#FactCheck ದೀಪಾವಳಿ ಪ್ರಯುಕ್ತ ಹೋಂಡಾದಿಂದ ಸ್ಕೂಟರ್ ಫ್ರೀ!
ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸುದ್ದಿಗಳಿಗೆ ತಲೆ ಇರೋಲ್ಲ, ಬಾಲ ಇರೋಲ್ಲ. ಆದರೂ ಕಾಡ್ಗಿಚ್ಚಿನಂತೆ ಹರಿಡಾಡುತ್ತದೆ. ಇದರಲ್ಲಿ ಕೆಲವು ಮಾತ್ರ ಸತ್ಯವಾದರೆ ಅನೇಕವನ್ನು ತಿರುಚುವ ಯತ್ನವೇ ನಡೆದಿರುತ್ತೆ. ಮುಗ್ಧ ಜನರನ್ನು ಸೆಳೆಯುವ ಯತ್ನವಿದು. ಈ ಬಗ್ಗೆ ಬೆಳಕು ಚೆಲ್ಲುವ #FactCheck ಇದು.
ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹೋಂಡಾ ದ್ವಿಚಕ್ರ ವಾಹನ ಕಂಪನಿಯು ತನ್ನ ಗ್ರಾಹಕರಿಗೆ ಉಚಿತವಾಗಿ ಸ್ಕೂಟರ್ ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ಆ ಸಂದೇಶ ಹೀಗಿದೆ; ‘ಈ ಬಾರಿಯ ದೀಪಾವಳಿ ಪ್ರಯುಕ್ತ ಹೋಂಡಾ 300 ಅದೃಷ್ಟಶಾಲಿಗಳಿಗೆ ಆ್ಯಕ್ಟೀವಾ 5ಜಿ ಸ್ಕೂಟರ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಆ ಅದೃಶ್ಟಶಾಲಿ ನೀವೇ ಆಗಿರಬಹುದು. ಈ ಕೂಡಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ’ ಎಂದು ಹೇಳಲಾಗಿದೆ.
ಕರ್ನಾಟಕದ ಮಸೀದಿ ಕೆಳಗೆ ಪತ್ತೆಯಾಯಿತು ಜೇನ ಮಸೀದಿ?
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ವಿವಿಧ ಬಣ್ಣದ ಆ್ಯಕ್ಟೀವಾ ಬೈಕ್‌ಗಳು ಕಾಣಿಸುತ್ತವೆ. ಬೈಕ್ ಬಣ್ಣವನ್ನು ಆಯ್ಕೆ ಮಾಡಿ ‘ಕಂಟಿನ್ಯೂ’ ಬಟನ್ ಒತ್ತಿದಾಗ, ಇನ್ನೆರಡು ದಿನದಲ್ಲಿ ನಿಮ್ಮ ಮನೆಗೆ ಹೋಂಡಾ ಸ್ಕೂಟರ್ ಬರಲಿದೆ. ಆದರೆ ಈ ಸಂದೇಶವನ್ನು 20 ಸ್ನೇಹಿತರಿಗೆ ಕಳುಹಿಸಬೇಕು ಎಂಬ ಷರತ್ತು ಕಾಣಿಸುತ್ತದೆ.
ನಿಜಕ್ಕೂ ಹೋಂಡಾ ಇಂಥದ್ದೊಂದು ಆಫರ್ ಘೋಷಣೆ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ, ಹೋಂಡಾ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಗ್ರಾಹಕರನ್ನು ಮೋಸಗೊಳಿಸಲಾಗುತ್ತಿದೆ ಎಂಬ ಅಂಶ ಬಯಲಾಗಿದೆ. ಎಂದಿನಂತೆ ನಕಲಿ ವೆಬ್‌ಸೈಟ್ ಸೃಷ್ಟಿಸಿ ಅದರಿಂದ ಬರುವ ಜಾಹೀರಾತುಗಳ ಮೂಲಕ ಹಣ ಮಾಡುವ ಜಾಲವು ಇಂಥ ಸಂದೇಶಗಳನ್ನು ಸೃಷ್ಟಿಸುತ್ತದೆ. ಇನ್ನು ಕೆಲವೊಮ್ಮೆ ಮೊಬೈಲ್ ನಂಬರ್ ಬಳಸಿಕೊಂಡು ಖಾಸಗಿ ಮಾಹಿತಿಯನ್ನು ಕದಿಯುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಇಂಥ ಸಂದೇಶಗಳ ಬಗ್ಗೆ ಜನರು ಎಚ್ಚರ ಇರಬೇಕು.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋ ಸುದ್ದಿಗಳ ಸತ್ಯಾಸತ್ಯತೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: