Asianet Suvarna News Asianet Suvarna News

ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್‌, ಅಥರ್ ಎನರ್ಜಿ ಇಳಿಸಲಿದೆ ಬೆಲೆ!

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಹಲವು ಕ್ರಮಗಳನ್ನು ಘೋಷಿಸುತ್ತಿವೆ. ಈಗ ಕೇಂದ್ರ ಸರ್ಕಾರವು ಇ ಸ್ಕೂಟರ್‌ಗಳ ಮೇಲಿನ ಸಬ್ಸಡಿ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.  ಪರಿಣಾಮ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಅಗ್ಗವಾಗಲಿವೆ.

Central Government revised FAME II subsidies and electric scooter now cheaper
Author
Bengaluru, First Published Jun 14, 2021, 6:02 PM IST

ದುಬಾರಿ ಎಂಬ ಕಾರಣಕ್ಕೆ ಬಹಳಷ್ಟು ಜನರು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಇ- ದ್ವಿಚಕ್ರವಾಹನಗಳ ಖರೀದಿ ಬಗ್ಗೆ ಯೋಚಿಸಬಹುದಾಗಿದೆ. ಯಾಕೆಂದರೆ, ದ್ವಿಚಕ್ರವಾಹನಗಳು ಒಂದಿಷ್ಟು ಅಗ್ಗವಾಗಲಿವೆ. ಇದಕ್ಕೂ ಕಾರಣವಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಅವುಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು, ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ದುಬಾರಿ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಇವುಗಳ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಬಹುದು.

ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!

ಕೇಂದ್ರದ  ಭಾರೀ ಕೈಗಾರಿಕೆ ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರವು ಪ್ರತಿ ಕಿಲೋ ವ್ಯಾಟ್‌ಗೆ ಪ್ರೋತ್ಸಾಹಧನವನ್ನು 15,000 ರೂ.ವರೆಗೂ ಹೆಚ್ಚಿಸಿದೆ. ಇದು ಈ ಹಿಂದೆ ಇದ್ದ ಸಬ್ಸಿಡಿಗೆ  ಹೋಲಿಸಿದರೆ ಪ್ರತಿ ಕಿಲೋ ವ್ಯಾಟ್‌ಗೆ 5,000 ರೂ.ನಿಂದ ಹೆಚ್ಚಿಸಲಾಗಿದೆ. 

ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಗ್ರಾಹಕರು ಬ್ಯಾಟರಿಚಾಲಿತ ದ್ವಿಚಕ್ರವಾಹನಗಳ ಖರೀದಿಯನ್ನು ಉತ್ತೇಜಿಸಲಿದೆ. ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಹೆಚ್ಚಿಸುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದಂತೆ ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಅಥರ್ ಎನರ್ಜಿ, ಕೇಂದ್ರದ ಸಹಾಯಧನವನ್ನು ಗ್ರಾಹಕರಿಗೆ ವರ್ಗಾಯಿಸುವ ನಿರ್ಧಾರವನ್ನು ಕೈಗೊಂಡಿದೆ. ಅಥರ್ ಕಂಪನಿಯು ತನ್ನ 450ಎಕ್ಸ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಮೂಲಕ ಕೇಂದ್ರದ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿದೆ.

 

 

FAME II ಸಬ್ಸಿಡಿ ಪರಿಷ್ಕೃತಗೊಂಡ ಬೆನ್ನಲ್ಲೇ ಅಥರ್ 450ಎಕ್ಸ್ ಸ್ಕೂಟರ್ ಈಗ 14,500 ರೂಪಾಯಿನಷ್ಟು ಅಗ್ಗವಾಗಿದೆ ಎಂದು ಕಂಪನಿ ಘೋಷಿಸಿಕೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಂಪನಿಯ ದ್ವಿಚಕ್ರವಾಹನಗಳ ಆನ್‌ರೋಡ್ ಪ್ರೈಸ್ ಮತ್ತು ಇತರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡುವುದಾಗಿ ಹೇಳಿದೆ. 

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅಥರ್ ಎನರ್ಜಿ ಸಹ ಸಂಸ್ಥಾಪಕ, ಸಿಇಒ ತರುಣ್ ಮೆಹ್ತಾ, ಟಿವಿಎಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸುದರ್ಶನ್ ವೇಣು ಸೇರಿದಂತೆ ಉದ್ಯಮದ ಅನೇಕರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ನಿರ್ಧಾರದಿಂದ ಉದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ.

2030ರ ಹೊತ್ತಿಗೆ ಫಿಯೆಟ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ

FAME-II ಯೋಜನೆಯಲ್ಲಿ ಮೀಸಲಿಟ್ಟಿರುವ 10,000 ಕೋಟಿ ರೂ. ಸಬ್ಸಿಡಿಯಲ್ಲಿ  ದ್ವಿಚಕ್ರ ವಾಹನಗಳು ಅತಿದೊಡ್ಡ ಫಲಾನುಭವಿಗಳಾಗಿವೆ. ಅದರಲ್ಲೂ ವಿಶೇಷವಾಗಿ ಇ-ಸ್ಕೂಟರ್‌ಗಳು ಹೆಚ್ಚಿನ  ಪಾಲನ್ನು ಪಡೆದುಕೊಳ್ಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಷ್ಟಾದರೂ ಎಲ್ಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುವುದಿಲ್ಲ. CRISIL  ವರದಿಯ ಪ್ರಕಾರ, ಭಾರತದಲ್ಲಿ ಸುಮಾರು ಶೇ.95ರಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು FAME-II ಸಬ್ಸಿಡಿಗೆ ಅರ್ಹರಲ್ಲ. ಈ ಬಗ್ಗೆ ಯೋಚಿಸುವ ಅಗತ್ಯವಿದೆ.

ಕೇಂದ್ರದ ಯೋಜನೆಯ ಪ್ರಕಾರ, ಲಾಭ ಪಡೆಯಲು ಬಯಸುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಅರ್ಹತೆ ಪಡೆಯಲು ಮಿನಿಮಮ್ ಟಾಪ್ ಸ್ಪೀಡ್, ಪ್ರತಿ ಚಾರ್ಜ್‌ನ ವ್ಯಾಪ್ತಿ, ವೇಗವರ್ಧನೆ ಮತ್ತು ಶಕ್ತಿಯ ಬಳಕೆಯ ದಕ್ಷತೆಯಂತಹ ಕೆಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದೇ ಚಾರ್ಜ್‌ನಲ್ಲಿ ಕನಿಷ್ಠ 80 ಕಿ.ಮೀ ವ್ಯಾಪ್ತಿಯನ್ನು ತಲುಪಿಸಬೇಕಾಗುತ್ತದೆ ಮತ್ತು ಸಬ್ಸಿಡಿಗೆ ಅರ್ಹತೆ ಪಡೆಯಲು ಕನಿಷ್ಠ 40 ಕಿ.ಮೀ ವೇಗವನ್ನು ಹೊಂದಿರಬೇಕು ಎನ್ನುತ್ತವೆ ನಿಯಮಗಳು.

ಆದರೆ, ಭಾರತದ ಮಾರುಕಟ್ಟೆಯಲ್ಲಿರುವ ಬಹಳಷ್ಟು ಇ-ಸ್ಕೂಟರ್‌ಗಳು ಈ ಅರ್ಹತಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಕೇಂದ್ರ ಸರ್ಕಾರದ ಈ ನಿರ್ಧಾರದ ಲಾಭವು ಕೆಲವೇ ಕೆಲವು ಕಂಪನಿಗಳ ಇ ಸ್ಕೂಟರ್‌ಗಳಿಗೆ ಲಭ್ಯವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ  ಬಳಕೆ ನಿಧಾನವಾಗಿದೆಯಾದರೂ ನಿರಂತರವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್, ಕಾರುಗಳು ಮತ್ತು ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ.

Follow Us:
Download App:
  • android
  • ios