ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್ ಹೆಚ್ಚು ಫೇಮಸ್‌ ಆಗ್ತಿದೆ. ಹಬ್ಬದ ಟೈಮ್‌ ನಲ್ಲಿ ನೀವೂ ಸ್ಕೂಟರ್ ಖರೀದಿ ಪ್ಲಾನ್‌ ಮಾಡ್ತಿದ್ದರೆ ಟಿವಿಎಸ್‌ ಸ್ಕೂಟರ್‌ ಗಳನ್ನು ನೀವು ನೋಡ್ಬಹುದು.

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ಗಳ ಕಡೆಗೆ ಜನರ ಆಸಕ್ತಿ ಹೆಚ್ಚುತ್ತಿದೆ. ಅದರಲ್ಲೂ ದಿನನಿತ್ಯ ಆಫೀಸ್ಗೆ ಹೋಗುವವರು, ಮಕ್ಕಳನ್ನು ಶಾಲೆಗೆ ಬಿಡುವವರು ಮತ್ತು ಸಿಟಿಯೊಳಗೆ ಓಡಾಡುವವರಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳು ಅನುಕೂಲಕರ ಆಯ್ಕೆಯಾಗಿವೆ. ಇಂತಹ ಸ್ಕೂಟರ್ಗಳಲ್ಲಿ TVS ಕಂಪನಿಯ iQube ಕೂಡ ಒಂದು. ಈ ಸ್ಕೂಟರ್ ಒಟ್ಟು ಆರು ವೇರಿಯಂಟ್ಗಳಲ್ಲಿ ಲಭ್ಯವಿದೆ.

ಟಿವಿಎಸ್ ಐಕ್ಯೂಬ್ (TVS iQube )2.3 kWh

ಇದು TVS iQube ಸ್ಕೂಟರ್ನ ಆರಂಭಿಕ ವೇರಿಯಂಟ್. ಇದರಲ್ಲಿ 2.3 kWh ಬ್ಯಾಟರಿ ಇದ್ದು, IDC ಪ್ರಕಾರ 114 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 68 ಕಿಲೋಮೀಟರ್. ಈ ವೇರಿಯಂಟ್ನ ಎಕ್ಸ್ ಶೋರೂಮ್ ಬೆಲೆ ಸುಮಾರು 95,124 ರೂಪಾಯಿ. ಕಡಿಮೆ ದೂರದ ದೈನಂದಿನ ಪ್ರಯಾಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬೇಕೆನ್ನುವವರು ಈ ಮಾಡೆಲ್ ಖರೀದಿ ಮಾಡ್ಬಹುದು.

ಟಿವಿಎಸ್ ಐಕ್ಯೂಬ್ (TVS iQube ) 3.1 kWh

ಈ ವೇರಿಯಂಟ್ನಲ್ಲಿ 3.1 kWh ಬ್ಯಾಟರಿ ನೀಡಲಾಗಿದೆ. 123 ಕಿಲೋಮೀಟರ್ ರೇಂಜ್ ಹೊಂದಿದ್ದು, ಗರಿಷ್ಠ ವೇಗ ಗಂಟೆಗೆ 82 ಕಿಲೋಮೀಟರ್. ಇದರ ಎಕ್ಸ್ ಶೋರೂಮ್ ಬೆಲೆ ಸುಮಾರು 1,06,462 ರೂಪಾಯಿ. ಬೇಸ್ ವೇರಿಯಂಟ್ಗಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಮತ್ತು ವೇಗ ಬೇಕೆನ್ನುವವರಿಗೆ ಇದು ಮತ್ತೊಂದು ಆಯ್ಕೆ.

ಟಿವಿಎಸ್ ಐಕ್ಯೂಬ್ 3.5 kWh

ಈ ಮಾಡೆಲ್ನಲ್ಲಿ 3.5 kWh ಬ್ಯಾಟರಿ ಇದೆ. ಒಂದೇ ಚಾರ್ಜ್ನಲ್ಲಿ 145 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 82 ಕಿಲೋಮೀಟರ್. ಈ ವೇರಿಯಂಟ್ನ ಎಕ್ಸ್ ಶೋರೂಮ್ ಬೆಲೆ ಸುಮಾರು 1,12,200 ರೂಪಾಯಿ. ದಿನನಿತ್ಯದ ಪ್ರಯಾಣಕ್ಕೆ ಹೆಚ್ಚಿನ ರೇಂಜ್ ಬೇಕಿರುವವರು ಈ ಮಾಡೆಲ್ ಅನ್ನು ಪರಿಶೀಲಿಸಬಹುದು.

ಟಿವಿಎಸ್ ಐಕ್ಯೂಬ್ MillionR Edition

ಇದು 3.5 kWh ಬ್ಯಾಟರಿ ಹೊಂದಿರುವ ವಿಶೇಷ ಆವೃತ್ತಿ. ಇದರ ರೇಂಜ್ 145 ಕಿಲೋಮೀಟರ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ 82 ಕಿಲೋಮೀಟರ್. ಈ ವೇರಿಯಂಟ್ನ ಎಕ್ಸ್ ಶೋರೂಮ್ ಬೆಲೆ ಸುಮಾರು 1,15,751. ಅರೋರಾ ಗ್ರೀನ್ ಬಣ್ಣ ಇದರ ವಿಶೇಷ ಆಕರ್ಷಣೆಯಾಗಿದೆ.

ಟಿವಿಎಸ್ ಐಕ್ಯೂಬ್ S 4.7 kWh

ಈ ವೇರಿಯಂಟ್ನಲ್ಲಿ 4.7 kWh ಬ್ಯಾಟರಿ ನೀಡಲಾಗಿದೆ. IDC ಪ್ರಕಾರ 175 ಕಿಲೋಮೀಟರ್ ರೇಂಜ್ ಹೊಂದಿದ್ದು, ಗರಿಷ್ಠ ವೇಗ ಗಂಟೆಗೆ 82 ಕಿಲೋಮೀಟರ್. ಇದರ ಎಕ್ಸ್ ಶೋರೂಮ್ ಬೆಲೆ ಸುಮಾರು 1,30,340 ರೂಪಾಯಿ. ಹೆಚ್ಚಿನ ದೂರ ಪ್ರಯಾಣಿಸುವವರಿಗೆ ದೊಡ್ಡ ಬ್ಯಾಟರಿ ಸಾಮರ್ಥ್ಯದ ಈ ವೇರಿಯಂಟ್ ಉಪಯುಕ್ತ.

ಟಿವಿಎಸ್ ಐಕ್ಯೂಬ್ ST 5.3 kWh

ಈ ಪಟ್ಟಿಯಲ್ಲಿರುವ ಹೆಚ್ಚಿನ ಬ್ಯಾಟರಿ ಸಾಮರ್ಥ್ಯದ ವೇರಿಯಂಟ್ ಎಂದರೆ iQube ST. ಇದರಲ್ಲಿ 5.3 kWh ಬ್ಯಾಟರಿ ಇದ್ದು, IDC ಪ್ರಕಾರ 212 ಕಿಲೋಮೀಟರ್ ರೇಂಜ್ ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 82 ಕಿಲೋಮೀಟರ್. ಈ ವೇರಿಯಂಟ್ನ ಎಕ್ಸ್ ಶೋರೂಮ್ ಬೆಲೆ ಸುಮಾರು 1,48,877 ರೂಪಾಯಿ. ಹೆಚ್ಚಿನ ರೇಂಜ್ ಮತ್ತು ಹೆಚ್ಚುವರಿ ಫೀಚರ್ಗಳನ್ನು ಬಯಸುವವರು ಈ ಮಾಡೆಲ್ ಅನ್ನು ಪರಿಗಣಿಸಬಹುದು.

ಖರೀದಿಸುವ ಮೊದಲು ಏನು ಗಮನಿಸಬೇಕು?

ನಾವಿಲ್ಲ ಎಲ್ಲ ಸ್ಕೂಟರ್‌ ನ ಎಕ್ಸ್ ಶೋರೂಮ್ ಬೆಲೆಗಳ ಮಾಹಿತಿ ನೀಡಿದ್ದೇವೆ. ಖರೀದಿಗೆ ಮುನ್ನ ನೀವು ವಿಮೆ, ನೋಂದಣಿ ಮತ್ತು ಇತರ ಶುಲ್ಕಗಳು ಸೇರಿದಾಗ ಆನ್ರೋಡ್ ಬೆಲೆ ಎಷ್ಟಾಗುತ್ತದೆ ಎಂಬುದನ್ನು ಪರಿಶೀಲಿಸಿ. ನಗರ, ಡೀಲರ್, ಸಬ್ಸಿಡಿ ಮತ್ತು ಲಭ್ಯವಿರುವ ಆಫರ್ಗಳಿಗೆ ಅನುಗುಣವಾಗಿಯೂ ಬೆಲೆ ಬದಲಾಗಬಹುದು. ರೇಂಜ್ ಎಂಬುದು ಪರೀಕ್ಷಾ ಮಾನದಂಡದ ಪ್ರಕಾರ ನೀಡುವ ಅಂದಾಜು. ನೈಜ ರಸ್ತೆಯಲ್ಲಿ ಟ್ರಾಫಿಕ್, ವೇಗ ಮತ್ತು ಬಳಕೆಯನ್ನು ಅವಲಂಬಿಸಿ ರೇಂಜ್ ಕಡಿಮೆಯಾಗಬಹುದು.