Kalaburagi: ಹೊಸ ಬೈಕ್‌ನ ಸರ್ವೀಸ್ ಬಗ್ಗೆ ಅತೃಪ್ತಿ, ಒಲಾ ಶೋರೂಮ್‌ಗೆ ಬೆಂಕಿಯಿಟ್ಟ ಗ್ರಾಹಕನ ಬಂಧನ!
ಹೊಸದಾಗಿ ಖರೀದಿ ಮಾಡಿದ್ದ ಒಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಸರ್ವೀಸ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಗ್ರಾಹಕ, ಇಡೀ ಓಲಾ ಶೋ ರೂಮ್‌ಗೆ ಬೆಂಕಿ ಇಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ 26 ವರ್ಷದ ಮೆಕಾನಿಕ್ ಮೊಹಮದ್ ನದೀಂನನ್ನು ಬಂಧಿಸಲಾಗಿದೆ.
ಬೆಂಗಳೂರು (ಸೆ.11): ಇತ್ತೀಚೆಗೆ ಖರೀದಿ ಮಾಡಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಸರ್ವೀಸ್‌ಅನ್ನು ಕೆಟ್ಟದಾಗಿ ಮಾಡಿದ್ದ ಕಾರಣಕ್ಕೆ ಹಾಗೂ ಪದೇ ಪದೇ ವಿನಂತಿ ಮಾಡಿದರೂ ಸರ್ವೀಸ್‌ಅನ್ನು ಸರಿಯಾಗಿ ನಿಭಾಯಿಸದ ವಿಚಾರವಾಗಿ 26 ವರ್ಷದ ಗ್ರಾಹಕನೊಬ್ಬ ಇಡೀ ಓಲಾ ಶೋ ರೂಮ್‌ಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. ಈ ಆರೋಪದ ಮೇಲೆ 26 ವರ್ಷದ ಮೆಕಾನಿಕ್ ಮೊಹಮದ್ ನದೀಂನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ನಂ.1 ಇ-ಸ್ಕೂಟರ್ ತಯಾರಕ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್, ಸಾರ್ವಜನಿಕರಿಂದ ಸರ್ವೀಸ್ ವಿಚಾರವಾಗಿ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಾರ್ಯಕ್ಷಮತೆ ವಿಚಾರವಾಗಿ ದೊಡ್ಡ ಮಟ್ಟದ ಕೋಪ ಎದುರಿಸುತ್ತಿದೆ. ಹಲವಾರು ಮೆಕ್ಯಾನಿಕ್‌ಗಳು ಓಲಾ ಸೇವಾ ಕೇಂದ್ರಗಳು ಗಮನಾರ್ಹ ಬ್ಯಾಕ್‌ಲಾಗ್ ಅನ್ನು ಎದುರಿಸುತ್ತಿವೆ ಮತ್ತು ದೂರುಗಳ ಪರಿಮಾಣವನ್ನು ನಿಭಾಯಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವೃತ್ತಿಯಲ್ಲಿ ಮೆಕಾನಿಕ್ ಆಗಿರುವ ಮೊಹಮದ್ ನದೀಂ, ಒಂದು ತಿಂಗಳ ಹಿಂದೆ ಸ್ಕೂಟರ್ ಖರೀದಿ ಮಾಡಿದ್ದ. ಆದರೆ, ಖರೀದಿ ಮಾಡಿದ ಕೆಲವು ದಿನಗಳಲ್ಲಿಯೇ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಬೈಕ್‌ಅನ್ನು ಸರ್ವೀಸ್ ಸ್ಟೇಷನ್‌ಗೆ ಬಿಟ್ಟಿದ್ದರು ಎಂದು ಕಲಬುರಗಿ ಪೊಲೀಷ್ ಕಮೀಷನರ್ ಹೇಳಿದ್ದಾರೆ. ಆದರೆ, ಸರ್ವೀಸ್ ಮಾಡಿದ ವ್ಯಕ್ತಿಗಳ ರೆಸ್ಪಾನ್ಸ್ ಉತ್ತಮವಾಗಿರಲಿಲ್ಲ. ಹಲವು ಬಾರಿ ಶೋರೂಮ್‌ಗೆ ಭೇಟಿ ನೀಡಿದರೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ಮಂಗಳವಾರ ಸ್ಕೂಟರ್ ಬಗ್ಗೆ ಕೇಳಲು ಹೋಗಗಿದ್ದಾಗಲೇ ತನ್ನೊಂದಿಗೆ ಪೆಟ್ರೋಲ್‌ಅನ್ನೂ ತೆಗೆದುಕೊಂಡು ಹೋಗಿದ್ದ ವ್ಯಕ್ತಿ ಇಡೀ ಶೋ ರೂಮ್‌ಗೆ ಬೆಂಕಿ ಇಟ್ಟಿದ್ದಾರೆ. ಇದರಲ್ಲಿ 6 ಬೈಕ್‌ಗಳು ಸುಟ್ಟುಕರಕಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಖರೀದಿ ಮಾಡಿದ್ದ ಸ್ಕೂಟರ್‌ನಲ್ಲಿ ಯಾವ ಸಮಸ್ಯೆ ಇತ್ತು ಅನ್ನೋದನ್ನು ಕೂಡ ಓಲಾ ಕಂಪನಿ ತಿಳಿಸಿಲ್ಲ. ಪೊಲೀಸ್ ಅಧಿಕಾರಿ ಶರಣಪ್ಪ ಎಸ್.ಡಿ ಹೇಳುವ ಪ್ರಕಾರ, ಶೋರೂಮ್‌ಗೆ 8,50 ಲಕ್ಷ ರೂಪಾಯಿ ಮೌಲ್ಯದ ಹಾನಿಯಾಗಿದೆ. ಕಳೆದ ತಿಂಗಳು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಲಿಸ್ಟ್ ಆಗಿರುವ ಓಲಾ ಎಲೆಕ್ಟ್ರಿಕ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.