Electric Charging Station ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಎಲೆಕ್ಟಿಕ್ ವಾಹನ ಚಾರ್ಚಿಂಗ್ ಸ್ಟೇಷನ್ ಡಬಲ್!

*ಚಾರ್ಜಿಂಗ್‌ ಸ್ಟೇಷನ್‌ ಹೆಚ್ಚಳಕ್ಕೆ ಸರ್ಕಾರದಿಂದ ಅಗತ್ಯ ಕ್ರಮ

*ಬೆಂಗಳೂರು ಸೇರಿ 9 ನಗರಗಳಲ್ಲಿ ಹಲವು ಚಾರ್ಜಿಂಗ್‌ ಸ್ಟೇಷನ್‌ಗಳ ಅಳವಡಿಕೆ

* ವಿದ್ಯುತ್‌ ಸಚಿವಾಲಯದ ಮಾಹಿತಿ

Public Electric Vehicle Charging Station increase 2 5 times in 9 indian cities include Bengaluru

ನವದೆಹಲಿ(ಫೆ.20); ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಜನರು ನಿಧಾನವಾಗಿ ದ್ವಿಚಕ್ರ ವಾಹನಗಳಷ್ಟೇ ಅಲ್ಲದೆ, ಕಾರು, ಆಟೋ ಸೇರಿದಂತೆ ಇತರ ಉದ್ದೇಶದ ವಾಹನಗಳಲ್ಲಿಯೂ ಎಲೆಕ್ಟ್ರಿಕ್‌ ವಾಹನದ ಆಯ್ಕೆ ಹುಡುಕಲಾರಂಭಿಸಿದ್ದಾರೆ. ಆದರೆ, ಇದೆಲ್ಲದರ ನಡುವೆಯೂ, ಈ ವಾಹನಗಳ ಚಾರ್ಜಿಂಗ್‌ ಸಮಸ್ಯೆಗೆ ಮಾತ್ರ ಇನ್ನೂ ಸೂಕ್ತ ಪರಿಹಾರ ಕಂಡುಹಿಡಿಯಲಾಗಿಲ್ಲ. ಆದರೆ, ದೇಶದ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡಂತೆ, ಆಟೊಮೊಬೈಲ್‌ ವಲಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಕೂಡ ಬೆಳೆಯುತ್ತಲೇ ಇದೆ. ಕಳೆದ ನಾಲ್ಕು ತಿಂಗಳಲ್ಲಿ ಒಂಬತ್ತು ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್ಗಳ ಸಂಖ್ಯೆ 2.5 ಪಟ್ಟು ಹೆಚ್ಚಾಗಿದೆ ಎಂದು ವಿದ್ಯುತ್ ಸಚಿವಾಲಯ ಬಹಿರಂಗಪಡಿಸಿದೆ.

ಈ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಸೂರತ್, ಪುಣೆ, ಅಹಮದಾಬಾದ್, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿವೆ.
ಭಾರತವು ಪ್ರಸ್ತುತ ಸುಮಾರು 1,640 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ, ಅವುಗಳಲ್ಲಿ 940 EV ಚಾರ್ಜಿಂಗ್ ಕೇಂದ್ರಗಳು ಈ ನಗರಗಳಲ್ಲಿಯೇ ವ್ಯಾಪಿಸಿದೆ. ವಿದ್ಯುತ್ ಸಚಿವಾಲಯದ ಪ್ರಕಾರ, ಸರ್ಕಾರ ಈ ಒಂಬತ್ತು ನಗರಗಳಲ್ಲಿ 2021 ಅಕ್ಟೋಬರ್ ಮತ್ತು 2022ರ ಜನವರಿ ನಡುವೆ 678 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ ಕೇಂದ್ರಗಳನ್ನು ಸೇರಿಸಿದೆ.

EV Charge Station ಅತೀ ದೊಡ್ಡ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಆರಂಭ, ಏಕಕಾಲಕ್ಕೆ 1,00 ವಾಹನ ಚಾರ್ಜ್!

ವಿದ್ಯುತ್ ಸಚಿವಾಲಯ 2022ರ ಜನವರಿ 14 ರಂದು EV ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಪರಿಷ್ಕೃತ ಏಕೀಕೃತ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಬಿಡುಗಡೆ ಮಾಡಿತ್ತು.  ಅದರ ಪ್ರಕಾಋ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಕೇಂದ್ರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವಾಲಯ ಹೇಳಿದೆ. ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಗಣನೀಯ ವಿಸ್ತರಣೆಯೊಂದಿಗೆ,  ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಾರಂಭಿಸಿವೆ ಎಂದು ಅದು ಹೇಳಿದೆ.

ಬಿಇಇ (BEE), ಇಇಎಸ್ಎಲ್ ( EESL),  ಪಿಜಿಸಿಐಎಲ್ (PGCIL), ಎನ್ಟಿಪಿಸಿ (NTPC) ಮುಂತಾದ  ಖಾಸಗಿ ಮತ್ತು ಸಾರ್ವಜನಿಕ ಏಜೆನ್ಸಿಗಳನ್ನು ಒಳಗೊಳ್ಳುವ ಮೂಲಕ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸಲು ಕೇಂದ್ರವು  ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆ. ಅನೇಕ ಖಾಸಗಿ ಸಂಸ್ಥೆಗಳು ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಮುಂದೆ ಬಂದಿವೆ ಎಂದು ಸಚಿವಾಲಯ ಹೇಳಿದೆ

EV Charging at Home: ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

ಮುಂದಿನ ದಿನಗಳಲ್ಲಿ, ಕೇಂದ್ರವು ಹಂತ ಹಂತವಾಗಿ ಇತರ ನಗರಗಳಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂನಂತಹ ತೈಲ ಮಾರುಕಟ್ಟೆ ಕಂಪನಿಗಳು ನಗರಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 22,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿವೆ. ಐಓಸಿ (IOC) 10,000 EV ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಬಿಪಿಸಿಎಲ್ (BPCL) ಇನ್ನೂ 7,000 EV ಚಾರ್ಜರ್ಗಳು ಹಾಗೂ ಉಳಿದ 5,000 ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸ್ಥಾಪಿಸುತ್ತದೆ.

ಐಓಸಿಎಲ್ (IOCL) ಈಗಾಗಲೇ 439 EV ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ ಮತ್ತು ಮುಂದಿನ ವರ್ಷದಲ್ಲಿ 2,000 ಹೆಚ್ಚು ಸ್ಥಾಪಿಸಲು ಯೋಜಿಸಿದೆ. ಬಿಪಿಸಿಎಲ್ 52 ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದ್ದರೆ, ಎಚ್ಪಿಸಿಎಲ್ (HPCL) ಇದುವರೆಗೆ 382 ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ ಭಾರೀ ಕೈಗಾರಿಕೆ ಇಲಾಖೆಯು ಇತ್ತೀಚೆಗೆ 25 ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಿಗಾಗಿ 1,576 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಿದೆ. ಇದು ಈ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಪ್ರತಿ 25 ಕಿಮೀ ವ್ಯಾಪ್ತಿಯಲ್ಲಿರುತ್ತದೆ.
 

Latest Videos
Follow Us:
Download App:
  • android
  • ios