ಧೂಳೆಬ್ಬಿಸಲು ಬರ್ತಿದೆ ರಾಜ್ದೂತ್, ಪ್ರೇಮಕಥೆ ಹೆಣೆಯಲು ಲವ್ವರ್ಸ್ ರೆಡಿ
ಬೈಕ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಬುಲೆಟ್ ಗೆ ಟಕ್ಕರ್ ನೀಡಲು ರಾಜ್ದೂತ್ ಬರ್ತಿದೆ. ಆರಾಮದಾಯಕ ಪ್ರಯಾಣಕ್ಕೆ ಹೆಸರಾಗಿರುವ ರಾಜ್ದೂತ್ ಇದೇ ವರ್ಷಾಂತ್ಯದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಭಾರತದ ರಸ್ತೆಯಲ್ಲಿ ಅದೆಷ್ಟೋ ಪ್ರೇಮ ಕಥೆ ಸೃಷ್ಟಿಸಿದ್ದ ರಾಜ್ ದೂತ್ (RajDoot) ಮತ್ತೆ ಧೂಳೆಬ್ಬಿಸಲು ಬರ್ತಿದೆ. ಯುವ ಬೈಕ್ ಪ್ರೇಮಿ (bike lover)ಗಳ ಡಿಮಾಂಡ್ ತಿಳಿದ್ಕೊಂಡು, ಅದಕ್ಕೆ ತಕ್ಕಂತೆ ರಾಜ್ದೂತ್ 370 ಬೈಕನ್ನು ವಿನ್ಯಾಸಗೊಳಿಸಲಾಗಿದೆ. ಇದೇ ವರ್ಷದ ಕೊನೆಯಲ್ಲಿ ಭಾರತದ ಮಾರುಕಟ್ಟೆಗೆ ರಾಜ್ ದೂತ್ ಲಗ್ಗೆ ಇಡುವ ಸಾಧ್ಯತೆಯಿದ್ದು, ಈಗಾಗಲೇ ಬೈಕ್ ಪ್ರೇಮಿಗಳಿಗೆ ಹತ್ತಿರವಾಗಿರುವ ಬುಲೆಟ್ ಗೆ ಇದು ಟಕ್ಕರ್ ನೀಡಲಿದೆ.
80-90ರ ದಶಕದಲ್ಲಿ ರಸ್ತೆ ಮೇಲೆ ದರ್ಬಾರ್ ಮಾಡಿದ್ದ ರಾಜ್‌ದೂತ್, ಎಷ್ಟು ಪ್ರಸಿದ್ಧಿ ಪಡೆದಿತ್ತು ಅಂದ್ರೆ, ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರಿಂದ ಹಿಡಿದು, ವರದಕ್ಷಿಣೆಗೆ ಇದೇ ಬೈಕ್ ಗೆ ಬೇಡಿಕೆ ಇತ್ತು. ಸ್ವಲ್ಪ ವರ್ಷ ಕಾಣೆಯಾಗಿದ್ದ ರಾಜ್ ದೂತ್ ಬೈಕ್ ಹೊಸ ಅವತಾರದಲ್ಲಿ ರಾಜ್ಯಭಾರ ಮಾಡಲು ಮತ್ತೆ ಬರ್ತಿದೆ. ಈ ಬಾರಿ ಬೈಕ್ ಸಾಕಷ್ಟು ವಿಶಿಷ್ಟತೆಯೊಂದಿಗೆ ಬೈಕ್ ಪ್ರೇಮಿಗಳಿಗೆ ಸಿಗಲಿದೆ. ತಂತ್ರಜ್ಞಾನ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರಲಿದೆ.
ರಾಜ್‌ದೂತ್ 350 ನ ವೈಶಿಷ್ಟ್ಯಗಳು : ಇತ್ತೀಚಿನ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ರಾಜ್‌ದೂತ್ 350 ಗೆ ಸೇರಿಸಲಾಗುತ್ತಿದೆ. ಇದು ಈ ಬೈಕನ್ನು ಸಾಕಷ್ಟು ಆಧುನಿಕ ಮತ್ತು ಸುಧಾರಿತಗೊಳಿಸಲಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಸ್ಪೀಡೋಮೀಟರ್, ಟ್ರಿಪ್ ಮೀಟರ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದರೊಂದಿಗೆ ಹೆಡ್‌ಲೈಟ್, ಟೈಲ್ ಲೈಟ್, ಸ್ಟ್ಯಾಂಡ್ ಅಲಾರಾಂ ಮತ್ತು ಗಡಿಯಾರವನ್ನು ಸಹ ಸೇರಿಸಲಾಗುವುದು.
ಮಳೆಗಾಲದಲ್ಲಿ ನಿಮ್ಮ ಬೈಕ್-ಸ್ಕೂಟರ್‌ಗಳನ್ನು ರಕ್ಷಣೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್
ಸುರಕ್ಷತೆಯ ವಿಚಾರದಲ್ಲೂ ಈ ಬೈಕ್ ಹಿಂದೆ ಬೀಳೋದಿಲ್ಲ. ಇದರ ಉದ್ದ ಮತ್ತು ಆರಾಮದಾಯಕ ಸೀಟ್. ದೂರದ ಪ್ರಯಾಣಕ್ಕೂ ಆರಾಮದಾಯಕ ಆಯ್ಕೆಯಾಗಿದೆ. ರಾಜ್‌ದೂತ್ 350, 350cc ಎಂಜಿನ್ ಹೊಂದಿದೆ. ಇದು 12.04 bhp ಮತ್ತು 9nm ಟಾರ್ಕ್ ಉತ್ಪಾದಿಸಲಿದೆ. ಈ ಬೈಕ್ ಗಂಟೆಗೆ 110 ಕಿಮೀ ವೇಗದಲ್ಲಿ ಸಂಚರಿಸಲಿದೆ. ಮೈಲೇಜ್ ವಿಷ್ಯಕ್ಕೆ ಬರೋದಾದ್ರೆ 62 ಕಿಲೋಮೀಟರ್ ಪರ್ ಲೀಟರ್ ನೀಡಲಿದೆ. ಶಕ್ತಿಗೆ ಮಾತ್ರವಲ್ಲ ಹಣಕಾಸಿನ ವಿಷ್ಯದಲ್ಲಿ ನೋಡಿದ್ರು ಇದು ದಿ ಬೆಸ್ಟ್ ಎನ್ನಬಹುದು.
ರಾಜ್ ದೂತ್ ಹೊಸ ಮಾಡೆಲ್ ಇನ್ನೂ ಭಾರತಕ್ಕೆ ಬಂದಿಲ್ಲ. ಇದೇ ವರ್ಷದ ಕೊನೆಯಲ್ಲಿ ಭಾರತೀಯರ ಕೈಗೆ ಬೈಕ್ ಸಿಗಬಹುದು ಎಂದು ಅಂದಾಜಿಸಲಾಗಿದೆ. ರಾಜ್‌ದೂತ್ 350 ಅನ್ನು ಖರೀದಿಸುವ ಪ್ಲಾನ್ ಮಾಡಿದ್ರೆ ಅದ್ರ ಬೆಲೆ ತಿಳಿದುಕೊಳ್ಳಿ. ಕಂಪನಿ ಇನ್ನೂ ಅಧಿಕೃತವಾಗಿ ಬೆಲೆ ಘೋಷಣೆ ಮಾಡಿಲ್ಲ. ಒಂದು ಅಂದಾಜಿನ ಪ್ರಕಾರ, 1.5 ಲಕ್ಷದಿಂದ 2.21 ಲಕ್ಷ ರೂಪಾಯಿಗೆ ಬೈಕ್ ಸಿಗಲಿದೆ. ವಿವಿಧ ನಗರಗಳು ಮತ್ತು ಶೋರೂಂಗಳಲ್ಲಿ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆ ಆಗ್ಬಹುದು.
ಕನ್ನಡಿಗನ ಬಳಿ ಇದೆ 10.5 ಕೋಟಿ ರೂ ಫೆರಾರಿ ಪುರುಸಾಂಗ್ವೆ, ಈ ಕಾರು ಖರೀದಿಸಿದ ಮೊದಲ
ರಾಜ್ ದೂತ್ ಬೈಕ್ ಇತಿಹಾಸ : 1970ರ ವೇಳೆ ಭಾರತದಲ್ಲಿ ಮೊದಲ ರಾಜ್ದೂತ್ ಬೈಕ್ ಬಿಡುಗಡೆಯಾಗಿತ್ತು. ಆದ್ರೆ ಆರಂಭದಲ್ಲಿ ಬೈಕ್ 173CC, 2 ಸ್ಟ್ರೋಕ್ ಎಂಜಿನ್, ಕಡಿಮೆ ಪವರ್ ಬೈಕ್ ಗೆ ಬೇಡಿಕೆ ಕಡಿಮೆ ಇತ್ತು. ಕೇವಲ 7.5 bhp ಪವರ್ ಹಾಗೂ 12.7 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದ್ದ ರಾಜ್ದೂತ್ ಪ್ರಸಿದ್ಧಿಗೆ ಬಂದಿದ್ದು ಬಾಬಿ ಚಿತ್ರದ ನಂತ್ರ. ರಿಶಿ ಕಪೂರ್ ನಾಯಕರಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟ ಈ ಚಿತ್ರದಲ್ಲಿ ರಿಶಿ ರಾಜ್ ದೂತ್ ಮೇಲೆ ಕಾಣಿಸಿಕೊಂಡಿದ್ದರು. ಇದು ಯುವಕನ್ನು ಸೆಳೆಯಲು ಯಶಸ್ವಿಯಾಗಿತ್ತು. ನಷ್ಟದಲ್ಲಿದ್ದ ರಾಜ್ದೂತ್ GTS 175 ಬೈಕ್ ಯುವಕರ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿತು. ಹೆಚ್ಚು ಬೇಡಿಕೆ ಬರ್ತಿದ್ದಂತೆ ಬೈಕ್ ವಿನ್ಯಾಸ ಬದಲಿಸಲಾಗಿತ್ತು. ಆದ್ರೆ 1990 ರ ಹೊತ್ತಿಗೆ ಕಂಪನಿಯ ಮಾರಾಟ ಕುಸಿಯಲು ಪ್ರಾರಂಭಿಸಿತು. ಬೇರೆ ಕಂಪನಿಗಳ ಸ್ಪರ್ಧೆ, ಸುರಕ್ಷತೆ ಫೀಚರ್ ಕೊರತೆ ಹಾಗೂ ಬೈಕ್ ಬಿಡಿಭಾಗಗಳ ಕೊರತೆಯಿಂದಾಗಿ 1991ರಲ್ಲಿ ಕಂಪನಿ ತನ್ನ ಉತ್ಪಾದನೆಯನ್ನು ನಿಲ್ಲಿಸಿತ್ತು.