Asianet Suvarna News Asianet Suvarna News

Honda Shine ಭಾರತದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಶೈನ್, 1 ಕೋಟಿ ಗ್ರಾಹಕರ ಮೈಲಿಗಲ್ಲು!

  • ವರ್ಷದಿಂದ ವರ್ಷಕ್ಕೆ ಶೇ 29 ರಷ್ಟು ಬೆಳವಣಿಗೆ ಸಾಧಿಸಿದ ಹೋಂಡಾ ಶೈನ್
  • 25ಸಿಸಿ ವಿಭಾಗದಲ್ಲಿ ಶೇ 33ರಷ್ಟು ಮಾರುಕಟ್ಟೆ ಪಾಲು
  • 1 ಕೋಟಿ ಗ್ರಾಹಕರ ತಲುಪಿದ ಹೋಂಡಾ ಶೈನ್
     
Honda 2Wheeler Indias brand Shine celebrates 1 Crore customer milestone ckm
Author
Bengaluru, First Published Jan 21, 2022, 5:37 PM IST

ನವದೆಹಲಿ(ಜ.21) :  ಹೋಂಡಾ ಬೈಕ್(Honda Bike) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕೈಗೆಟುಕುವ ದರ, ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಮೈಲೇಜ್(Mileage) ಸೇರಿದಂತೆ ಹಲವು ವಿಶೇಷತೆಗಳು ಈ ದ್ವಿಚಕ್ರ ವಾಹನದಲ್ಲಿದೆ. ಇದೀಗ ಇದೇ ಹೋಂಡಾ ಭಾರತದಲ್ಲಿ ಹೊಸ ದಾಖಲೆ ಬರೆದಿದೆ. ಹೋಂಡಾ ಶೈನ್ ಭಾರತದಲ್ಲಿ 1 ಕೋಟಿ ಗ್ರಾಹಕರ ಮೈಲಿಗಲ್ಲು ನಿರ್ಮಿಸಿದೆ. 125ಸಿಸಿ ವಿಭಾಗದಲ್ಲಿ ಜನಪ್ರಿಯ ಬೈಕ್ ಆಗಿರುವ ಬೈಕ್ ಶೈನ್( Honda Shine) ಶೇ.50ಕ್ಕಿಂತ ಹೆಚ್ಚು ಪಾಲು ಹೊಂದಿದೆ. 

ವರ್ಷದಿಂದ ವರ್ಷಕ್ಕೆ ಶೇ 29 ರಷ್ಟು ಬೆಳವಣಿಗೆಯೊಂದಿಗೆ 125ಸಿಸಿ ವಿಭಾಗದಲ್ಲಿ ಗ್ರಾಹಕರ ನಂಬರ್ 1 ಆಯ್ಕೆಯಾಗಿದೆ. ಸದೃಢ ಸ್ವರೂಪದ ಬ್ರ್ಯಾಂಡ್  ಶೈನ್ ಈಗ 1 ಕೋಟಿ ಗ್ರಾಹಕರ ಮೈಲುಗಲ್ಲು ತಲುಪಿದ ಮೊದಲ 125ಸಿಸಿ ಮೋಟರ್‌ಸೈಕಲ್ ಹೋಂಡಾ ಶೈನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Honda Bike ಭಾರತದಲ್ಲಿ 2022 CB300R ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

ಲಕ್ಷಾಂತರ ಶೈನ್ ಬಳಕೆದಾರರಿಂದ ಪಡೆದ ಪ್ರೀತಿ ಮತ್ತು ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಒಂದೂವರೆ ದಶಕದ ಶೈನ್ ಅನೇಕ ತಲೆಮಾರುಗಳ ಸವಾರರಿಗೆ ನಿಜವಾದ ಒಡನಾಡಿಯಾಗಿದೆ. ಇದು ಭಾರತದ ಎಲ್ಲಾ ಪ್ರದೇಶಗಳಲ್ಲಿನ ಮನೆ ಮನೆಗಳಲ್ಲಿ ಅತ್ಯಂತ ಜನಪ್ರಿಯ ಮೋಟರ್ ಸೈಕಲ್  ಆಗಿದೆ. ಇದು 125 ಸಿಸಿ ವಿಭಾಗದಲ್ಲಿ ವಿಶ್ವಾಸಾರ್ಹತೆ ಮತ್ತು ಗಮನಾರ್ಹ ಗುಣಮಟ್ಟದ ಮಾನದಂಡಗಳನ್ನು ಹೆಮ್ಮೆಯಿಂದ ಎತ್ತಿಹಿಡಿದಿದೆ. ಗ್ರಾಹಕರ ನಿಷ್ಠೆಯು ಅದ್ಭುತ ಉತ್ಪನ್ನ ಮತ್ತು ಮಾರಾಟದ ನಂತರದ ಸೇವೆಯ ಫಲಿತಾಂಶವಾಗಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದರು.

NAVi Global Exports ಅಮೆರಿಕ ಮಾರುಕಟ್ಟೆಗೆ ಭಾರತದಿಂದ Navi ವಿತರಣೆ, ಜಾಗತಿಕ ರಫ್ಚು ವಹಿವಾಟು ವಿಸ್ತರಿಸಿದ ಹೋಂಡಾ!

ಹಲವು ವರ್ಷಗಳಿಂದ ಗ್ರಾಹಕರಿಂದ ಶೈನ್ ಪಡೆದಿರುವ ಅದ್ಭುತ ಪ್ರತಿಕ್ರಿಯೆಯಿಂದ ನಾವು ವಿನಮ್ರರಾಗಿದ್ದೇವೆ. ಭಾರತದ ಸವಾರರು 2022ರಲ್ಲಿ ಅದ್ಭುತ ಶೈನ್‌ನೊಂದಿಗೆ ಸವಾರಿ ಮಾಡುತ್ತಿರುವಾಗ, ನಾವು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಮತ್ತು ಅತ್ಯುತ್ತಮ ಉತ್ಪನ್ನಗಳೊಂದಿಗೆ ನಮ್ಮ ನಿಷ್ಠಾವಂತ ಗ್ರಾಹಕರನ್ನು ಸಂತೋಷಪಡಿಸಲು ಬದ್ಧರಾಗಿದ್ದೇವೆ. ಎಚ್‌ಎಂಎಸ್‌ಐ ಕುಟುಂಬದ ಪರವಾಗಿ,  ಶೈನ್‌ನಲ್ಲಿ ತಮ್ಮ ಅಮೂಲ್ಯವಾದ ನಂಬಿಕೆಯನ್ನು ಇರಿಸಿದ್ದಕ್ಕಾಗಿ ನಾನು ನಮ್ಮ ಗ್ರಾಹಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಈ ಸಾಧನೆಯ ಕುರಿತು ಮಾತನಾಡಿರುವ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದ್ದಾರೆ.

  • 2006     ವಿಶಿಷ್ಟವಾದ ಆಪ್ಟಿಮ್ಯಾಕ್ಸ್ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಬಿಡುಗಡೆ 
  • 2008    ಬಿಡುಗಡೆಯಾದ ಕೇವಲ 2 ವರ್ಷಗಳಲ್ಲಿ ಭಾರತದಲ್ಲಿ125 ಸಿಸಿ ಮೋಟರ್‌ಸೈಕಲ್ ಮಾರಾಟ ಮಾಡುವ ಮೂಲಕ ನಂಬರ್ 1 ಆಯಿತು.
  • 2010    ಪ್ರಾರಂಭವಾದಾಗಿನಿಂದ ಕೇವಲ 54 ತಿಂಗಳುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಂತಸದ ಗ್ರಾಹಕರ ವಿಶ್ವಾಸ ಗಳಿಸಿತು.
  • 2013    ಭಾರತದಲ್ಲಿ ಮಾರಾಟವಾದ ಪ್ರತಿ ಮೂರನೇ 125ಸಿಸಿ ಮೋಟರ್‌ಸೈಕಲ್ ಸಿಬಿ ಶೈನ್ ಆಗಿತ್ತು.
  • 2014    125ಸಿಸಿ ವಿಭಾಗದಲ್ಲಿ ಶೇ 33ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ 30ಲಕ್ಷ ಮಾರಾಟದ ಮೈಲುಗಲ್ಲು ಸಾಧಿಸಿತು
  • 2015    ಸಿಬಿ ಶೈನ್‌ನಲ್ಲಿ ಕಾಂಬಿ-ಬ್ರೇಕ್ ಸಿಸ್ಟಮ್  ಪರಿಚಯಿಸಲಾಯಿತು
  • 2017    50 ಲಕ್ಷ ಯುನಿಟ್ ಮಾರಾಟದ ಮೈಲುಗಲ್ಲು ತಲುಪಿದ ಮೊದಲ 125ಸಿಸಿ ಮೋಟಾರ್‌ಸೈಕಲ್ ಆಯಿತು
  • 2018    70 ಲಕ್ಷ ಯುನಿಟ್ ಮಾರಾಟದ ಮೈಲುಗಲ್ಲು ಸಾಧಿಸಿತು ಪ್ರತಿ 2ನೇ 125ಸಿಸಿ ಮೋಟಾರ್‌ಸೈಕಲ್ ಗ್ರಾಹಕರು ಹೋಂಡಾದ ಸಿಬಿ ಶೈನ್‌ಗೆ ಆದ್ಯತೆ ನೀಡುತ್ತಾರೆ.
  • 2019    ಭಾರತದಲ್ಲಿ ಬಿಡುಗಡೆಯಾದ ಎಚ್‌ಎಂಎಸ್‌ಐದ ಮೊದಲ ಭಾರತ್೬ ಮೋಟಾರ್‌ಸೈಕಲ್ ಹೋಂಡಾ ಸಿಬಿ ಶೈನ್
  • 2020    ಶೈನ್ ಕುಟುಂಬವು 90 ಲಕ್ಷಕ್ಕೂ ಹೆಚ್ಚು ಗ್ರಾಹಕರೊಂದಿಗೆ ಪ್ರಬಲವಾಗಿದೆ    
Follow Us:
Download App:
  • android
  • ios