Asianet Suvarna News Asianet Suvarna News

Electric Vehicle: ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಆರಂಭ

ಭಾರತದಲ್ಲಿ ಬೌನ್ಸ್ ಇನ್ಫಿನಿಟಿ (Bounce Infinity) ತನ್ನ ಇ1 ಎಲೆಕ್ಟ್ರಿಕ್ ಸ್ಕೂಟರ್ನ (E1 electric scooter) ಉತ್ಪಾದನೆ ಪ್ರಾರಂಭಿಸಿದೆ.

Bounce Infinity E 1 rolled out
Author
Bangalore, First Published Apr 12, 2022, 10:54 AM IST

ಭಾರತದಲ್ಲಿ ಬೌನ್ಸ್ ಇನ್ಫಿನಿಟಿ (Bounce Infinity) ತನ್ನ ಇ1 ಎಲೆಕ್ಟ್ರಿಕ್ ಸ್ಕೂಟರ್ನ (E1 electric scooter) ಉತ್ಪಾದನೆ ಪ್ರಾರಂಭಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿರುವ ಕಂಪನಿಯ ಅತ್ಯಾಧುನಿಕ ಸೌಲಭ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (EV) ತಯಾರಿಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೌನ್ಸ್ ಇನ್ಫಿನಿಟಿಯ ಸಹ-ಸಂಸ್ಥಾಪಕ ಮತ್ತು  ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ-CEO) ವಿವೇಕಾನಂದ ಹಳ್ಳೇಕೆರೆ, “ಬೌನ್ಸ್ ಇನ್ಫಿನಿಟಿ E1 ರೋಲ್-ಔಟ್ ಆಗಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ಗಳ ಮೊದಲ ಬ್ಯಾಚ್ ಸಿದ್ಧವಾಗಲಿದೆ. ದೇಶಾದ್ಯಂತ ಗ್ರಾಹಕರು ಇದಕ್ಕಾಗಿ ಕಾಯುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ” ಎಂದಿದ್ದಾರೆ. 

ಬೌನ್ಸ್ ಇನ್ಫಿನಿಟಿ E1 ಭಾರತದಲ್ಲಿ ಸ್ವ್ಯಾಪ್ (ಬದಲಿಸಬಹುದಾದ) ಮಾಡಬಹುದಾದ ಬ್ಯಾಟರಿ ಹಾಗೂ ಡ್ಯುಯಲ್ ಆಯ್ಕೆಗಳನ್ನು ಹೊಂದಿರುವ ಏಕೈಕ ಸ್ಕೂಟರ್ ಆಗಿದೆ. ಇದು ಬ್ಯಾಟರಿ-ಆ್ಯಸ್-ಎ-ಸರ್ವಿಸ್ (BaaS) ಜೊತೆಗೆ ಸ್ಕೂಟರ್ ಮತ್ತು ಬ್ಯಾಟರಿ ಮತ್ತು ಚಾರ್ಜರ್ ಹೊಂದಿರುವ ಸ್ಕೂಟರ್ ಆಗಿದೆ. ಬ್ಯಾಟರಿ-ಆ್ಯಸ್-ಎ-ಸರ್ವಿಸ್ (BaaS) ಆಯ್ಕೆಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗುತ್ತಿರುವ ತಂತ್ರಜ್ಞಾನವಾಗಿದೆ.

ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಹೋಲಿಸಿದರೆ ಇದು ಶೇ.40ರಷ್ಟು ಕಡಿಮೆ ದರ ಹೊಂದಿದೆ. ಸ್ಕೂಟರ್ ಜೊತೆಗೆ ತೆಗೆಯಬಲ್ಲ ಬ್ಯಾಟರಿ ಹೊಂದಿದ್ದು, ಅದನ್ನು ಗ್ರಾಹಕರು ತಮ್ಮ ಮನೆ ಅಥವಾ ಕಚೇರಿಯಲ್ಲಿ ಅಥವಾ ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು.

ಬೌನ್ಸ್ ಇನ್ಫಿನಿಟಿ E1 ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲಾಕ್, ಪರ್ಲ್ ವೈಟ್, ಡೆಸಾಟ್ ಸಿಲ್ವರ್ ಮತ್ತು ಕಾಮೆಟ್ ಗ್ರೇ. ಇದು  ಪವರ್ ಮೋಡ್ (Power Mode), ರಿವರ್ಸ್ ಮೋಡ್ (Reverse mode), ಕ್ರೂಸ್ ಕಂಟ್ರೋಲ್( Cruise control) ಮತ್ತು ಡ್ರ್ಯಾಗ್ ಮೋಡ್ನಂತಹ (Drag mode) ಸ್ಮಾರ್ಟ್ ಮತ್ತು ಪ್ರಾಯೋಗಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಜಲನಿರೋಧಕ 2 ಕೆಡಬ್ಲ್ಯುಎಚ್ ಬ್ಯಾಟರಿ (kWh ಬ್ಯಾಟರಿ-(48V, IP67) ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೂ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Electric Car ಈ ಎಲೆಕ್ಟ್ರಿಕ್ ಕಾರಿನಲ್ಲಿ 60 ಕಿ.ಮೀ ಕ್ರಮಿಸಲು ಕೇವಲ 5 ರೂಪಾಯಿ ಖರ್ಚು!

ಬೌನ್ಸ್ ಇನ್ಫಿನಿಟಿ 2021ರ ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಬೌನ್ಸ್ ಇನ್ಫಿನಿಟಿ ವಾಹನವನ್ನು ಭಾರತೀಯ ರಸ್ತೆಯನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಬಳಕೆದಾರರ ಸಹಜ ಬಳಕೆಯ ಪ್ರಮಾಣವನ್ನು ಗಮನದಲ್ಲಿರಿಸಕೊಂಡು ತಯಾರಿಸಲಾಗಿದೆ. ಒಂದು ಅಧ್ಯಯನದ ಪ್ರಕಾರ, ಬೆಂಗಳೂರು ಸೇರಿದಂತೆ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಜನರು ದಿನವೊಂದಕ್ಕೆ ಸಂಚರಿಸುವುದು ಸರಾಸರಿ 15ರಿಂದ 20 ಕಿಮೀ ಮಾತ್ರ. ಅಲ್ಲದೆ, ನಗರ ಪ್ರದೇಶಗಳಲ್ಲಿ 30ರಿಂದ 40 ಕಿಮೀವರೆಗೆ ವೇಗ ಮಾತ್ರ ಸಾಧ್ಯ. ಆದ್ದರಿಂದ ಬೌನ್ಸ್ ಇನ್ಫಿನಿಟಿ 65 ಕಿಮೀ ರೇಂಜ್ ನೀಡಲಿದೆ. ಜೊತೆಗೆ, 65 ಕಿಮೀ ವೇಗವಾಗಿ ಸಂಚರಿಸಲಿದೆ. ಇದರಲ್ಲಿ 1.5 ಕೆಡಬ್ಲ್ಯು ಮೋಟಾರ್, 2 ಕೆಡಬ್ಲ್ಯು (KW) ಬ್ಯಾಟರಿ ಇದೆ. ಇದರಲ್ಲಿ ಬದಲಿಸಬಹುದಾದ ಬ್ಯಾಟರಿ ಇರುವುದರಿಂದ ಜನರು ಅದರ ಚಾರ್ಜಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂಬುದು ಬೌನ್ಸ್ ಸಂಸ್ಥಾಪಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ‘Bounce’ ಈಗ ಸಂಪೂರ್ಣ ಎಲೆಕ್ಟ್ರಿಕ್, ಚಾರ್ಜಿಂಗ್ ಸವಾಲಿಗೆ ಸ್ವ್ಯಾಪಿಂಗ್ ಉತ್ತರ: ಸಿಓಓ ಅನಿಲ್ ಗಿರಿರಾಜು

ಬೌನ್ಸ್ ಇನ್ಫಿನಿಟಿ E1 ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ  53,911 ರೂ.ಗಳಷ್ಟಿದೆ. ಇದರ ಟಾಪ್ ವೇರಿಯಂಟ್ಗಳ ಬೆಲೆ 77,292 ರೂ.ಗಳಷ್ಟಿದೆ. ಬೌನ್ಸ್ ಇನ್ಫಿನಿಟಿ E1 ತನ್ನ ಮೋಟಾರ್ನಿಂದ 1500 W ಶಕ್ತಿಯನ್ನು ಉತ್ಪಾದಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಡಿಸ್ಕ್ ಬ್ರೇಕ್ಗಳೊಂದಿಗೆ, ಬೌನ್ಸ್ ಇನ್ಫಿನಿಟಿ E1 ಎರಡೂ ಚಕ್ರಗಳ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ. ಇದರ ಗ್ರಾಹಕರು, ಬೌನ್ಸ್ ಇನ್ಫಿನಿಟಿ ಆ್ಯಪ್ನಲ್ಲಿ ದೊರೆಯುವ ಸ್ವ್ಯಾಪ್ ಬ್ಯಾಟರಿಯ ಕುರಿತು ಮಾಹಿತಿ ಕಲೆ ಹಾಕಿ, ಬಳಕೆ ಮಾಡಿಕೊಳ್ಳಬಹುದು. 

Follow Us:
Download App:
  • android
  • ios