ನವದೆಹಲಿ(ಫೆ.12): ಬಜಾಜ್ ಪಲ್ಸರ್ 150 BS6 ಎಂಜಿನ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಬೈಕ್ ಸ್ಟಾಂಡರ್ಡ್ ಡಿಸ್ಕ್ ಬ್ರೇಕ್ ವೇರಿಯೆಂಟ್ ಹಾಗೂ ಟ್ವಿನ್ ಡಿಸ್ಕ್ ಬ್ರೇಕ್ ವೇರೆಯೆಂಟ್ ಹೊಂದಿದೆ. ನೂತನ ಬೈಕ್ ಬ್ಲಾಕ್ ಕ್ರೋಮ್ ಹಾಗೂ ಬ್ಲಾಕ್ ರೆಡ್ ಕಲರ್‌ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ನೂತನ BS6 ಬಜಾಜ್ ಪಲ್ಸರ್ 200 NS ಬೈಕ್!

BS6 ಎಂಜಿನ್ ಬಜಾಜ್ ಪಲ್ಸರ್ 150 ಫ್ರಂಟ್ ಡಿಸ್ಕ್ ಬ್ರೇಕ್ ವೇರಿಯೆಂಟ್ ಬೈಕ್ ಬೆಲೆ 94,956 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟ್ವಿನ್ ಡಿಸ್ಕ್ ಬ್ರೇಕ್ ವೇರಿಯೆಂಟ್ ಬೆಲೆ 98,835 (ಎಕ್ಸ್ ಶೋ ರೂಂ). ನೂತನ ಬೈಕ್ ಹಳೇ ಬೈಕ್‌ಗಿಂತ 8,998 ರೂಪಾಯಿ ದುಬಾರಿಯಾಗಿದೆ. 

ಇದನ್ನೂ ಓದಿ: ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

ನೂತನ ಬೈಕ್ 149.5cc, ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್, 2 ವೇಲ್ವ್, ಸಿಂಗಲ್ ಓವರ್ಹೆಡ್ ಕಾಮ್ ಎಂಜಿನ್ ಹೊದಿದೆ. 13.8 bhp ಪವರ್ ಹಾಗೂ 13.25 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.   

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ