NAVi Global Exports ಅಮೆರಿಕ ಮಾರುಕಟ್ಟೆಗೆ ಭಾರತದಿಂದ Navi ವಿತರಣೆ, ಜಾಗತಿಕ ರಫ್ಚು ವಹಿವಾಟು ವಿಸ್ತರಿಸಿದ ಹೋಂಡಾ!

  • ಅಮೆರಿಕದ ಮಾರುಕಟ್ಟೆಗಳಿಗೆ Navi ವಿತರಣೆಗೆ ಚಾಲನೆ
  • ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಹೋಂಡಾ 2 ವ್ಹೀಲರ್ಸ್ 
  • ಆತ್ಮನಿರ್ಭರ್ ಭಾರತ್ ಯೋಜನೆಗೆ ಹೋಂಡಾ ಇಂಡಿಯಾ ಸಾಥ್
Honda 2Wheelers India expands Global Exports Footprint Begins NAVi deliveries to US Markets ckm

ನವದೆಹಲಿ(ಡಿ.21):  ಹೊಂಡಾ  ಟುವ್ಹೀಲರ್ಸ್ ಇಂಡಿಯಾ(honda 2 wheelers india) ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್(aatmanirbhar bharat) ಯೋಜನೆಯಂತೆ ಭಾರತದಲ್ಲಿ ಉತ್ಪಾದಿಸಿ ರಫ್ತು ವಹಿವಾಟು(Global Export) ಹೆಚ್ಚಿಸಲು ಹೋಂಡಾ 2ವ್ಹೀಲರ್ಸ್ ಕೈಜೋಡಿಸಿದೆ. ಇದರ ಫಲವಾಗಿ ಇದೀಗ ಹೋಂಡಾ ಜಾಗತಿಕ ರಫ್ತು ವಹಿವಾಟು ವಿಸ್ತರಿಸಿದೆ. ಅಮೆರಿಕದ ಮಾರುಕಟ್ಟೆಗೆ ಹೋಂಡಾ ಡಿ ಮೆಕ್ಸಿಕೊ ಮೂಲಕ  Navi ಸ್ಕೂಟರ್ ರಫ್ತು ಮಾಡಲಾಗುತ್ತಿದೆ. ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾದಿಂದ (ಎಚ್‌ಎಂಎಸ್‌ಐ) ಮೆಕ್ಸಿಕೊಕ್ಕೆ ಸಿಕೆಡಿ ಕಿಟ್‌ಗಳ ರಫ್ತು ವಹಿವಾಟು 2021ರ ಜುಲೈನಲ್ಲಿ ಆರಂಭಗೊಂಡಿತು. ಮೆಕ್ಸಿಕೊಗೆ ಇದುವರೆಗೆ  Navi ಬೈಕ್‌ಗಳ 5000 ಸಿಕೆಡಿ ಕಿಟ್‌ಗಳನ್ನು ರವಾನಿಸಲಾಗಿದೆ.

ಸ್ಕೂಟರ್ ಅನುಕೂಲತೆ, ಮೋಟರ್‌ಸೈಕಲ್ ಗುಣಲಕ್ಷಣ:
ಹೋಂಡಾ  Navi ಒಂದು ವಿಶಿಷ್ಟ ಬೈಕ್ ಆಗಿದೆ. ಇದು ಸ್ಕೂಟರ್‌ನ(Scooter) ಅನುಕೂಲತೆಗಳು ಮತ್ತು ಮೋಟರ್‌ಸೈಕಲ್‌ನ ಗುಣಲಕ್ಷಣಗಳನ್ನು ಒಳಗೊಂಡಿದೆ. ಹಲವಾರು ಸಂದರ್ಭಗಳಲ್ಲಿ, ಮೋಟರ್ ಸೈಕಲ್ ಖರೀದಿಯ ಮೊದಲ ಆಯ್ಕೆ ಇದಾಗಿದೆ. ಇದು ನಗರದ ದಟ್ಟಣೆಯಲ್ಲಿ ಆರಾಮವಾಗಿ ತಿರುಗಾಡಲು ಮತ್ತು ಇಕ್ಕಟ್ಟಾದ ಪಾರ್ಕಿಂಗ್ ಸ್ಥಳಗಳಲ್ಲಿ ಸುಲಭವಾಗಿ ಪಾರ್ಕಿಂಗ್ ಮಾಡಲು ಹಗುರವಾಗಿದೆ.

Honda 2Wheelers ವಿಶ್ವಮಾರುಕಟ್ಟೆಗೆ ದ್ವಿಚಕ್ರ ವಾಹನ ಪೂರೈಕೆಗೆ ಭಾರತದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ!

ಅಮೆರಿಕ ಮಾರುಟಕ್ಕೆಯಲ್ಲಿ ಭಾರತದ ಉತ್ಪಾದನೆ:
ಭಾರತದಲ್ಲಿ ತಯಾರಾಗಿರುವ(India Manufacture) ಉತ್ಪನ್ನವು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಉತ್ತಮ ಯಶಸ್ಸಿನೊಂದಿಗೆ ಉತ್ತಮ ಮೆಚ್ಚುಗೆಯನ್ನೂ ಪಡೆಯುತ್ತಿದೆ.  Navi ಇದು ತನ್ನ ಮಾನದಂಡ ಸ್ವರೂಪದಲ್ಲಿ ವಿಶಿಷ್ಟ ವಿನ್ಯಾಸ ಹೊಂದಿರುವುದಲ್ಲದೆ, ಖರೀದಿದಾರರ ನಿರ್ದಿಷ್ಟ ಅಗತ್ಯಗಳನ್ನು ಈಡೇರಿಸುವ ಬಗೆಯಲ್ಲಿನ ಅದರ ವಿಶಿಷ್ಟವಾದ ಆಯ್ಕೆಗಳೊಂದಿಗೆ ಮೋಜಿನ ನೋಟ, ಶುದ್ಧ ಮನರಂಜನೆಯ ಸವಾರಿ ಅನುಭವ ಮತ್ತು ಮೋಜು ಸೃಷ್ಟಿಸುವ ವಿಶೇಷ ಗುಣಲಕ್ಷಣಗಳನ್ನೂ ಒಳಗೊಂಡಿದೆ. ಹೋಂಡಾ Navi , ಸ್ಕೂಟರ್‌ನ ಪ್ಲಾಟ್‌ಫಾರ್ಮ್ ಬಳಸುವುದಾದರೂ  ಮೋಟರ್‌ಸೈಕಲ್‌ನ ವೈಶಿಷ್ಟಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಎರಡೂ ವಿಭಾಗಗಳಲ್ಲಿನ ಅತ್ಯುತ್ತಮವಾದ ವೈಶಿಷ್ಟಗಳ ಅಳವಡಿಕೆಯೊಂದಿಗೆ,  Navi ಈಗ ಅಮೆರಿಕದ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಹೊಂದಿದೆ.

ನೂತನ ಹೊಂಡಾ ನವಿ ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

ವಿಶ್ವದ  ಮುಂದುವರಿದ ಮಾರುಕಟ್ಟೆಗೆ ಭಾರತದಿಂದ ರಫ್ತು:
ಅಮೆರಿಕದ ಮಾರುಕಟ್ಟೆಗೆ ಹೋಂಡಾ Navi  ರಫ್ತು ವಹಿವಾಟು ಆರಂಭಿಸಿರುವ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಸ್ಕೂಟರ್ ಮತ್ತು ಮೋಟರ್‌ಸೈಕಲ್ ಎರಡರ ಆಕರ್ಷಕ ಶೈಲಿಯ ಮತ್ತು ವಿಶಿಷ್ಟವಾದ ನೋಟ ಹೊಂದಿರುವ  Navi,  ಪ್ರಪಂಚದಾದ್ಯಂತದ ತನ್ನ ಸವಾರರಿಗೆ ಮಿತಿಯಿಲ್ಲದ ಸಾಧ್ಯತೆಗಳ ಹೊಸ ಜಗತ್ತನ್ನು ಪರಿಚಯಿಸಲಿದೆ. ಹೋಂಡಾ ಮೆಕ್ಸಿಕೊಗೆ ಸಿಕೆಡಿ ಕಿಟ್‌ಗಳ ರವಾನೆ ಆರಂಭಿಸುವುದರೊಂದಿಗೆ, ವಿಶ್ವದಲ್ಲಿನ ಹೋಂಡಾದ ತಯಾರಿಕೆ ಕೇಂದ್ರಗಳಲ್ಲಿ ಒಂದಾಗಲು ‘ಎಚ್‌ಎಂಎಸ್‌ಐ’ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ಹೋಂಡಾ ಮೆಕ್ಸಿಕೊ ಮೂಲಕ ಅಮೆರಿಕದ ಮಾರುಕಟ್ಟೆಗೆ Navi ವಿತರಣೆ ಆರಂಭಗೊಂಡಿರುವುದು, ವಿಶ್ವದ  ಮುಂದುವರಿದ ಮಾರುಕಟ್ಟೆಗಳಲ್ಲಿನ ನಮ್ಮ ರಫ್ತು ವಹಿವಾಟನ್ನು ಮತ್ತಷ್ಟು ಬಲಪಡಿಸಿದೆ. ಮಾರುಕಟ್ಟೆಯ ಈ ಹೊಸ ವಿಸ್ತರಣೆಯು ಭಾರತದಲ್ಲಿ ಜಾಗತಿಕ ತಯಾರಿಕಾ ಗುಣಮಟ್ಟದ ಹೊಸ ಮಾನದಂಡಗಳನ್ನು ರೂಪಿಸಲು ನಮಗೆ ಮತ್ತೊಮ್ಮೆ ಅವಕಾಶವನ್ನು ನೀಡಿದೆ ಎಂದು ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅತ್ಸುಶಿ ಒಗಾಟಾ ಹೇಳಿದ್ದಾರೆ.

ಭಾರತದಿಂದ ಪ್ರಪಂಚದಾದ್ಯಂತ ವಿಸ್ತರಣೆ
ಜಾಗತಿಕವಾಗಿ ಗ್ರಾಹಕರನ್ನು ಸಂತೋಷಪಡಿಸುವ ಉದ್ದೇಶದಿಂದ, ಹೋಂಡಾ 2ವೀಲರ್ಸ್ ಇಂಡಿಯಾ, 2016ರಲ್ಲಿ  Navi ರಫ್ತು ಪ್ರಾರಂಭಿಸಿತು. ಅಂದಿನಿಂದ, ಕಂಪನಿಯು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ 22 ಕ್ಕೂ ಹೆಚ್ಚು ವೈವಿಧ್ಯಮಯ ರಫ್ತು ಮಾರುಕಟ್ಟೆಗಳಲ್ಲಿ 1.8 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಖುಷಿಪಡಿಸಿದೆ.

Latest Videos
Follow Us:
Download App:
  • android
  • ios