ಸದ್ಯ ಕರ್ನಾಟಕದ ರಾಯಚೂರಿನಲ್ಲಿ ಜೈನರ ಕೋಟೆಯಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು. ಇತ್ತೀಚೆಗೆ ರಸ್ತೆ ಅಗಲೀಕರಣ ಮಾಡಲು ಮಸೀದಿ ಕೆಡವಿದಾಗ ಆ ಸ್ಥಳದಲ್ಲಿ ಪುರಾತನ ಕಾಲದ ಜೈನರ ಕೋಟೆ ಇರುವುದು ಪತ್ತೆಯಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ರಸ್ತೆ ಅಗಲೀಕರಣ ಮತ್ತಿತರ ಕಾಮಗಾರಿ ಕೈಗೊಳ್ಳುವಾಗ ಪುರಾತನ ಕಾಲದಲ್ಲಿ ನೆಲದಡಿ ಹೂತಿಟ್ಟಚಿನ್ನ, ವಜ್ರ ವೈಡೂರ್ಯಗಳು, ದೇವಾಲಯಗಳ ಇರುವಿಕೆಯನ್ನು ಸೂಚಿಸುವ ವಿಗ್ರಹಗಳು ಪತ್ತೆಯಾಗುವುದುಂಟು.

Add Asianetnews Kannada as a Preferred SourcegooglePreferred

ಸದ್ಯ ಕರ್ನಾಟಕದ ರಾಯಚೂರಿನಲ್ಲಿ ಜೈನರ ಕೋಟೆಯಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು. ಇತ್ತೀಚೆಗೆ ರಸ್ತೆ ಅಗಲೀಕರಣ ಮಾಡಲು ಮಸೀದಿ ಕೆಡವಿದಾಗ ಆ ಸ್ಥಳದಲ್ಲಿ ಪುರಾತನ ಕಾಲದ ಜೈನರ ಕೋಟೆ ಇರುವುದು ಪತ್ತೆಯಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Fact Check; ಮುಂಬೈನಲ್ಲೊಂದು ಜಗಮಗಿಸುವ ಸೇತುವೆ?

3j-jai jinendra ji ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಪುರಾತನ ಕಾಲದ ವಾಸ್ತುಶಿಲ್ಪಗಳನ್ನು ಒಳಗೊಂಡ ಕೋಟೆಯ ಫೋಟೋವನ್ನು ಪೋಸ್ಟ್‌ ಮಾಡಲಾಗಿದ್ದು, ಅದು 3000 ಬಾರಿ ಶೇರ್‌ ಆಗಿದೆ. ಅನಂತರ ವಾಟ್ಸ್‌ ಆ್ಯಪ್‌ ಮತ್ತು ಟ್ವೀಟರ್‌ನಲ್ಲೂ ಈ ಫೋಟೋ ವೈರಲ್‌ ಆಗಿದೆ. ಸುಂದರ ವಾಸ್ತುಶಿಲ್ಪಗಳು, ಮೆಟ್ಟಿಲುಗಳುಳ್ಳ ಪುರಾತನ ಕಾಲದ ಬಾವಿ, ಕೋಟೆ ಆವರಣ ಹೀಗೆ ವಿವಿಧ ಆ್ಯಂಗಲ್‌ಗಳಲ್ಲಿ ಕೋಟೆಯನ್ನು ಪ್ರಸ್ತುತಪಡಿಸುವ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ಆದರೆ ಈ ಫೋಟೋಗಳು ಕರ್ನಾಟಕದ ರಾಯಚೂರಿನದ್ದೇ ಎಂದು ಪರಿಶೀಲಿಸಿದಾಗ ಇವು ಕರ್ನಾಟದ್ದಲ್ಲ, ಮಧ್ಯಪ್ರದೇಶದ ಹೆಸರಾಂತ ಗ್ವಾಲಿಯರ್‌ ಕೋಟೆಯ ಫೋಟೋಗಳು ಎಂದು ತಿಳಿದುಬಂದಿದೆ. ಈ ಪ್ರಸಿದ್ಧ ಕೋಟೆಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿವೆ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್