ಪ್ರಿಯ ಕನ್ನಡಿಗರೆ ಡಬ್ಬಾ ಓಲಾದಿಂದ ನಿಮ್ಮ ಜೀವನ ಗೋಳು, ಸ್ಕೂಟರ್ ಖರೀದಿಸದಂತೆ ಗ್ರಾಹಕನ ಮನವಿ!
ಪ್ರಿಯ ಕನ್ನಡಿಗರೆ, ನೀವು ಓಲಾ ಸ್ಕೂಟರ್ ಖರೀದಿಸಬೇಡಿ, ಇದು ಡಬ್ಬಾ ಗಾಡಿ, ನಿಮ್ಮ ಜೀವವನ್ನೇ ಹಾಳು ಮಾಡಲಿದೆ ಎಂದು ನೊಂದ ಗ್ರಾಹಕನೊಬ್ಬ ಓಲಾ ಸ್ಕೂಟರ್‌ಗೆ ಮನವಿ ಅಂಟಿಸಿ ತಿರುಗಾಡುತ್ತಿರುವ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರು(ಸೆ.12) ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪೈಕಿ ಓಲಾ ಕೂಡ ಒಂದು. ಆದರೆ ಓಲಾ ಖರೀದಿಸಿದ ಗ್ರಾಹಕರ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಹಲವರು ಓಲಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಓಲಾ ಖರೀದಿಸಿದ ಗ್ರಾಹಕನೊಬ್ಬ ಬೇಸತ್ತು ಕನ್ನಡಿಗರಿಗೆ ಸಂದೇಶ ನೀಡಿದ್ದಾನೆ. ತನ್ನ ಓಲಾ ಸ್ಕೂಟರ್ ಮುಂದ ಈ ಮನವಿ ಸಂದೇಶ ಅಂಟಿಸಿ ತಿರುಗಾಡುತ್ತಿದ್ದಾನೆ. ಪ್ರಿಯ ಕನ್ನಡಿಗರೆ ದಯವಿಟ್ಟು ಓಲಾ ಸ್ಕೂಟರ್ ಖರೀದಿಸಬೇಡಿ, ಇದು ಡಬ್ಬಾ ಗಾಡಿ, ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು ಎಂದು ನೊಂದ ಗ್ರಾಹಕ ಮನವಿ ಮಾಡಿದ್ದಾನೆ.
ಓಲಾ ಖರೀದಿಸಿದ ಗ್ರಾಹಕ ಇದೀಗ ತೀವ್ರ ಅಸಮಾಧಾನಗೊಂಡಿದ್ದಾನೆ. ಇದರ ವಿರುದ್ಧ ಹೋರಾಟ ಆರಂಭಿಸಿದ್ದಾನೆ. ತನ್ನ ಓಲಾ ಸ್ಕೂಟರ್ ಮುಂಭಾಗದಲ್ಲಿ ಈ ಮನವಿ ಸಂದೇಶ ಅಂಟಿಸಿ ಎಲ್ಲೆಡೆ ತಿರುಗಾಡುತ್ತಿದ್ದಾನೆ. ಇದು ಓಲಾಗೆ ತೀವ್ರ ಹೊಡೆತ ನೀಡಿದೆ. ಜೊತೆಗ ಸಾಮಾಜಿಕ ಮಾಧ್ಯಮಗಳಲ್ಲೂ ಈ ಸಂದೇಶ ವೈರಲ್ ಆಗುತ್ತಿದೆ.
Kalaburagi: ಹೊಸ ಬೈಕ್‌ನ ಸರ್ವೀಸ್ ಬಗ್ಗೆ ಅತೃಪ್ತಿ, ಒಲಾ ಶೋರೂಮ್‌ಗೆ ಬೆಂಕಿಯಿಟ್ಟ ಗ್ರಾಹಕನ ಬಂಧನ!
ಪ್ರಿಯ ಕನ್ನಡಿಗರೆ, ಓಲಾ ಒಂದು ಡಬ್ಬಾ ಗಾಡಿ. ದಯವಿಟ್ಟು ತಗೋಳಬೇಡಿ. ಓಲಾ ತಗೋಂಡ್ರೆ ನಿಮ್ಮ ಜೀವನ ಗೋಳು. ದಯವಿಟ್ಟು ಖರೀದಿಸಬೇಡಿ ಇಂತಿ ಅಸಮಧಾನಿತ ಓಲಾ ಗ್ರಾಹಕ ಎಂದು ನಿಶಾ ಗೌರಿ ಅನ್ನೋ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಓಲಾ ಇವಿ ಸ್ಕೂಟರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಮನವಿ ಮಾಡುತ್ತಿರುವಾದಿಗೆ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಇಷ್ಟಕ್ಕೇ ಈ ಗ್ರಾಹಕನ ಹೋರಾಟ ನಿಂತಿಲ್ಲ. ಗ್ರಾಹಕರ ವೇದಿಕೆ ಮೂಲಕ ಓಲಾ ಕಂಪನಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾನೆ. ಇದೀಗ ಒಲಾಗೆ ಗ್ರಾಹಕರ ವೇದಿಕೆ ಕಮಿಷನ್ ನೋಟಿಸ್ ನೀಡಿದೆ. ಓಲಾ ಸ್ಕೂಟರ್ ಸಮಸ್ಯೆ, ಸರ್ವೀಸ್ ನಿರ್ಲಕ್ಷ್ಯ, ಸಿಬ್ಬಂದಿಗಳ ನಿರ್ಲಕ್ಷ್ಯಗಳ ಕುರಿತು ಹೋರಾಟ ತೀವ್ರಗೊಂಡಿದೆ.
ಇತ್ತೀಚೆಗೆ ಓಲಾ ಗ್ರಾಹಕನೊಬ್ಬ ಸ್ಕೂಟರ್ ರಿಪೇರಿ ಮಾಡಿಕೊಡುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಓಲಾ ಶೋ ರೂಂಗೆ ಬೆಂಕಿ ಇಟ್ಟ ಘಟನೆ ಕಲಬುರಗಿಯಲ್ಲಿ ನಡೆದಿತ್ತು. ಓಲಾ ವಿರುದ್ದ ದೂರು, ಅಸಮಾಧಾನಗೊಂಡಿರುವರ ಸಂಖ್ಯೆ ಹೆಚ್ಚುತ್ತಿದೆ. ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಬಹುತೇಕರು ಓಲಾ ವಿರುದ್ದ ಅಸಮಾಧಾನ ತೋಡಿಕೊಂಡಿದ್ದಾರೆ.
ಶೋ ರೂಮ್ ಮುಂದೆಯೇ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗೆ ಅಂತ್ಯ ಸಂಸ್ಕಾರ ಮಾಡಿದ ಯುವಕ