Asianet Suvarna News Asianet Suvarna News

ಹೊಂಡಾ ಉತ್ಪಾದನೆ ಆರಂಭ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಡೀಲರ್ಸ್‌ಗೆ ನೆರವು!

  • ಕೊರೋನಾ ಸಂಖ್ಯೆ ಇಳಿಕೆಯಾದಂತೆ ಉತ್ಪಾದನೆ ಆರಂಭಿಸಿದ ಹೊಂಡಾ
  • ಅಧಿಕೃತ ಡೀಲರ್ಸ್‍ಗಳಿಗೆ ಅಗತ್ಯ ನೆರವು ಘೋಷಿಸಿದ ಹೊಂಡಾ
  • ಸುರಕ್ಷತೆ ಆದ್ಯತೆ ನೀಡಲು ಎಲ್ಲಾ ಕ್ರಮ ಎಂದಿರುವ ಹೊಂಡಾ
Honda 2Wheelers India resumes production at its plants in a phased manner ckm
Author
Bengaluru, First Published May 29, 2021, 8:08 PM IST

ಗುರುಗ್ರಾಂ(ಮೇ.29): ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಹೊಂಡಾ ತನ್ನ ಉತ್ಪಾದನೆಯನ್ನು ಹಂತ ಹಂತವಾಗಿ ಆರಂಭಿಸಿದೆ.  ತಯಾರಿಕಾ ಘಟಕಗಳಾದ ಮಾನೇಸರ್ (ಹರಿಯಾಣ), ಟಪುಕಡಾ (ರಾಜಸ್ಥಾನ)  ಮತ್ತು ವಿಠ್ಠಲಪುರ (ಗುಜರಾತ್)    ಸ್ಥಾವರಗಳಲ್ಲಿ ವಾಹನಗಳ ತಯಾರಿಕೆ  ಪುನರಾರಂಭಗೊಂಡಿದೆ ಎಂದು ಹೊಂಡಾ ಹೇಳಿದೆ. 

ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ವಾರಂಟಿ, ಉಚಿತ ಸರ್ವೀಸ್ ವಿಸ್ತರಿಸಿದ ಹೊಂಡಾ!

ಸಂಪೂರ್ಣ ಲಾಕ್‍ಡೌನ್‍ನಿಂದ ಬಾಧಿತರಾಗಿರುವ ತನ್ನ ಅಧಿಕೃತ ಡೀಲರ್ಸ್‍ಗಳಿಗೆ ಅಗತ್ಯ ನೆರವು ನೀಡುವುದಾಗಿ ಹೋಂಡಾ 2ವ್ಹೀಲರ್ಸ್ ಇಂಡಿಯಾ ಕೂಡ ಪ್ರಕಟಿಸಿದೆ.  30 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಸಂಪೂರ್ಣ ಲಾಕ್‍ಡೌನ್‍ನಿಂದ ಮಾರಾಟ ವಹಿವಾಟು ನಡೆಸದ   ಡೀಲರ್ಸ್ ಬಳಿ ಇರುವ ವಾಹನಗಳ ದಾಸ್ತಾನುಗಳ ಸಂಪೂರ್ಣ ಬಡ್ಡಿ ವೆಚ್ಚವನ್ನು ಕಂಪನಿಯೇ ಭರಿಸಲಿದೆ.

ಸಂಬಂಧಿಸಿದ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ  ಕೋವಿಡ್-19 ನಿಬಂಧನೆಗಳು ಮತ್ತು ಲಾಕ್‍ಡೌನ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿ ನಮ್ಮ ಸ್ಥಾವರಗಳಲ್ಲಿ ಹಂತ ಹಂತವಾಗಿ ತಯಾರಿಕಾ ಚಟುವಟಿಕೆಗಳನ್ನು ಪುನರಾರಂಭಿಸಿದ್ದೇವೆ. ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಚೇತರಿಕೆ  ಕಂಡುಬರುತ್ತಿರುವ ಸಂಕೇತಗಳಿದ್ದರೂ, ನಾವು ಪರಿಸ್ಥಿತಿಯ ಮೇಲೆ  ಬಹಳ ನಿಕಟವಾಗಿ ನಿಗಾ  ಇಡುವುದನ್ನು ಮುಂದುವರಿಸುತ್ತೇವೆ. ನಮ್ಮ ಎಲ್ಲ ಪಾಲುದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ  ಮೊದಲ ಆದ್ಯತೆ ನೀಡುತ್ತಲೇ ಈ ನಿಟ್ಟಿನಲ್ಲಿ ಮುಂದುವರಿಯುತ್ತೇವೆ ಎಂದು ಹೊಂಡಾ  ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ  ಅತ್ಸುಶಿ ಒಗಾಟಾ ಹೇಳಿದ್ದಾರೆ.

ಹೋಂಡಾ ಶೈನ್ ಬೇಕ್ ಖರೀದಿ ಮೇಲೆ ಶೇ.5ರವರೆಗೂ ಕ್ಯಾಶ್‌ಬ್ಯಾಕ್ ಆಫರ್

ಈ ಸಂಕಷ್ಟದ ಸಮಯದಲ್ಲಿ, ಹೋಂಡಾ 2 ವ್ಹೀಲರ್ಸ್ ಇಂಡಿಯಾ ತನ್ನ ಡೀಲರ್‍ಗಳಿಗೆ ಅಗತ್ಯವಾದ  ಹಣಕಾಸಿನ ನೆರವು ನೀಡುತ್ತಿದೆ. 30 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಲಾಕ್‍ಡೌನ್‍ನಲ್ಲಿರುವ   ವಿತರಕರ ಬಳಿ ಇರುವ ವಾಹನಗಳ ದಾಸ್ತಾನಿನ ಸಂಪೂರ್ಣ ಬಡ್ಡಿ ವೆಚ್ಚವನ್ನು ಕಂಪನಿಯೇ ಭರಿಸಲಿರುವ ಈ ನೆರವು, ಡೀಲರ್‍ಗಳು ತಕ್ಷಣಕ್ಕೆ ತಮ್ಮ ವಹಿವಾಟು ಮುಂದುವರೆಸುವುದನ್ನು ಸುಗಮಗೊಳಿಸಲಿದೆ ಎಂಬುದು ನಮ್ಮ ದೃಢ ವಿಶ್ವಾಸವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ  ವಿವಿಧ ನಿರ್ಬಂಧ ಕ್ರಮಗಳ ಜೊತೆಗೆ ಕೋವಿಡ್-19 ಲಸಿಕೆ  ನೀಡುವ ಆಂದೋಲನವೂ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದರ ಹೊರತಾಗಿಯೂ, ‘ಎಚ್‍ಎಂಎಸ್‍ಐ’ ತನ್ನೆಲ್ಲ ವಹಿವಾಟಿನಲ್ಲಿ ನಿರ್ದಿಷ್ಟ ವಿಧಾನವನ್ನು ಅಳವಡಿಸಿಕೊಂಡು  ಸ್ಥಿರ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆ ಮಧ್ಯೆ ಸಮನ್ವಯತೆಯನ್ನು ಖಾತರಿಪಡಿಸಲಿದೆ.  ಮುಂಬರುವ ದಿನಗಳಲ್ಲಿ ವಿವಿಧ ಸ್ಥಳೀಯ ಆಡಳಿತಗಳು ಮತ್ತು ರಾಜ್ಯ ಸರ್ಕಾರಗಳು ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಕೆ ಮಾಡಲಿವೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಈ ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಹಂತ ಹಂತವಾಗಿ ಮುಂದುವರೆಯಲಿದ್ದೇವೆ ಎಂದು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ತನ್ನ ಗ್ರಾಹಕರು ಮತ್ತು ಸಹವರ್ತಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದರ ಅಂಗವಾಗಿ, ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಾಹನಗಳ ವಾರಂಟಿ ಮತ್ತು  ಉಚಿತ ಸರ್ವಿಸ್ ಪ್ರಯೋಜನಗಳನ್ನು 2021ರ ಜುಲೈ 31 ರವರೆಗೆ ವಿಸ್ತರಿಸುವುದಾಗಿ ಈಗಾಗಲೇ ಪ್ರಕಟಿಸಿದೆ. 2021ರ ಏಪ್ರಿಲ್ 1ರಿಂದ 2021ರ ಮೇ 31ರ ಅವಧಿಯಲ್ಲಿ ಕೊನೆಗೊಳ್ಳುತ್ತಿದ್ದ ವಾಹನದ ಉಚಿತ ಸರ್ವಿಸ್, ವಾರಂಟಿ ಮತ್ತು ವಿಸ್ತೃತ ವಾರಂಟಿ ವಿಸ್ತರಣೆಯು ಹೋಂಡಾ 2ವ್ಹೀಲರ್ ಇಂಡಿಯಾದ ಎಲ್ಲ ಗ್ರಾಹಕರಿಗೆ ಅನ್ವಯಿಸಲಿದೆ.

ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಹೊಂಡಾ ಇಂಡಿಯಾ ; 6.5 ಕೋಟಿ ರೂ ಪ್ಯಾಕೇಜ್ ಘೋಷಣೆ!

ಇದಕ್ಕೆ ಸಮಾನಾಂತರವಾಗಿ, ಹೋಂಡಾ 2ವ್ಹೀಲರ್ಸ್ ಇಂಡಿಯಾದ ಕಚೇರಿಗಳ ಸಿಬ್ಬಂದಿ, ವಹಿವಾಟು ಮುಂದುವರಿಸಲು ಮತ್ತು ವಹಿವಾಟಿಗಾಗಿ  ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಮಾಜಿಕವಾಗಿ ಹೊಣೆಗಾರಿಕೆಯ ಕಾರ್ಪೊರೇಟ್ ಆಗಿರುವ ಹೋಂಡಾ 2ವ್ಹೀಲರ್ಸ್ ಇಂಡಿಯಾ, ತನ್ನೆಲ್ಲ ಪಾಲುದಾರರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿರುವ ಕ್ರಮಗಳನ್ನೆಲ್ಲ ಕೈಗೊಳ್ಳುತ್ತಿದೆ ಎಂದಿದೆ.

Follow Us:
Download App:
  • android
  • ios