ಲಿಮಿಟೆಡ್ ಪಿರಿಯೆಡ್ ಆಫರ್ ಘೋಷಿಸಿದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಖರೀದಿ ಮೇಲೆ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಮಾರ್ಚ್ 31ರ ವರೆಗೆ ಆಫರ್ ಅನ್ವಯ, ಹೆಚ್ಚಿನ ಮಾಹಿತಿ ಇಲ್ಲಿದೆ

ನವದೆಹಲಿ(ಫೆ.26): ಭಾರತದ ಅತ್ಯಂತ ಜನಪ್ರಿಯ ಹಾಗೂ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಸ್ಕೂಟರ್ ಹೋಂಡಾ ಆ್ಯಕ್ಟಿವಾ(Honda Activa). ಇದೀಗ ಹೋಂಡಾ ಆ್ಯಕ್ಟಿವಾ ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಲಾಗಿದೆ. ಹೊಚ್ಚ ಹೊಸ ಹೋಂಡಾ ಆ್ಯಕ್ಟಿವಾ ಖರೀದಿಸುವ ಗ್ರಾಹಕರಿಗೆ ಇದೀಗ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್(Cash Back offer) ಸಿಗಲಿದೆ.

ಕ್ಯಾಶ್‌ಬ್ಯಾಕ್ ಆಫರ್ ಮಾರ್ಚ್ 31ರ ವರೆಗೆ ಮಾತ್ರ ಇರಲಿದೆ. ಆ್ಯಕ್ಟಿವಾ 125 ಸ್ಕೂಟರ್ ಖರೀದಿಸುವ ಗ್ರಾಹಕರಿಗೆ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಸಿಗಲಿದೆ. ಆದರೆ ಒಂದು ಷರತ್ತು ವಿಧಿಸಲಾಗಿದೆ. ಆ್ಯಕ್ಟೀವಾ 125 ಸ್ಕೂಟರ್ ಖರೀದಿಸುವ ಗ್ರಾಹಕರು ತಮ್ಮ ಮಾಸಿಕ ಕಂತಿನ ಟ್ರಾನ್ಸಾಕ್ಷನ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾಡಿದರೆ ಮಾತ್ರ ಸಿಗಲಿದೆ. ಇಷ್ಟೇ ಅಲ್ಲ ಮಿನಿಮಮ್ ಟ್ರಾನ್ಸಾಕ್ಷನ್ 30,000 ರೂಪಾಯಿ ಆಗಿರಬೇಕು ಎಂದು ಕಂಡೀಷನ್ ಹಾಕಿದೆ.

ಹೋಂಡಾ ಆ್ಯಕ್ಟಿವಾ ಸ್ಕೂಟರ್ ಖರೀದಿಸಲು 3,999 ರೂಪಾಯಿ ಡೌನ್‌ಪೇಮೆಂಟ್ ನೀಡಿದರೆ ಸಾಕು. ಇನ್ನುಳಿದ ಮೊತ್ಚಕ್ಕೆ ಸಾಲ ದೊರೆಯಲಿದೆ. ಇದರ ಜೊತೆಗೆ 5 ಲಕ್ಷ ರೂಪಾಯಿ ವಿಮೆ ಕೂಡ ಸಿಗಲಿದೆ. ವಿಶೇಷ ಆಫರ್ ಮೂಲಕ ಹೋಂಡಾ ಮೋಟಾರ್‌ಸೈಕಲ್ ಭಾರತದಲ್ಲಿ ಹೊಸ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಹೋಂಡಾ ಆ್ಯಕ್ಟಿವಾ 125 ಸ್ಕೂಟರ್‌ನಲ್ಲಿ 124ಸಿಸಿ ಎಂಜಿನ್ ಬಳಸಲಾಗಿದೆ. ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.18BHP ಪವರ್ ಹಾಗೂ 10.3 nM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆ್ಯಕ್ಟಿವಾ 125 ಸ್ಕೂಟರ್ ಮಾರುಕಟ್ಟೆಲ್ಲಿರುವ ಟಿವಿಎಸ್ ಜುಪಿಟರ್, ಸುಜುಕಿ ಆ್ಯಕ್ಸೆಸ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

ಅಮೆರಿಕನ್‌ ಮಾರುಕಟ್ಟೆಹೋಂಡಾ ನವಿ ರಫ್ತು
ಅಮೆರಿಕಾ ಮಾರುಕಟ್ಟೆಗೆ ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾದ ಹೋಂಡಾ ನವಿ ಬೈಕ್‌ಗಳು ರಫ್ತಾಗಲಿವೆ. ಭಾರತದಿಂದ ಮೆಕ್ಸಿಕೋಗೆ ಬಿಡಿ ಬಿಡಿಯಾಗಿ ಕಿಟ್‌ಗಳ ರೂಪದಲ್ಲಿ ಬೈಕ್‌ ರಫ್ತು ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ವರ್ಷ ಜುಲೈನಿಂದಲೇ ಬೈಕ್‌ ರಫ್ತು ಆರಂಭವಾಗಿದ್ದು ಈವರೆಗೆ 5000 ಸಿಕೆಡಿ ಕಿಟ್‌ ಮೂಲಕ ಬೈಕ್‌ಗಳ ರವಾನೆಯಾಗಿದೆ. ಈ ಬಗ್ಗೆ ವಿವರ ನೀಡಿದ ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರೈ ಲಿ.ನ ವ್ಯವಸ್ಥಾಪಕ ನಿರ್ದೇಶಕ ಅತ್ಸುಶಿ ಒಗಾಟಾ, ‘ಸ್ಕೂಟರ್‌ ಹಾಗೂ ಮೋಟಾರ್‌ ಸೈಕಲ್‌ಗಳ ಆಕರ್ಷಕ ಶೈಲಿ ಹೊಂದಿರುವ ಹೋಂಡಾ ನವಿ ಬೈಕ್‌ ಪ್ರಿಯರಿಗೆ ಹೊಸ ಸಾಧ್ಯತೆ ಪರಿಚಯಿಸಿದೆ. ಈ ವಿಸ್ತರಣೆಯಿಂದ ಭಾರತದಲ್ಲಿ ತಯಾರಾದ ಉತ್ಪನ್ನಗಳು ಜಾಗತಿಕ ಗುಣಮಟ್ಟದ ನಿರೀಕ್ಷೆ ತಲುಪಿದಂತಾಗಿದೆ’ ಎಂದರು.

ಹೋಂಡಾದಿಂದ ಸಿಬಿ300ಆರ್‌ ಮತ್ತು ಹೋಂಡಾನೆಸ್‌ ವಾರ್ಷಿಕೋತ್ಸವ ಆವೃತ್ತಿ ಬಿಡುಗಡೆ
ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ತನ್ನ ಸ್ಪೋಟ್ಸ್‌ರ್‍ ಬೈಕ್‌ ಸಿಬಿ300ಆರ್‌ ಬಿಎಸ್‌ 6ಅನ್ನು ‘ಭಾರತ್‌ ಬೈಕ್‌ ಸಪ್ತಾಹ 2021’ರಲ್ಲಿ ಅನಾವರಣಗೊಳಿಸಿದೆ. ಈ ಬೈಕ್‌ 2022ರ ಜನವರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. 286 ಸಿಸಿ ಸಾಮರ್ಥ್ಯದ ಈ ಮೋಟಾರ್‌ ಸೈಕಲ್‌, ಡಿಒಎಚ್‌ಸಿ 4 ವಾಲ್‌್ವ ಲಿಕ್ವಿಡ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಇದರಲ್ಲಿ ಅಳವಡಿಸಲಾಗಿರುವ ಪಿಜಿಎಂ ಎಫ್‌ಐ ತಂತ್ರಜ್ಞಾನ ವೇಗದ ಚಾಲನೆಯಲ್ಲಿ ಸಮತೋಲನಕ್ಕೆ ಸಹಕಾರಿ ಎಂದು ಕಂಪನಿ ತಿಳಿಸಿದೆ. ಡೌನ್‌ಶಿಫ್ಟ್‌ ಸಮಯದಲ್ಲಿ ಹಠಾತ್‌ ಎಂಜಿನ್‌ ಬ್ರೇಕಿಂಗ್‌ ಆಗದಂತೆ ತಡೆಯಲು ಸ್ಲಿಪ್ಪರ್‌ ಕ್ಲಚ್‌ ಇದರಲ್ಲಿದೆ. ಪ್ರಯಾಣದ ಆಯಾಸವನ್ನೂ ಇದು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿದೆ.ಎಕ್ಸ್‌ ಶೋರೂಮ್‌ ದರ : 2,40,000 ರು. (ಸಿಬಿ 300 ಆರ್‌)

ಇದರ ಜೊತೆಗೆ ಟ್ಯಾಂಕ್‌ ಮತ್ತು ಸೈಡ್‌ ಪ್ಯಾನಲ್‌ನಲ್ಲಿ ಗೋಲ್ಡನ್‌ ಥೀಮ್‌ ಇರುವ ಲಾಂಛನ ಇರುವ ಹೋಂಡಾನೆಸ್‌ ವಾರ್ಷಿಕೋತ್ಸವ ಆವೃತ್ತಿಯ ಬೈಕ್‌ ಬಿಡುಗಡೆಯಾಗಿದೆ. ಕಂದು ಬಣ್ಣದ ಡ್ಯುಯೆಲ್‌ ಸೀಟ್‌, ಕ್ರೋಮ್‌ ಸೈಡ್‌ ಸ್ಟ್ಯಾಂಡ್‌ ಈ ಬೈಕ್‌ಗೆ ಪ್ರೀಮಿಯಂ ಲುಕ್‌ ನೀಡಿದೆ. ಪಲ್‌ರ್‍ ಇಗ್ನೆಯಸ್‌ ಬ್ಲ್ಯಾಕ್‌ ಮತ್ತು ಮ್ಯಾಟ್‌ ಮಾರ್ಷಲ್‌ ಗ್ರೀನ್‌ ಮೆಟ್ಯಾಲಿಕ್‌ ಬಣ್ಣಗಳ ಆಯ್ಕೆ ಇದೆ. ಇದರ ಎಕ್ಸ್‌ಶೋ ರೂಮ್‌ ದರ 2.03 ಲಕ್ಷ ರು.