Asianet Suvarna News

ಭಾರತದಲ್ಲಿ ದುಬಾರಿ ಹೊಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ; ಬುಕಿಂಗ್ ಆರಂಭ!

  • ಭಾರತದಲ್ಲಿ ದುಬಾರಿ ಗೋಲ್ಡ್  ಪರಿಚಯಿಸಿದ ಹೊಂಡಾ 
  • ದೇಶಾದ್ಯಂತ ಬುಕಿಂಗ್ ಆರಂಭಿಸಿದ ಹೊಂಡಾ
Honda launches 2021 Gold Wing Tour in India Bookings Open ckm
Author
Bengaluru, First Published Jun 27, 2021, 11:14 PM IST
  • Facebook
  • Twitter
  • Whatsapp

ನವದೆಹಲಿ(ಜೂ.27):  ಐಷಾರಾಮಿ , ಅತ್ಯಂತ ದುಬಾರಿ ಬೈಕ್ ಎಂದೇ ಜನಪ್ರಿಯವಾಗಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ.  2021 gold wing tour  ಎರಡು ವಿಭಿನ್ನ ಆಯ್ಕೆಗಳಲ್ಲಿ ದೊರೆಯಲಿದೆ - ಏರ್‌ಬ್ಯಾಗ್ ಹೊಂದಿರುವ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಶನ್( ಡಿಸಿಟಿ) ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಶನ್ ಲಭ್ಯವಿದೆ. 

100 ರೂ ತರಕಾರಿ ಖರೀದಿಸಲು 75 ಲಕ್ಷ ರೂಪಾಯಿ ಬೈಕ್‌ನಲ್ಲಿ ಬಂದ ಮಾಲೀಕ!...

ಸಲಕರಣೆ ಮತ್ತು ವಿನ್ಯಾಸ
ವಿನ್ಯಾಸವು ಸಾಂಪ್ರದಾಯಿಕ ಗೋಲ್ಡ್ ವಿಂಗ್ ಪ್ರೀಮಿಯಂ ಮಟ್ಟದ ಫಿಟ್, ಫಿನಿಷ್  ಹೊಂದಿದೆ. ಚಾಸಿಸ್ ಮತ್ತು ಎಂಜಿನ್‌ನ ಚಲನಶೀಲ ಸಾಮರ್ಥ್ಯಗಳೊಂದಿಗೆ ಪ್ರಖರ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಆಕಾರವಿದೆ.  ಗಮನ ಸೆಳೆಯುವಂತಹ ವಿಶಿಷ್ಟವಾದ ಕೌಂಟರ್ ಪಾಯಿಂಟ್‌ಗಳ ಸೌಕರ್ಯಗಳನ್ನು ಒಳಗೊಂಡಿದೆ. 

ಈ ಮೋಟರ್ ಸೈಕಲ್ ರಚನೆಯ ಪ್ರಮುಖ ಭಾಗವು, ಮುಂಭಾಗದಿAದ ಹಿಂದಕ್ಕೆ ವಿಸ್ತರಿಸಿದ್ದು, ಮೇಲಿನ ಮತ್ತು ಕೆಳಗಿನ ಬಾಡಿವರ್ಕ್ ಗಮನ ಸೆಳೆಯುತ್ತದೆ. ಇದರ ಕ್ರಮಬದ್ಧತೆ,  ತೀಕ್ಷ÷್ಣ ಮತ್ತು ಗಟ್ಟಿ ಸಮತಟ್ಟಾದ ಮೇಲ್ಮೆöÊಗಳು ಹಾಗೂ ಅದರ ಸೂಕ್ಷ÷್ಮ ಏರೊಡೈನಮಿಕ್ ವಿವರಗಳು ಮುಖ್ಯವಾಗಿರುತ್ತವೆ. ಇದು ಕಾರ್ಯಕ್ಷಮತೆಯ ಸಾಮರ್ಥ್ಯವನ್ನು ಸೂಚಿಸುತ್ತದೆ.

2021 gold wing tour ಡ್ಯುಯಲ್ ಎಲ್‌ಇಡಿ ಫಾಗ್ ದೀಪಗಳನ್ನು ಹೊಂದಿದೆ. ಹೆಡ್‌ಲೈಟ್‌ಗಳ ಕೆಳಗಿನ ಭಾಗವು ಎರಡೂ ಬದಿಗಳಲ್ಲಿ ಪಾಲಿಶ್ಡ್ ಆಪ್ಟಿಕಲ್ ಲೆನ್ಸ್ಗಳನ್ನು ಹೊಂದಿದ್ದು,   ಲೋ ಬೀಮ್ ದೀಪ ಹೊರಸೂಸುತ್ತದೆ. ಮೇಲ್ಭಾಗದಲ್ಲಿ ಗರಿಷ್ಠ ಬೀಮ್ ಬಳಸಿ ಸ್ಟಿರಿಯೊಸ್ಕೋಪಿಕ್ ಪ್ರಭಾವ ಸೃಷ್ಟಿಸುತ್ತದೆ. ಮುಂಭಾಗದಲ್ಲಿನ ಸ್ವಯಂ ಸ್ಥಗಿತಗೊಳ್ಳುವ ಇಂಡಿಕೇಟರ್ಸ್ಗಳು ಕನ್ನಡಿಯಲ್ಲಿ ಸ್ಥಳಾವಕಾಶ ಹೊಂದಿರುತ್ತವೆ.

ಸವಾರಿ ಮಾಡುವಾಗ, ಕ್ರೂಸ್ ಕಂಟ್ರೋಲ್ ಸ್ವಿಚ್‌ನೊಂದಿಗೆ ವೇಗವನ್ನು ನಿಗದಿಪಡಿಸಬಹುದು. ಇದು ಸ್ಪೀಡೋಮೀಟರ್‌ನ ಕೆಳಗಿನ ಎಡ ಪ್ರದೇಶದಲ್ಲಿ ಇರಲಿದೆ. ಥ್ರೋಟಲ್ ಬೈ ವೈರ್ ಮೂಲಕ, ವ್ಯವಸ್ಥೆಯು ನಿಗದಿತ ವೇಗಕ್ಕೆ ಸುಗಮವಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ವಿಶೇಷವಾಗಿ ಎತ್ತರದ ಪ್ರದೇಶದಲ್ಲಿ ಸಾಗುವಾಗ ಮೋಟರ್ ಸೈಕಲ್ ಅತ್ಯಂತ ಸುಲಭವಾಗಿ ಚಲಿಸುತ್ತದೆ. ಮ್ಯಾನುಯಲ್ ಟ್ರಾನ್ಸ್ಮಿಷನ್ ಸಂದರ್ಭದಲ್ಲಿ, ಕ್ಲಚ್ ಅಥವಾ ಬ್ರೇಕ್  ಒತ್ತುವುದು  ಅಥವಾ ಥ್ರೊಟಲ್ ಅನ್ನು ತಿರುಚುವಾಗ ಕ್ರೂಸ್ ಕಂಟ್ರೋಲ್ ಸ್ಥಗಿತಗೊಳ್ಳುತ್ತದೆ.

ಡಿಸಿಟಿ ಮಾದರಿಗೆ (ಎಟಿ ಮೋಡ್‌ನಲ್ಲಿ) ಕಾರ್ಯನಿರ್ವಹಿಸುವ ಕ್ರೂಸ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ನಿಧಾನ ಚಲನೆ ಪೂರ್ಣಗೊಳಿಸಿದ ನಂತರ ಮತ್ತು ಹಿಂದಿನ ವೇಗವನ್ನು ಪುನರಾರಂಭಿಸಿದ ನಂತರ  2021 gold wing tour ಸೂಕ್ತವಾದ ವರ್ಗಾವಣೆಯೊಂದಿಗೆ   ಪೂರ್ವ-ಸೆಟ್‌ಗೆ ಮರಳುತ್ತದೆ.  ಐಷಾರಾಮಿ ಉಪಕರಣಗಳ ಅಳವಡಿಕೆಯು ವಿಶಿಷ್ಟವಾದ ಕಾಕ್‌ಪಿಟ್ ಅನ್ನು ರಚಿಸುತ್ತದೆ. ವಿಭಿನ್ನ ಕಡಿಮೆ ಕಾಂಟ್ರಾಸ್ಟ್ನ ಬಣ್ಣಗಳ ಜತೆಗಿನ ಡಾರ್ಕ್ ಟೋನ್ ಡಯಲ್‌ಗಳಿಗೆ ಅನ್ವಯಿಸಲಾಗುವುದು. 

2021 gold wing tour  ಹಿಂಭಾಗದ ಟಾಪ್ ಬಾಕ್ಸ್ ಹೆಚ್ಚುವರಿ 11 ಲೀಟರ್ ಇರುವುದರಿಂದ ಒಟ್ಟು ಸಾಮರ್ಥ್ಯವನ್ನು 121 ಲೀಟರ್‌ಗೆ ಹೆಚ್ಚಿಸುತ್ತದೆ. ಸ್ಮಾರ್ಟ್ ಕೀ ಸೌಲಭ್ಯದೊಂದಿಗೆ, ಪುಷ್ ಬಟನ್ ಎಲ್ಲಾ ಪೆಟ್ಟಿಗೆಗಳನ್ನು ತೆರೆಯುತ್ತದೆ. ಇದು ಲಗೇಜ್ ಇರಿಸುವುದನ್ನು  ಲಗೇಜ್ ಕಾರ್ಯಾಚರಣೆಯನ್ನು ಸರಳಗೊಳಿಸುತ್ತದೆ. ಸ್ಮಾರ್ಟ್ ಕೀದಲ್ಲಿನ ಅನ್ಲಾಕ್ ಬಟನ್, ಮೋಟರ್ ಸೈಕಲ್‌ನ ಪೆಟ್ಟಿಗೆಯ ಬಳಕೆಯನ್ನು ಸುಲಭಗೊಳಿಸುತ್ತದೆ.
 
ನವೀಕರಿಸಿದ ಹಗುರವಾದ ಸ್ಪೀಕರ್‌ಗಳು ಎದ್ದುಕಾಣುವ ಉಪಸ್ಥಿತಿಯೊಂದಿಗೆ ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಒದಗಿಸುತ್ತವೆ. ಸವಾರಿ ಅನುಭವ ಇನ್ನಷ್ಟು ಆಹ್ಲಾದಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರ ಆಡಿಯೊ ನಿಯಂತ್ರಣ ಸ್ವಿಚ್ ಲಭ್ಯ ಇರಲಿದೆ. ವಿವಿಧ ಸಾಧನಗಳ ಕೇಂದ್ರ ಪ್ರದೇಶದಲ್ಲಿ ಪ್ರದರ್ಶಿಸಲಾಗುವ ಮಾರ್ಗದರ್ಶಿ ವ್ಯವಸ್ಥೆಯು ಗೈರೊಕಂಪಾಸ್   ಒಳಗೊಂಡಿದೆ. ಇದು ಸುರಂಗದೊಳಗೆ ಸಹ ನಿರಂತರವಾಗಿ ಮಾರ್ಗದರ್ಶನ ನೀಡುವುದನ್ನು ಖಾತ್ರಿಗೊಳಿಸುತ್ತದೆ. ಇಂಧನ ಟ್ಯಾಂಕ್‌ನ ಸಾಮರ್ಥ್ಯ 21.1 ಲೀಟರ್‌ಗಳಷ್ಟಿದೆ. 

Follow Us:
Download App:
  • android
  • ios