Asianet Suvarna News Asianet Suvarna News

Honda Bike ಭಾರತದಲ್ಲಿ 2022 CB300R ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

  • ಅತ್ಯಾಕರ್ಷಕ ಲುಕ್‌ನ ಹೋಂಡಾ ಸ್ಪೋರ್ಟ್ಸ್ ಬೈಕ್ ಬಿಡುಗಡೆ
  • ನೂತನ 2022 CB300R ಬೈಕ್ ಬೆಲೆ 2.77 ಲಕ್ಷ ರೂಪಾಯಿ
  • ಬಿಡುಗಡೆ ಬೆನ್ನಲ್ಲೇ ಬುಕಿಂಗ್ ಆರಂಭಿಸಿದ ಹೋಂಡಾ
Honda re ignites  Mid Size Arena in India launches 2022 CB300R Bike Bookings Open ckm
Author
Bengaluru, First Published Jan 12, 2022, 4:25 PM IST

ನವದೆಹಲಿ(ಜ.12):  ಹೋಂಡಾ ಇಂಡಿಯಾ(Honda) ಭಾರತದಲ್ಲಿ 2022 CB300R ಬೈಕ್ ಬಿಡುಗಡೆ ಮಾಡಿದೆ. ನಿಯೋಸ್ಪೋರ್ಟ್ ಕೆಫೆಯಿಂದ ಪ್ರೇರಣೆ ಪಡೆದ ಬೈಕ್ ಇದಾಗಿದ್ದು, ಆತ್ಯುತ್ತಮ ಪರ್ಫಾಮೆನ್ಸ್ ಹಾಗೂ ಅತ್ಯಾಕರ್ಷಕ ಸ್ಪೋರ್ಟ್ಸ್ ಲುಕ್ ಹೊಂದಿದೆ. ಬಹುನಿರೀಕ್ಷಿತ ಬೈಕ್ 2021ರ ಭಾರತ್ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ಇದೀಗ ನೂತನ ಬೈಕ್ ಮಾರುಕಟ್ಟೆ(Indian Market) ಪ್ರವೇಶಿಸಿದೆ.

2022 CB300R ಬೆಲೆ
ನೂತನ ಬೈಕ್ ಬೆಲೆ   2.77  ಲಕ್ಷ ರೂಪಾಯಿ (ಎಕ್ಸ್ ಶೋ ರೂಂ, ನವದೆಹಲಿ)  ಹೊಸ 2022 CB300R ಬೈಕ್ ಎರಡು ಪ್ರೀಮಿಯಂ ಬಣ್ಣಗಳಲ್ಲಿ ದೊರೆಯಲಿದೆ. ಮ್ಯಾಟ್ ಸ್ಟೀಲ್ ಬ್ಲಾಕ್ ಮತ್ತು ಪರ್ಲ್ ಸ್ಪಾರ್ಟನ್ ರೆಡ್. 

NAVi Global Exports ಅಮೆರಿಕ ಮಾರುಕಟ್ಟೆಗೆ ಭಾರತದಿಂದ Navi ವಿತರಣೆ, ಜಾಗತಿಕ ರಫ್ಚು ವಹಿವಾಟು ವಿಸ್ತರಿಸಿದ ಹೋಂಡಾ!

2022 CB300R ಎಂಜಿನ್
2022 CB300R ಭಾರತ್ 6 ಎಮಿಶನ್ ಎಂಜಿನ್ ಹೊಂದಿದೆ.  286  ಸಿಸಿ ಡಿಒಎಚ್‌ಸಿ ೪-ವಾಲ್ವ್ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆಗೆ ಪಿಜಿಎಂ-ಎಫ್‌ಐ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ನಗರದಲ್ಲಿನ ಸವಾರಿ ಸಂದರ್ಭದಲ್ಲಿ ಬಲಿಷ್ಠ ವೇಗವರ್ಧನೆ ಮತ್ತು ಹೆಚ್ಚು ಖಚಿತವಾದ ಪ್ರತಿಕ್ರಿಯೆ ಒದಗಿಸಲಿದೆ. ಈ ಹೊಸ ಮೋಟರ್‌ಸೈಕಲ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಹೊಂದಿದೆ. ಇದು ಸಾಮಾನ್ಯ ಕ್ಲಚ್ ಕಾರ್ಯವಿಧಾನಕ್ಕೆ ಹೋಲಿಸಿದರೆ ಕಡಿಮೆ ಲೋಡ್ ಅಗತ್ಯವಿರುವ ಕ್ಲಚ್ ಕಾರ್ಯಾಚರಣೆಗಳಿಗೆ ನೆರವು ಒದಗಿಸುತ್ತದೆ. ಆದರೆ ಡೌನ್‌ಶಿಫ್ಟ್ಗಳ ಸಮಯದಲ್ಲಿ ಹಠಾತ್ ಎಂಜಿನ್ ಬ್ರೇಕಿಂಗ್‌ನಿಂದ ಉಂಟಾಗುವ ಅಹಿತಕರ ಆಘಾತಗಳನ್ನು ಕಡಿಮೆ ಮಾಡಲು ಸ್ಲಿಪ್ಪರ್ ಫಂಕ್ಷನ್, ವಿವಿಧ ಬಗೆಯ ಸವಾರಿ ಸಂದರ್ಭದಲ್ಲಿ ಕಡಿಮೆ ಆಯಾಸ ಮತ್ತು ಹೆಚ್ಚಿನ ಸೌಕರ್ಯವನ್ನು ಖಚಿತಪಡಿಸುತ್ತದೆ. 

Renewable resources ಪುನರ್‌ಬಳಕೆ ಇಂಧನ ಬಳಕೆ ಹೆಚ್ಚಿಸಿದ ಹೋಂಡಾ 2 ವ್ಹೀಲರ್ಸ್ ಇಂಡಿಯಾ

ಸುಧಾರಿತ ಎಂಜಿನಿಯರಿಂಗ್ ಮತ್ತು ಪ್ರೀಮಿಯಂ ಸೌಂದರ್ಯ, ಗೋಲ್ಡನ್ ಅಪ್‌ಸೈಡ್ ಡೌನ್ ಫೋರ್ಕ್ಗಳು, ಗರಿಷ್ಠ ಮಟ್ಟದ ನಿಖರತೆ ಒದಗಿಸಲಿದೆ.…ನಗರದ ಸವಾರಿಗಾಗಿ ಸ್ಪೋರ್ಟ್ಸ್ ಬೈಕ್‌ಗಳ ಸಾರ್ವತ್ರಿಕ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

ಮುಂದಿನ ಬ್ರೇಕ್‌ಗಳಿಗಾಗಿ 4-ಪಾಟ್ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ಸ್, 296MA  ಹಬ್‌ಲೆಸ್ ಫ್ಲೋಟಿಂಗ್ ಡಿಸ್ಕ್ ಮತ್ತು 220 MM ರಿಯರ್ ಡಿಸ್ಕ್ ಬ್ರೆಕ್, ಡ್ಯುಯೆಲ್ ಚಾನೆಲ್ ABS ಅಳವಡಿಸಲಾಗಿದೆ. ಇದು ಮುಂದಿನ ಮತ್ತು ಹಿಂದಿನ ABS ಬ್ರೇಕಿಂಗ್‌ಗಾಗಿ ಒಂದೇ ಬಗೆಯ ಇನ್‌ಎರ್ಟಿಕಲ್ ಮೆಸರ್‌ಮೆಂಟ್ ಯುನಿಟ್ (IMU) ಆಗಿ ಕಾರ್ಯನಿರ್ವಹಿಸುತ್ತದೆ. ಹಠಾತ್ ಬ್ರೇಕ್ ಸಂದರ್ಭದಲ್ಲಿ ಭಾರವನ್ನು ಅತ್ಯುತ್ತಮ ರೀತಿಯಲ್ಲಿ ವಿತರಣೆ ಮಾಡಲಿದೆ.

ಹೆಚ್ಚುವರಿ ಸೌಲಭ್ಯಗಳಾದ ಗಿಯರ್ ಪೊಸಿಷನ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ವಿತ್ ಎಂಜಿನ್ ಇನ್‌ಹಿಬಿಟರ್ ಮೂಲಕ ಸುಧಾರಿತ ಮಾಹಿತಿ ಪ್ರದರ್ಶಿಸಲಿದೆ. ಪರಿಪೂರ್ಣವಾಗಿ ಇರುವ ಸಂಪೂರ್ಣ ಡಿಜಿಟಲಿಕರಣಗೊಂಡಿರುವ ಲಿಕ್ವಿಡ್ ಕ್ರಿಸ್ಟಲ್ ಮೀಟರ್, ಹಗಲು ಅಥವಾ ರಾತ್ರಿ ಹೊತ್ತಿನಲ್ಲಿ ಮಾಹಿತಿಯನ್ನು ತ್ವರಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. 

ನಮ್ಮ ಗ್ರಾಹಕರ ನಂಬಿಕೆ ಮತ್ತು ಅವರ ಬಗೆಗಿನ ಹೋಂಡಾದ ಬದ್ಧತೆಯನ್ನು ಮರುಸ್ಥಾಪಿಸಲು2022 CB300Rಅಂತಿಮವಾಗಿ ಮಾರುಕಟ್ಟೆಗೆ ಬಂದಿದೆ. ಇದು ಎಂಜಿನಿಯರಿಂಗ್‌ನ ಉನ್ನತ ಗುಣಮಟ್ಟವನ್ನು ಹೊಂದಿದೆ. ಹಲವಾರು ವಿಶೇಷತೆ ಹೊಂದಿದೆ. ರಸ್ತೆ ಮೇಲಿನ ಚಲನಶೀಲ ಉಪಸ್ಥಿತಿಯೊಂದಿಗೆ, ಗ್ರಾಹಕರು ಹೊಸ 2022 CB300R ಖುಷಿಪಡುತ್ತಾರೆ ಎಂಬುದು ನಮ್ಮ ದೃಢ ವಿಶ್ವಾಸವಾಗಿದೆ ಎಂದು ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ  ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ  ಹೇಳಿದ್ದಾರೆ.

Honda 2Wheelers ವಿಶ್ವಮಾರುಕಟ್ಟೆಗೆ ದ್ವಿಚಕ್ರ ವಾಹನ ಪೂರೈಕೆಗೆ ಭಾರತದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ!

CB300Rನ ಹೊಸ 2022 ಅವತಾರಕ್ಕೆ ಸಂಬಂಧಿಸಿದ ಕಾಯುವಿಕೆಯು ಕೊನೆಗೊಂಡಿದೆ. ನಗರದ  ಬೀದಿಗಳಲ್ಲಿ ಮೋಜಿನ ಸವಾರಿ ಮತ್ತು ಅದರ ವರ್ಗದಲ್ಲಿಯೇ ಅತ್ಯಂತ  ಹಗುರವಾದ, ಹೊಸ CB300R ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ. ಇದು ಸವಾರರ ಆಯಾಸವನ್ನು ಕಡಿಮೆ ಮಾಡುತ್ತದೆ. ಗೋಲ್ಡನ್ ಅಪ್‌ಸೈಡ್ ಡೌನ್ ಫೋರ್ಕ್ಗಳು ನಿಖರ ಸವಾರಿ ನಿಖರ ಮತ್ತು  ಬೈಕ್‌ನ ಆಕರ್ಷಣೆ ಹೆಚ್ಚಿಸಿದೆ.2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಭಾರತ ಬೈಕ್ ಎಕ್ಸ್ಪೋದಲ್ಲಿ ಅನಾವರಣಗೊಂಡಿದ್ದ  CB300R ವ್ಯಕ್ತವಾಗಿದ್ದ ಗ್ರಾಹಕರ ಪ್ರತಿಕ್ರಿಯೆಯಿಂದ ಉತ್ಸುಕರಾಗಿ, ಇಂದಿನಿಂದ ಬುಕಿಂಗ್‌ಗಳನ್ನು ತೆರೆಯಲಾಗಿದೆ ಎಂದು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು  ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

Follow Us:
Download App:
  • android
  • ios