ನವದೆಹಲಿ(ಏ.04): ಭಾರತದಲ್ಲಿ ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ಉತ್ಪಾದನೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ. ಇನ್ನು ಡೀಲರ್‌ಗಳು ಶೋ ರೂಂಗಳನ್ನು ಬಂದ್ ಮಾಡಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕವೇ ಆಟೋಮೊಬೈಲ್ ಕಂಪನಿಗಳ ಕಾರ್ಯ ಚಟುವಟಿಕೆ ಆರಂಭಗೊಳ್ಳಲಿದೆ. ಇದೀಗ ಲಾಕ್‌ಡೌನ್ ನಡುವೆ ಬಜಾಜ್ ಸುದ್ದಿ ಹೊರಬಿದ್ದಿದೆ. ಬಜಾಜ್‌ನ ಜನಪ್ರಿಯ ಡಿಸ್ಕವರ್ 110 ಹಾಗೂ 125 ಬೈಕ್ ಸ್ಥಗಿತಗೊಳ್ಳುತ್ತಿದೆ.

BS6 ಬಜಾಜ್ ಪಲ್ಸರ್ RS200 ಬೈಕ್ ಲಾಂಚ್, ಕೊರೋನಾ ಲಾಕ್‌ಡೌನ್ ಬಳಿಕ ವಿತರಣೆ!

ಬಜಾಜ್ ಡಿಸ್ಕವರ್ 125 ಬೈಕ್ ಮೊದಲು ಬಿಡುಗಡೆಯಾಗಿತ್ತು. ಡಿಸ್ಕವರ್ 125 ಯಶಸ್ಸಿನ ಬಳಿಕ 100 ಸೇರಿದಂತೆ ಇತರ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಇದೀಗ BS6 ಎಮಿಶನ್ ಎಂಜಿನ್‌ ನಿಯಮದಿಂದ ಡಿಸ್ಕವರ್ 125 ಹಾಗೂ ಡಿಸ್ಕವರ್ 100 ಬೈಕ್ ಸ್ಥಗಿತಗೊಳ್ಳುತ್ತಿದೆ. BS4 ವಾಹನ ಮಾರಾಟಕ್ಕೆ ಮಾರ್ಚ್ 31 ಕೊನೆಯ ದಿನವಾಗಿತ್ತು. ಆದರೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‍ನಿಂದಾಗಿ ಸುಪ್ರೀಂ ಕೋರ್ಟ್ ಮಾರಾಟದ ಗಡುವು ವಿಸ್ತರಿಸಿದೆ. 

ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!

ಬಹುತೇಕ ಕಂಪನಿಗಳು BS4 ವಾಹನಗಳನ್ನು BS6 ಎಮಿಶನ್ ಎಂಜಿನ್‌ಗಳಾಗಿ ಪರಿವರ್ತಿಸಿದೆ. ಬಜಾಜ್ ಕೂಡ ಬಹುತೇಕ ಎಲ್ಲಾ ವಾಹನಗಳನ್ನು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡಿದೆ. ಆದರೆ  ಡಿಸ್ಕವರ್ 125 ಹಾಗೂ ಡಿಸ್ಕವರ್ 100 ಬೈಕ್ ಅಪ್‌ಗ್ರೇಡ್ ಮಾಡಿಲ್ಲ. ಹೀಗಾಗಿ ಈ ಎರಡು ವೇರಿಯೆಂಟ್ ಸ್ಥಗಿತಗೊಂಡಿದೆ.

ಎರಡು ಮಾಡೆಲ್ ಸ್ಥಗಿತಗೊಂಡರೂ ಡಿಸ್ಕವರ್ 135 ಹಾಗೂ ಡಿಸ್ಕವರ್ 150 cc ಬೈಕ್ ಲಭ್ಯವಿದೆ. ಈ ಎರಡೂ ಮಾಡೆಲ್ BS6 ವೇರಿಯೆಂಟ್ ಬೈಕ್ ಮಾರುಕಟ್ಟೆಗೆ ಪ್ರವೇಶಿಸಿದೆ.  2008ರಲ್ಲಿ ಬಜಾಜ್ ಡಿಸ್ಕವರ್ ಬೈಕ್ ಪರಿಚಯಿಸಿತು. 12 ವರ್ಷಗಳಿಂದ ಬಜಾಜ್ ಡಿಸ್ಕವರ್ ಭಾರತದಲ್ಲಿ ಉತ್ತಮ ಮಾರಾಟ ದಾಖಲೆ ಹೊಂದಿದೆ.