಿಯೋರ್‌ 350 (Meteor 350) ಹಾಗೂ ಹಿಮಾಲಯನ್ (Himalayan) ಮೋಟಾರ್‌ ಸೈಕಲ್‌ಗಳ ದರ ಹೆಚ್ಚಳವಾಗಿದೆ.

Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

ಹಿಮಾಲಯ ಶ್ರೇಣಿಯ ಬೈಕ್‌ಗಳಲ್ಲಿ 4,000 ರೂ.ಗಳಿಗಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ.ರಾಯಲ್ ಎನ್‌ಫೀಲ್ಡ್ ಮೀಟಿಯರ್ 350 ಫೈರ್‌ಬಾಲ್ ಶ್ರೇಣಿಯ ಬೆಲೆಗಳನ್ನು 2,511 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಬೈಕ್‌ಗಳ ಬೆಲೆ ಈಗ  2.01 ಲಕ್ಷ ರೂ. ಶೋರೂಂ ದರಗಳಿಂದ ಪ್ರಾರಂಭವಾಗುತ್ತದೆ ಮತ್ತು  2.03 ಲಕ್ಷ ರೂ.ಗಳವರೆಗೆ ಇರುತ್ತದೆ.

ಮೀಟಿಯೋರ್‌ 350 ಶ್ರೇಣಿಯಲ್ಲಿನ ಸ್ಟೆಲ್ಲಾರ್ ಶ್ರೇಣಿಯ ಬೈಕ್‌ಗಳು ಪ್ರತಿ ವೇರಿಯಂಟ್‌ನಲ್ಲಿ 2.601 ರೂ. ಹೆಚ್ಚಳವಾಗಿದೆ. ಮೀಟಿಯೋರ್ 350 ನ ಸ್ಟೆಲ್ಲರ್ ಶ್ರೇಣಿಯ ಶೋರೂಂ ಬೆಲೆ ಈಗ 2.07 ಲಕ್ಷ ರೂ.ಗಳಿಂದ ಆರಂಭಗೊಂಡು, 2.09 ಲಕ್ಷ ರೂ.ಗಳವರೆಗೆ ಇದೆ.

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

ಮೀಟಿಯೋರ್‌ 350 ಶ್ರೇಣಿಯಲ್ಲಿನ ಟಾಪ್-ಸ್ಪೆಕ್ ಮಾಡೆಲ್ ಸೂಪರ್‌ ನೋವಾ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಪ್ರತಿ ವೇರಿಯಂಟ್‌ಗೆ  2,752 ರೂ. ಹೆಚ್ಚಳವಾಗಿದೆ. ಇದರಿಂದ ಈ ಶ್ರೇಣಿಯ ವಾಹನಗಳಬೆಲೆ ಈಗ 2.17 ಲಕ್ಷ ರೂ.ಗಳಿಂದ 2.19 ಲಕ್ಷ ರೂ.ಗಳಷ್ಟಿದೆ.

ಕ್ಲಾಸಿಕ್ 350 ಶ್ರೇಣಿಯ ಬೈಕ್‌ಗಳು ವೇರಿಯಂಟ್‌ಗಳ ಆಧಾರದ ಮೇಲೆ 2,872 ರೂ.ಇಂದ 3,332 ರೂ.ಗಳವರೆಗೆ ಬೆಲೆ ಏರಿಕೆಯಾಗಿದೆ. ಎಂಟ್ರಿ-ಲೆವೆಲ್ ರೆಡ್ಡಿಚ್ ಕ್ಲಾಸಿಕ್ 350 ಈಗ 1.87 ಲಕ್ಷ ರೂ. ಬೆಲೆ ಹೊಂದಿದ್ದು, ಟಾಪ್-ಸ್ಪೆಕ್ ಕ್ರೋಮ್ ಕ್ಲಾಸಿಕ್ 350 ಬೆಲೆ 2.18 ಲಕ್ಷ ರೂ.ಗಳ ದರ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಶ್ರೇಣಿಯ ಎಲ್ಲಾ ಬೈಕ್‌ಗಳಿಗೆ 4,000 ರೂ.ಗಳಷ್ಟು ಬೆಲೆ ಏರಿಕೆಯಾಗಿದ್ದು, ಸಿಲ್ವರ್ ಮತ್ತು ಬೂದು ಬಣ್ಣಗಳ ಹಿಮಾಲಯನ್ ಬೆಲೆ ಈಗ 2.14 ಲಕ್ಷ ರೂ.ಗಳಿಂದ ಆರಂಭವಾಗಲಿದೆ ಮತ್ತು ಕಪ್ಪು ಮತ್ತು ಹಸಿರು ಬಣ್ಣಗಳ ಹಿಮಾಲಯನ್ ಬೆಲೆ  2.22 ಲಕ್ಷ ರೂ.ಗಳಷ್ಟಿರಲಿದೆ.ಈ ಮೂರು ಶ್ರೇಣಿಯ ಮೋಟಾರ್‌ಸೈಕಲ್‌ಗಳ ಹೊರತಾಗಿ, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಬುಲೆಟ್ ನಂತರ ಮೂರು ಮಾದರಿಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಹಳೇ ರೂಪ, ಹೊಸ ಶಕ್ತಿಯ ದೈತ್ಯ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650!

2021ರ ಆರಂಭದಲ್ಲಿ ರಾಯಲ್‌ ಎನ್‌ಫೀಲ್ಡ್‌ ಮೀಟಿಯೋರ್ 350 ಅನ್ನು ಪರಿಚಯಿಸಿತ್ತು. ಇದು ಹಿಂದಿನ ವಾಹನಗಳಿಗೆ ಹೋಲಿಸಿದರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಾಹನವಾಗಿತ್ತು. ಹೊಸ ವಿನ್ಯಾಸದ ಜೊತೆಗೆ, ಡಿಜಿಟಲ್‌ ಅನಲಾಗ್‌ ಮೀಟರ್‌, ಟ್ರಿಪ್ಪಲ್‌ ನ್ಯಾವಿಗೇಟರ್‌ನಂತಹ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಲಾಗಿತ್ತು. ಇದರ ಬೆನ್ನಲ್ಲೇ 411 ಸಿಸಿ ಇಂಜಿನ್‌ನ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಮೋಟಾರ್‌ ಸೈಕಲ್‌ ಕೂಡ ಬಿಡುಗಡೆಯಾಗಿತ್ತು. ಇದು ಹಳೆಯ ಹಿಮಾಲಯನ್‌ನ ಹೊಸ ಆವೃತ್ತಿಯಾಗಿತ್ತು.

ನಂತರ, ಸುಮಾರು 11 ವರ್ಷಗಳ ನಂತರ ರಾಯಲ್‌ ಎನ್‌ಫೀಲ್ಡ್‌ ಹೊಚ್ಚ ಹೊಸ ಕ್ಲಾಸಿಕ್‌ 350 ಮೋಟಾರ್‌ಸೈಕಲ್‌ ಅನ್ನು ಕೂಡ ಬಿಡುಗಡೆಗೊಳಿಸಿತ್ತು. ಇದು ಹಳೆಯ ವಿನ್ಯಾಸವನ್ನೇ ಹೊಂದಿದ್ದರೂ, ಇದರಲ್ಲಿ ಮೀಟಿಯೋರ್‌ 350ಯಲ್ಲಿ ಇರುವಂತಹ ಎಲ್ಲಾ ಹೊಸ ಫೀಚರ್‌ಗಳನ್ನು ಅಳವಡಿಸಲಾಗಿತ್ತು. ಈಗ ಈ ಮೂರು ಮಾದರಿಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.

Latest Videos
Follow Us:
Download App:
  • android
  • ios