Tomato Fever: ಟೊಮ್ಯಾಟೋ ಜ್ವರ ಯಾಕಾಗಿ ಬರುತ್ತೆ? ಲಕ್ಷಣವೇನು?

ಮಕ್ಕಳು ಡೆಂಗ್ಯೂ ಅಥವಾ ಚಿಕೂನ್ ಗುನ್ಯಾದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರೆ ಎಚ್ಚರಿಕೆ ಅಗತ್ಯ. ಏಕೆಂದರೆ, ಅಂಥ ಮಕ್ಕಳಿಗೆ ಟೊಮ್ಯಾಟೋ ಜ್ವರ ಬರುವ ಸಾಧ್ಯತೆ ಹೆಚ್ಚು.

why does tomato fever come here is the explainer

ಟೊಮ್ಯಾಟೋ ಜ್ವರ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಮಕ್ಕಳಿಗೆ ಈ ಜ್ವರ ಹೆಚ್ಚಾಗಿ ಬರುತ್ತದೆ, ಅವರಿಗೆ ಅಪಾಯವಾಗುತ್ತದೆ ಎನ್ನುವ ವರದಿಗಳು ಬರುತ್ತಿವೆ. ಹೀಗಾಗಿ, ಈ ಜ್ವರದ ಕುರಿತಾಗಿ ಆತಂಕವೂ ಹೆಚ್ಚಿದೆ. ಚರ್ಮದಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುವುದು, ಚರ್ಮ ಉರಿಯುವುದು ಹಾಗೂ ನಿರ್ಜಲೀಕರಣ ಉಂಟಾಗುವುದು ಸೇರಿದಂತೆ ಹಲವಾರು ಲಕ್ಷಣಗಳನ್ನು ಹೇಳಲಾಗುತ್ತಿದೆ. ಹಾಗಿದ್ದರೆ ಟೊಮ್ಯಾಟೋ ಜ್ವರ ಎಂದರೆ ನಿಜವಾಗಿಯೂ ಏನು, ಹೇಗೆ ಬರುತ್ತದೆ, ಇದರಿಂದ ಹೇಗೆ ರಕ್ಷಣೆ ಪಡೆದುಕೊಳ್ಳಬಹುದು ಎನ್ನುವ ಪ್ರಶ್ನೆ ಏಳುವುದು ಸಹಜ. ಕೊರೋನಾದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನಜೀವನಕ್ಕೆ ಈಗ ಮತ್ತೆ ಇನ್ಯಾವುದೋ ಜ್ವರ ಬಂದರೆ ಆತಂಕವಾಗುವುದು ಸಹಜ. ಇತ್ತೀಚೆಗಷ್ಟೇ ಮಂಕಿಫಾಕ್ಸ್ ಆತಂಕ ಹೆಚ್ಚಿಸಿತ್ತು. ಇದೀಗ ಟೊಮ್ಯಾಟೋ ಜ್ವರದ ಸರದಿ. ಇದು ಮಕ್ಕಳಲ್ಲಿ ವೇಗವಾಗಿ ವೃದ್ಧಿಯಾಗುವುದರಿಂದ ಚಿಂತೆಯಾಗುವುದು ಸಾಮಾನ್ಯ. ಮೇ ತಿಂಗಳಲ್ಲಿ ಟೊಮ್ಯಾಟೋ ಜ್ವರದ ಮೊದಲ ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ಈಗ ಇದರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಕೊರೋನಾ ತೀವ್ರತೆಯ ಮುಂದೆ ಇದರ ಅಬ್ಬರವೇನೂ ಅಲ್ಲವಾದರೂ ಎಚ್ಚರಿಕೆಯಿಂದ ಇರುವುದು ಸೂಕ್ತ. ಹೀಗಾಗಿ, ಟೊಮ್ಯಾಟೋ ಜ್ವರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ತಜ್ಞರ ಪ್ರಕಾರ, ಟೊಮ್ಯಾಟೋ ಜ್ವರದ (Tomato Fever) ಲಕ್ಷಣಗಳು (Symptoms) ಕೊರೋನಾಕ್ಕಿಂತ (Corona) ಭಿನ್ನವಾಗೇನೂ ಇಲ್ಲ. ಅದರಂತೆಯೇ ಲಕ್ಷಣಗಳನ್ನು ಹೊಂದಿದೆ. ಆದರೆ, ಇಲ್ಲಿ SARS-Cov-2 ವೈರಸ್ (Virus) ಇರುವುದಿಲ್ಲ, ಬದಲಿಗೆ ಇದು ಸಂಪೂರ್ಣ ಭಿನ್ನವಾದ ವೈರಸ್ ಆಗಿದೆ. ಡೆಂಗ್ಯೂ ಅಥವಾ ಚಿಕೂನ್ ಗುನ್ಯಾದ ಬಳಿಕ ಮಕ್ಕಳಲ್ಲಿ ಈ ಜ್ವರ ಕಂಡುಬರುವ ಸಾಧ್ಯತೆ ಅಧಿಕ.

ಟೊಮ್ಯಾಟೋ ಹೆಸರು ಏಕೆ?

ಈ ಜ್ವರದ ಹೆಸರಿನ ಜತೆಗೆ ಟೊಮ್ಯಾಟೋ ಹೆಸರನ್ನೇಕೆ ಸೇರಿಸಲಾಯಿತು ಎನ್ನುವ ಪ್ರಶ್ನೆ ಮೂಡಬಹುದು. ಏಕೆಂದರೆ, ಈ ಜ್ವರದಿಂದ ಇಡೀ ದೇಹದ ಮೇಲೆ ಕೆಂಪು ಮತ್ತು ನೋವಿನಿಂದ ಕೂಡಿದ ಗುಳ್ಳೆಗಳು (Blister) ಏಳುತ್ತವೆ. ಈ ಗುಳ್ಳೆಗಳ ಆಕಾರ ಟೊಮ್ಯಾಟೋದಂತೆಯೇ ಇರುತ್ತವೆ. ಹೀಗಾಗಿ, ಇದಕ್ಕೆ ಟೊಮ್ಯಾಟೋ ಜ್ವರ ಎನ್ನುವ ಹೆಸರು ಬಂದಿದೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಮಕ್ಕಳಲ್ಲಿ ಟೊಮ್ಯಾಟೋ ಜ್ವರ ಹೆಚ್ಚು. ಏಕೆಂದರೆ, ಅವರು ಸೋಂಕಿನ ಸಂಪರ್ಕಕ್ಕೆ ಬರುವ ಸಾಧ್ಯತೆಯೂ ಹೆಚ್ಚು. ಈ ವಯಸ್ಸಿನಲ್ಲಿ ವೈರಲ್ ಸೋಂಕು ಬಹುಬೇಗ ಪ್ರಭಾವ ಬೀರುತ್ತದೆ ಹಾಗೂ ಮಕ್ಕಳು ಬೇಗ ಸೋಂಕಿಗೆ ಗುತ್ತಾಗುತ್ತಾರೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಟೊಮ್ಯಾಟೋ ಜ್ವರದ ಸಾಧ್ಯತೆ ಅಧಿಕ ಎಂದು ಇದುವರೆಗಿನ ಅಧ್ಯಯನಗಳು ಬಹಿರಂಗಪಡಿಸಿವೆ.

ಇದನ್ನೂ ಓದಿ: ಕೇರಳದಲ್ಲಿ ಟೊಮೋಟೋ ವೈರಸ್ ಅಟ್ಟಹಾಸ: ಕರ್ನಾಟಕದಲ್ಲಿ ಹೈಅಲರ್ಟ್‌..!

ಇದರ ಪ್ರಾಥಮಿಕ ಲಕ್ಷಣವೆಂದರೆ, ಅತ್ಯಧಿಕ ಜ್ವರ. ಈ ಜ್ವರದ ಪ್ರಮಾಣ ಸಾಮಾನ್ಯವಾಗಿ ಚಿಕೂನ್ ಗುನ್ಯಾ, ಡೆಂಗ್ಯೂದಂತೆಯೇ ಇರುತ್ತದೆ. ನಡುಕ, ಸಂದಿಗಳಲ್ಲಿ ನೋವು (Pain), ವಾಕರಿಕೆ, ಅತಿಸಾರ, ದೇಹದಲ್ಲಿ ನೋವು, ಸುಸ್ತು (Fatigue) ಕಂಡುಬರುತ್ತದೆ. ಹೆಚ್ಚುವರಿ ಲಕ್ಷಣವೆಂದರೆ, ದೇಹದ ಮೇಲೆ ಕೆಂಪಾದ (Red) ಗುಳ್ಳೆಗಳು ಏಳುವುದಾಗಿದೆ. ಕೆಲವರಲ್ಲಿ ಈ ಗುಳ್ಳೆಗಳು ಬಹಳ ದೊಡ್ಡದಾಗಿಯೂ ಮೂಡಬಹುದು.

ಕಾರಣವೇನು? (Reason)

ಟೊಮ್ಯಾಟೋ ಜ್ವರದ ನಿರ್ದಿಷ್ಟ ಕಾರಣವನ್ನು ಅರಿಯಲು ಇನ್ನೂ ಅಧ್ಯಯನಗಳು ನಡೆಯುತ್ತಿವೆ. ನಮ್ಮ ದೇಶದ ತಜ್ಞರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇದುವರೆಗಿನ ಅಧ್ಯಯನಗಳ ಪ್ರಕಾರ, ಇದು ಒಂದು ರೀತಿಯ ವೈರಸ್ ಜ್ವರ. ಕೆಲವರು ಹೇಳುವ ಪ್ರಕಾರ, ಇದು ಡೆಂಗ್ಯೂ (Dengue) ಮತ್ತು ಚಿಕೂನ್ ಗುನ್ಯಾದ (Chikungunya) ದುಷ್ಪರಿಣಾಮದಿಂದಲೇ ಬರುತ್ತದೆ. ಆದರೆ, ವಿಜ್ಞಾನಿಗಳ ಪ್ರಕಾರ, ಇದು ಪ್ರತ್ಯೇಕವಾದ ವೈರಸ್ ನಿಂದ ಕಂಡುಬರುತ್ತದೆ. ಆದರೆ, ಇದಕ್ಕೆ ಕಾರಣವಾಗುವ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಇದರ ವೈರಸ್ ಚಿಕೂನ್ ಗುನ್ಯಾಕ್ಕೆ ಹೋಲಿಕೆ ಆಗುತ್ತದೆ.

ಇದನ್ನೂ ಓದಿ: ಕೇರಳದಲ್ಲಿ ಟೊಮೋಟೋ ವೈರಸ್ ಅಟ್ಟಹಾಸ: ಕರ್ನಾಟಕದಲ್ಲಿ ಹೈಅಲರ್ಟ್‌..!

ಆರೈಕೆ ಹೇಗೆ?

ಟೊಮ್ಯಾಟೋ ಜ್ವರ ಕಂಡುಬಂದಾಗ ಸ್ವಚ್ಛತೆ ಅನುಸರಿಸುವುದು ಅಗತ್ಯ. ಮೇಲಿನ ಯಾವುದೇ ಲಕ್ಷಣ ಕಂಡುಬಂದರೂ ವೈದ್ಯರಲ್ಲಿ ಕರೆದುಕೊಂಡು ಹೋಗಬೇಕು. ಗುಳ್ಳೆಗಳನ್ನು ಒಡೆಯಲು ಯತ್ನಿಸಬಾರದು. ಮಕ್ಕಳಿಗೆ ಹೆಚ್ಚು ದ್ರವಾಂಶ (Liquid) ನೀಡಬೇಕು, ನೀರು ಕೊಡಬೇಕು.

Latest Videos
Follow Us:
Download App:
  • android
  • ios