ಜಾಗತಿಕ ರೆಡ್ ಡಾಟ್ ಪ್ರಶಸ್ತಿ ಗೆದ್ದಿರುವ ಡುಕಾಟಿ ಮಾನ್‌ಸ್ಟರ್ ಬೈಕ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಪವರ್‌ಫುಲ್ ಎಂಜಿನ್, ಹೊಸ ಫೀಚರ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ. ಹೊಸ ಬೈಕ್ ಬೆಲೆ ಎಷ್ಟು?

ನವದೆಹಲಿ (ಆ.10) ಲಕ್ಷುರಿ ಬೈಕ್ ಡುಕಾಟಿ ಇದೀಗ ಭಾರತದಲ್ಲಿ ಮಾನ್‌ಸ್ಟರ್ ರೆಡ್ ಬೈಕ್ ಬಿಡುಗಡೆ ಮಾಡಿದೆ. ಐಕಾನಿಕ್ ಸ್ಪೋರ್ಟ್ಸ್ ಬೈಕ್ ಇದೀಗ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. 1992ರಲ್ಲಿ ಬಿಡುಗಡೆ ಮಾಡಿದ್ದ ಮಾನ್‌ಸ್ಟರ್ ಸಿರೀಸ್ ಇದೀಗ ಹೊಸ ರೂಪ, ಹೊಸ ಅವತಾರ, ಹೊಸ ತಂತ್ರಜ್ಞಾನ, ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ. ಜಾಗತಿಕ ಮಟ್ಟದ ಪ್ರತಿಷ್ಠಿತ ರೆಡ್ ಡಾಟ್ ಪ್ರಶಸ್ತಿ ಪಡೆದಿರುವ ಡುಕಾಟಿ ಮಾನ್‌ಸ್ಟರಿ ಬೈಕ್ ಅದ್ಧೂರಿಯಾಗಿ ಭಾರತದಲ್ಲಿ ಲಾಂಚ್ ಆಗಿದೆ.

ಹೊಸ ಬೈಕ್ ನಿರ್ವಹಣಾ ವೆಚ್ಚ ಕಡಿಮೆ

ಹೊಸ ಡುಕಟಿ ಮಾನ್‌ಸ್ಟರ್ ಬೈಕ್‌ನಲ್ಲಿV2 ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಐವಿಟಿ (IVT) ವಿತರಣಾ ತಂತ್ರಜ್ಞಾನವನ್ನು ಹೊಂದಿದೆ. 9,000 rpm ನಲ್ಲಿ 111 ಹಾರ್ಸ್‌ಪವರ್ (HP) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ಹೊಸ ಡುಕಾಟ್ ಮಾನ್‌ಸ್ಟರ್ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಬೋರ್ಗೊ ಪಾನಿಗಾಲೆ ಫ್ಯಾಕ್ಟರಿಯ ಕ್ಲಾಸಿಕ್ ವಿನ್ಯಾಸ ಉಳಿಸಿಕೊಂಡು ಆಧುನಿಕ ಸ್ಪರ್ಶ ನೀಡಲಾಗಿದೆ. ಮಾನ್‌ಸ್ಟರ್‌ನ ಸಿಗ್ನೇಚರ್ 'ಬೈಸನ್-ಬ್ಯಾಕ್' ಇಂಧನ ಟ್ಯಾಂಕ್ ಮುಸ್ಕ್ಯುಲರ್ ಆಗಿ ರೂಪಿಸಲಾಗಿದೆ.

ನಾಲ್ಕು ರೈಡ್ ಮೊಡ್

43 mm ಅಪ್‌ಸೈಡ್-ಡೌನ್ ಫೋರ್ಕ್, ಬ್ರೆಂಬೋ (Brembo) M4.32 ರೇಡಿಯಲ್ ಕ್ಯಾಲಿಪರ್ ಬ್ರೇಕಿಂಗ್ ಹಾಗೂ ಪಿರೆಲ್ಲಿ ಡಯಾಬ್ಲೊ ರೊಸ್ಸೊ IV ಟೈರ್‌ಗಳನ್ನು ನೀಡಲಾಗಿದೆ. ಸ್ಪೋರ್ಟ್, ರೋಡ್ ಮತ್ತು ಅರ್ಬನ್ ಸೇರಿದಂತೆ ಒಟ್ಟು 4 ರೈಡಿಂಗ್ ಮೋಡ್‌ಗಳಿವೆ. 6-ಆಕ್ಸಿಸ್ IMU ಆಧಾರಿತ ಡುಕಟಿ ಟ್ರ್ಯಾಕ್ಷನ್ ಕಂಟ್ರೋಲ್ (DTC), ವೀಲಿ ಕಂಟ್ರೋಲ್ (DWC), ಇಂಜಿನ್ ಬ್ರೇಕ್ ಕಂಟ್ರೋಲ್ (EBC) ಹಾಗೂ ಕಾರ್ನರಿಂಗ್ ಎಬಿಎಸ್ (Cornering ABS) ತಂತ್ರಜ್ಞಾನಗಳಿವೆ.

ನ್ಯಾವಿಗೇಶನ್ ಸಪೋರ್ಟ್ ಮಾಡುವ ನೂತನ 5 ಇಂಚಿನ ಬಣ್ಣದ ಟಿಎಫ್‌ಟಿ ಡ್ಯಾಶ್‌ಬೋರ್ಡ್ ನೀಡಲಾಗಿದೆ. ವಿಶೇಷ ಅಂದರೆ ನಿರ್ವಹಣಾ ಆಫರ್ ಮೂಲಕ ಕಡಿಮೆ ಬೆಲೆಯಲ್ಲಿ ಮೆಂಟೇನ್ಸ್ ಮಾಡಬಹುದು.

ಡುಕಟಿ ಪ್ರೊಟೆಕ್ಟ್ (+): ₹30,999 (2 ವರ್ಷ ಅಥವಾ 15,000 ಕಿ.ಮೀ ವರೆಗೆ ಕವರ್).

ಡುಕಟಿ ಪ್ರೊಟೆಕ್ಟ್ (ಪ್ರೊ): ₹54,999 (4 ವರ್ಷ ಅಥವಾ 30,000 ಕಿ.ಮೀ ವರೆಗೆ ಕವರ್).

ಡುಕಾಟಿ ಮಾನ್‌ಸ್ಟರ್

  • ರೆಡ್: 13,99,000 ರೂಪಾಯಿ
  • ವೈಟ್: 14,23,000ರೂಪಾಯಿ
  • ಸ್ಪೋರ್ಟ್ಸ್ ಲೈವರಿ :14,23,000ರೂಪಾಯಿ

ಡುಕಾಟಿ ಮಾನ್‌ಸ್ಟರ್ ಪ್ಲಸ್

  • ರೆಡ್: 14,34,000 ರೂಪಾಯಿ
  • ಐಸ್‌ಬರ್ಗ್: 14,45,000 ರೂಪಾಯಿ
  • ಸ್ಪೋರ್ಟ್ಸ್ ಲೈವರಿ : 14,45,000 ರೂಪಾಯಿ