Asianet Suvarna News Asianet Suvarna News

Electric Car ಈ ಎಲೆಕ್ಟ್ರಿಕ್ ಕಾರಿನಲ್ಲಿ 60 ಕಿ.ಮೀ ಕ್ರಮಿಸಲು ಕೇವಲ 5 ರೂಪಾಯಿ ಖರ್ಚು!

  • 67 ವರ್ಷದ ವೃದ್ಧ ಮನೆಯಲ್ಲೇ ತಯಾರಿಸಿದ ಎಲೆಕ್ಟ್ರಿಕ್ ಕಾರು
  • ಕೆಲಸಕ್ಕೆ ಹೋಗಿ ಬರಲು ಆವಿಷ್ಕರಿಸಿದ ನೂತನ ಕಾರು
  • ಹೊಸ ಸಾಹಸಕ್ಕೆ ಮೆಚ್ಚುಗೆಗಳ ಮಹಾಪೂರ
Kerala 65 year old man builds electric mini car with 60 km mileage at cost of just Rs 5 ckm
Author
Bengaluru, First Published Apr 11, 2022, 5:42 PM IST | Last Updated Apr 11, 2022, 5:42 PM IST

ಕೊಲ್ಲಂ(ಏ.11): ಎಲೆಕ್ಟ್ರಿಕ್ ವಾಹನ ಭವಿಷ್ಯ ಸಾರಿಗೆಯಾಗಿದೆ. ಎಲ್ಲಾ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಎಲ್ಲಾ ಕಾರುಗಳು ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ಇದರ ನಡುವೆ ಕೇರಳದ 67 ವರ್ಷದ ವ್ಯಕ್ತಿ ಮನೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದಾರೆ. ಈ ಕಾರು ಕೇವಲ 5 ರೂಪಾಯಿಯಲ್ಲಿ 60 ಕಿಲೋಮೀಟರ್ ದೂರ ಕ್ರಮಿಸುತ್ತಿದೆ. ಇದೀಗ ಕೇರಳದ ವೃದ್ಧನ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ವಿಲೇಜ್ ವಾರ್ತಾ ಅನ್ನೋ ಯೂಟ್ಯೂಬ್ ಈ ಸಾಧಕನ ಪತ್ತೆ ಹಚ್ಚಿ, ಹೊಸ ಕಾರನ್ನು ಪರಿಚಯಿಸಿದೆ. ಆ್ಯಂಟೋನಿ ಜಾನ್ ಮನೆಯಿಂದ ಕಚೇರಿಗೆ ತೆರಳಲು 30 ಕಿಲೋಮೀಟರ್ ದೂರವಿದೆ.ಇತ್ತ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಹೀಗಾಗಿ ಪ್ರತಿ ದಿನ ಮನೆಯಿಂದ ಕಚೇರಿ ಪ್ರಯಾಣಕ್ಕೆ ದುಬಾರಿಯಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಪರಿಸಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರು ತಯಾರಿಸಲು ಮುಂದಾಗಿದ್ದಾರೆ. ಇದರಂತೆ ಫ್ರೆಂಚ್ ಕಾರಿನ ಡಿಸೈನ್ ತೆಗೆದು ಅದನ್ನು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿದ್ದಾರೆ. ಇತ್ತ ಎಂಜಿನ್ ಮೋಟಾರು, ಬ್ಯಾಟರಿ ಕುರಿತು ಯೂಟ್ಯೂಬ್ ಸೇರಿದಂತೆ ಹಲವು ಮಾಹಿತಿಗಳನ್ನು ಸಂಶೋಧನೆ ಮಾಡಿದ್ದಾರೆ.

ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್!

ದೆಹಲಿಯಿಂದ ಬ್ಯಾಟರಿ, ಮೋಟಾರು ಸೇರಿದಂತೆ ಹಲವು ಸಾಮಾಗ್ರಿಗಳನ್ನು ತರಿಸಿಕೊಂಡಿದ್ದಾರೆ. 2018ರಲ್ಲೇ ಈ ವಾಹನವನ್ನು ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾರು ತಯಾರಿಸುವ ಸಾಹಸಕ್ಕೆ ಕೈಹಾಕಿದ  ಆ್ಯಂಟೋನಿಗೆ ಬ್ಯಾಟರಿ ಲೆಕ್ಕಾಚಾರ ಕೊಂಚ ತಪ್ಪಾಗಿದೆ. ಹೀಗಾಗಿ ಸಂಪೂರ್ಣ ಚಾರ್ಜ್ ಮಾಡಿದರೆ 12 ಕಿ.ಮೀ ಮಾತ್ರ ಪ್ರಯಾಣ ಮಾಡುತಿತ್ತು.

ಬಳಿಕ ಕೊರೋನಾ ಕಾರಣ ಯಾವುದೇ ಬ್ಯಾಟರಿ ಹಾಗೂ ಇತರ ಸಾಮಾಗ್ರಿಗಳು ಸಿಗುವುದೇ ಕಷ್ಟವಾಯಿತು. ಹೀಗಾಗಿ ತಮ್ಮ ಎಲೆಕ್ಟ್ರಿಕ್ ವಾಹನ ಅಪ್‌ಗ್ರೇಡ್ ಸಾಧ್ಯವಾಗಲಿಲ್ಲ. 2022ರಲ್ಲಿ ಮತ್ತೆ ತಮ್ಮ ಚಿಕ್ಕ ಕಾರನ್ನು ಅಪ್‌ಗ್ರೇಡ್ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ದೆಹಲಿ ಬ್ಯಾಟರಿ ಕಂಪನಿ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಹೆಚ್ಚಿನ ಕಿಲೋವ್ಯಾಟ್ ಬ್ಯಾಟರಿ ತರಿಸಿಕೊಂಡಿದ್ದಾರೆ.

 ಕೈಗೆಟುಕುವ ದರದ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!

ನೂತನ ಬ್ಯಾಟರಿ ಅಳವಡಿಸಿದ ಬಳಿಕ ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ದೂರ ಕ್ರಮಿಸುತ್ತಿದೆ. ಇನ್ನು ಕಾರಿನ ಸ್ಟೇರಿಂಗ್ ಗುಜುರಿ ಅಂಗಡಿಯಿಂದ ಖರೀದಿಸಿದ್ದಾರೆ. ಸ್ಟೇರಿಂಗ್ ರಾಡ್ ಸೇರಿದಂತೆ ಇತರ ವಸ್ತುಗಳನ್ನು ಹಳೇ ಟಾಟಾ ನ್ಯಾನೋ ಕಾರಿನ ವಸ್ತುಗಳನ್ನು ಬಳಕೆ ಮಾಡಿದ್ದಾರೆ. ಈ ಮೂಲಕ ತಮ್ಮ ಮೊದಲಿನ ಬ್ಯಾಟರಿ ಹಾಗೂ ಎರಡನೇ ಬಾರಿ ಹೆಚ್ಚು ಸಾಮರ್ಥ್ಯ ಬ್ಯಾಟರಿ ಸೇರಿ ಎಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕಹಾಕಿದರೆ 4 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಆ್ಯಂಟೋನಿ ಜಾನ್ ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಯಾವುದೇ ಎಲೆಕ್ಟ್ರಿಕ್ ಕಾರು ಖರೀದಿಸಬೇಕಾದರೆ 10 ಲಕ್ಷ ರೂಪಾಯಿಗಿಂತ ದುಬಾರಿಯಾಗಿದೆ. ಇದು ನಮ್ಮಂತ ಸಾಮಾನ್ಯರಿಗೆ ಕೈಗೆಟುಕುವುದಿಲ್ಲ. ಇದಕ್ಕಾಗಿ ನಾನೇ ಸ್ವತಃ ಕಡಿಮೆ ಖರ್ಚಿನಲ್ಲಿ ಕಚೇರಿಗೆ ತೆರಳು ಎಲೆಕ್ಟ್ರಿಕ್ ವಾಹನ ನಿರ್ಮಿಸಿದ್ದೇನೆ ಎಂದಿದ್ದಾರೆ.

ಈ ವಾಹನ ಚಾರ್ಜ್ ಮಾಡಲು 5 ರೂಪಾಯಿ ಸಾಕು. ಹೀಗಾಗಿ ಪ್ರತಿ ದಿನ 60 ಕಿಲೋಮೀಟರ್ ದೂರ ಕ್ರಮಿಸಲು ಪೆಟ್ರೋಲ್ ಅಥವಾ ಡೀಸೆಲ್ ವಾಹನದಲ್ಲಿ ಕನಿಷ್ಟ 300 ರಿಂದ 500 ರೂಪಾಯಿ ಬೇಕು. ಆದರೆ ಇದರಲ್ಲಿ 5 ರೂಪಾಯಿ ಸಾಕು ಎಂದಿದ್ದಾರೆ.

ಕಾರಿನ ಬ್ರೇಕ್ ಸೇರಿದಂತೆ ಇತರ ಸೇಫ್ಟಿ ಫೀಚರ್ಸ್ ಕೂಡ ಗಮನಹರಿಸಲಾಗಿದೆ. ಹೀಗಾಗಿ ದ್ವಿಚಕ್ರ ವಾಹನದಲ್ಲಿನ ಪ್ರಯಾಣಕ್ಕಿಂತ ಹೆಚ್ಚಿನ ಸುರಕ್ಷತೆ ಈ ಕಾರು ನೀಡಲಿದೆ. ಇನ್ನು ಇದರ ಗರಿಷ್ಠ ವೇಗವನ್ನು 25 ಕಿ.ಮೀ ಪ್ರತಿ ಗಂಟೆಗೆ ಮಿತಿಗೊಳಿಸಲಾಗಿದೆ. ಇದರಿಂದ ಕಾರಿಗೆ ರಿಜಿಸ್ಟ್ರೇಶನ್ ಸೇರಿದಂತೆ ಇತರ ದಾಖಲೆ ಪತ್ರಗಳ ಅವಶ್ಯಕತೆ ಇರುವುದಿಲ್ಲ ಎಂದು ಆ್ಯಂಟೋನಿ ಜಾನ್ ಹೇಳಿದ್ದಾರೆ.

65 year old man builds electric mini car

Latest Videos
Follow Us:
Download App:
  • android
  • ios