●    S1 Pro ಮೇಲೆ ₹20,000 ರಿಯಾಯಿತಿ  ●    ಹಣಕಾಸು ಕೊಡುಗೆಗಳು, ಸಾಫ್ಟ್‌ವೇರ್‌ ನವೀಕರಣ, ಚಾರ್ಜಿಂಗ್ ಕ್ರೆಡಿಟ್‌ಗಳು ಹಾಗೂ ಇನ್ನೂ ಅನೇಕ ಡೀಲ್‌ಗಳು ಒಳಗೊಂಡಂತೆ ₹25,000ದವರೆಗಿನ ವಿಶೇಷ ಡೀಲ್‌ಗಳ ಅನಾವರಣ  

ಬೆಂಗಳೂರು (ಅ.17): ಭಾರತದ ಅತಿದೊಡ್ಡ ಪರಿಶುದ್ಧ ಇವಿ ತಯಾರಿಕಾ ಸಂಸ್ಥೆಯಾದ ಓಲಾ ಎಲೆಕ್ಟ್ರಿಕ್, ಹಬ್ಬದ ಋತುವಿಗಾಗಿ ಸದ್ಯ ನಡೆಯುತ್ತಿರುವ ತನ್ನ ಬಿಗೆಸ್ಟ್ ಓಲಾ ಸೀಸನ್ ಸೇಲ್ಸ್(Biggest Ola Season Sale) ಭಾಗವಾಗಿ, ಹೊಸ ‘BOSS’ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕರು, S1 ಪೋರ್ಟ್ಫೋಲಿಯೋ ಮೇಲೆ ₹20,000 ದವರೆಗೆ ರಿಯಾಯಿತಿಗಳು ಮತ್ತು ಸ್ಕೂಟರುಗಳ ಮೇಲೆ  ₹25,000ದವರೆಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾದ್ದರಿಂದ, ಇದು ಇವಿಗೆ ಬದಲಾಗಲು ಅತ್ಯುತ್ತಮ ಸಮಯವಾಗಿದೆ. 

‘BOSS’ ಪ್ರಚಾರದಡಿ, ಸಂಸ್ಥೆಯು ಕೆಳಕಂಡ ಪ್ರಯೋಜನಗಳನ್ನು ಒದಗಿಸಲಿದೆ:
●    BOSS ದರಗಳು:
ಕೇವಲ₹74,999ದಿಂದ ಆರಂಭವಾಗುವ ಓಲಾ S1 ಪೋರ್ಟ್ಫೋಲಿಯೋ 
●    BOSS ರಿಯಾಯಿತಿಗಳು : ಇಡೀ S1 ಪೋರ್ಟ್ಫೋಲಿಯೋ  ಮೇಲೆ ₹20,000ವರೆಗೆ ರಿಯಾಯಿತಿ 
●    ₹25,000ದವರೆಗೆ ಹೆಚ್ಚುವರಿ BOSS ಪ್ರಯೋಜನಗಳು :

  1. BOSS ವಾರಂಟಿ: ₹7,000 ಮೌಲ್ಯದ ಉಚಿತ  8-ವರ್ಷ/80,000 ಕಿ.ಮೀ ಬ್ಯಾಟರಿ ವಾರಂಟಿ 
  2. BOSS ಹಣಕಾಸು ಕೊಡುಗೆಗಳು: ಆಯ್ದ ಕ್ರೆಡಿಟ್ ಕಾರ್ಡ್ ಇಎಮ್ಐಗಳ ಮೇಲೆ ₹5,000 ದವರೆಗೆ ಹಣಕಾಸು ಕೊಡುಗೆಗಳು
  3. BOSS ಪ್ರಯೋಜನಗಳು: ₹6,000 ಮೌಲ್ಯದ ಉಚಿತ MoveOS+ ನವೀಕರಣ; ₹7,000 ದವರೆಗೆ ಮೌಲ್ಯವಿರುವ ಉಚಿತ ಚಾರ್ಜಿಂಗ್ ಕ್ರೆಡಿಟ್ಗಳು 

ವಿಭಿನ್ನ ಶ್ರೇಣಿಯ ಅಗತ್ಯತೆಗಳನ್ನು ಹೊಂದಿದ ಗ್ರಾಹಕರಿಗಾಗಿ  Ola  ಎಲೆಕ್ಟ್ರಿಕ್ ಆಕರ್ಷಕ ಬೆಲೆಯಲ್ಲಿ ಆರು ಕೊಡುಗೆಗಳೊಂದಿಗೆ ವಿಸ್ತಾರವಾದ S1 ಪೋರ್ಟ್ಫೋಲಿಯೊವನ್ನು ನೀಡುತ್ತದೆ. ಪ್ರೀಮಿಯಂ ಕೊಡುಗೆಗಳಾದ S1 Pro ಮತ್ತು S1 Air  ಗಳ ಬೆಲೆಗಳು ಕ್ರಮವಾಗಿ ₹1,34,999 ಮತ್ತು ₹1,07,499 ಆಗಿದ್ದರೆ, ಸಾಮೂಹಿಕ ಮಾರುಕಟ್ಟೆ ಕೊಡುಗೆಗಳಲ್ಲಿ S1 X ಪೋರ್ಟ್ಫೋಲಿಯೊ (2 kWh, 3 kWh, ಮತ್ತು 4 kWh) ನ ಬೆಲೆಗಳು  ಕ್ರಮವಾಗಿ ₹74,999, ₹87,999 , ಮತ್ತು ₹101,999 ದಷ್ಟಿದೆ.