ರಾಯಲ್ ಎನ್‌ಫೀಲ್ಡ್ ಬೈಕ್ ಎಲ್ಲರಿಗೂ ಗೊತ್ತಿದೆ. ಆದರೆ ಡೀಸೆಲ್ ಬೈಕ್ ಬಗ್ಗೆ ಗೊತ್ತಿದೆಯಾ? ವಿಶೇಷ ಅಂದರೆ ಇದರ ಮೈಲೇಜ್ ಒಂದು ಲೀಟರ್‌ಗೆ ಬರೋಬ್ಬರಿ 80 ಕಿಲೋಮೀಟರ್. ರಾಯಲ್ ಲುಕ್ ಜೊತೆಗೆ ಅತ್ಯಂತ ಕಡಿಮೆ ನಿರ್ವಣೆ ಬೈಕ್ ಕಾಪಾಡಿಕೊಂಡಿರುವ ವ್ಯಕ್ತಿ ಮಾತು ಕೇಳಿ.

ಬೆಂಗಳೂರು (ನ.18) ರಾಯಲ್ ಎನ್‌ಫೀಲ್ಡ್ ಬೈಕ್ ರಾಯಲ್ ಗತ್ತಿನ ಬೈಕ್. ಸ್ಟೈಲಿಶ್ ಲುಕ್, ಜನರು ಅತೀ ಹೆಚ್ಚು ಇಷ್ಟಪಡುವ ಬೈಕ್. ಆದರೆ ಸದ್ಯ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಎಲ್ಲಾ ಬೈಕ್‌ ಪೆಟ್ರೋಲ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ರೂಪದಲ್ಲಿ ಮಾತ್ರ ಲಭ್ಯವಿದೆ. ಆದರೆ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಡೀಸೆಲ್ ಬೈಕ್ ಲಭ್ಯವಿತ್ತು. ಸದ್ಯ ಇದು ವಿಂಟೇಜ್ ಪಟ್ಟಿಗೆ ಸೇರಿಕೊಂಡಿದೆ. ಆದರೆ ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಡೀಸೆಲ್ ಎನ್‌ಫೀಲ್ಡ್ ಕಾಣಸಿಗುತ್ತದೆ. ಹೀಗೆ ಕಾಣ ಸಿಕ್ಕ ಡೀಸೆಲ್ ಬೈಕ್ ಮಾಲೀಕ ರಾಯಲ್ ಎನ್‌ಫೀಲ್ಡ್‌ನ ಗತ್ತು, ಮೈಲೇಜ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಎಮಿಶನ್ ನಿಯಮದಿಂದ ಸ್ಥಗಿತಗೊಂಡ ಬೈಕ್

ರಾಯಲ್ ಎನ್‌ಫೀಲ್ಡ್ ಡೀಸೆಲ್ ಬೈಕ್ 1993ರಿಂದ 2000 ವರೆಗೆ ಮಾತ್ರ ಭಾರತದಲ್ಲಿ ಉತ್ಪಾದನೆಯಾಗಿತ್ತು. ಬಳಿಕ ಕಠಿಣ ಎಮಿಶನ್ ನಿಯಮದಿಂದ ಸ್ಥಗಿತಗೊಂಡಿತು. ಈಗಲೂ ರಾಯಲ್ ಎನ್‌ಫೀಲ್ಡ್ ಡೀಸೆಲ್ ಬೈಕ್ ಹಲವರಲ್ಲಿದೆ. ಅತ್ಯಂತ ಜೋಪನವಾಗಿ ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಎಂಜಿನ್ ನೋಡಿ ವ್ಲಾಗರ್ ಮಾಲೀಕರ ಪ್ರಶ್ನಿಸಿದ್ದಾರೆ. ಈ ವೇಳೆ ಇದು ಡೀಸೆಲ್ ರಾಯಲ್ ಎನ್‌ಫೀಲ್ಡ್ ಎಂದು ಇದರ ಕತೆ ಬಿಚ್ಚಿಟ್ಟಿದ್ದಾರೆ.

80ರ ಮೈಲೇಜ್ ಗುಟ್ಟು

1999ರ ಮಾಡೆಲ್ ಡೀಸೆಲ್ ರಾಯಲ್ ಎನ್‌ಫೀಲ್ಡ್ ಹೊಂದಿರುವ ಈ ಮಾಲೀಕ, ಅತ್ಯಂತ ಖುಷಿಯಿಂದ ಹಳೇ ಗಾಡಿ ನಿರ್ವಹಣೆ ಮಾಡುತ್ತಿದ್ದಾರೆ. ಸರಿಸಮೂರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಬೆಲೆ ನೀಡಿ ಈ ಬೈಕ್ ಖರೀದಿಸಿದ್ದರು. ಬಳಿಕ ರಿಪೇರಿ ಮಾಡಿ ಹೊಚ್ಚ ಹೊಸದಾಗಿ ಇಟ್ಟುಕೊಂಡಿದ್ದಾರೆ. ಈ ಮಾಲೀಕನ ಮತ್ತೊಂದು ಖುಷಿ ಎಂದರೆ ಒಂದು ಲೀಟರ್ ಡೀಸೆಲ್ ಹಾಕಿದರೆ ಬರೋಬ್ಬರಿ 80 ಕೀಲೋಮೀರ್ ಮೈಲೇಜ್ ನೀಡಲಿದೆ ಎಂದಿದ್ದಾರೆ.

ಕಂಪನಿ ಕೂಡ 70 ರಿಂದ 80 ಕಿ.ಮೀ ಮೈಲೇಜ್ ನೀಡಲಿದೆ ಎಂದಿದೆ. ಹಲವರಿಗೆ 80 ಕಿಲೋಮೀಟರ್ ಮೈಲೇಜ್ ಸಿಕ್ಕಿದ ಅನುಭವ ಹಂಚಿಕೊಂಡಿದ್ದಾರೆ. ದುಬಾರಿ ಪೆಟ್ರೋಲ್, ಡೀಸೆಲ್ ನಡುವೆ 80 ಕಿಲೋಮೀಟರ್ ಮೈಲೇಜ್ ನೀಡುವ ಬೈಕ್ ಸದ್ಯ 100 ಸಿಸಿ ಒಳಗಿರುವ ಸ್ಪ್ಲೆಂಡರ್ ಸೇರಿದಂತೆ ಇತರ ಬೈಕ್ ಮಾತ್ರ. ಇನ್ನು ಇವಿ ಬೈಕ್ ಅಥವಾ ಸ್ಕೂಟರ್. ಆದರೆ ರಾಯಲ್ ಎನ್‌ಫೀಲ್ಡ್‌ನಂತ 350 ಸಿಸಿ ಬೈಕ್‌ಗಳ ಮೈಲೇಜ್ 30 ರಿಂದ 40 ಮಾತ್ರ. ಇದರ ನಡುವೆ ಡೀಸೆಲ್ ಬೈಕ್ ನಿಜಕ್ಕೂ ಅಚ್ಚರಿಯೇ ಸರಿ.

ರಾಯಲ್ ಎನ್‌ಫೀಲ್ಡ್ ಡೀಸೆಲ್ ಎಂಜಿನ್ ಬೈಕ್ 325cc, 4 ಸ್ಟ್ರೋಕ್, ಏರ್‌ಕೂಲ್ಡ್ , ಸಿಂಗಲ್ ಸಿಲಿಂಡರ್ ಹೊಂದಿತ್ತು. 4 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಇದಕ್ಕಿತ್ತು. ಇನ್ನು ಡೀಸೆಲ್ ರಾಯಲ್ ಎನ್‌ಫೀಲ್ಡ್ ಬೈಕ್‌ನ ಶಬ್ದ ಕೊಂಚ ಹೆಚ್ಚು. ಆದರೆ ಹಲವರಿಗೆ ಇದೇ ಶಬ್ದ ಅತ್ಯಂತ ಪ್ರಿಯವಾಗಿತ್ತು. ರಾಯಲ್ ಎನ್‌ಫೀಲ್ಡ್ ಡೀಸೆಲ್ ಬೈಕ್ ಎಲ್ಲೋ ಹೋದರೂ ಸುತ್ತ ಮತ್ತಲಿನವರಿಗೆ ಶಬ್ದ ಕೇಳಿುತ್ತದೆ. ಹೀಗಾಗಿ ಶಬ್ದದ ಮೂಲಕ ಹಲವರ ಮೋಡಿ ಮಾಡಿತ್ತು.