ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!
ಎಲೆಕ್ಟ್ರಿಕ್ ಸ್ಕೂಟರ್‌ಗಳು ದುಬಾರಿ ಎಂಬ ಕಾರಣಕ್ಕೆ ಗ್ರಾಹಕರು ಅವುಗಳ ಖರೀದಿಗೆ ಮುಂದಾಗುತ್ತಿರಲಿಲ್ಲ. ಆದರೆ, ಕೇಂದ್ರ ಸರಕಾರ ನಿರ್ಧಾರದ ಕ್ರಮದಿಂದಾಗಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಇಳಿಕೆಯಾಗುತ್ತಿದೆ. ಒಕಿನಾವಾ ಕಂಪನಿ ಕೂಡ ತನ್ನ ಸ್ಕೂಟರ್‌ಗಳ ಬೆಲೆಯಲ್ಲಿ 17,800 ರೂ.ವರೆಗೂ ಕಡಿತ ಮಾಡಿದೆ.
ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ನಿಧಾನವಾಗಿ ತಳವೂರುತ್ತಿರುವ ಜಪಾನ್ ಮೂಲದ ಒಕಿನಾವಾ ಆಟೋ ಟೆಕ್ ಕಂಪನಿಯು, ತನ್ನ ಎಲ್ಲ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ತಗ್ಗಿಸಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಫೇಮ್ II(ಎಫ್ಎಎಂಇ II) ಪರಿಷ್ಕರಣೆ ಮಾಡಿದ ಫಲವಾಗಿ ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ, ಈಗ ಖರೀದಿಸಲು ಸೂಕ್ತ ಸಮಯವಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿಸಬೇಕಾ? ಈ ಸಂಗತಿಗಳ ಬಗ್ಗೆ ತಿಳಿದಿರಿ
15000kWh ವ್ಯಾಪ್ತಿಯ ಸ್ಕೂಟರ್‌ಗಳಿಗೆ ನೀಡಲಾಗುತ್ತಿರುವ ಸಂಪೂರ್ಣ ಸಬ್ಸಿಡಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದೆ ಒಕಿನಾವಾ ಕಂಪನಿ. ಬೇಸ್ಡ್ ಮಾಡೆಲ್‌ನ ಸ್ಕೂಟರ್‌ಗಳ ಬೆಲೆಯಲ್ಲಿ 7200 ರೂ.ನಿಂದ 17,800 ರೂ.ವರೆಗೂ ಕಡಿತ ಮಾಡಲಾಗಿದೆ. ದರ ಕಡಿತವು ಜೂನ್ 11ರಿಂದಲೇ ಅನ್ವಯವಾಗಲಿದೆ. ಭಾರತದಲ್ಲೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ದ್ವಿಚಕ್ರವಾಹನ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ.
ಭಾರತದಲ್ಲಿ ಒಕಿನಾವಾ ಮಾರಾಟ ಮಾಡುವ ಬ್ರ್ಯಾಂಡ್‌ಗಳ ಪೈಕಿ iPraise+ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಎನಿಸಿಕೊಂಡಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಈ ಸ್ಕೂಟರ್ ಮಾರಾಟದಲ್ಲಿ ಮೂರು ಪಟ್ಟು ಹೆಚ್ಚಾಗಿರುವುದನ್ನು ಕಂಪನಿ ಗಮನಿಸಿದೆ. ಐಒಟಿ(ಇಂಟರ್ನೆಟ್ ಆಫ್ ಥಿಂಗ್ಸ್) ಆಧರಿತ ಮೊಬೈಲ್ ಅಪ್ಲಿಕೇಷನ್‌ನೊಂದಿಗೆ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬರುತ್ತದೆ. ಈ ಆಪ್‌ಗೆ ಒಕಿನಾವಾ ಇಕೋ ಆಪ್ ಎಂದು ಕರೆಯಲಾಗುತ್ತದೆ.
ಈ ಆಪ್ ಬಳಸಿಕೊಂಡು ಬಳಕೆದಾರರು, ತಲುಪಬೇಕಾದ ಗಮ್ಯದ ದಿಕ್ಕುಗಳ ನಿರ್ದೇಶನಗಳನ್ನು ಪಡೆದುಕೊಳ್ಳಬಹುದು. ಕೆಲವು ತುರ್ತು ಸಂಪರ್ಕ ಸಂಖ್ಯೆಗಳನ್ನು ಈ ಆಪ್‌ಗೆ ಸೇರಿಸಬಹುದಾಗಿದೆ. ಈ iPraise+ ಸ್ಕೂಟರ್ ಇನ್ನೂ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಸ್ಕೂಟರ್‌ನಲ್ಲಿ ಬೇರ್ಪಡಿಸಬಹುದಾದ ಲಿಥಿಯಮ್ ಬ್ಯಾಟರಿ ಇದೆ. ಒಮ್ಮೆ ಚಾರ್ಜಿಂಗ್ ಮಾಡಿದರೆ 160ರಿಂದ 180 ಕಿ ಮೀ.ವರೆಗೂ ಓಡಿಸಬಹುದಾಗಿದೆ. ಈ ಬ್ಯಾಟರಿ ಚಾರ್ಜ್ ಮಾಡಲು ಕನಿಷ್ಠ ಎರಡ್ಮೂರು ಗಂಟೆ ಬೇಕಾಗಬಹುದು.
ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್, ಅಥರ್ ಎನರ್ಜಿ ಇಳಿಸಲಿದೆ ಬೆಲೆ!
ಅಗ್ಗವಾಗಲಿವೆ ಇ-ಸ್ಕೂಟರ್‌ಗಳು
ದುಬಾರಿ ಎಂಬ ಕಾರಣಕ್ಕೆ ಬಹಳಷ್ಟು ಜನರು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಇ- ದ್ವಿಚಕ್ರವಾಹನಗಳ ಖರೀದಿ ಬಗ್ಗೆ ಯೋಚಿಸಬಹುದಾಗಿದೆ. ಯಾಕೆಂದರೆ, ದ್ವಿಚಕ್ರವಾಹನಗಳು ಒಂದಿಷ್ಟು ಅಗ್ಗವಾಗಲಿವೆ. ಇದಕ್ಕೂ ಕಾರಣವಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಅವುಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು, ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ದುಬಾರಿ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಇವುಗಳ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಬಹುದು.
ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!
ಕೇಂದ್ರದ ಭಾರೀ ಕೈಗಾರಿಕೆ ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರವು ಪ್ರತಿ ಕಿಲೋ ವ್ಯಾಟ್‌ಗೆ ಪ್ರೋತ್ಸಾಹಧನವನ್ನು 15,000 ರೂ.ವರೆಗೂ ಹೆಚ್ಚಿಸಿದೆ. ಇದು ಈ ಹಿಂದೆ ಇದ್ದ ಸಬ್ಸಿಡಿಗೆ ಹೋಲಿಸಿದರೆ ಪ್ರತಿ ಕಿಲೋ ವ್ಯಾಟ್‌ಗೆ 5,000 ರೂ.ನಿಂದ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಗ್ರಾಹಕರು ಬ್ಯಾಟರಿಚಾಲಿತ ದ್ವಿಚಕ್ರವಾಹನಗಳ ಖರೀದಿಯನ್ನು ಉತ್ತೇಜಿಸಲಿದೆ. ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದಂತೆ ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಅಥರ್ ಎನರ್ಜಿ, ಕೇಂದ್ರದ ಸಹಾಯಧನವನ್ನು ಗ್ರಾಹಕರಿಗೆ ವರ್ಗಾಯಿಸುವ ನಿರ್ಧಾರವನ್ನು ಕೈಗೊಂಡಿದೆ. ಅಥರ್ ಕಂಪನಿಯು ತನ್ನ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಮೂಲಕ ಕೇಂದ್ರದ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿದೆ.