ಜಾವಾ ಎಂಬ ಹೆಸರೇ ಏನೋ ಒಂಥರಾ ಅಮಲು ಹಿಡಿಸುವಂಥದ್ದು. ಅದರಲ್ಲೂ ಮೋಟಾರ್ ಬೈಕ್ ಪ್ರಿಯರಿಗೆ ಕೇಳಬೇಕೇ? 1950ರ ದಶಕದಲ್ಲಿ ದೇಶದಲ್ಲಿಯೇ ಭಾರಿ ಹವಾ ಸೃಷ್ಟಿಸಿದ್ದ ಈ ಜಾವ ಈಗ ತನ್ನ ಹಳೇ ಸ್ವರೂಪ ಜೊತೆಜೊತೆಗೆ ಹೊಸ ಫೀಚರ್‌ಗಳನ್ನು ಅಳವಡಿಸಿಕೊಂಡು ನಮ್ಮೆದುರಿಗೆ ಮೆರೆಯುತ್ತಿರುವುದು ಗೊತ್ತಿರುವ ವಿಚಾರವೇ. ಆದರೆ, ಇದರ ಮೇಲಿರುವ ಬಹುದೊಡ್ಡ ದೂರೆಂದರೆ ತಕ್ಷಣ ಕೈಗೆ ಸಿಗದು ಎಂಬುದೇ ಆಗಿದೆ. ಇದರಿಂದ ಬಹಳಷ್ಟು ಮಂದಿ ಬುಕ್ ಮಾಡಲು ಹೋಗಿ ಕಾಯಲಾಗದೇ ಕೈಬಿಟ್ಟು ಬೇರೆ ವಾಹನಗಳತ್ತ ನೋಡಿದ್ದೂ ಇದೆ. ಆದರೆ, ಇನ್ನು ಹಾಗಾಗಲ್ಲ, ನಾವು ನಿಮಗೆ ಬೇಗ ಬೈಕ್ ಕೊಡ್ತೀವಿ ಅನ್ನೋ ಭರವಸೆಯನ್ನ ಕಂಪನಿಯವರು ಕೊಡ್ತಿದ್ದಾರೆ.

ಹೌದು. ಇನ್ನು ನೀವು ಬುಕ್ ಮಾಡಿದ ಕೇವಲ ಒಂದೇ ವಾರಕ್ಕೆ ಇಲ್ಲವೇ 10 ದಿನದಲ್ಲಿ ಬೈಕ್ ಸಿಗಲಿದೆ ಎಂದು ಕಂಪನಿಯವರು ಹೇಳಿಕೊಂಡಿದ್ದಾರೆ. ಗ್ರಾಹಕರ ವಿಶ್ವಾಸ ನಮಗೆ ಮುಖ್ಯವಾಗಿದ್ದು, ಅವರ ಅಗತ್ಯತೆ ಪೂರೈಸುವುದು ನಮ್ಮ ಕರ್ತವ್ಯವೂ ಆಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ನಮ್ಮ ಉತ್ಪಾದನಾ ಘಟಕದ ಸಾಮರ್ಥ್ಯವನ್ನೂ ಹೆಚ್ಚಿಸಿ ಅಗತ್ಯಕ್ಕೆ ಅನುಗುಣವಾಗಿ ಬೈಕ್ ತಯಾರಿಸುತ್ತಿದ್ದೇವೆ. ಬುಕ್ಕಿಂಗ್ ಮಾಡಿದ 7 ದಿನದಲ್ಲಿಯೇ ನಾವು ಪೂರೈಸುವ ಪ್ರಯತ್ನವನ್ನು ಮಾಡುತ್ತೇವೆ. ಇದಾಗದಿದ್ದರೆ ಹತ್ತು ದಿನಗಳ ಒಳಗಂತೂ ಪೂರೈಸಲಾಗುವುದು ಎಂಬ ಭರವಸೆಯನ್ನು ಕಂಪನಿ ನೀಡಿದೆ.

BS6 ಬಜಾಜ್ ಪಲ್ಸರ್ RS200 ಬೈಕ್ ಲಾಂಚ್, ಕೊರೋನಾ ಲಾಕ್‌ಡೌನ್ ಬಳಿಕ ವಿತರಣೆ!

ಷರತ್ತುಗಳು ಅನ್ವಯ
ಇಲ್ಲಿ ಷರತ್ತುಗಳು ಅನ್ವಯ ಎಂದರೆ ಅವರೇನೋ ಷರತ್ತುಗಳನ್ನು ಹಾಕಿದ್ದಾರೆಂದಲ್ಲ. ಈ ಸೌಲಭ್ಯ ಸದ್ಯಕ್ಕೆ ಕೆಲವು ಡೀಲರ್ಗಳಲ್ಲಿ ಮಾತ್ರ ಲಭ್ಯವಿದ್ದು, ನೀವು ಮೊದಲು ಅವರ ಬಳಿ ವಿಚಾರಿಸಿಕೊಳ್ಳಬೇಕಷ್ಟೇ. ಹಾಗಾಗಿ ಈ ಹೊಸ ಬೈಕ್ ಡೆಲಿವರಿ ಸೌಲಭ್ಯ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಈಗಲೇ ಸಿಗುತ್ತದೆಯೇ? ಇಲ್ಲವೇ ಇನ್ನಷ್ಟು ಸಮಯ ಹಿಡಿಯುತ್ತದೆಯೇ ಎಂಬ ವಿವರ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ.

 1950 ಮತ್ತು 2018ರ ಬಂಧ
1950ರ ದಶಕದಲ್ಲಿ ಆಲ್ ಟೈಂ ಫೇವರಿಟ್ ಆಗಿದ್ದ ಈ ಜಾವಾ ಬೈಕಿನ ಸದ್ದನ್ನು ಕೇಳುವುದೇ ಒಂದು ಚೆಂದ. ಕಿಲೋಮೀಟರ್ ದೂರದಲ್ಲಿ ಬರುತ್ತಿದ್ದರೂ ಓ ಜಾವಾ ಬರುತ್ತಿದೆ ಎಂಬ ಸುಳಿವು ಸಿಕ್ಕಿಬಿಡುತ್ತಿತ್ತು. ಆ ಜಾವಾ ಬೈಕ್ ರೈಡಿಂಗ್ ನೋಡಬೇಕೆಂದು ಕಣ್ಣುಗಳು ಕಾತುರವಾಗಿ ಕಾಯುತ್ತಿದ್ದವು. ಬೈಕ್ ಸವಾರನೂ ಜಾವಾ ಹೊಂದಿರುವೆನೆಂಬ ರೀತಿಯ ಗತ್ತಿನ ಮಜಾ ಅನುಭವಿಸುತ್ತಿದ್ದ ಎಂಬ ಮಾತುಗಳಿದ್ದವು. ಕೊನೆಗೆ ಆಧುನಿಕ ಭರಾಟೆಗೆ ಸಿಲುಕಿ, ಬೇರೆ ಬೇರೆ ಕಾರಣಗಳಿಗೆ 1996ರಲ್ಲಿ ಸ್ಥಗಿತಗೊಳಿಸಿತ್ತು. ಆಗ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಫ್ರಾನ್ಸ್ ಮೂಲದ ಫ್ಯೂಜೋ ಮೋಟಾರ್ ಕಂಪನಿ ಜತೆ ಸೇರಿ ಜಾವಾವನ್ನು ಪರಿಚಯಿಸಿತ್ತು. ಈಗ ಪುನಃ 2018ರ ನವೆಂಬರ್‌ನಲ್ಲಿ ಮಹೀಂದ್ರಾ ಕಂಪನಿ ಜಾವಾದ ನೂತನ ಅವತರಣಿಕೆಗಳನ್ನು ಪರಿಚಯಿಸಿದ್ದು ಗೊತ್ತೇ ಇದೆ.

ಭಾರತ ಲಾಕ್‌ಡೌನ್; ಪಾರ್ಕ್ ಮಾಡಿದ ಕಾರಿಗೆ ಸಮಸ್ಯೆ ಎದುರಾಗದಿರಲು 4 ಸೂತ್ರ ಪಾಲಿಸಿ!

ಸದ್ಯ ಜಾವಾದ ಒಟ್ಟು ಮೂರು ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಬೈಕ್ ಪ್ರಿಯರನ್ನು ಆಕರ್ಷಿಸುತ್ತಿವೆ. ಜಾವಾ ಹಾಗೂ ಜಾವಾ 42 ಬೈಕ್ ಗಳಲ್ಲಿ ಹೈಡ್ರೋಲಿಕ್ ಸಸ್ಪೆನ್ಶನ್ ಇದ್ದರೆ, ಪೆರಾಕ್ ನಲ್ಲಿ ಮೋನೋಶಾಕ್ ಸಸ್ಪೆನ್ಶನ್ ಮಾದರಿ ಇದೆ. ಈ ಮೂರೂ ಅವತರಣಿಕೆಗಳ ಫ್ರಂಟ್ ವೀಲ್ ಗೆ 280ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯವಿದೆ. ಜತೆಗೆ ರಿಯರ್ ಬ್ರೇಕ್, ಡ್ರಮ್/ಡಿಸ್ಕ್ ಗಳಂತ ಆಯ್ಕೆಗಳನ್ನೂ ಇಡಲಾಗಿದೆ. 

ಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಕಡಿಮೆ ಬೆಲೆಯ ಹ್ಯುಂಡೈ ಎಲೆಕ್ಟ್ರಿಕ್ ಕಾರು!