Asianet Suvarna News Asianet Suvarna News

Honda bikes:ಬೆಂಗಳೂರಲ್ಲಿ ಹೊಂಡಾ ಬಿಗ್‌ವಿಂಗ್ ಶೋ ರೂಂ ಉದ್ಘಾಟನೆ!

  • ಹೊಂಡಾ ಪ್ರಿಮೀಯಂ ಬೈಕ್ ಖರೀದಿ ಮತ್ತಷ್ಟು ಸುಲಭ
  • ಬೆಂಗಳೂರಲ್ಲಿ ಹೊಂಡಾ ಬಿಗ್‍ವಿಂಗ್ ಶೋ ರೂಂ
  • ಮಾರಾಟ ಮತ್ತು ಸರ್ವೀಸ್‌ನ ವಿಶೇಷ ಸೌಲಭ್ಯ
Honda 2Wheelers India Inaugurates BigWing showroom network in Bengaluru Karnataka ckm
Author
Bengaluru, First Published Dec 2, 2021, 7:54 PM IST
  • Facebook
  • Twitter
  • Whatsapp

ಬೆಂಗಳೂರು(ಡಿ.02) : ಹೊಂಡಾ ಬಿಗ್‌ವಿಂಗ್ ಶೋ ರೂಂ ಬೆಂಗಳೂರಿನಲ್ಲಿ(Bengaluru) ಉದ್ಘಾಟನೆಗೊಂಡಿದೆ.  ಹೋಂಡಾ(Honda) ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಪ್ರೈವೇಟ್ ಲಿಮಿಟೆಡ್   ಪ್ರೀಮಿಯಂ  ಬೈಕ್‌ಗಳ ಮಾರಾಟ ಮತ್ತು ಸರ್ವೀಸ್‌ಗೆ ಮೀಸಲಾದ ಹೋಂಡಾ ಬಿಗ್‌ವಿಂಗ್ ಷೋರೂಂ ಮತ್ತು ವರ್ಕ್‌ಶಾಪ್ ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದೆ.  ಇದರಿಂದ ವಿಶಿಷ್ಟ ಬೈಕ್ ಸವಾರರ (#GoRidin)ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 

ಗ್ರಾಹಕರಿಗೆ(Customers) ಸಮೀಪದಲ್ಲಿ ನೈಜ, ವಿಭಿನ್ನ ಹಾಗೂ ತನ್ಮಯಗೊಳಿಸುವ ಅನುಭವವನ್ನು ನೀಡಲು, ಹೋಂಡಾದ ವಿಶೇಷ ಪ್ರೀಮಿಯಂ ಮೋಟರ್‌ಸೈಕಲ್‌ಗಳ(Motorcycle) ಮಾರಾಟ ಜಾಲವಾಗಿರುವ ಹೋಂಡಾ ಬಿಗ್‌ವಿಂಗ್(Honda bigwing) ವಿಸ್ತರಣೆಯ ಮೇಲೆ ನಮ್ಮೆಲ್ಲ ಗಮನ ಕೇಂದ್ರೀಕೃತವಾಗಿದೆ. ಇಂದು, ಬೆಂಗಳೂರಿನಲ್ಲಿ ಬಿಗ್‌ವಿಂಗ್ ಉದ್ಘಾಟಿಸಲು ನಮಗೆ ಹೆಚ್ಚು ಸಂತೋಷವಾಗುತ್ತಿದೆ. ಈ ಹೊಸ ಪ್ರೀಮಿಯಂ ಮಳಿಗೆ ಮೂಲಕ, ನಾವು ಹೋಂಡಾದ ಮೋಜಿನ ಮೋಟರ್ ಸೈಕಲ್‌ಗಳನ್ನು ಬೆಂಗಳೂರಿನ ಗ್ರಾಹಕರಿಗೆ ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ಈ ಮೂಲಕ  ಗ್ರಾಹಕರಿಗೆ ನಮ್ಮ ಮಧ್ಯಮ ಗಾತ್ರದ ಪ್ರೀಮಿಯಂ ಮೋಟರ್ ಸೈಕಲ್‌ಗಳನ್ನು ಅವರ ಬಳಿಗೆ ತರುತ್ತಿದ್ದೇವೆ ಎಂದು ಹೊಂಡಾ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಭಾರತದಲ್ಲಿ ದುಬಾರಿ ಹೊಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ; ಬುಕಿಂಗ್ ಆರಂಭ!

ವಿಭಿನ್ನವಾದ ಸಿಲ್ವರ್ ವಿಂಗ್ಸ್, 2020ರ ಹಣಕಾಸು ವರ್ಷದ ಅಂತ್ಯದಲ್ಲಿ ಗುರುಗ್ರಾಂನಲ್ಲಿ ತನ್ನ ಮೊದಲ ಷೋರೂಂ ಆರಂಭಿಸಿತ್ತು. ಅಲ್ಲಿಂದಾಚೆಗೆ ಈಗ ದೇಶದಾದ್ಯಂತ 29 ಕ್ಕೂ ಹೆಚ್ಚು ಮಾರಾಟ ತಾಣಗಳಿಗೆ ವಿಸ್ತರಣೆಗೊಂಡಿದೆ.

ವೈವಿಧ್ಯಮಯ ಉತ್ಪನ್ನ
ಹೋಂಡಾದ ಪ್ರೀಮಿಯಂ ಮೋಟಾರ್‌ಸೈಕಲ್ ರಿಟೇಲ್ ವಹಿವಾಟಿನ ಸ್ವರೂಪವು ಮಹಾನಗರಗಳಲ್ಲಿ ಬಿಗ್‌ವಿಂಗ್ ಟಾಪ್‌ಲೈನ್ ಮತ್ತು ಇತರ ಬೇಡಿಕೆ ಕೇಂದ್ರಗಳಲ್ಲಿ ಬಿಗ್‌ವಿಂಗ್ ನೇತೃತ್ವದಲ್ಲಿ ನಡೆಯುತ್ತಿದೆ. ಹೋಂಡಾ ಬಿಗ್‌ವಿಂಗ್ ಟಾಪ್‌ಲೈನ್, ಹೋಂಡಾದ ಪ್ರೀಮಿಯಂನ ಸಂಪೂರ್ಣ ಶ್ರೇಣಿಯ ಮೋಟರ್ ಸೈಕಲ್‌ಗಳಾದ H’ness-CB350, CB350RS, CB500X, CBR650R, CB650R, CBR1000RR-R Fireblade, CBR1000RR-R Fireblade SP, ಸಾಹಸಮಯ ಸವಾರಿಗೆ Africa Twin Adventure Sports, ಮುಂಚೂಣಿ ಮಾದರಿಯ Gold Wing Tour ಮೂಲಕ ಬಿಗ್‌ವಿಂಗ್, ಹೋಂಡಾದ ಮಧ್ಯಮ ಗಾತ್ರದ ಮೋಟರ್‌ಸೈಕಲ್ ಅಭಿಮಾನಿಗಳನ್ನು ಖುಷಿಪಡಿಸಲಿದೆ.

ಹೊಂಡಾ ಉತ್ಪಾದನೆ ಆರಂಭ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಡೀಲರ್ಸ್‌ಗೆ ನೆರವು!

ಪ್ರೀಮಿಯಂ ಅನುಭವ
ಕಪ್ಪು ಮತ್ತು ಶ್ವೇತಮಿಶ್ರಿತ ಏಕವರ್ಣದಿಂದ ಅಲಂಕರಿಸಲ್ಪಟ್ಟಿರುವ ಬಿಗ್‌ವಿಂಗ್, ಬೈಕ್‌ಗಳನ್ನು ಅವುಗಳ ಸಂಪೂರ್ಣ ವೈಭವದಲ್ಲಿ ಪ್ರದರ್ಶಿಸುತ್ತದೆ. ಗ್ರಾಹಕರ ಉತ್ಪನ್ನ ಸಂಬAಧಿತ ಅಥವಾ ಪರಿಕರಗಳ ಕುರಿತ ಸಂದೇಹಗಳನ್ನು ಪರಿಹರಿಸಲು ಬಿಗ್‌ವಿಂಗ್‌ನಲ್ಲಿ ಉತ್ತಮ ತರಬೇತಿ ಪಡೆದ ಪರಿಣತ ವೃತ್ತಿಪರರು ಇರುತ್ತಾರೆ. ಮಾಹಿತಿ ಹುಡುಕಾಟದಿಂದ ಹಿಡಿದು ಖರೀದಿವರೆಗಿನ ಆನ್‌ಲೈನ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಎಲ್ಲಾ ವಿವರವಾದ ಮಾಹಿತಿಯು ಹೊಂಡಾ ಅಧಿಕೃತ ವೈಬ್‌ಸೈಟ್‌ನಲ್ಲಿದೆ.  ಅಂತರ್ಜಾಲ ತಾಣದಲ್ಲಿ ಇರುವ ಆನ್‌ಲೈನ್ ಬುಕಿಂಗ್ ಆಯ್ಕೆಯು ಗ್ರಾಹಕರಿಗೆ ಅವರ ಬೆರಳ ತುದಿಯಲ್ಲಿ ತ್ವರಿತ, ತಡೆರಹಿತ ಮತ್ತು ಪಾರದರ್ಶಕ ಬುಕಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ಗ್ರಾಹಕರ ಪ್ರತಿಕ್ರಿಯೆಯನ್ನು ಆ ಕ್ಷಣಕ್ಕೆ ತಿಳಿದುಕೊಳ್ಳಲು ಹೋಂಡಾ ಬಿಗ್‌ವಿಂಗ್ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ ‌ಫಾರ್ಮ್‌ಗಳಲ್ಲಿ  ಸಕ್ರಿಯವಾಗಿ ಲಭ್ಯವಿದೆ.

ಗ್ರಾಹಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ, ಹೋಂಡಾ ಬಿಗ್‌ವಿಂಗ್ ತನ್ಮಯಗೊಳಿಸುವ ಡಿಜಿಟಲ್ ಅನುಭವ ಒದಗಿಸುತ್ತದೆ. ವರ್ಚುವಲ್ ಪ್ಲಾಟ್‌ಫಾರ್ಮ್, ಗ್ರಾಹಕರು ತಮ್ಮ ಮನೆಯಲ್ಲಿ ಆರಾಮವಾಗಿ ಕುಳಿತುಕೊಂಡು ಸಂಪೂರ್ಣ ಮೋಜಿನ ಮೋಟಾರ್‌ಸೈಕಲ್‌ಗಳ ವಿವಿಧ ಶ್ರೇಣಿ, ರೈಡಿಂಗ್ ಗೇರ್ ಮತ್ತು ಬಿಡಿಭಾಗಗಳ  ವಿವರಗಳ ಪಡೆಯಬಹುದು.

ಪ್ರೀಮಿಯಂ ಮೋಟರ್‌ಸೈಕಲ್ ಉತ್ಸಾಹಿಗಳಿಗೆ ತನ್ಮಯಗೊಳಿಸುವ ವಿಶಿಷ್ಟ ಅನುಭವ
300cc, 500cc ಬೈಕ್  ವಿಶೇಷ ಶ್ರೇಣಿಯ ಪ್ರೀಮಿಯಂ ಮೋಟರ್ ಸೈಕಲ್‌ಗಳು ಸವಾರಿ ಉತ್ಸಾಹಿಗಳ ಖುಷಿಪಡಿಸಲಿವೆ
ಹೋಂಡಾದ ದೊಡ್ಡ ಗಾತ್ರದ ಬೈಕ್‌ಗಳಿಗೆ ಒಂದೆಡೆಯೇ ಮಾರಾಟ ಮತ್ತು ಸರ್ವೀಸ್‌ನ ವಿಶೇಷ ಸೌಲಭ್ಯ

Follow Us:
Download App:
  • android
  • ios