ಬೆಂಗಳೂರು(ಏ.02): ಕೊರೋನಾ ವೈರಸ್‌ ತೊಲಗಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಇದೇ ಕಾರಣಕ್ಕೆ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಕಂಪನಿಗಳು ಬಾಗಿಲ ಮುಚ್ಚಿವೆ. ಬಹುತೇಕ ಕಂಪನಿಗಳು ನೌಕರರಿಗೆ ಮನೆಯಲ್ಲೇ ಕೆಲಸ ಮಾಡಲು ಹೇಳಿದೆ. ತುರ್ತು ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳು ಲಭ್ಯವಿಲ್ಲ. ಹೀಗಾಗಿ ಬಹುತೇಕರು ತಮ್ಮ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ಮನೆಯಲ್ಲೇ ಕೂತು ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಕನಿಷ್ಠ 21 ದಿನಗಳ ಕಾಲ ಕಾರುಗಳನ್ನು ತೆಗೆಯವ ಹಾಗಿಲ್ಲ. ಕಾರು ಪಾರ್ಕ್ ಮಾಡಿದಲ್ಲೇ 21 ದಿನ ಮುಟ್ಟದಿರುವುದು ಉಚಿತವಲ್ಲ. ಹೀಗಾಗಿ ಲಾಕ್‌ಡೌನ್ ವೇಳೆ ಕಾರನ್ನು ಉತ್ತಮವಾಗಿ ಕಾಪಾಡಲು 5 ಸೂತ್ರಗಳನ್ನು ಪಾಲಿಸಬೇಕು. ಈ ಸೂತ್ರದ ವಿವರ ಇಲ್ಲಿದೆ.

ಕಾರಿನ ಬ್ಯಾಟರಿ ಕುರಿತು ಗಮನವಿರಲಿ
ಕಾರು ಸ್ಟಾರ್ಟ್ ಮಾಡಲು ಬ್ಯಾಟರಿ ಅವಶ್ಯಕ. ಪಾರ್ಕ್ ಮಾಡಿ ಕಾರನ್ನು ತೆಗೆಯದಿದ್ದರೆ ಅಥವಾ ಸ್ಟಾರ್ಟ್ ಮಾಡದಿದ್ದರೆ, ಬ್ಯಾಟರಿ ಡೆಡ್ ಆಗುವ ಸಾಧ್ಯತೆ ಇದೆ. ಹೀಗಾಗಿ ಕನಿಷ್ಠ 3-4 ದಿನಕ್ಕೆ ಕಾರನ್ನು ಸ್ಟಾರ್ಟ್ ಮಾಡಿ 10-20 ನಿಮಿಷ ಹಾಗೇ ಬಿಟ್ಟು ಬಿಡಿ. 

ಹ್ಯಾಂಡ್ ಬ್ರೇಕ್ ಸೀಕ್ರೆಟ್
ಕಾರು ಪಾರ್ಕ್ ಮಾಡುವಾಗ ಬಹುತೇಕರು ಹ್ಯಾಂಡ್ ಬ್ರೇಕ್ ಬಳಸುತ್ತಾರೆ. ಇದು ಅವಶ್ಯಕ ಹಾಗೂ ತಪ್ಪಲ್ಲ. ಆದರೆ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿದ ಕಾರು ಹೆಚ್ಚು ದಿನ  ಪಾರ್ಕ್ ಮಾಡಿದ್ದಲ್ಲೇ ಇದ್ದರೆ ಡಿಸ್ಕ್ ಬ್ರೇಕ್ ಹಾಗೂ ಪ್ಯಾಡ್ ಡ್ಯಾಮೇಜ್ ಆಗಲಿದೆ. ಜೊತೆಗೆ ಬ್ರೇಕ್ ಜ್ಯಾಮ್ ಆಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ದಿನ ಪಾರ್ಕ್ ಮಾಡುವುದಿದ್ದರೆ ಗೇರ್ ಬಳಸಿ.

ಕಾರಿನ ಒಳಭಾಗ ಸ್ವಚ್ಚಗೊಳಿಸಿ
ಪಾರ್ಕ್ ಮಾಡುವಾಗ ಕಾರಿನ ಒಳಭಾಗವನ್ನು ಸ್ವಚ್ಚಗೊಳಿಸಿ. ಯಾವುದೇ ತಿನಿಸುಗಳನ್ನು ಇಡಬೇಡಿ. ಇಲಿ ಹೆಗ್ಗಣ, ಇರುವೆ ಈ ತಿನಿಸಿಗಾಗಿ ಕಾರಿನ ಒಳಪ್ರವೇಶಿಸುವ ಯತ್ನ ಮಾಡಲಿದೆ. ಹೆಚ್ಚು ದಿನ ಕಾರು ಪಾರ್ಕ್ ಮಾಡಿದಲ್ಲಿರುವ ಕಾರಣವೂ ಇಲಿ ಹೆಗ್ಗಣ, ಇರುವೆಗಳು ಕಾರಿನೊಳಗೆ ಪ್ರವೇಶಿಸಲಿದೆ. ಇನ್ನು ಕಾರಿನೊಳಗೆ ಅಥವಾ ಹೊರಭಾಗದಲ್ಲಿ ಇಲಿಗಳು, ವೈಯರ್, ಪೈಪ್ ತುಂಡರಿಸುವ ಸಾಧ್ಯತೆ ಹೆಚ್ಚಿದೆ.

ಅನಗತ್ಯ ವಸ್ತುಗಳನ್ನು ಇಡಬೇಡಿ

ಕಾರಿನೊಳಗೆ ಪೇಪರ್, ಪ್ಲಾಸ್ಟಿಕ್ ಬಾಟಲಿಗಳನ್ನು ಇಡಬೇಡಿ. ಪಾರ್ಕ್ ಮಾಡಿದ ಕಾರಿಗೆ ಬಿಸಿಲು ತಾಗುತ್ತಿದ್ದರೆ ಕಾರಿನೊಳಗೆ ಉಷ್ಣತೆ ಹೆಚ್ಚಾಗಿ ಪೇಪರ್, ಪ್ಲಾಸ್ಟಿಕ್ ಹೊತ್ತಿ ಉರಿಯುವ ಸಾಧ್ಯತೆ ಹೆಚ್ಚು

ನೆರಳಿನಲ್ಲಿ ಪಾರ್ಕಿಂಗ್ ಉತ್ತಮ
ಸೂರ್ಯನ ಪ್ರಖರ ಬೆಳಕಿನಿಂದ ಕಾರಿನ ಬಣ್ಣ ಕುಂದಲಿದೆ. ಇದು  ಕಾರಿನ ಅಂದವನ್ನು ಹಾಳುಮಾಡಲಿದೆ.  ಪಾರ್ಕಿಂಗ್ ಮಾಡುವಾಗ ಕಾರಿನ ಕವರ್ ಬಳಸುವುದು ಸೂಕ್ತ.

ಇದೀಗ ಹಲವು ಕಾರು ಕಂಪನಿಗಳು, ಡೀಲರ್‌ಗಳು ತಮ್ಮ ಗ್ರಾಹಕರಿಗೆ ಸಂದೇಶ ಕಳುಹಿಸುತ್ತಿದ್ದಾರೆ. ಇದೀಗ ಎಕ್ಸೈಡ್ ಬ್ಯಾಟರಿ ಗ್ರಾಹಕರಿಗೆ ಮಹತ್ವದ ಸಂದೇಶ ರವಾನಿಸಿದೆ. ಕಾರು ಪಾರ್ಕ್ ಮಾಡಿದಲ್ಲೇ ಬಿಟ್ಟರೆ ಬ್ಯಾಟರಿ ಹಾಳಾಗಲಿದೆ. ಹೀಗಾಗಿ 5 ರಿಂದ 7 ದಿನಗ ಒಳಗೆ ಕಾರನ್ನು ಸ್ಟಾರ್ಟ್ ಮಾಡಿ ಕನಿಷ್ಠ 5 ನಿಮಿಷ ಹಾಗೆ ಬಿಟ್ಟು ಬಿಡಿ. ಹೀಗೆ ಮಾಡುವುದರಿಂದ ಬ್ಯಾಟರಿ ಚಾಲಿತಗೊಳಲ್ಲಿದೆ. ಇಷ್ಟೇ ಅಲ್ಲ ಕಾರು ಸ್ಟಾರ್ಟಿಂಗ್ ಟ್ರಬಲ್‌ನಿಂದ ಮುಕ್ತವಾಗಲಿದೆ ಎಂದು ಎಕ್ಸೈಡ್ ಬ್ಯಾಟರಿ ಸಂದೇಶ ರವಾನಿಸಿದೆ.